• Home
  • »
  • News
  • »
  • district
  • »
  • ಕೋಲಾರದಿಂದ 5 ದಿನದ ಹಿಂದೆ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತ ತಿರುಪತಿಯಲ್ಲಿ ಪತ್ತೆ

ಕೋಲಾರದಿಂದ 5 ದಿನದ ಹಿಂದೆ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತ ತಿರುಪತಿಯಲ್ಲಿ ಪತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋವಿಡ್ ಪರೀಕ್ಷೆ ವರದಿಗೆ ಜಿಲ್ಲಾಸ್ಪತ್ರೆಯಲ್ಲಿ ಗಂಟಲು ಮಾದರಿ ನೀಡಿದ್ದ ವ್ಯಕ್ತಿಗೆ ಜೂನ್ 6 ರಂದು ಸೋಂಕು ದೃಡವಾಗಿತ್ತು. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು  ಸೋಂಕಿನ ವಿಚಾರ ತಿಳಿಸಿದ ಕೂಡಲೇ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್‌ ಮಾಡಿ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ.

  • Share this:

ಕೋಲಾರ; ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡಲು ಜೂನ್ 3 ರಂದು ತುಮಕೂರಿಂದ ಆಗಮಿಸಿದ್ದ 40 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕಿದೆ ಎಂಬುದು ತಿಳಿಯುತ್ತಿದ್ದಂತೆ ಆತ ಮೊಬೈಲ್ ಸ್ವಿಚ್ ಆಪ್ ಮಾಡಿ ಪರಾರಿಯಾಗಿದ್ದ. ಇದೀಗ 5 ದಿನಗಳ ನಂತರ ಸೋಂಕಿತನನ್ನ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋವಿಡ್ ಪರೀಕ್ಷೆ ವರದಿಗೆ ಜಿಲ್ಲಾಸ್ಪತ್ರೆಯಲ್ಲಿ ಗಂಟಲು ಮಾದರಿ ನೀಡಿದ್ದ ವ್ಯಕ್ತಿಗೆ ಜೂನ್ 6 ರಂದು ಸೋಂಕು ದೃಡವಾಗಿತ್ತು. ಆದರೆ, ಆರೋಗ್ಯ ಇಲಾಖೆ ಅಧಿಕಾರಿಗಳು  ಸೋಂಕಿನ ವಿಚಾರ ತಿಳಿಸಿದ ಕೂಡಲೇ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್‌ ಮಾಡಿ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ. ಇದೀಗ ಬಂಗಾರಪೇಟೆಯಲ್ಲಿ ನಾಪತ್ತೆಯಾಗಿದ್ದ P 4863 ವ್ಯಕ್ತಿ ಆಂಧ್ರದ ವಿಕೋಟದಲ್ಲಿ ಪತ್ತೆಯಾಗಿದ್ದಾನೆ.

ಜೂನ್ 6 ರಂದು ಆತ ನಾಪತ್ತೆಯಾದ ದಿನದಿಂದ ಪೊಲೀಸರು ತೀವ್ರ ಹುಡುಕಾಟ ನಡೆಸಿದರು ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋಂಕಿತ ತನ್ನ ಸ್ನೇಹಿತನ ಜೊತೆಗೂಡಿ ಆಂಧ್ರದ ಕುಪ್ಪಂಗೆ ತೆರಳಿ ಅಲ್ಲಿಂದ ತಿರುಪತಿಗೆ ಹೋಗಿ ವಾಪಾಸ್ ವಿಕೋಟಗೆ ಬಂದಿದ್ದಾರೆಂದು ತಿಳಿದುಬಂದಿದೆ. ಆದರೆ, ಸೋಂಕಿತ ತಿರುಪತಿ ದೇಗುಲ ಪ್ರವೇಶಿಸಿ ದರ್ಶನ  ಮಾಡಿರುವ ಮಾಹಿತಿ ಇನ್ನು ತಿಳಿದುಬಂದಿಲ್ಲ.

ಇದನ್ನೂ ಓದಿ: ಪ್ರೀತಿಸಿದವಳಿಗಾಗಿ ಪ್ರಾಣ ಸ್ನೇಹಿತನ ಕೊಲೆ; ಹಂತಕನನ್ನು ಬಂಧಿಸಿದ ವಾಡಿ ಪೊಲೀಸರು


ಸೋಂಕಿತನ ಜೊತೆಗೆ 5 ದಿನಗಳು ಕಳೆದಿದ್ದ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗಿದ್ದು,  ಸೋಂಕಿತನನ್ನ ಕೋಲಾರ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದೀಗ ಸೋಂಕಿತ ಪ್ರಯಾಣ ಬೆಳೆಸಿದ್ದ ಕಡೆಯಲ್ಲಿ ಕೊರೋನಾ ಸೋಂಕು ಹರಡುವ ಭೀತಿಯು ಎದುರಾಗಿದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಸಂಪರ್ಕಿತರ ಮಾಹಿತಿಯನ್ನ ಕಲೆಹಾಕುತ್ತಿದ್ದಾರೆ.

First published: