ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು;ಸ್ಟ್ರೆಚರ್ ಇಲ್ಲದೆ ಆಕ್ಸಿಜನ್ ಅಳವಡಿಸಿದ್ದ ಮಗುವನ್ನು ಹೊತ್ತು ನಡೆದ ತಂದೆ

ಎಮರ್ಜೆನ್ಸಿ ವಾರ್ಡ್‌‌ನಿಂದ ಮಕ್ಕಳ ವಾರ್ಡ್‌ವರೆಗೆ ಮಗುವನ್ನು ಕೈಯಲ್ಲಿ ಹಿಡಿದು ಸಾಗಿದ್ದಾರೆ. ಕಿಮ್ಸ್ ಸಿಬ್ಬಂದಿ ಹಿಂದಿನಿಂದ ಆಕ್ಸಿಜನ್ ಟ್ಯಾಂಕ್ ದೂಡಿಕೊಂಡು ಬಂದಿದ್ದಾರೆ. ಮಗುವಿನ ತಾಯಿ ವೈದ್ಯರು ಕೊಟ್ಟ ಕೇಸ್ ಫೈಲ್‌ನ್ನು ಕೈಯಲ್ಲಿ ಹಿಡಿದು ಸಾಗಿದ್ದಾರೆ. ಮಗುವನ್ನು ಹೊತ್ತು ತಂದೆ ಆತಂಕದಲ್ಲಿ ವಾರ್ಡ್‌ನತ್ತ ದೌಡಾಯಿಸುತ್ತಿದ್ದ ಮನಕಲಕುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

news18-kannada
Updated:May 30, 2020, 4:56 PM IST
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು;ಸ್ಟ್ರೆಚರ್ ಇಲ್ಲದೆ ಆಕ್ಸಿಜನ್ ಅಳವಡಿಸಿದ್ದ ಮಗುವನ್ನು ಹೊತ್ತು ನಡೆದ ತಂದೆ
ಸ್ಟ್ರೆಚರ್ ಇಲ್ಲದೇ ಮಗುವನ್ನು ಎತ್ತಿಕೊಂಡು ಹೋಗುತ್ತಿರುವ ತಂದೆ
  • Share this:
ಹುಬ್ಬಳ್ಳಿ(ಏ.30): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಎಡವಟ್ಟು ನಡೆದಿದೆ. ಸ್ಟ್ರೆಚರ್ ಇಲ್ಲದೆ ಆಕ್ಸಿಜನ್ ಅಳವಡಿಸಿದ್ದ ಮಗುವನ್ನು ತಂದೆ ಹೊತ್ತು ನಡೆದಿರುವ ಮನಕಲಕುವ ದೃಶ್ಯಗಳು ವೈರಲ್ ಆಗಿವೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ವರ್ಷದ ಮಗುವನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿತ್ತು. ಮಗುವಿನ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಚಿಕಿತ್ಸೆ ನೀಡಿದ್ದರು. ನಂತ ಆಕ್ಸಿಜನ್ ಅಳವಡಿಸಿ ಮಕ್ಕಳ ವಾರ್ಡಿಗೆ ಶಿಫ್ಟ್ ಮಾಡಲು ತಿಳಿಸಿದ್ದರು. ಆದರೆ ಕಿಮ್ಸ್ ಆಯಾಗಳು ಮಕ್ಕಳ ವಾರ್ಡ್‌ಗೆ ಸಾಗಿಸಲು ಸ್ಟ್ರೆಚರ್ ಕೊಟ್ಟಿರಲಿಲ್ಲ. ಹೀಗಾಗಿ ಆಕ್ಸಿಜನ್ ಅಳವಡಿಸಿದ್ದ ಮಗುವನ್ನು ತಂದೆಯೇ ಕೈಯಲ್ಲಿ ಹೊತ್ತು ನಡೆದಿದ್ದಾರೆ.‌

ಎಮರ್ಜೆನ್ಸಿ ವಾರ್ಡ್‌‌ನಿಂದ ಮಕ್ಕಳ ವಾರ್ಡ್‌ವರೆಗೆ ಮಗುವನ್ನು ಕೈಯಲ್ಲಿ ಹಿಡಿದು ಸಾಗಿದ್ದಾರೆ. ಕಿಮ್ಸ್ ಸಿಬ್ಬಂದಿ ಹಿಂದಿನಿಂದ ಆಕ್ಸಿಜನ್ ಟ್ಯಾಂಕ್ ದೂಡಿಕೊಂಡು ಬಂದಿದ್ದಾರೆ. ಮಗುವಿನ ತಾಯಿ ವೈದ್ಯರು ಕೊಟ್ಟ ಕೇಸ್ ಫೈಲ್‌ನ್ನು ಕೈಯಲ್ಲಿ ಹಿಡಿದು ಸಾಗಿದ್ದಾರೆ. ಮಗುವನ್ನು ಹೊತ್ತು ತಂದೆ ಆತಂಕದಲ್ಲಿ ವಾರ್ಡ್‌ನತ್ತ ದೌಡಾಯಿಸುತ್ತಿದ್ದ ಮನಕಲಕುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಕೊರೋನಾ ಎಫೆಕ್ಟ್: ಪ್ರಯಾಣಿಕರಲ್ಲಿ ನಿರುತ್ಸಾಹ; ಕಳೆಗುಂದಿದ ದೇಶಿ ವಿಮಾನಯಾನ ಸೇವೆ

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಿಮ್ಸ್ ಸಿಬ್ಬಂದಿಗಳ ಬೇಜವಾಬ್ದಾರಿಗೆ ಸಾರ್ವಜನಿಕರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಮ್ಸ್‌ ಆಸ್ಪತ್ರೆಯ ಬಹುತೇಕ ಆಯಾಗಳ ವಿರುದ್ಧ ಬೇಜವಾಬ್ದಾರಿಯ‌ ಆರೋಪವಿದೆ. ಈ ಹಿಂದೆ ಮೂವರು ಗರ್ಭಿಣಿಯರನ್ನು ಒಂದೇ ಸ್ಟ್ರೆಚರ್‌ನಲ್ಲಿ ಸಾಗಿಸಿದ್ದರು. ಪತ್ನಿ, ಮಗನಿಂದ ರೋಗಿಯ ಸ್ಟ್ರೆಚರ್ ತಳ್ಳಿಸಿ ಕರ್ತವ್ಯಲೋಪ ಎಸಗಿದ್ದರು. ಇಂತಹ ಸಂದರ್ಭಗಳಲ್ಲಿ ಕಿಮ್ಸ್ ನಿರ್ದೇಶಕ ಡಾ.‌ರಾಮಲಿಂಗಪ್ಪ ಅಂಟರತಾನಿಯವರು ಆಯಾಗಳನ್ನು ಕರೆದು ಎಚ್ಚರಿಕೆ ನೀಡಿದ್ದಾರೆ. ಕೆಲವರಿಗೆ ನೋಟೀಸ್ ಕೊಟ್ಟಿದ್ದಾರೆ. ಇನ್ನು ಕೆಲವರನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ. ಆದರೆ ಆಯಾಗಳಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಆಯಾಗಳು ಹಣಕ್ಕಾಗಿ ರೋಗಿಗಳ ಸಂಬಂಧಿಗಳನ್ನು ಪೀಡಿಸುತ್ತಾರೆ ಎನ್ನುವ ಆರೋಪಗಳಿವೆ.

ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಸಾವಿರಾರು ಬಡ ರೋಗಿಗಳು ಕಿಮ್ಸ್‌ಗೆ ಬರುತ್ತಾರೆ. ಆದರೆ ಅವರಿಗೆ ಸೂಕ್ತ ಸೇವೆ ಒದಗಿಸಬೇಕಾದ ಕಿಮ್ಸ್ ಸಿಬ್ಬಂದಿ ನಿರ್ಲಕ್ಷ ಮುಂದುವರಿಸಿದ್ದಾರೆ. ಪದೇಪದೇ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅರುಣ್‌ಕುಮಾರ್ ಅವರು ಬೇಜವಾಬ್ದಾರಿಯಿಂದ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಜನರು ಒತ್ತಾಯಿಸುತ್ತಿದ್ದಾರೆ.
First published: May 30, 2020, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading