ಬೆಳಗಾವಿ; ಕೊರೋನಾ ನೆಪ ಬಂದ್ ಆಗಿರುವ ಬಯೋ ಮೆಟ್ರಿಕ್ ಹಾಜರಾತಿ; ಕಚೇರಿಗೆ ಚಕ್ಕರ್ ಹಾಜರಾತಿ ಫುಲ್

ಚಿಕ್ಕೋಡಿ ಕೃಷಿ ಇಲಾಖೆ ಹಾಗೂ ತಹಶಿಲ್ದಾರ ಕಚೇರಿಯಲ್ಲಿ ಬಯೋ ಮೆಟ್ರಿಕ್ ಪದ್ದತಿ ಬಂದ್ ಆದಾಗಿನಿಂದಲು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕೆಲಕ್ಕೆ ಆಗಮಿಸುತ್ತಿಲ್ಲಾ 9: 30 ಆಗಮಿಸಬೇಕಾದ ಕೆಲವು ಸಿಬ್ಬಂದಿಗಳು 11 ರಿಂದ 12 ಗಂಟೆಗೆ ಆಗಮಿಸಿ ಒಂದೇ ಗಂಟೆಯಲ್ಲಿ ಊಟಕ್ಕೆ ತೆರಳುತ್ತಾರೆ. ವಾಪಸ್ ಬಂದು ಒಂದು ಗಂಟೆ ಕೆಲಸ ಮಾಡಿ ಮನೆಗೆ ತೆರಳುತ್ತಾರೆ.

ಅಧಿಕಾರಿ ಇಲ್ಲದೆ ಖಾಲಿಯಾಗಿರುವ ಕಚೇರಿ.

ಅಧಿಕಾರಿ ಇಲ್ಲದೆ ಖಾಲಿಯಾಗಿರುವ ಕಚೇರಿ.

  • Share this:
ಬೆಳಗಾವಿ; ಸರ್ಕಾರದ ಇಲಾಖೆಗಳು ಅಂದ್ರೆನೆ ಹಾಗೆ ಸರಿಯಾದ ಸಮಯ ಇರಲ್ಲ. ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡದೆ ಕಾಲ ಹರಣ ಮಾಡುತ್ತಾರೆ ಸಮಯಕ್ಕೆ ಬಾರದೆ ಕೆಲಸಕ್ಕೆ ಚಕ್ಕರ ಹಾಕುತ್ತಾರೆ ಅನ್ನುವ ಆರೋಪಗಳು ಸಹಜ. ಇದೆ ಕಾರಣಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ಪ್ರತಿಯೊಂದೂ ಸರ್ಕಾರಿ ಇಲಾಖೆ ಗಳಲ್ಲಿಯೂ ಆದಾರ ಚಾಲಿತ ಡಿಜಿಟಲ್ ಬಯೋ ಮೆಟ್ರಿಕ್ ಹಾಜರಾತಿ ಪದ್ದತಿಯನ್ನ ಜಾರಿಗೆ ತರಲಾಗಿತ್ತು. ಇದರಿಂದಾಗಿ ಶೇ 85 ರಷ್ಟು ಸಿಬ್ಬಂದಿಗಳ ಸರಿಯಾದ ಸಮಯಕ್ಕೆ ಕಛೇರಿಗೆ ಆಗಮಿಸಿ ಕೆಲಸ ಮಾಡಲು ಆರಂಭಿಸಿದ್ದರು. ಆದ್ರೆ ಕೊರೊನಾ ಭಾರತಕ್ಕೆ ಕಾಲಿಟ್ಟಾಗಿನಿಂದಲು ಈಗ ಮತ್ತೆ ಕೆಲ ಸರ್ಕಾರಿ ನೌಕರರು ಕೊರೊನಾವನ್ನೆ ನೆಪ ಮಾಡಿಕೊಂಡು ಕೆಲಸಕ್ಕೆ ಚಕ್ಕರ ಹಾಕಿ ಬೇಕಾ ಬಿಟ್ಟಿ ವರ್ತನೆಯನ್ನು ತೋರುತ್ತಿದ್ದಾರೆ.

ಹೌದು ಕೊರೊನಾ ಮಹಾಮಾರಿ ಹಿನ್ನಲೆ ಸಾಮಾಜೀಕ ಅಂತರ ಕೊರೊನಾ ಹರಡುವಿಕೆ ತಡೆಗಟ್ಟುವ  ನಿಟ್ಟಿನಲ್ಲಿ ಸರ್ಕಾರ ಹಲವು ಆದೇಶಗಳನ್ನ ಜಾರಿಗೆ ತಂದಿತ್ತು. ಇನ್ನು ಸರ್ಕಾರಿ ಇಲಾಖೆಗಳ ಕಛೇರಿಗಳ್ಳಿ ಒಬ್ಬರನ್ನೊಬ್ಬರು ಮುಟ್ಟಬಾರದು ಎಂಬ ನಿಟ್ಟಿನಲ್ಲಿ ಆಧಾರ ಆಧಾರಿತ ಬಯೋ ಮೆಟ್ರಿಕ್ ಹಾಜರಾತಿ ಪದ್ದತಿಯನ್ನು ಸಹ ರದ್ದು ಪಡಿಸಿ ಆದೇಶ ಮಾಡಿತ್ತು ಎಂದಿನಂತೆ ಹಳೆಯ ಪದ್ದತಿಯು ಪ್ರಕಾರ ಜಾಜರಿ ಪುಸ್ತಕಗಳಲ್ಲೆ ಸಹಿ ಮಾಡಿ ಕೆಲಸ ಮಾಡುವಂತೆ ಸೂಚನೆ ನೀಡಿತ್ತು.

ಆದ್ರೆ ಆದಾರ ಬಯೋ ಮೆಟ್ರಿಕ್ ಬಂದ್ ಆಗಿದ್ದೆ ತಡ ಕೆಲ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಇದರ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬಯೋ ಮೆಟ್ರಿಕ್ ಇಲ್ಲದ ಕಾರಣ ಯಾವಾಗ ಬೇಕಾದರೂ ಕಛೇರಿಗೆ ಬಂದು ಹೋಗುವ ಕೆಲಸ ಮಾಡುತ್ತಿದ್ದಾರೆ.
ಹೌದು ಸರ್ಕಾರದ ನಿಯಮದಂತೆ ಸರ್ಕಾರಿ ನೌಕರರು  ಬೆಳಿಗ್ಗೆ 9:30 ಕ್ಕೆ ಬಯೋ ಮೆಟ್ರಿಕ್ ನಲ್ಲಿ ಹಾಜರಾತಿ ದಾಖಲಿಸಿ ತಮ್ಮ ತಮ್ನ ಕಛೇರಿಗೆ ಹಾಜರಿದ್ದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳ ಬೇಕು ಬಳಿಕ ಸಂಜೆ 4:30 ಕ್ಕೆ ಬಯೋ ಮೆಟ್ರಿಕ್ ಹಾಜರಾತಿ ನೀಡಿ ವಾಪಸ್ ಆಗಬೇಕಾಗಿತ್ತು ಆದ್ರೆ ಈಗ ಬಯೋ ಮೆಟ್ರಿಕ್ ಬಂದ್ ಮಾಡಿದಾಗಿನಿಂದಲು ನೌಕರರು ಆಡಿದ್ದೆ ಆಟ್ ಅವರು ಬಂದಿದ್ದೆ ಸಮಯ ಅನ್ನುವ ಹಾಗಾಗಿದೆ ಅದಕ್ಕೆ ಉದಾಹರಣೆಗೆ ಎನ್ನುವಂತೆ.

ಚಿಕ್ಕೋಡಿ ಕೃಷಿ ಇಲಾಖೆ ಹಾಗೂ ತಹಶಿಲ್ದಾರ ಕಚೇರಿಯಲ್ಲಿ ಬಯೋ ಮೆಟ್ರಿಕ್ ಪದ್ದತಿ ಬಂದ್ ಆದಾಗಿನಿಂದಲು ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಕೆಲಕ್ಕೆ ಆಗಮಿಸುತ್ತಿಲ್ಲಾ 9: 30 ಆಗಮಿಸಬೇಕಾದ ಕೆಲವು ಸಿಬ್ಬಂದಿಗಳು 11 ರಿಂದ 12 ಗಂಟೆಗೆ ಆಗಮಿಸಿ ಒಂದೇ ಗಂಟೆಯಲ್ಲಿ ಊಟಕ್ಕೆ ತೆರಳುತ್ತಾರೆ. ವಾಪಸ್ ಬಂದು ಒಂದು ಗಂಟೆ ಕೆಲಸ ಮಾಡಿ ಮನೆಗೆ ತೆರಳುತ್ತಾರೆ. ಇವರನ್ನ ಕೇಳುವ ಕೃಷಿ ಇಲಾಖೆ ಮುಖ್ಯ ಅಧಿಕಾರಿಯು ಹೊರತಾಗಿಲ್ಲ. ಇನ್ನು ಕೆಲವರ ಕಥೆ ನೆ ಬೇರೆಯಾಗಿದೆ ಎರಡು ಮೂರು ದಿನಗಳ ವರೆಗೂ ಕಛೇರಿಗೆ ಆಗಮಿಸಿದೆ ನಾಲ್ಕನೆ ದಿನ ಬಂದ ತಕ್ಷಣ ಎಲ್ಲ ದಿನಗಳದ್ದು ಹಾಜರಾತಿಯಲ್ಲಿ ಸಹಿ ಮಾಡಿ ಸಂಬಳ ಪಡೆಯುತ್ತಾರೆ.

ಇದನ್ನೂ ಓದಿ: ವಿದ್ಯುತ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು; ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಆಗ್ರಹ

ನ್ಯೂಸ್18 ರಿಯಾಲಿಟಿ ಚೆಕ್ ನಡೆಸಿದಾಗ ಚಿಕ್ಕೋಡಿ ಕೃಷಿ ಇಲಾಖೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಾರೆ.  11 ಗಂಟೆಗೆ ತೆರಳಿ ರಿಯಾಲಿಟಿ ಚೆಕ್ ನಡೆಸಿದಾಗ ಅಲ್ಲಿ ಕೆಲಸಕ್ಕೆ ಬಂದಿದ್ದು 5 ಜನ ಸಿಬ್ಬಂದಿಗಳು ಮಾತ್ರ ಇನ್ನುಳಿದವರು ಎಲ್ಲಿ ಎಂದು ಕೇಳಿದ್ರೆ ಇಲ್ಲಿಯೆ ಹೊರಗಡೆ ಇದ್ದಾರೆ ಇನ್ನೇನು ಬರ್ತಾರೆ ಎಂದು ತಮ್ಮವರ ರಕ್ಷಣೆಗೆ ಮುಂದಾಗುತ್ತಾರೆ. ಇನ್ನು ತಮ್ಮ ಕೆಲಸಗಳ ನಿಮಿತ್ತ ತೆರಳಿದ ಸಾಮಾನ್ಯ ಜನರಂತು ಸಿಬ್ಬಂದಿಗಳ ಈ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಒಂದು ಚಿಕ್ಕ ಕೆಲಸ ಇದ್ರು ಸಹ ಈಡಿ ದಿನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಛೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದಾರಿ ಕಾಯುತ್ತಲೆ ಕೂಡುವ ಸ್ಥಿತಿ ಇಲ್ಲಿಯದಾಗಿದೆ.

ಒಟ್ಟಿನಲ್ಲಿ ಬಯೋ ಮೆಟ್ರಿಕ್ ಬಂದ್ ಆದಾಗಿನಿಂದಲು ಸರ್ಕಾರಿ ನೌಕರರದ್ದೆ ದರ್ಬಾರ್ ಅನ್ನುವ ಹಾಗಾಗಿದೆ. ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಬಯೋ ಮೆಟ್ರಿಕ್ ಹಾಜರಾತಿಯನ್ನ ಶುರು ಮಾಡಿದ್ದು ಯಾವುದೆ ಸಮಸ್ಯೆಗಳು ಎದುರಾಗಿಲ್ಲಾ.  ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ಬಯೋ ಮೆಟ್ರಿಕ್ ಹಾಜರಾತಿ ಪದ್ದತಿಯನ್ನು ಮತ್ತೆ ಜಾರಿ ಮಾಡಲು ಮುಂದಾಗಬೇಕಾಗಿದೆ.
Published by:MAshok Kumar
First published: