news18-kannada Updated:June 19, 2020, 7:25 PM IST
ಮಾಜಿ ಸಚಿವ ಹೆಚ್.ಡಿ. ರೇವಣ್ಣ
ಹಾಸನ(ಜೂ.19): ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಚುನಾವಣಾ ಆಯುಕ್ತರು ಇಲಾಖೆಗೆ ಧಕ್ಕೆತರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು.
ಹಾಸನದಲ್ಲಿ ಮಾತನಾಡಿದ ಅವರು ನಗರಸಭೆ ಹಾಗೂ ಪುರಸಭೆಗಳ ಚುನಾವಣೆ ನಡೆದು ಎರಡು ವರ್ಷಗಳ ಮುಗಿದಿದೆ ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಆಡಳಿತ ನಡೆಸಬೇಕು. ಆದರೆ, ಅಧಿಕಾರಿಗಳ ಆಡಳಿತವೆ ಹೆಚ್ಚಾಗಿದೆ. ಇದರಿಂದ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹಿನ್ನಡೆಯಾಗಿದೆ ಎಂದು ದೂರಿದರು.
ಗ್ರಾಮ ಪಂಚಾಯತ್ ಚುನಾವಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಚುನಾವಣೆ ಪ್ರಕ್ರಿಯೆ ಮುಂದೂಡದಂತೆ ಸರ್ಕಾರ ಹಾಗೂ ಚುನಾವಣಾ ಆಯೋಗ ಸೂಕ್ತ ಕ್ರಮ ವಹಿಸಬೇಕಿದೆ. ಇಲ್ಲವಾದರೆ ಜನರೆ ನ್ಯಾಯಾಲಯಕ್ಕೆ ಪ್ರತಿದೂರು ನೀಡಲಿದ್ದಾರೆ ಎಂದರು.
ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡಬೇಕು. ನಗರ ಪ್ರದೇಶದ ಆಡಳಿತ ಅಧಿಕಾರಿಗಳಿಂದ ನಡೆಸುತ್ತಿದೆ. ಗ್ರಾಮ ಪಂಚಾಯತ್ಗೂ ಆಡಳಿತಾಧಿಕಾರಿ ನೇಮಿಸಿದೆ. ಇದರಿಂದ ಅಡಳಿತ ಯಂತ್ರ ಕುಸಿಯಲಿದೆ ಎಂದರು.
ಚುನಾವಣಾ ಆಯೋಗ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಆಯೋಗವು ಯಾವುದೇ ಸರ್ಕಾರದ ಅಧೀನದಲಿಲ್ಲ. ಗ್ರಾಮ ಪಂಚಾಯತ್ ಮಿಸಲಾತಿ 6 ತಿಂಗಳ ಮುಂಚೆಯೇ ನಿಗದಿ ಮಾಡಬೆಕಿತ್ತು. ಆದರೆ, ಆಯೊಗ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಚುನಾವಣೆ ಆಯೋಗ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯಾವುದೇ ಚುನಾವಣೆ ಮುಂಚೆ ಮೀಸಲಾತಿ ನಿಗದಿ ಮಾಡಿಕೊಳ್ಳಲಿ. ಆಯೋಗ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಹಾಗೂ ಅಡ್ವಕೇಟ್ ಜನರಲ್ ಜನರ ಹಿತಾಸಕ್ತಿ ಕಾಪಾಡಬೇಕು ಎಂದರು
ರಾಜ್ಯದಲ್ಲಿ ಹೋಟೆಲ್ ,ಬಾರ್ , ರೆಸ್ಟೋರೆಂಟ್ ಗಳಿಗೆ ಅವಕಾಶ ನೀಡಲಾಗಿದೆ ಹಾಗೂ ಎಲ್ಲಾ ವಲಯದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ ಆದರೆ ಚುನಾವಣೆ ಪ್ರಕ್ರಿಯೆ ಮುಗಿಸಲು ಎಷ್ಟುದಿನ ಬೇಕು ಎಂದು ರೇವಣ್ಣ ಪ್ರಸ್ನಿಸಿದರು.
ಚುನಾವಣಾ ಆಯೋಗ ಮುಂದಿನ ದಿನ ಜನರಿಗೆ ನ್ಯಾಯಯುತ ಆಡಳಿತ ನೀಡದಿದ್ದರೆ ಜನರ ಮೂಲಕ ನ್ಯಾಯಾಲಯದ ಮೊರೆ ಹೋಗಲಾಗುವುದು. ಕೂಡಲೇ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಮುಂದಾಗಬೇಕು. ನಗರಸಭೆ ಪುರಸಭೆ ಆಡಳಿತ ನಡೆಸಲು ಜನಪ್ರತಿನಿಧಿಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ :
ವಿಜಯಪುರ ಕಲಾವಿದರ ದೇಶಪ್ರೇಮ ; ತಮಗೆ ವೇದಿಕೆ ಒದಗಿಸಿದವರ ವಿರುದ್ಧವೇ ಜನಜಾಗೃತಿಗೆ ಮುಂದಾಗಿ ಮಾದರಿಯಾದ ಕಲಾವಿದರು
ರೇವಣ್ಣ ಅವರು ಹೆಚ್ ಡಿ, ದೇವೇಗೌಡ ಹೆಸರಿನಲ್ಲಿ ಇಂದಿಗೂ ರಾಜಕೀಯದಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ ಎಂಬ ಕೆಲ ನಾಯಕರ ಹೇಳಿಕೆಗೆ ಉತ್ತರಿಸಿದ ಅವರು, ನಾನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೆಸರಿನಲ್ಲಿ ಹಾಗೂ ಜಿಲ್ಲೆಯ ಜನತೆಯ ಆಶೀರ್ವಾದದಿಂದ ಇಂದು ಈ ಸ್ಥಾನವನ್ನು ಅಲಂಕರಿಸಿದ್ದೇನೆ ಎಂದರು.
ಹೆಚ್ ಡಿ ದೇವೇಗೌಡರು ಮಾಜಿ ಪ್ರಧಾನಿ ಹಾಗೂ ರಾಜಕೀಯ ಹಿರಿಯ ನಾಯಕರು ಆದ್ದರಿಂದ ಇಂದು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಹಿಂಬಾಗಿಲ ರಾಜಕಾರಣ ಮಾಡುವ ಪ್ರಮೇಯ ಅವರಿಗಿಲ್ಲ. ಅವರ ರಾಜಕೀಯ ಜೀವನದಲ್ಲಿ ಎಷ್ಟು ಚುನಾವಣೆ ಎದುರಿಸಿ ಗೆದ್ದಿದ್ದಾರೆ. ರಾಜ್ಯದ ಜನತೆಗೆ ಗೊತ್ತಿದೆ ಈ ಬಗ್ಗೆ ಬೇರೆ ಪಕ್ಷದ ಟೀಕೆಗೆ ನಾ ಉತ್ತರಿಸುವುದಿಲ್ಲ ಎಂದರು.
First published:
June 19, 2020, 7:24 PM IST