Dasara 2021: ಪಟಾಕಿ, ತಮಟೆ ಸದ್ದಿಗೆ ಬೆಚ್ಚಿದ ದಸರಾ ಆನೆ, ಬೆಳ್ಳಿ ರಥದಲ್ಲಿ ಮುಂದುವರೆದ ದೇವರ ಉತ್ಸವ

Elephant Ran away in Dasara Procession: ಪುಷ್ಪಾರ್ಚಣೆ ಬಳಿಕ ಆನೆಗಳು ಹೆಜ್ಜೆ ಹಾಕುತ್ತಿದ್ದಂತೆ ಪಟಾಕಿ ಸಿಡಿಸಿ ತಮಟೆ ವಾದ್ಯ ಬಾರಿಸುತ್ತಿದ್ದಂತೆ ಅಂಬಾರಿ ಹೊತ್ತಿದ್ದ  ಆನೆ ಗೋಪಾಲ ಬೆಚ್ಚಿ ಬಿದ್ದು ಹಿಮ್ಮುಖ ತಿರುಗಿ ಓಡಲು ಮುಂದಾಯ್ತು. ಈ ವೇಳೆ ಆನೆಗಳ ವರ್ತನೆ ಕಂಡು ಜನರು ದಿಕ್ಕಾಪಾಲಾಗಿ ಓಡಿ ಒಬ್ಬರ ಮೇಲೊಬ್ಬರು ಬಿದ್ದರು.

ಬೆದರಿದ ಆನೆ ಗೋಪಾಲಸ್ವಾಮಿ

ಬೆದರಿದ ಆನೆ ಗೋಪಾಲಸ್ವಾಮಿ

 • Share this:
  ಶ್ರೀರಂಗಪಟ್ಟಣ: ಪಟಾಕಿ ಶಬ್ದಕ್ಕೆ ಬೆಚ್ಚಿದ ಆನೆಗಳ ವಿಘ್ನದ ನಡುವೆ ವಿಶ್ವ ವಿಖ್ಯಾತ ಮೈಸೂರು ದಸರೆಯ ಮೂಲ ನೆಲ ಶ್ರೀರಂಗಪಟ್ಟಣದಲ್ಲಿ ದಸರಾ ಜಂಬೂ ಸವಾರಿಗೆ (Jambu Savari) ಆದಿ ಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು. ಶನಿವಾರ ಮಧ್ಯಾಹ್ನ 3 ಗಂಟೆಯ ಶುಭ ಲಗ್ನದಲ್ಲಿ ಆನೆಯ (Elephant) ಮೇಲಿನ ಅಲಂಕೃತ ಮರದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ತಾಯಿ‌ ಚಾಮುಂಡೇಶ್ವರಿ ದೇವಿಗೆ ಚುಂಚಶ್ರೀ ಸೇರಿದಂತೆ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿದ್ರು.‌ ಪುಷ್ಪಾರ್ಚಣೆ ಬಳಿಕ ಆನೆಗಳು ಹೆಜ್ಜೆ ಹಾಕುತ್ತಿದ್ದಂತೆ ಪಟಾಕಿ (Crackers and Music) ಸಿಡಿಸಿ ತಮಟೆ ವಾದ್ಯ ಬಾರಿಸುತ್ತಿದ್ದಂತೆ ಅಂಬಾರಿ ಹೊತ್ತಿದ್ದ  ಆನೆ ಗೋಪಾಲ ಬೆಚ್ಚಿ ಬಿದ್ದು ಹಿಮ್ಮುಖ ತಿರುಗಿ ಓಡಲು (Rogue Elephant) ಮುಂದಾಯ್ತು. ಈ ವೇಳೆ ಆನೆಗಳ ವರ್ತನೆ ಕಂಡು ಜನರು ದಿಕ್ಕಾಪಾಲಾಗಿ ಓಡಿ ಒಬ್ಬರ ಮೇಲೊಬ್ಬರು (Rampage) ಬಿದ್ದರು. ಕೂಡಲೇ ಆನೆಗಳ ಮಾವುತ ಮತ್ತು ಆನೆ ವೈದ್ಯರು ತಮ್ಮ ಸಮಯ ಪ್ರಜ್ಞೆಯಿಂದ ಆನೆಗಳನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಅನಾಹುತ ತಪ್ಪಿಸಿದರು.

  ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಆನೆ ಮೇಲಿನ ಜಂಬೂಸವಾರಿ ಮೆರವಣಿಗೆಯನ್ನು ರದ್ದು ಪಡಿಸಿ, ಆನೆ ಮೇಲಿಂದ ಅಂಬಾರಿ ಕೆಳಗಿಳಿಸಿ ರಥದ ಮಾದರಿಯ ಮತ್ತೊಂದು ವಾಹನದ ಮೂಲಕ  ಜಂಬೂ ಸವಾರಿನ್ನು ಮುಂದುವರೆಸಲಾಯ್ತು.

  ಸುಂದರವಾದ ದಸರಾ ಮೆರವಣಿಗೆ

  ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಿಂದ ಹೊರಟ ದಸರಾ ಮೆರವಣಿಗೆ ಮೈಸೂರು- ಬೆಂಗಳೂರು ಹೆದ್ದಾರಿ ಮೂಲಕ ಪಟ್ಟಣಕ್ಕೆ ಆಗಮಿಸಿ ಅಲ್ಲಿಂದ  ಮುಖ್ಯ ರಸ್ತೆಯ ಮೂಲಕ ರಂಗನಾಥ ದೇವಾಲಯದ ವರೆಗೂ ಸಾಗಿ  ಶ್ರೀರಂಗಪಟ್ಟಣ ದಸರಾ ಮೆರವಣಿಗೆ ಅಂತ್ಯಗೊಂಡಿತ್ತು. ದಸರಾ  ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ  ತಂಡಗಳು ಸೇರಿದಂತೆ ವಿವಿಧ ಇಲಾಖೆಗಳ ಹಲವು ಸ್ತಬ್ಧ ಚಿತ್ರಗಳು ಸಾಗಿ ಬಂದವು.

  ದಸರಾ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಬರುತ್ತಿದ್ದಂತೆ ಜನರು ರಸ್ತೆ ಇಕ್ಕೆಲದಲ್ಲಿ ಕುಳಿತು ದಸರಾ ಮೆರವಣಿಗೆ ವೀಕ್ಷಣೆ  ನಡೆಸಿದ್ರು. ಚಾಮುಂಡೇಶ್ವರಿ ವಿಗ್ರಹ ಬೆಳ್ಳಿ ರಥದ ಮೂಲಕ ಆಗಮಿಸುತ್ತಿದ್ದಂತೆ ರಥದ ಮೇಲಿನ ಚಾಮುಂಡೇಶ್ವರಿ ದೇವಿಗೆ ಜೈಕಾರ ಕೂಗಿ ದಸರಾ ಮೆರವಣಿಗೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ರು.

  ತಪ್ಪು ಆನೆಯದ್ದಲ್ಲ, ಜನರದ್ದು

  ಇನ್ನು ಆನೆಗಳು ಬೆದರಿದ ಬಗ್ಗೆ ಮಾತನಾಡಿದ ಪಶುವೈದ್ಯ ಡಾ.ರಮೇಶ್ ಗೋಪಾಲಸ್ವಾಮಿ ಆನೆ ತುಂಬಾ ಒಳ್ಳೆಯ ಆನೆ. ಈ ಆನೆಗಳಿಗೆ ಮರಳಿನ ಮೂಟೆ ಹೊರಿಸಿ ತಾಲೀಮು ಮಾಡಿಸಲಾಗಿತ್ತು. ಪಟಾಕಿ, ಬಣ್ಣದ ಲೈಟ್ಸ್, ಸ್ಪೀಕರ್ ಶಬ್ದಕ್ಕೆ ಆನೆ ಬೆದರುತ್ತವೆ. ಅಲ್ಲದೆ ವರ್ಷ ಪೂರ್ತಿ ಆನೆಗಳು ಕಾಡಿನಲ್ಲಿ ಇರುತ್ತವೆ. ಒಂದು ತಿಂಗಳು ಮಾತ್ರ ದಸರಾಗೆ ಇಲ್ಲಿಗೆ ಬರುತ್ತವೆ. ಜನರಿಗೆ ಎಷ್ಟೇ ರಿಕ್ವೆಸ್ಟ್ ಮಾಡಿದ್ರೂ‌ ನಮಗೆ ಸ್ಪಂದಿಸಲಿಲ್ಲ. ಪಟಾಕಿ ಹೊಡೆಯಬೇಡಿ ಎಂದರು ಪಟಾಕಿ‌ ಹೊಡೆದ್ರು. ಬಲ್ಫ್ ಹಾಕಬೇಡಿ ಎಂದುರು ಆನೆ ಮುಂದೆನೇ ಬಲ್ಪ್ ಹಾಕಿದ್ರು. ಜನರ ತಪ್ಪಿನಿಂದ ಈ ತೊಂದರೆ ಆಗಿರುವುದು. ಆನೆಗೆ ಯಾವುದೇ ತೊಂದರೆ ಇಲ್ಲ ಅದು ಚೆನ್ನಾಗಿ ಇದೆ. ಬೇರೆ ಆನೆಗಳು ಬಿದ್ದು ಓಡಿ ಹೋಗುತ್ತವೆ. ಆದ್ರೆ ಈ ಆನೆ ಓಡಿ ಹೋಗಿಲ್ಲ ಸುಮ್ಮನೆ ನಿಂತಿದೆ ಅಂತ ತಿಳಿಸಿದ್ರು.

  (ವರದಿ - ಸುನೀಲ್ ಗೌಡ, ಮಂಡ್ಯ)
  Published by:Soumya KN
  First published: