ಕೊಪ್ಪಳ: ಕೊರೋನಾ-ಲಾಕ್​ಡೌನ್​ನಿಂದಾಗಿ ವಿಕಲಚೇತನರಿಗೆ ಅತ್ತ ದುಡಿಮೆಯೂ ಇಲ್ಲ, ಇತ್ತ ಮಾಶಾಸನವೂ ಇಲ್ಲ!

ಕೊಪ್ಪಳ ಜಿಲ್ಲೆಯಲ್ಲಿರುವ ವಿಕಲಚೇತನರಿಗೆ ಕಳೆದ 3 ರಿಂದ 15 ತಿಂಗಳ ವರೆಗಿನ ಮಾಶಾಸನ ಬಂದಿಲ್ಲ. ಬಹುಪಾಲು ಜನರಿಗೆ ಕಳೆದ 15 ತಿಂಗಳನಿಂದ ಮಾಸಾಶನ ಬಾರದೆ ಇರುವದರಿಂದ ಔಷಧಿ ಖರ್ಚು ಭರಿಸಲು ಆಗುತ್ತಿಲ್ಲ.

ವಿಕಲಚೇತನರು.

ವಿಕಲಚೇತನರು.

  • Share this:
ಕೊಪ್ಪಳ: ಇವರೆಲ್ಲರೂ ವಿಕಲಚೇತನರು. ಅವರಿಗೆ ದುಡಿಯಲು ಕಷ್ಟ. ಇನ್ನೊಂದು ಕಡೆ ಅವರಿಗೆ ಸರಕಾರದಿಂದ ನೀಡುತ್ತಿರುವ ಮಾಶಾಸನವು ಸಹ ಸಿಗುತ್ತಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ವಿಕಾಲಚೇತರು ಸರಕಾರ ನೀಡುವ ಹಣಕ್ಕಾಗಿ ಕಾಯಿಯುವಂತಾಗಿದೆ. ಅಧಿಕಾರಿಗಳನ್ನು ಹೋಗಿ ಕೇಳಲು ಸಹ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ವಿಕಲಚೇತನರಿಗೆ ಸರಕಾರವು ಮನೆ ಮನೆಗೆ ಹೋಗಿ ಲಸಿಕೆ ಹಾಕುವುದಾಗಿ ಹೇಳಿದೆ. ಆದರೆ ಇದ್ಯಾವುದು ಜಾರಿಯಾಗಿಲ್ಲ. ಹುಟ್ಟಿನಿಂದ ಅಥವಾ ಅಕಾಲಿಕವಾಗಿ ಹಲವರಿಗೆ ಅಂಗವಿಕಲತೆ ಕಾಡುತ್ತಿದೆ, ವಿಕಲಚೇತನರಲ್ಲಿ ಕೆವಲರಿಗೆ ದುಡಿಯಲು ಆಗುವುದಿಲ್ಲ. ಅವರ ಖರ್ಚಿಗಾಗಿ ಸರಕಾರ ಮಾಶಾಸನವನ್ನು ನೀಡುತ್ತಿದೆ. ಶೇ 50 ಕ್ಕಿಂತ ಕಡಿಮೆ ಅಂಗವೈಕಲ್ಯತೆ ಇದ್ದವರಿಗೆ ಪ್ರತಿ ತಿಂಗಳು 600 ರೂಪಾಯಿ ಶೇ 75 ಕ್ಕಿಂತ ಅಧಿಕ  ಅಂಗವಿಕಲತೆ ಇದ್ದವರಿಗೆ ಪ್ರತಿ ತಿಂಗಳು 1400 ರೂಪಾಯಿಯನ್ನು ಸಮಾಜಿಕ ಭದ್ರತಾ ಯೋಜನೆಯಲ್ಲಿ ಹಣ ನೀಡುತ್ತಿದ್ದಾರೆ.

ಆದರೆ ಕೊಪ್ಪಳ ಜಿಲ್ಲೆಯಲ್ಲಿರುವ ವಿಕಲಚೇತನರಿಗೆ ಕಳೆದ 3 ರಿಂದ 15 ತಿಂಗಳ ವರೆಗಿನ ಮಾಶಾಸನ ಬಂದಿಲ್ಲ. ಬಹುಪಾಲು ಜರಿಗೆ ಕಳೆದ 15 ತಿಂಗಳಿನಿಂದ ಮಾಸಾಶನ ಬಾರದೆ ಇರುವದರಿಂದ ಔಷಧಿ ಖರ್ಚು ಭರಿಸಲು ಆಗುತ್ತಿಲ್ಲ. ವಿಕಲಚೇತನರಿಗೆ ಸರಕಾರದ ಖಜಾನೆ ಇಲಾಖೆಯಿಂದ ಬ್ಯಾಂಕುಗಳ ಮುಖಾಂತರ ವಿಕಲಚೇತನರ ಖಾತೆಗೆ ಇಲ್ಲವೆ ಪೋಸ್ಟ್ ಗಳ ಮುಖಾಂತರ ಹಣ ನೀಡುತ್ತಾರೆ. ಈಗ ಹಣ ಬಾರದೆ ಇರುವದರಿಂದ ವಿಕಲಚೇತನರು ಹಣಕ್ಕಾಗಿ ಪರಿದಾಡುವಂತಾಗಿದೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ವಿಕಲಚೇತನರು ಹೊರಗೆ ಬಂದು ಅಧಿಕಾರಿಗಳಲ್ಲಿ ಕೇಳಲು ಆಗುವುದಿಲ್ಲ ಇದರಿಂದಾಗಿ ವಿಕಲಚೇತನರು ಮಾಶಾಸನಕ್ಕಾಗಿ ಕಾಯಿಯುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆಯವರನ್ನು ಸಹ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ತಾಂತ್ರಿಕ ತೊಂದರೆಯಿಂದ ವಿಕಲಚೇತನರಿಗೆ ಹಣ ಜಮಾ ಆಗಿಲ್ಲ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಮಾತನಾಡಿದ್ದೇನೆ ಒಂದು ವಾರದಲ್ಲಿ ವಿಕಲಚೇತನರಿಗೆ ಮಾಶಾಸನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 600 ರೂಪಾಯಿ ಮಾಶಾಸನ ಪಡೆಯುವ ವಿಕಲಚೇತನರು 11,964 ಜನರು. 1,400 ರೂಪಾಯಿ ಮಾಶಾಸನ ಪಡೆಯುವ 16,373 ಜನರಿದ್ದಾರೆ. ಅವರಿಗೆ ಕ್ರಮವಾಗಿ ಪ್ರತಿ ತಿಂಗಳು 72,43,110 ರೂಪಾಯಿ ಹಾಗೂ 2,30,66,750 ರೂಪಾಯಿ ವಿಕಲ ಚೇತನರ ಖಾತೆಗೆ ಜಮಾ ಆಗಬೇಕು. ಆದರೆ ಈಗ ಸರಿಸುಮಾರು 10 ಕೋಟಿ ರೂಪಾಯಿಗೂ ಅಧಿಕ ಹಣ ಕೊಪ್ಪಳ ಜಿಲ್ಲೆಯ ವಿಕಲಚೇತನರಿಗೆ ನೀಡಬೇಕಾಗಿದೆ. ಸರಕಾರ ಕೊಡುವ ಮಾಶಾಸನದಿಂದಲೇ ಒಂದಿಷ್ಟು ಖರ್ಚು ನಿಭಾಯಿಸಿಕೊಳ್ಳುತ್ತಿದ್ದ ವಿಕಲಚೇತನರು ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: ಕುಟುಂಬದಲ್ಲಿ ಕೊರೊನಾದಿಂದ ಮೃತಪಟ್ಟ ಒಬ್ಬರಿಗೆ ₹1 ಲಕ್ಷ ಪರಿಹಾರ : ಸಿಎಂ ಯಡಿಯೂರಪ್ಪ ಘೋಷಣೆ

ಈ ಮಧ್ಯೆ ರಾಜ್ಯ ಸರಕಾರ ವಿಕಲಚೇತನರಿಗೆ ಮನೆ ಮನೆಗೆ ಹೋಗಿ ಕೊರೊನಾ ಲಸಿಕೆ ಹಾಕುವುದಾಗಿ ಹೇಳಿದ್ದಾರೆ, ಆದರೆ ಇಲ್ಲಿಯವರೆಗೂ ವಿಕಲಚೇತನರಿಗೆ ಲಸಿಕೆ ಹಾಕಿಲ್ಲ. ವಿಕಲಚೇತನರು ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಳ್ಳಲು ಆಗುತ್ತಿಲ್ಲ, ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ವಿಕಲಚೇತನರು ಆಗ್ರಹಿಸಿದ್ದಾರೆ. ಅಂಗವೈಕಲ್ಯ ತೆಯಿಂದ‌ ಬಳಲುತ್ತಿರುವವರ ಸಮಾಜದಲ್ಲಿ ಹೊರೆಯಾಗಿರುತ್ತಾರೆ ಎಂಬ ಭಾವನೆ ಇದೆ.

ಇದನ್ನೂ ಓದಿ: Priyanka Gandhi| ರಾಮ ಮಂದಿರ ಟ್ರಸ್ಟ್​ ಮೇಲೆ ಭ್ರಷ್ಟಾಚಾರದ ಆರೋಪ; ಇದು ದಾನ-ನಂಬಿಕೆಗೆ ಅವಮಾನ ಎಂದ ಪ್ರಿಯಾಂಕ ಗಾಂಧಿ

ಈಗ ಲಾಕ್​ಡೌನ್ ನಿಂದ ವಿಕಲಚೇತನರ ಕುಟುಂಬದಲ್ಲಿ ಲಾಕ್​ಡೌನ್ನಿಂದಾಗಿ ದುಡಿಮೆ ಇಲ್ಲ. ಇಂಥ ಸಂದರ್ಭದಲ್ಲಿ ವಿಕಲಚೇತನರಿಗೆ ಸರಕಾರ ನೀಡುವ ಮಾಸಾಶನವನ್ನು ಸಹ ನೀಡದೆ ಸತಾಯಿಸುತ್ತಿದೆ. ಸರಕಾರದ ಈ ಕ್ರಮಕ್ಕೆ‌ ವಿಕಲಚೇತನರು ಅಸಮಾನ ವ್ಯಕ್ತಪಡಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: