HOME » NEWS » District » ELECTIONS TO BOYCOTT NILAGUNDA VILLAGE IN GADAG DISTRICT SKG MAK

ಗದಗ ಜಿಲ್ಲೆಯ ನೀಲಗುಂದ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರ..!

ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ ನೀಲಗುಂದ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಮಾಡೋದು ಕಷ್ಟಸಾಧ್ಯವಾಗಿದೆ. ಅದು ಸರ್ಕಾರದ ಮಟ್ಟದಲ್ಲಿ ಗ್ರಾಮ ಪಂಚಾಯತಿಗೆ ಅನುಮೋದನೆ ಸಿಗಬೇಕು ಎಂದು ಅಧಿಕಾರಿಗಳು ಮನವರಿಕೆ ಮಾಡಿದ್ರು ಗ್ರಾಮಸ್ಥರು ಮಾತ್ರ ಕೇರ್ ಮಾಡುತ್ತಿಲ್ಲ.

news18-kannada
Updated:December 11, 2020, 7:07 AM IST
ಗದಗ ಜಿಲ್ಲೆಯ ನೀಲಗುಂದ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹಿಸಿ ಚುನಾವಣೆ ಬಹಿಷ್ಕಾರ..!
ನೀಲಗುಂದ ಗ್ರಾಮಸ್ಥರು.
  • Share this:
ಗದಗ: ಇಡೀ ರಾಜ್ಯದಲ್ಲಿ ಲೋಕಲ್ ದಂಗಲ್ ಆರಂಭವಾಗಿದೆ. ಗ್ರಾಮ ಗ್ರಾಮಗಳಲ್ಲಿ ಚುನಾವಣೆ ಅಖಾಡಕ್ಕೆ ಯಾರನ್ನು ಕಣಕ್ಕೆ ಇಳಿಸಬೇಕು ಎನ್ನುವ ಲೆಕ್ಕಾಚಾರ ಜೂರಾಗಿವೆ. ಆದ್ರೆ ಈ ಗ್ರಾಮದಲ್ಲಿ ಮಾತ್ರ ಚುನಾವಣಾ ಬಹಿಷ್ಕಾರದ ಮಾತು ಕೇಳಿ ಬರ್ತಾಯಿವೆ. ಅಂದಹಾಗೇ ಗದಗ ತಾಲೂಕಿನ ಚಿಂಚಲಿ ಗ್ರಾಮ ಪಂಚಾಯತ್ ವ್ತಾಪ್ತಿಗೆ ಒಳಪಡುವ ನೀಲಗುಂದ ಗ್ರಾಮಸ್ಥರು ಈ ಭಾರಿ ಚುನಾವಣೆ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ನೀಲಗುಂದ ಹಾಗೂ ಕಲ್ಲೂರು ಗ್ರಾಮಗಳು ಚಿಂಚಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿವೆ. ಆದ್ರೆ ನೀಲಗುಂದ ಗ್ರಾಮದಲ್ಲಿ ಅಭಿವೃದ್ಧಿ ಮಾತ್ರ ಆಗ್ತಾಯಿಲ್ಲಾ. ಎರಡು ವಾರ್ಡ್ ನಲ್ಲಿ ಏಳು ಸದಸ್ಯರನ್ನು ಹೋಂದಿದ್ರು, ಅನುಧಾನದಲ್ಲಿ ತಾರತಮ್ಯ ಆಗುತ್ತಿದೆ. ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲಾ. ಹೀಗಾಗಿ ನಮಗೆ ಪ್ರತ್ಯೇಕ ಗ್ರಾಮ ಪಂಚಾಯತ್ ಬೇಕು ಎಂದು ಹಠ ಹಿಡದಿದ್ದಾರೆ ನೀಲಗುಂದ ಗ್ರಾಮಸ್ಥರು.

ಇನ್ನೂ ನೀಲಗುಂದ ಗ್ರಾಮಸ್ಥರು ಕಳೆದ 12 ವರ್ಷಗಳಿಂದ ನಮ್ಮೂರಿಗೆ ಗ್ರಾಮ ಪಂಚಾಯತ್ ಆಗಬೇಕು ಎಂದು ಹೋರಾಟ ಮಾಡುತ್ತಾ ಬಂದಿದ್ದಾರೆ. ಆದ್ರೆ, ಈವರಿಗೆ ಅವರ ಆಸೆ ಈಡೇರಿಲ್ಲಾ. ಹೀಗಾಗಿ ಈ ಭಾರಿ ಚುನಾವಣಾ ಬಹಿಷ್ಕಾರ ಮಾಡೋದಾಗಿ ಇಡೀ ಗ್ರಾಮ ತಯಾರಿಗೆ ನಿಂತ್ತಿದೆ. ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡೋದಾಗಿ ಘೋಷಣೆ ಮಾಡುತ್ತಿದ್ದಂತೆ ಗ್ರಾಮಕ್ಕೆ ಗದಗ ತಹಶಿಲ್ದಾರ ಶ್ರೀನಿವಾಸ ಕುಲಕರ್ಣಿ ಹಾಗೂ ಪೊಲೀಸ್​ ಅಧಿಕಾರಿಗಳು ಗ್ರಾಮಕ್ಕೆ ತೆರಳದಿದ್ದಾರೆ.

ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿ ಚುನಾವಣೆ ಬಹಿಷ್ಕಾರ ಮಾಡೋದು ಸರಿಯಾದ ಕ್ರಮವಲ್ಲ ನಿಮ್ಮ ಬೇಡಿಕೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಚುನಾವಣೆಯಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಗ್ರಾಮಸ್ಥರು ಮಾತ್ರ ಸತಾರಂ ಒಪ್ಪುತ್ತಿಲ್ಲಾ. ಗ್ರಾಮ ಪಂಚಾಯತ್ ಆಗುವವರೆಗೂ ನಾವು ಈ ಚುನಾವಣೆ ಸೇರಿದಂತೆ, ಯಾವ ಚುನಾವಣೆಯಲ್ಲಿ ಭಾಗಿಯಾಗುವದಿಲ್ಲ ಎಂದು ಹೇಳ್ತಾಯಿದ್ದಾರೆ..
ಗ್ರಾಮದಲ್ಲಿ ಈಗಾಗಲೇ ಮೂರು ಸಾವಿರಕ್ಕೂ ಹೆಚ್ಚು ಮತದಾರರು ಇದ್ದಾರೆ. ಗ್ರಾಮಕ್ಕೆ ಬೇಕಾಗದ ಅಭಿವೃದ್ಧಿ ಕೆಲಸಗಳು ಕುಂಟಿತವಾಗುತ್ತಿವೆ.

ಇದನ್ನೂ ಓದಿ; ಬಸವಕಲ್ಯಾಣ ಉಪಚುನಾವಣೆ: ಮತ ಸಮೀಕರಣ, ಕೆಲ ಆಕಾಂಕ್ಷಿಗಳ ವೈಯಕ್ತಿಕ ವರ್ಚಸ್ಸು, ಸುಲಭದ ತುತ್ತಲ್ಲ ಗೆಲುವು

ನಮ್ಮ ಗ್ರಾಮಕ್ಕೆ ಗ್ರಾಮ ಪಂಚಾಯತ್ ಒದಗಿ ಇಲ್ಲವಾದರೆ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕಾರ ಹಾಕುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.. ಈಗಾಗಲೇ ಗ್ರಾಮ ಪಂಚಾಯತಿ ಪಿಡಿಓ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಗ್ರಾಮಕ್ಕೆ ತಾಲೂಕಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಧಿಕಾರಿಗಳ ಮನವೊಲಿಕೆಗೆ ಕ್ಯಾರೆ ಎಂದಿಲ್ಲ.
Youtube Video
ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿರುವ ನೀಲಗುಂದ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಮಾಡೋದು ಕಷ್ಟಸಾಧ್ಯವಾಗಿದೆ. ಅದು ಸರ್ಕಾರದ ಮಟ್ಟದಲ್ಲಿ ಗ್ರಾಮ ಪಂಚಾಯತಿಗೆ ಅನುಮೋದನೆ ಸಿಗಬೇಕು ಎಂದು ಅಧಿಕಾರಿಗಳು ಮನವರಿಕೆ ಮಾಡಿದ್ರು ಗ್ರಾಮಸ್ಥರು ಮಾತ್ರ ಕೇರ್ ಮಾಡುತ್ತಿಲ್ಲ. ಅಧಿಕಾರಿಗಳು ಗ್ರಾಮಸ್ಥರನ್ನು ಯಾವ ರೀತಿ ಮನವೋಲಿಸುತ್ತಾರೇ ಎಂದು‌ ಕಾದು ನೋಡಬೇಕಾಗಿದೆ.
Published by: MAshok Kumar
First published: December 11, 2020, 7:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories