HOME » NEWS » District » ELEPHANTS PLAGUE IN THE WESTERN GHATS AKP MAK

ಪಶ್ಚಿಮಘಟ್ಟ ತಪ್ಪಲಲ್ಲಿ ಹೆಚ್ಚುತ್ತಿದೆ ಕಾಡಾನೆಗಳ ಹಾವಳಿ ಕೃಷಿಯ ಜೊತೆಗೆ ಮನುಷ್ಯ ಪ್ರಾಣಕ್ಕೂ ಹಾನಿ!

ಸರಿ ಸುಮಾರು 250 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಡು ಹಾಗೂ ನಾಡಿಗೆ ಸಂಪರ್ಕಿಸುವ ಭೂ ಭಾಗವಿದ್ದು, ಇಲ್ಲಿ ಸರಿಯಾದ ಟ್ರಂಚ್ ನಿರ್ಮಿಸಿದಲ್ಲಿ ಆನೆಗಳು ನಾಡಿಗೆ ದಾಳಿ ಇಡುವುದನ್ನು ತಪ್ಪಿಸಲು ಸಾಧ್ಯವಿದೆ ಎನ್ನುವುದು ಕಾಡಿನಂಚಿನಲ್ಲಿರುವ ಜನರ ಅಭಿಪ್ರಾಯವಾಗಿದೆ.

news18-kannada
Updated:April 20, 2021, 5:39 PM IST
ಪಶ್ಚಿಮಘಟ್ಟ ತಪ್ಪಲಲ್ಲಿ ಹೆಚ್ಚುತ್ತಿದೆ ಕಾಡಾನೆಗಳ ಹಾವಳಿ ಕೃಷಿಯ ಜೊತೆಗೆ ಮನುಷ್ಯ ಪ್ರಾಣಕ್ಕೂ ಹಾನಿ!
ಕಾಡಾನೆಗಳ ಹಾವಳಿ.
  • Share this:
ಪಶ್ಚಿಮಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಲಾರಂಭಿಸಿದೆ. ಆಹಾರವನ್ನು ಅರಸಿ ನಾಡಿಗೆ ಬರುವ ಕಾಡಾನೆಗಳು ಕೃಷಿ ತೋಟಗಳಿಗೆ ನುಗ್ಗಿ ಕೃಷಿ ಜೊತೆಗೆ ಜನರಿಗೆ ಪ್ರಾಣ ಹಾನಿಯನ್ನೂ ಮಾಡುತ್ತಿದೆ. ಕಾಡಾನೆಗಳು ಕಾಡಿನಂಚಿನಲ್ಲಿರುವ ಕೃಷಿ ತೋಟಗಳಿಗೆ ಹಾಗೂ ಜನವಸತಿ ಪ್ರದೇಶಗಳಿಗೆ ಪ್ರವೇಶ ಮಾಡುವುದನ್ನು ತಡೆಯಲು ಆನೆ ಕಾರಿಡಾರ್ ಗಳ ನಿರ್ಮಾಣ ಮಾಡಲಾಗಿದ್ದರೂ, ಕ್ರಮಬದ್ಧ ನಿರ್ಮಾಣದ ಕೊರತೆಯು ಆನೆಗಳನ್ನು ತಡೆಯುವಲ್ಲಿ ವಿಫಲವಾಗಿದೆ. ದಕ್ಷಿಣಕನ್ನಡ ಜಿಲ್ಲೆಗೆ ಹೊಂದಿಕೊಂಡ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ. ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಾದ ಕೊಲ್ಲಮೊಗ್ರು, ಕಲ್ಮಕಾರು, ಹರಿಹರಪಳ್ಳತ್ತಡ್ಕ, ಮರ್ಕಂಜ, ಶಿರಾಡಿ, ಗುಂಡ್ಯಾ, ಸುಬ್ರಹ್ಮಣ್ಯ, ಚಾರ್ಮಾಡಿ, ನೆರಿಯಾ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ಕೃಷಿ ತೋಟಗಳಿಗೆ ನುಗ್ಗುವ, ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಪ್ರಕರಣಗಳು ಕಂಡು ಬರಲಾರಂಭಿಸಿದೆ.

ಹೆಚ್ಚಾಗಿ ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಕೃಷಿ ತೋಟ ಹಾಗೂ ಜನವಸತಿ ಪ್ರದೇಶ ಗಳಲ್ಲಿ ಕಂಡು ಬಂದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಕಾಡಾನೆಗಳ ಹಿಂಡು ಹಗಲು ಹೊತ್ತಲ್ಲೂ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಕಾಡಿನಂಚಿನಲ್ಲಿರುವ ಜನ ದಿನಂ ಪ್ರತಿ ಭಯದಲ್ಲೇ ಬದುಕುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ಮೂರು, ನಾಲ್ಕು ವರ್ಷಗಳಲ್ಲಿ ಆನೆಗಳ ದಾಳಿಗೆ ಒಳಗಾಗಿ ಹತ್ತಕ್ಕೂ ಮಿಕ್ಕಿದ ಜನರು ಪ್ರಾಣ ಕಳೆದುಕೊಂಡ ಘಟನೆಗಳೂ ವರದಿಯಾಗಿದ್ದು, ನೂರಾರು ಎಕರೆ ಕೃಷಿ ಭೂಮಿಗಳೂ ಆನೆಗಳ ಕಾಟಕ್ಕೆ ಬಲಿಯಾಗಿವೆ.

ಸರಿ ಸುಮಾರು 250 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಾಡು ಹಾಗೂ ನಾಡಿಗೆ ಸಂಪರ್ಕಿಸುವ ಭೂ ಭಾಗವಿದ್ದು, ಇಲ್ಲಿ ಸರಿಯಾದ ಟ್ರಂಚ್ ನಿರ್ಮಿಸಿದಲ್ಲಿ ಆನೆಗಳು ನಾಡಿಗೆ ದಾಳಿ ಇಡುವುದನ್ನು ತಪ್ಪಿಸಲು ಸಾಧ್ಯವಿದೆ ಎನ್ನುವುದು ಕಾಡಿನಂಚಿನಲ್ಲಿರುವ ಜನರ ಅಭಿಪ್ರಾಯ ವಾಗಿದೆ. ಆದರೆ ಕಳೆದ ಹಲವು ವರ್ಷಗಳಿಂದ ಅರಣ್ಯ ಇಲಾಖೆಯು ಆನೆ ಕಾರಿಡಾರ್ ಎನ್ನುವ ಯೋಜನೆಯ ಮೂಲಕ ಕಾಡಾನೆಗಳನ್ನು ನಾಡಿಗೆ ಬಾರದ ರೀತಿಯಲ್ಲಿ ತಡೆಯುವ ವ್ಯವಸ್ಥೆಗಳನ್ನು ನಿರ್ಮಿಸುತ್ತಿದೆ. ಆದರೆ ಈ ವ್ಯವಸ್ಥೆ ಕಾಡಾನೆ ಗಳನ್ನು ಸಂಪೂರ್ಣ ವಾಗಿ ತಡೆಗಟ್ಚಲು ಸಾಧ್ಯವಾಗದ ಹಿನ್ನಲೆಯಲ್ಲಿ ಪ್ರಾಣ ಹಾಗೂ ಕೃಷಿ ಹಾನಿಗಳು ಸಂಭವಿಸುತ್ತಿವೆ.

ಇದನ್ನೂ ಓದಿ: 1ರಿಂದ 9ನೇ ತರಗತಿವರೆಗಿನ ಎಲ್ಲಾ ಪರೀಕ್ಷೆ ರದ್ದು; ವಿದ್ಯಾರ್ಥಿಗಳು ಪಾಸ್: ಶಿಕ್ಷಣ ಇಲಾಖೆ ಅಧಿಕೃತ ಆದೇಶ

ಅಲ್ಲದೆ ಕಾಡಾನೆಗಳು ನಾಡಿನಂಚಿನಲ್ಲಿ ಪತ್ತೆಯಾದ ಮಾಹಿತಿಯನ್ನು ಸಂಬಂಧಪಟ್ಟ ಅರಣ್ಯ ಇಲಾಖೆಗೆ ನೀಡಿದರೂ, ಸೂಕ್ತವಾದ ಕ್ರಮ ಜರುಗಿಸುವಲ್ಲಿ ಆರಣ್ಯ ಇಲಾಖೆ ವಿಫಲ ವಾಗಿದೆ ಎನ್ನುವ ಆರೋಪವೂ ಇದೆ. ಕಾಡಾನೆ ದಾಳಿಯಿಂದ ಸಾವನ್ನಪ್ಪಿದ ಕುಟುಂಬ ಗಳಿಗೆ ಸರಕಾರದಿಂದ ಪರಿಹಾರ ನೀಡುವ ವಿಚಾರದ ಬಗ್ಗೆಯೂ ಅರಣ್ಯ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಅಸಮಾಧಾನವೂ ಸ್ಥಳೀಯ ನಿವಾಸಿಗಳಲ್ಲಿದೆ. ಪಶ್ಚಿಮಘಟ್ಟ ಭಾಗದಲ್ಲಿ ಇತ್ತೀಚೆಗೆ ನಿರ್ಮಾಣವಾದ ಎತ್ತಿನಹೊಳೆ ಯೋಜನೆ, ಗುಂಡ್ಯಾ ಜಲವಿದ್ಯುತ್ ಯೋಜನೆ ಸೇರಿದಂತೆ ಹಲವು ನಿರ್ಮಾಣಗಳು ಕಾಡಿನಲ್ಲಿರುವ ಆನೆಗಳನ್ನು ನಾಡಿನತ್ತ ಅನಿವಾರ್ಯವಾಗಿ ಬರುವಂತೆ ಮಾಡಿದೆ.

ಘಟ್ಟ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಂಡ ಬಳಿಕ ನಾಡಿಗೆ ಆನೆಗಳ ಕಾಟವೂ ವಿಪರೀತವಾಗಿ ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಒತ್ತಾಯ ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಅಲ್ಲದೆ ಈ ಕಾಡಾನೆಗಳ ದಾಳಿ ಘಟನೆಗಳನ್ನು ತಡೆಯುವುದ ಕ್ಕೋಸ್ಕರವೇ ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚಿಸಬೇಕು ಎನ್ನುವ ಒತ್ತಾಯಗಳೂ ಕೇಳಿ ಬರುತ್ತಿವೆ.
Published by: MAshok Kumar
First published: April 20, 2021, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories