ಕಾಲುವೆಗಾಗಿ ಮುಂದುವರಿದ ಮಸ್ಕಿ ಗ್ರಾಮಸ್ಥರ ಹೋರಾಟ; ಡಿಸಿಎಂ ಲಕ್ಷ್ಮಣ ಸವದಿ ಮಾತುಕತೆಯೂ ವಿಫಲ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಹದಿನೈದು ದಿವಸ ಕಾಲವಕಾಶ ನೀಡಿ ನಿಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳ,ಹಣಕಾಸು ಇಲಾಖೆಯ ಹಾಗು ನೀರಾವರಿ ಇಲಾಖೆಯ ಗಮನಕ್ಕೆ ತಂದು ಸಚಿವರೊಂದಿಗೆ ಸಭೆ ನಡೆಸುತ್ತೇವೆ. ನಿಮ್ಮ ರೈತ ಪ್ರತಿನಿಧಿಗಳು ಸಹ ಬನ್ನಿ ನೀರಾವರಿಗೆ ಹಣ ಬಿಡುಗಡೆ ಮಾಡಿಸೋಣ ಎಂದು ಮನವಿ ಮಾಡಿದ್ದರು. ಆದರೆ, ರೈತರು ಇದಕ್ಕೆ ಒಪ್ಪಿಲ್ಲ.

ರೈತರ ಬಳಿ ಹೋರಾಟ ಕೈಬಿಡುವಂತೆ ಮನವಿ ಮಾಡುತ್ತಿರುವ ಲಕ್ಷ್ಮಣ ಸವದಿ.

ರೈತರ ಬಳಿ ಹೋರಾಟ ಕೈಬಿಡುವಂತೆ ಮನವಿ ಮಾಡುತ್ತಿರುವ ಲಕ್ಷ್ಮಣ ಸವದಿ.

  • Share this:
ರಾಯಚೂರು (ನವೆಂಬರ್​ 02): ಸುಮಾರು 20 ವರ್ಷಗಳಿಂದ ನೀರಾವರಿಗಾಗಿ ಕನಸು ಕಂಡಿದ್ದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ 110 ಗ್ರಾಮಸ್ಥರ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಈಗ ಇದನ್ನು ತಾರ್ಕಿಕ ಅಂತ್ಯಕ್ಕೆ ತರುವ ಹಿನ್ನಲೆಯಲ್ಲಿ ರೈತರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಾಮನಕಲ್ಲೂರಿನಲ್ಲಿ ರೈತರು ನಡೆಸುತ್ತಿರುವ ಹೋರಾಟ 12ನೇಯ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ‌ ಲಕ್ಷ್ಮಣ ಸವದಿ ಮಾತುಕತೆಗೆ ಆಗಮಿಸಿದ್ದರು. ಈ ಮಾತುಕತೆಯೂ ವಿಫಲವಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗಿದ್ದಾರೆ. ರೈತರು ಈ ಹೋರಾಟವನ್ನು ತೀವ್ರ ಗೊಳಿಸುತ್ತಿದ್ದಾರೆ. ಇದು ಸಾಮಾನ್ಯವಾಗಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಇದೀಗ ತಲೆನೋವಾಗಿ ಪರಿಣಮಿಸಿದೆ.

ಅಸಲಿಗೆ ನಾರಾಯಣಪುರ ಬಲದಂಡೆ ನಾಲೆಯ ವ್ಯಾಪ್ತಿಯಲ್ಲಿ 5A ಕಾಲುವೆಯನ್ನು ನಿರ್ಮಿಸಿ ಮಸ್ಕಿ ತಾಲೂಕಿನ 110 ಹಳ್ಳಿಗಳ 1.72 ಲಕ್ಷ ಎಕರೆ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಈ ಹಿಂದೆಯೇ ಮಂಜೂರಾಗಿದೆ. ಈ ಕುರಿತು ಈಗಾಗಲೇ ಪ್ರಾಥಮಿಕ ಹಂತದ ವರದಿ ಸಹ ಆಗಿದೆ. ಆದರೆ ಅಂತಿಮ ಹಂತದ ಪ್ರಸ್ತಾವನೆಯಾಗದೆ ಕಾಲುವೆ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ರೈತರು, ರೈತರ ಮಕ್ಕಳು ದುಡಿಮೆಗಾಗಿ ಗುಳೆ ಹೋಗುತ್ತಿದ್ದಾರೆ.

ಗುಳೆ ತಪ್ಪಿಸಿ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿ ಎಂದು ಹಲವು ಬಾರಿ ಹೋರಾಟ ನಡೆದಿದ್ದರೂ ಸರಕಾರ ರೈತರತ್ತ ಮುಖ‌ ಮಾಡಿಲ್ಲ. ಹೀಗಾಗಿ ಕಾಲುವೆ ಹೋರಾಟ ಸಮಿತಿಯವರು ಕಳೆದ 12 ದಿನಗಳಿಂದ ಪಾಮನಕಲ್ಲೂರಿನಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಈ ಮಧ್ಯೆ ಸೋಮುವಾರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಹದಿನೈದು ದಿವಸ ಕಾಲವಕಾಶ ನೀಡಿ ನಿಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗಳ,ಹಣಕಾಸು ಇಲಾಖೆಯ ಹಾಗು ನೀರಾವರಿ ಇಲಾಖೆಯ ಗಮನಕ್ಕೆ ತಂದು ಸಚಿವರೊಂದಿಗೆ ಸಭೆ ನಡೆಸುತ್ತೇವೆ. ನಿಮ್ಮ ರೈತ ಪ್ರತಿನಿಧಿಗಳು ಸಹ ಬನ್ನಿ ನೀರಾವರಿಗೆ ಹಣ ಬಿಡುಗಡೆ ಮಾಡಿಸೋಣ ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ ; ಉತ್ತರಪ್ರದೇಶ; ಮರಳು ತುಂಬಿದ ಲಾರಿ ಕಾರಿನ ಮೇಲೆ ಬಿದ್ದು ಒಂದೇ ಕುಟುಂಬದ 8 ಜನ ಸಾವು

ಆದರೆ, ಈ ಹಿಂದೆ ಇದೇ ರೀತಿ ಹಲವರು ಭರವಸೆ ನೀಡಿದ್ದಾರೆ. ಈ ಭರವಸೆ ಈಡೇರಿಲ್ಲ. ನೀವು ಕಾಮಗಾರಿಯ ಆದೇಶ ಹೊರಡಿಸಿ ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಸುವುದಾಗಿ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಡಿಸಿಎಂ ಲಕ್ಷ್ಮಣ ಸವದಿ ಯತ್ನ ವಿಫಲವಾಗಿದ್ದು, ರೈತರು ತಮ್ಮ ಭೂಮಿಗೆ ನೀರಾವರಿಯಾಗಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಮಧ್ಯೆ ಧರಣಿ ನಿರತು ಹೋರಾಟ ಸ್ವರೂಪ ತೀವ್ರಗೊಳಿಸಿದ್ದು ಡಿಸೆಂಬರ್ 6 ರಿಂದ ಪ್ರತಿನಿತ್ಯ ಒಂದು ಗಂಟೆ ಹೆದ್ದಾರಿ ತಡೆ ನಡೆಸಲು ನಿರ್ಧರಿಸಿದ್ದಾರೆ.

ರಾಯಚೂರು ಲಿಂಗಸಗೂರು ಹೆದ್ದಾರಿಯನ್ನು ಮದ್ಯಾಹ್ನ 1 ಗಂಟೆಯಿಂದ 2 ಗಂಟೆಯವರೆಗೂ ತಡೆಯಲು ಹೋರಾಟಗಾರರು ನಿರ್ಧರಿಸಿದ್ದಾರೆ. ಈ ಹೋರಾಟ ಐದು  ದಿನಗಳ ಕಾಲ ನಡೆಯುತ್ತಿದ್ದು ಇದಕ್ಕೂ ಸರಕಾರದಿಂದ ಸ್ಪಂದನೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಮಸ್ಕಿ ಬೈ ಎಲೆಕ್ಷನ್ ಸಂದರ್ಭದಲ್ಲಿ ರೈತರು ನೀರಿಗಾಗಿ ಹೋರಾಟ ನಡೆಸಿದ್ದು, ಜನಪ್ರತಿನಿಧಿಗಳು ಈ ಕುರಿತು ಈ ಸಂದರ್ಭದಲ್ಲಾದರೂ ರೈತರ ಕನಸು ನನಸು ಮಾಡುವವರೊ ಕಾದು ನೋಡಬೇಕು.
Published by:MAshok Kumar
First published: