ಮಾನವೀಯತೆ ಮರೆಯಾಗುತ್ತಿದೆ, ಕೇರಳದ ಆನೆ ಸಾವು ಮಾನವನ ಕ್ರೌಯಕ್ಕೆ ಸಾಕ್ಷಿ; ಸಚಿವ ವಿ. ಸೋಮಣ್ಣ ವಿಷಾಧ 

ಪರಿಸರದಲ್ಲಿ ಮನುಷ್ಯ ಅಷ್ಟೇ ಅಲ್ಲ, ಮರ, ಗಿಡ ಪ್ರಾಣಿ ಪಕ್ಷಿಗಳು ಸ್ವತಂತ್ರವಾಗಿ ಬದುಕುವುದಕ್ಕೆ ಅವಕಾಶವಿದೆ ಹೀಗಾಗಿ ಈ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುತ್ತಿರುವ ಸಚಿವ ವಿ. ಸೋಮಣ್ಣ.

ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುತ್ತಿರುವ ಸಚಿವ ವಿ. ಸೋಮಣ್ಣ.

  • Share this:
ಕೊಡಗು (ಜೂನ್‌ 05): ಪ್ರತೀ ಜೀವಿಗೆ ಬದುಕಲು ಸ್ವತಂತ್ರವಿದೆ. ಆದರೆ, ಇಂದು ಮಾನವೀಯತೆ ದುರ್ಬಲವಾಗುತ್ತಿದ್ದು, ಮನುಷ್ಯ ಪ್ರಕೃತಿಯ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾನೆ. ಈ ಕ್ರೌರ್ಯಕ್ಕೆ ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿರುವುದು ನಿಜಕ್ಕೂ ಹೇಯ ಕೃತ್ಯ ಎಂದು ವಸತಿ ಸಚಿವ ವಿ. ಸೋಮಣ್ಣ ವಿಷಾಧಿಸಿದ್ದಾರೆ.

ಮಡಿಕೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರುವ ಅವರು, " ಕೇರಳದ ಮಲ್ಲಾಪುರಂ ನಲ್ಲಿ ಕಿಡಿಗೇಡಿಗಳು ಅನಾನಸ್ ಹಣ್ಣಿಗೆ ಸ್ಫೋಟಕ ಇಟ್ಟು ಗರ್ಭಿಣಿ ಆನೆಗೆ ತಿನ್ನುವಂತೆ ಮಾಡಿ ಸ್ಪೋಟಿಸಿದ್ದಾರೆ. ಇದರಿಂದ ಆನೆ ನೋವಿನಿಂದ ನೀರಿನಲ್ಲಿ ಸಾವನ್ನಪ್ಪಿತು. ಇದು ಅತ್ಯಂತ ನೋವಿನ ಮತ್ತು ದುರದೃಷ್ಟಕರ ಸಂಗತಿ. ಇಂತಹ ಹೇಯ ಕೃತ್ಯಗಳು ಎಂದೂ ನಡೆಯಬಾರದು ಮಾನವ ಇನ್ನಾದರೂ ಇಂತಹ ಕ್ರೌರ್ಯದಿಂದ ವಿಮುಖನಾಗಬೇಕು" ಎಂದು ಕಿವಿಮಾತು ಹೇಳಿದ್ದಾರೆ.

"ಕೊಡಗು ವಿಶೇಷವಾದ ಪ್ರಾಕೃತಿಕ ಸಂಪತ್ತು ಹೊಂದಿ ದೇಶಕ್ಕಷ್ಟೇ ಅಲ್ಲ ವಿಶ್ವದ ಪರಿಸರಕ್ಕೆ ಕೊಡುಗೆ ನೀಡಿದೆ. ಪರಿಸರದಲ್ಲಿ ಮನುಷ್ಯ ಅಷ್ಟೇ ಅಲ್ಲ, ಮರ, ಗಿಡ ಪ್ರಾಣಿ ಪಕ್ಷಿಗಳು ಸ್ವತಂತ್ರವಾಗಿ ಬದುಕುವುದಕ್ಕೆ ಅವಕಾಶವಿದೆ ಹೀಗಾಗಿ ಈ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ" ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಮಡಿಕೇರಿಯ ಮರುನಿರ್ಮಾಣಗೊಂಡಿರುವ ಗ್ರಂಥಾಲಯದ ಮುಂಭಾಗದಲ್ಲಿ ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಮತ್ತು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗಿಡಗಳನ್ನು ನೆಟ್ಟು ನೀರೆರದರು.

ಇದನ್ನೂ ಓದಿ : Hampi Earthquake: ಹಂಪಿಯಲ್ಲಿ 4.0 ತೀವ್ರತೆಯ ಭೂಕಂಪ ಆಗಿದೆ ಎಂಬುದು ನಿಜವಲ್ಲ; ಜಿಲ್ಲಾಧಿಕಾರಿ ಸ್ಪಷ್ಟನೆ
First published: