ಬಿಜೆಪಿ ವರಿಷ್ಠರ ಪ್ಲ್ಯಾನ್ ಸಕ್ಸಸ್; ಬೆಳಗಾವಿ ಡಿಸಿಸಿ ಬ್ಯಾಂಕ್ ಒಮ್ಮತದ ಆಯ್ಕೆ ಮಾಡಿದ ನಾಯಕರು..!

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮಾತನಾಡಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಜಾರಕಿಹೊಳಿ‌, ಸವದಿ ‌ಹಾಗೂ ಕತ್ತಿ ಒಗ್ಗಟ್ಟಿನ ಕೆಲಸ ಮಾಡಿದ್ದಾರೆ. ಜಿಲ್ಲೆ, ರಾಜ್ಯಕ್ಕೆ ಬೆಳಗಾವಿಯಿಂದ ಇದೊಂದು ಉತ್ತಮ ಸಂದೇಶ. ಜಿಲ್ಲೆಯಲ್ಲಿ ಅಭಿವೃದ್ಧಿ ರಾಜಕೀಯ ಮಾಡಲು ಯತ್ನ ಮಾಡುತ್ತೇವೆ ಎಂದರು.

ರಮೇಶ್​ ಕತ್ತಿ

ರಮೇಶ್​ ಕತ್ತಿ

  • Share this:
ಬೆಳಗಾವಿ (ನವೆಂಬರ್ 15); ಬೆಳಗಾವಿ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಆರ್ ಎಸ್ ಎಸ್ ಹಾಗೂ ಬಿಜೆಪಿ ವರಿಷ್ಠರು ಮಾಡಿರೋ ಸಂಧಾನ ಯಶಸ್ವಿಯಾಗಿದೆ. ಒಂದೇ ಪಕ್ಷದ ಒಳ ಜಗಳಕ್ಕೆ ಬ್ರೇಕ್ ಹಾಕುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಪ್ರಭಾವಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವರಾದ ಉಮೇಶ ಕತ್ತಿ ‌ಹಾಗೂ ಬಾಲಚಂದ್ರ ಜಾರಕಿಹೊಳಿ‌ ಒಂದಾಗಿ‌ ಅವಿರೋಧ ಆಯ್ಕೆ ಮಾಡಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ರಮೇಶ ಕತ್ತಿ, ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ ಆಯ್ಕೆಯಾಗಿದ್ದಾರೆ. ಅಫೆಕ್ಸ್ ಬ್ಯಾಂಕ್ ನಿರ್ದೇಶಕರು ಯಾರಾಗಬೇಕು ಎಂಬ ಬಗ್ಗೆ ಮುಂದಿನ ತಿಂಗಳು ತೀರ್ಮಾನ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಬೆಳಗಾವಿ ಸರ್ಕಿಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಎಲ್ಲಾ ನಾಯಕರು ತಮ್ಮ ಅಭಿಪ್ರಾಯ ಮುಂದಿಟ್ಟಿದ್ದರು. ಅಂತಿಮವಾಗಿ ಎಲ್ಲರೂ ಒಟ್ಟಾಗಿ ಆಯ್ಕೆಗೆ ನಿರ್ಧರಿಸಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಗೆ ಒಟ್ಟು ‌ 16 ಜನ ನಿರ್ದೇಶಕರು ಇದ್ದಾರೆ. ಈ ಪೈಕಿ 13 ನಿರ್ದೇಶಕರು ಅವಿರೋಧ ಆಯ್ಕೆ ನಡೆದಿದ್ದು, ಇನ್ನೂಳಿದ ಮೂರು ಸ್ಥಾನಗಳಿಗೆ ಚುನಾವಣೆ ‌ನಡೆದಿತ್ತು. ನಂಬರ್ ಗೆಮ್ ನಲ್ಲಿ‌ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಮುಂದಿದ್ದರು. ಆದರೆ ತಮ್ಮ ಮಿತ್ರ ರಮೇಶ ಕತ್ತಿ ಬೆಂಬಲಿಸುವ‌ ಮೂಲಕ ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವಿ ನಾಯಕರಾಗಿ ತಮ್ಮ ಛಾಪನ್ನು‌ ಮುಂದುವರೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಸವದಿ ಕೊನೆ ಘಳಿಗೆಯಲ್ಲಿ ಅನಿವಾರ್ಯವಾಗಿ ಒಪ್ಪಿಕೊಂಡರು ಎನ್ನಲಾಗಿದೆ.

ಸರ್ಕಿಟ್ ಹೌಸ್ ನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ,ರಾಜ್ಯದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಪ್ರತಿಷ್ಠಿತ ಬ್ಯಾಂಕ್. ನಮ್ಮ ಪಕ್ಷದ ವರಿಷ್ಠರು ಬ್ಯಾಂಕ್ ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ನಿರ್ದೇಶಕರು, ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ 13 ಜನ ನಿರ್ದೇಶಕರ ಅವಿರೋಧ ಆಯ್ಕೆ. ಅಧ್ಯಕ್ಷರಾಗಿ ರಮೇಶ ಕತ್ತಿ, ಉಪಾಧ್ಯಕ್ಷರಾಗಿ ಸುಭಾಷ ಡವಳೇಶ್ವರ ಆಯ್ಕೆ ಮಾಡಿದ್ದೇವೆ. ಎಲ್ಲರ ಮನಸ್ಸು ಗೆದ್ದು ಆಯ್ಕೆ ಮಾಡಲಾಗಿದೆ. ಮುಂದಿನ ತಿಂಗಳು ಅಫೆಕ್ಸ್ ಬ್ಯಾಂಕ್ ಯಾರು ಹೋಗಬೇಕು ಎನ್ನುವ ಬಗ್ಗೆ ತೀರ್ಮಾ‌ನ ಮಾಡುತ್ತೇವೆ ಎಂದರು.

ಇದನ್ನು ಓದಿ: ಕೇಂದ್ರದಿಂದ ಇನ್ನೂ ಹೆಚ್ಚಿನ ನೆರೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ: ಸಿಎಂ ಯಡಿಯೂರಪ್ಪ

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಮಾತನಾಡಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆಯಾಗಿದೆ. ಜಿಲ್ಲೆಯಲ್ಲಿ ಜಾರಕಿಹೊಳಿ‌, ಸವದಿ ‌ಹಾಗೂ ಕತ್ತಿ ಒಗ್ಗಟ್ಟಿನ ಕೆಲಸ ಮಾಡಿದ್ದಾರೆ. ಜಿಲ್ಲೆ, ರಾಜ್ಯಕ್ಕೆ ಬೆಳಗಾವಿಯಿಂದ ಇದೊಂದು ಉತ್ತಮ ಸಂದೇಶ. ಜಿಲ್ಲೆಯಲ್ಲಿ ಅಭಿವೃದ್ಧಿ ರಾಜಕೀಯ ಮಾಡಲು ಯತ್ನ ಮಾಡುತ್ತೇವೆ ಎಂದರು.

ನಂತರ ಬ್ಯಾಂಕ್​ಗೆ ಆಗಮಿಸಿದ ಎಲ್ಲಾ ಮುಖಂಡರು, ನಿರ್ದೇಶಕರು ನಾಮಪತ್ರ ಸಲ್ಲಿಕೆ ‌ಮಾಡಿದರು. ಬಳಿಕ ಚುನಾವಣಾ ಅಧಿಕಾರಿಗಳು ಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಅವಿರೋಧ ಎಂದು ಘೋಷಣೆ ಮಾಡಿದ್ರು.
Published by:HR Ramesh
First published: