HOME » NEWS » District » DUE TO THE ECONOMIC IMPACT OF THE LOCKDOWN THERE IS AN INCREASING CRIME RATE IN HASSAN MAK

ಲಾಕ್‌ಡೌನ್ ಆರ್ಥಿಕ ಎಫೆಕ್ಟ್‌ನಿಂದಾಗಿ ಹಾಸನದಲ್ಲಿ ಹೆಚ್ಚುತ್ತಿದೆ ಅಪರಾಧ ಪ್ರಕರಣ

ಹಣಕ್ಕಾಗಿ ಕೊಲೆಗಳು, ಗಲಾಟೆ ಕಳ್ಳತನ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಪೊಲೀಸರು ಹಾಸನ ಜಿಲ್ಲೆಯಲ್ಲಿ ಮತ್ತಷ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಆದರೆ ಎಷ್ಟೇ ಕ್ರಮ ಕೈಗೊಂಡರೂ ಹಾಸನ ಜಿಲ್ಲೆಯಲ್ಲಿ ಕೊರೋನಾದಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ದುರಂತ.

news18-kannada
Updated:September 4, 2020, 9:06 PM IST
ಲಾಕ್‌ಡೌನ್ ಆರ್ಥಿಕ ಎಫೆಕ್ಟ್‌ನಿಂದಾಗಿ ಹಾಸನದಲ್ಲಿ ಹೆಚ್ಚುತ್ತಿದೆ ಅಪರಾಧ ಪ್ರಕರಣ
ಸಾಂದರ್ಭಿಕ ಚಿತ್ರ
  • Share this:
ಹಾಸನ ; ಕೊರೋನಾ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಸಮಸ್ಯೆಯಿಂದ ಪಾರಾಗಲು ಯುವಕರು ಕಳ್ಳತನದ ಹಿಂದೆ ಬಿದ್ದಿದ್ದಾರೆ. ಮತ್ತೊಂದೆಡೆ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿದೆ. ಕೆಲಸವಿಲ್ಲದೆ ನಿರುದ್ಯೋಗ ಸೃಷ್ಟಿಯಾಗಿದ್ದು, ಈ ನಿರುದ್ಯೋಗ ಸಮಸ್ಯೆಯಿಂದ ಯುವಕರು ಕಳ್ಳತನಕ್ಕೆ ಇಳಿದಿದ್ದಾರೆ. ಒಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯು ಅಪರಾಧಗಳ ಹಾಟ್ ಸ್ಪಾಟ್ ಆಗಿದ್ದು ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. ಹಾಸನ ಜಿಲ್ಲೆಯ ಬಹುತೇಕ ಯುವಕರು ಬೆಂಗಳೂರು, ಬಾಂಬೆ ಸೇರಿದಂತೆ ಹಲವೆಡೆ ಕೆಲಸಕ್ಕೆ ಹೋಗಿ ದುಡಿದು ಜೀವನ ಸಾಗಿಸುತ್ತಿದ್ರು. ಆದರೆ, ಲಾಕ್‌ಡೌನ್ ನಂತರ ಹಲವರು ಕೆಲಸ ಕಳೆದುಕೊಂಡು ಸ್ವಗ್ರಾಮಗಳಿಗೆ ವಾಪಸ್ಸಾಗಿದ್ದಾರೆ. ಇದ್ರಿಂದಾಗಿ ಲಾಕ್‌ಡೌನ್ ನಂತರ ಜಮೀನಿನ‌ ವಿಷಯ, ಕೌಟುಂಬಿಕ ಕಲಹಗಳು ಹೆಚ್ಚಾಗಿದ್ದಾವೆ. ಅಷ್ಟೇ ಅಲ್ಲದೆ ಕೆಲಸ ಬಿಟ್ಟು ಬಂದವರು ಕುಡಿದು ಗಲಾಟೆ ಮಾಡುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಕೂಡ ಈಗ ಅಹಿತಕರ ಘಟನೆಗೆ ಕಾರಣ ಆಗುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ.

ಹಾಸನ ಜಿಲ್ಲೆಯಾದ್ಯಂತ ಸುಮಾರು ಏಪ್ರಿಲ್‌ನಲ್ಲಿ 35, ಮೇ 103, ಜೂನ್ 83 ಹಾಗೂ ಜುಲೈನಲ್ಲಿ 50 ಹೊಡೆದಾಟ ಪ್ರಕರಣಗಳು ದಾಖಲಾಗಿವೆ. ಲಾಕ್‌ಡೌನ್‌ ತೆರವು ಬಳಿಕ ಪೊಲೀಸ್‌ ಠಾಣೆಗೆ ಬಂದು ದೂರು ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ಏಪ್ರಿಲ್‌ನಲ್ಲಿ 10, ಮೇ 29, ಜೂನ್‌ 31, ಹಾಗೂ ಜುಲೈನಲ್ಲಿ 13 ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ.

ಹಾಸನದಲ್ಲಿ ವಾರ್ಷಿಕವಾಗಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳ ಸರಾಸರಿಯಲ್ಲಿ ಅಂತಹ ವ್ಯತ್ಯಾಸ ಏನು ಆಗಿಲ್ಲ. ಆದರೆ ಲಾಕ್‌ಡೌನ್ ಸಮಯದಲ್ಲಿ ಕಡಿಮೆಯಿದ್ದ ಅಪರಾಧ ಪ್ರಕರಣಗಳು ಲಾಕ್‌ಡೌನ್ ಸಡಿಲಿಕೆ ಆಗಲಾರಂಭಿಸಿದಂತೆ ಹೆಚ್ಚಾಗುತ್ತಿದ್ದು ನಿಧಾನವಾಗಿ ಒಂದೊಂದೆ ಅಪರಾಧ ಪ್ರಕರಣ ಬೆಳಕಿಗೆ ಬರಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಹಾಸನ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು ಎಲ್ಲ ಕಡೆ ಬೀಟ್ ಮಾಡಿ. ರೇಡ್ ಹೆಚ್ಚು ಮಾಡಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಡಾಬಾ, ಅಂಗಡಿಗಳ ಬಾಗಿಲು ಹಾಕಲು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಪೊಲೀಸರು ಕೂಡ ಮೊದಲಿಗಿಂತಲೂ ಈಗ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಗಸ್ತು ತಿರುಗಲು ಆರಂಭಿಸಿದ್ದಾರೆ. ಕ್ರೈಂ ತಡೆಗಟ್ಟಲು ಹಾಸನ ಜಿಲ್ಲೆಯ ಪೊಲೀಸ್ ಇಲಾಖೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಆದರೂ ಕೂಡ ಕರೋನಾ ಲಾಕ್ ಡೌನ್ ಸಮಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.

ಇದನ್ನೂ ಓದಿ : Ragini Arrested: ಡ್ರಗ್ಸ್‌ ಕೇಸ್‌ನಲ್ಲಿ ನಟಿ ರಾಗಿಣಿ ಬಂಧನ, ಮನೆಯಲ್ಲಿ ನೀರವ ಮೌನ!

ಎಲ್ಲಾದರೂ ಗಲಾಟೆ ನಡೆಯುತ್ತಿರುವುದು ಕಂಡು ಬಂದರೆ, ಸಾರ್ವಜನಿಕರು ನಮಗೂ ಇದಕ್ಕೂ ಸಂಬಂಧ ಇಲ್ಲ ಎಂಬ ರೀತಿ ವರ್ತಿಸದೆ, ಕೂಡಲೇ ಪೊಲೀಸ್ ಇಲಾಖೆಗೆ ಕರೆ ಮಾಡಿ ತಿಳಿಸಿದ್ರೆ ತಕ್ಷಣ ಸ್ಥಳಕ್ಕೆ ಬಂದು ಆಗುವ ಅನಾಹುತ ತಪ್ಪಿಸುತ್ತೇವೆ ಎಂದು ಪೊಲೀಸ್ ಇಲಾಖೆ ಮನವಿ ಮಾಡುತ್ತಿದೆ. ಈ ಕರೋನಾ ಮಾಹಾಮಾರಿಯಿಂದ ಒಂದೆಡೆ ಆರ್ಥಿಕ ವ್ಯವಸ್ಥೆಗೆ ಹೊಡೆತ ಬಿದ್ದರೆ ಮತ್ತೊಂದೆಡೆ ಅಪರಾಧಗಳು ಹೆಚ್ಚಾಗುತ್ತಿವೆ.
ಹಣಕ್ಕಾಗಿ ಕೊಲೆಗಳು, ಗಲಾಟೆ ಕಳ್ಳತನ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಪೊಲೀಸರು ಹಾಸನ ಜಿಲ್ಲೆಯಲ್ಲಿ ಮತ್ತಷ್ಟು ಕಾನೂನು ಸುವ್ಯವಸ್ಥೆ ಬಿಗಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಆದರೆ ಎಷ್ಟೇ ಕ್ರಮ ಕೈಗೊಂಡರೂ ಹಾಸನ ಜಿಲ್ಲೆಯಲ್ಲಿ ಕೊರೋನಾದಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ದುರಂತ.
Published by: MAshok Kumar
First published: September 4, 2020, 9:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories