ಸುಳ್ಳು ಆರೋಪ ಮಾಡುವುದರಲ್ಲಿ ಕಾಂಗ್ರೆಸ್ ನಾಯಕರದ್ದು ಎತ್ತಿದ ಕೈ : ಲಕ್ಷಣ ಸವದಿ ವ್ಯಂಗ್ಯ

ಸುಳ್ಳು ಆರೋಪ ಮಾಡುವ ಕಾಂಗ್ರೆಸ್ಸಿಗೆ ವಿಶ್ವದ ಶ್ರೇಷ್ಠ  ಪ್ರಶಸ್ತಿ ಹುಡುಕುತ್ತಿದ್ದೇವೆ. ಸುಳ್ಳು ಹೇಳಿಕೆ, ಅನಾವಶ್ಯಕ ಆರೋಪಕ್ಕೆ ಕಾಂಗ್ರೆಸಿಗರಿಗೆ ಶ್ರೇಷ್ಠ ಪ್ರಶಸ್ತಿ ನೀಡಬೇಕಿದೆ. ಪ್ರಶಸ್ತಿ ನೀಡುವ ಚಿಂತನೆ ನಡೆದಿದೆ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

  • Share this:
ಚಿಕ್ಕೋಡಿ(ನವೆಂಬರ್​. 06): ಪ್ರತಿಯೊಂದು ವಿಚಾರದಲ್ಲೂ ಕಾಂಗ್ರೆಸ್ ಪಕ್ಷದ ನಾಯಕರು ಸುಳ್ಳು ಆರೋಪ ಮಾಡುವುದರಲ್ಲಿ ಎತ್ತಿದ ಕೈ ಅನಾವಶ್ಯಕ ಆರೋಪ ಮಾಡುವುದೆ ಕಾಂಗ್ರೆಸ್ ನಾಯಕರ ಕಾಯಕವಾಗಿದೆ. ಇಂತಹ ಕೈ ನಾಯಕರಿಗೆ ಸುಳ್ಳು ಹೇಳುವ ವಿಶ್ವದ ಶ್ರೇಷ್ಠ ಪ್ರಶಸ್ತಿಯನ್ನ ಹುಡುಕುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆ ಬೆಳಗಾವಿ ಆಗಮಿಸಿದ್ದ ಡಿಸಿಎಂ ಸವದಿ ಡಿಸಿಸಿ ಬ್ಯಾಂಕ್ ಚುನಾವಣೆ ಕುರಿತು ಮಾಹಿತಿಯನ್ನ ಪಡೆದರು. ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ 16 ಜನರ ನಿರ್ದೇಶಕರ ಹುದ್ದೆಗೆ ಈ ಚುನಾವಣೆ ನಡೆಯುತ್ತಿದೆ. ಈಗಾಗಲೇ ಬಿಜೆಪಿ 13 ಸ್ಥಾನಗಳನ್ನ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದೆ. ಇನ್ನು ಮೂರು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಖಾನಾಪುರ ಕ್ಷೇತ್ರದಲ್ಲಿ ಕೈ ಶಾಸಕಿ ಅಂಜಲಿ ನಿಂಬಾಳ್ಕರ ಹಾಗೂ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಅರವಿಂದ ಪಾಟೀಲ್ ಗೆಲ್ಲಿಸಲು ಡಿಸಿಎಂ ಲಕ್ಷ್ಮಣ ಸವದಿ ತಂತ್ರಗಾರಿಕೆಯನ್ನ ನಡೆಸಿದ್ದಾರೆ.

ಇನ್ನು ಚುನಾವಣೆ ನಡೆಯುವ ಸ್ಥಳದಲ್ಲೆ ಠಿಕಾಣಿ ಹೂಡಿದ್ದ ಡಿಸಿಎಂ ಸವದಿ ಮಾಧ್ಯಮಗಳೊಂದಿಗೆ ಮಾತನಾಡಿ ಕಾಂಗ್ರೆಸ್ ವಿರುದ್ದ ಹರಿ ಹಾಯ್ದರು. ಸುಳ್ಳು ಆರೋಪ ಮಾಡುವ ಕಾಂಗ್ರೆಸ್ಸಿಗೆ ವಿಶ್ವದ ಶ್ರೇಷ್ಠ  ಪ್ರಶಸ್ತಿ ಹುಡುಕುತ್ತಿದ್ದೇವೆ. ಸುಳ್ಳು ಹೇಳಿಕೆ, ಅನಾವಶ್ಯಕ ಆರೋಪಕ್ಕೆ ಕಾಂಗ್ರೆಸಿಗರಿಗೆ ಶ್ರೇಷ್ಠ ಪ್ರಶಸ್ತಿ ನೀಡಬೇಕಿದೆ. ಪ್ರಶಸ್ತಿ ನೀಡುವ ಚಿಂತನೆ ನಡೆದಿದೆ, ಶಿಫಾರಸನ್ನು ನಾವೇ ಮಾಡುತ್ತೇವೆ ಎಂದಿದ್ದಾರೆ.

ಅತಿವೃಷ್ಟಿಗೆ, ಅನಾವೃಷ್ಟಿಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸಿನವರು ಹೇಳುತ್ತಾರೆ. ನದಿ ಬಂದರೂ, ಬರದಿದ್ದರೂ, ಗಾಳಿ ಬಿಟ್ಟರೆ, ಬಿಡದಿದ್ದರೆ ಬಿಜೆಪಿಯೇ ಕಾರಣ ಎಂದು ಆರೋಪಿಸುತ್ತಾರೆ. ಸುಳ್ಳು ಹೇಳುವುದನ್ನು ಕಾಂಗ್ರೆಸ್ ‌ನಾಯಕರು ಮೈಗೂಡಿಸಿಕೊಂಡಂತೆ ಕಾಣುತ್ತಿದೆ. ಕೊರೋನಾ ವಿಶ್ವದಲ್ಲಿರುವ ಕಾರಣಕ್ಕೆ ಈ ವಿಚಾರದಲ್ಲಿ ನಮ್ಮನ್ನು ಅವರು ಟೀಕಿಸಿಲ್ಲ. ಇಲ್ಲಂದ್ರೆ ದೇಶಕ್ಕೆ ಕೊರೋನಾ ತರಲಿಕ್ಕೆ ಬಿಜೆಪಿನೇ ಕಾರಣ ಎನ್ನುತ್ತಿದ್ದರು.

ಕೊರೋನಾ ವಿಚಾರದಲ್ಲಿಯೂ ಕಾಂಗ್ರೆಸ್ ನಾಯಕರು ನಮ್ಮನ್ನು ಟೀಕಿಸಿದ್ದಾರೆ. ಅನೇಕ ವರ್ಷಗಳ ಅಧಿಕಾರದಲ್ಲಿರುವ ಕಾರಣ ಕಾಂಗ್ರೆಸ್ ನಾಯಕರು ರಾಜಕೀಯ ಪಾಂಡಿತ್ಯ ಹೊಂದಿದ್ದಾರೆ. ಸುಳ್ಳು ಆರೋಪ ಮಾಡಲೆಂದೇ ಕಾಂಗ್ರೆಸ್ಸಿಗರು ಪಾಂಡಿತ್ಯ ಗಳಿಸಿದ್ದಾರೆ. ಎನ್ನುವ ಮೂಲಕ ಸವದಿ ಕಾಂಗ್ರೆಸ್ ನಾಯಕರ ಕಾಲೆಳೆದರು.

ಇದನ್ನೂ ಓದಿ : ವಿಜಯಪುರ ಜಿಲ್ಲೆಯಲ್ಲಿ ಕಬ್ಬಿಗೆ ಎಫ್ ಆರ್ ಪಿ ಬೆಲೆ ನಿಗದಿ: ಯಾವ ಕಾರ್ಖಾನೆಗೆ ಎಷ್ಟು ನಿಗದಿ ಗೊತ್ತಾ?

ಇನ್ನು ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಮಾಡಿರುವ ವಿಚಾರಕ್ಕೆ ಮಾತನಾಡಿದ ಅವರು. ಕಾಂಗ್ರೆಸ್ ಸರ್ಕಾರ ಇದ್ದಾಗ, ವಿನಯ್ ಕುಲಕರ್ಣಿ ಮಂತ್ರಿ ಆಗಿದ್ದಾಗ ನಡೆದ ಘಟನೆ ಇದಾಗಿತ್ತು. ಈ ಕಾರಣಕ್ಕೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂಬ ಕೋರಿಕೆ ಸ್ಥಳೀಯರದಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಿರಲಿಲ್ಲ. ನಮ್ಮ ಸರ್ಕಾರದಲ್ಲಿ ಪ್ರಕರಣ ಸಿಬಿಐಗೆ ವಹಿಸಿದೆ.

ದೊಡ್ಡಗಾಂಭೀರ್ಯ ಪಡೆದುಕೊಳ್ಳುವ ಪ್ರಕರಣ ಇದಲ್ಲ. ಸಿಬಿಐ ವಿಚಾರಣೆ ನಡೆಸಿಯೇ ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ನಮ್ಮ ವಿರುದ್ದ ಆರೋಪ ಮಾಡುವುದು ಸರಿಯಲ್ಲ. ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲಾ ಅಂದ್ರೆ ಹೆದರುವ ಅವಶ್ಯಕತೆ ಇಲ್ಲಾ. ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂದು ಜನತೆಗೆ ಗೋತ್ತಾಗಬೇಕಿದೆ ಎಂದಿದ್ದಾರೆ.
Published by:G Hareeshkumar
First published: