HOME » NEWS » District » DUE TO ECONOMIC LOSS MALNAD TRANSPORT AGENCY FOR SALE MAK

ಆರ್ಥಿಕ ನಷ್ಟ, ಸರ್ಕಾರದ ಅಸಹಾಕಾರದಿಂದ ಬೇಸತ್ತು ಮಲೆನಾಡಿನ ಸಾರಿಗೆ ಸಂಸ್ಥೆ ಮಾರಾಟಕ್ಕೆ...!

1990ರಲ್ಲಿ ಇದ್ದ ಶಂಕರ್ ಟ್ರಾನ್ಸ್​ಪೋಟ್​ರ್ ಬಾಗಿಲು ಹಾಕಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಮಲೆನಾಡಿನ ಹೆಮ್ಮೆಯ ಕಾರ್ಮಿಕರ ಬೆವರಿನ ಸಂಸ್ಥೆ ಇದು.

news18-kannada
Updated:September 20, 2020, 7:10 AM IST
ಆರ್ಥಿಕ ನಷ್ಟ, ಸರ್ಕಾರದ ಅಸಹಾಕಾರದಿಂದ ಬೇಸತ್ತು ಮಲೆನಾಡಿನ ಸಾರಿಗೆ ಸಂಸ್ಥೆ ಮಾರಾಟಕ್ಕೆ...!
ಮಲೆನಾಡಿನ ಸಹಕಾರ ಸಾರಿಗೆ.
  • Share this:
ಚಿಕ್ಕಮಗಳೂರು : ಆರ್ಥಿಕ ನಷ್ಟ, ಸರ್ಕಾರದ ಅಸಹಾಕಾರದಿಂದ ಬೇಸತ್ತು ಕಾರ್ಮಿಕರೇ ಮಾಲೀಕರಾಗಿದ್ದ ಏಷ್ಯಾ ಖಂಡದ ಬೆಸ್ಟ್ ಸಹಕಾರ ಸಾರಿಗೆ ಸಂಸ್ಥೆ ಮಾರಾಟಕ್ಕೆ ಸಿದ್ದವಾಗಿದೆ. ಸಹಕಾರ ಸಾರಿಗೆ ಕೇವಲ ನಾಲ್ಕು ಚಕ್ರದ ಬಸ್ಸಲ್ಲ, ಮಲೆನಾಡಿಗರ ಪಾಲಿನ ರಥ. ಮಕ್ಕಳನ್ನ ಶಾಲೆಗೆ, ವೃದ್ಧರನ್ನ ಆಸ್ಪತ್ರೆಗೆ ಸೇರಿದಂತೆ ಲಕ್ಷಾಂತರ ಜನರನ್ನ ಸಮಯಕ್ಕೆ ಸರಿಯಾಗಿ ಮುಟ್ಟಬೇಕಾದ ಜಾಗ ಮುಟ್ಟಿಸಿದ ಸಮಯ ಸಾಧಕ. ಜೊತೆಗೆ, ಏಷ್ಯಾ ಖಂಡದಲ್ಲೇ ಹಲವು ಮೊದಲುಗಳಿಗೆ ಸಾಕ್ಷಿಯಾದ ಕಾರ್ಮಿಕರ ಬೆವರಿನ ಸಂಸ್ಥೆ. ಆದರೆ, ಇಂತಹಾ ಸಹಕಾರ ಸಂಸ್ಥೆಗೆ ಸರ್ಕಾರದಿಂದ ಅಸಹಕಾರ ಸಿಕ್ಕಿದ್ದರಿಂದ ಮಾರಾಟದ ಹೊಸ್ತಿಲ್ಲಲ್ಲಿದೆ. ಸಂಪೂರ್ಣವಾಗಿ ಮಾರಾಟಕ್ಕೆ ಇಲ್ಲದಿದ್ರು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಂಸ್ಥೆಯನ್ನ ಭೋಗ್ಯಕ್ಕೆ ಅಥವ ಮಾರಾಟಕ್ಕೆ ಕಾರ್ಮಿಕರು ಚಿಂತಿಸಿದ್ದು ಸದ್ಯದಲ್ಲೇ ಸಭೆ ಸೇರಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. ಕಾರ್ಮಿಕರು ಒಮ್ಮತದ ನಿರ್ಣಯಕ್ಕೆ ಬಂದರೆ ಮಲೆನಾಡ ಬೆಟ್ಟಗುಡ್ಡಗಳಲ್ಲಿ ಸಹಕಾರ ಸಾರಿಗೆ ಮತ್ತೆ ತನ್ನ ಗತವೈಭವವನ್ನ ಆರಂಭಿಸಬಹುದು.

ಈ ಸಹಕಾರ ಸಾರಿಗೆ ಬಸ್ಸಿನ ಚಕ್ರಗಳು ಚಿಕ್ಕಮಗಳೂರು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗಾದ ಬೆಟ್ಟಗುಡ್ಡಗಳ ಬಹುತೇಕ ಗ್ರಾಮವನ್ನ ನೋಡಿವೆ. ಕಾರ್ಮಿಕರ ಬೆವರಲ್ಲಿ ಜನ್ಮ ತಾಳಿದ ಈ ಸಂಸ್ಥೆ ಮಲೆನಾಡ ಕುಗ್ರಾಮಗಳ ಮನೆ-ಮನಗಳಲ್ಲಿ ಬೆಸೆದ ಕೊಂಡಿಯ ಪರಿಗೆ ಏಷ್ಯಾದಲ್ಲೇ ಬೆಸ್ಟ್ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿತ್ತು. ಕಾರ್ಮಿಕರೇ ಕಟ್ಟಿ, ಕಾರ್ಮಿಕರೇ ಮಾಲೀಕರಾಗಿ 6 ಬಸ್ನಿಂದ 76 ಬಸ್ಗೆ ತಂದಿದ್ದರು.

ರಾಜ್ಯಕ್ಕೆ ಕೆ.ಎಸ್.ಆರ್.ಟಿ.ಸಿ. ಮಲೆನಾಡಿಗೆ ಸಹಕಾರ ಸಾರಿಗೆ ಎಂಬ ಗಾದೆಯೂ ಜನ್ಮ ತಾಳಿತ್ತು. ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕದ ಏಕೀಕರಣಕ್ಕೆ ಹೋರಾಡಿದವರು, ವಿಧ್ಯಾರ್ಥಿಗಳು, ಸಂಸ್ಥೆಯ ಕಾರ್ಮಿಕರ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರಿಗೆ ಶೇ.50 ರಷ್ಟು ರಿಯಾಯಿತಿ ಕೊಟ್ಟು, ದಟ್ಟಕಾನನ, ಕಲ್ಲು-ಮಣ್ಣಿನ ದುರ್ಗಮ ಹಾದಿಯಲ್ಲೂ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಈ ಕಾರ್ಮಿಕರ ಸಂಸ್ಥೆಯದ್ದು.

ಅಂತಹಾ ಸಂಸ್ಥೆ ಸರ್ಕಾರದ ರೀತಿ-ನೀತಿ-ರಿವಾಜುಗಳಿಂದ ಕಾರ್ಮಿಕರಿಗೆ ಸಂಬಳ ಕೊಡಲಾಗದೆ ಬೀಗ ಹಾಕಿತ್ತು. ಇಂತಹಾ ಹಲವು ಮೊದಲುಗಳನ್ನ ಉಳಿಸಿಕೊಳ್ಳಲು ಸರ್ಕಾರ ತೋರಿದ ಅಸಹಕಾರದಿಂದ ಮಲೆನಾಡಿಗರ ಹೆಮ್ಮೆಯ ಸಾರಿಗೆ ಸಂಸ್ಥೆ ಮಾರಾಟಕ್ಕಿದೆ.

1990ರಲ್ಲಿ ಇದ್ದ ಶಂಕರ್ ಟ್ರಾನ್ಸ್​ಪೋಟ್​ರ್ ಬಾಗಿಲು ಹಾಕಿದ ಬಳಿಕ ಅಲ್ಲಿದ್ದ ಕಾರ್ಮಿಕರು ತಮಗೆ ಬಂದ ಪರಿಹಾರದ ಹಣದಿಂದಲೇ ಕಟ್ಟಿಕೊಂಡ ಬೆವರಿನ ಸಂಸ್ಥೆ ಇದು. ಅಂದಿನಿಂದ ಈ ಬಸ್ ಮಲೆನಾಡ ಮನೆ-ಮನಗಳ ಮಧ್ಯೆ ಭಾಂದವ್ಯ ಬೆಸೆದಿತ್ತು. ಕಳೆದ ಒಂದೂವರೆ ವರ್ಷದಿಂದ ಅವನತಿಯ ಅಂಚಿನಲ್ಲಿದ್ದು ತೀವ್ರವಾದ ನಷ್ಟದಿಂದ ಸಂಸ್ಥೆಗೆ ಬೀಗ ಬಿದ್ದಿತ್ತು. ತಿಂಗಳಿಗೆ ಡೀಸೆಲ್​ನಿಂದ 24 ಲಕ್ಷ ನಷ್ಟವಾದ್ರೆ, ಟ್ಯಾಕ್ಸ್, ರಿಯಾಯಿತಿ ಪಾಸ್ ಹೊರೆ ಸೇರಿದಂತೆ ಹಲವು ಕಾರಣಗಳಿಂದ ಸಂಸ್ಥೆ ತೀವ್ರ ನಷ್ಟ ಎದುರಿಸಿತ್ತು.

ಇದನ್ನೂ ಓದಿ : ದೆಹಲಿ: ಅಧಿಕೃತ ರಹಸ್ಯ ಕಾಯ್ದೆಯಡಿ ದೆಹಲಿಯ ಫ್ರೀಲಾನ್ಸ್​ ಪತ್ರಕರ್ತ ರಾಜೀವ್ ಶರ್ಮಾ ಬಂಧನ

ಆದ್ದರಿಂದ  ಡೀಸೆಲ್ ಸಬ್ಸಿಡಿ, ಟ್ಯಾಕ್ಸ್ ಕಡಿತ ಹಾಗೂ ಪಾಸ್​ಗಳ ಉಳಿಕೆ ಹಣವನ್ನ ನೀಡುವಂತೆ ಕಾರ್ಮಿಕರು ಸರ್ಕಾರದ ಕದ ಬಡಿದಿದ್ದರು. ಆದರೆ, ಸಹಕಾರ ಸಂಸ್ಥೆಗೆ ಸರ್ಕಾರದಿಂದ ಸಿಕ್ಕಿದ್ದು ಬರೀ ಅಸಹಕಾರ. ಈ ಸಂಸ್ಥೆಯನ್ನ ಮಾರಾಟ ಮಾಡೋದು ಅಷ್ಟು ಸುಲಭದ ಮಾತಲ್ಲ. ಕಾನೂನಿನ ತೊಡಗಾಗುತ್ತೆಂಬ ಮಾತುಗಳು ಕೇಳಿಬರುತ್ತಿವೆ.
Youtube Video

ಕಾರ್ಮಿಕರಿಗೆ ಈ ಸಂಸ್ಥೆಯನ್ನ ಮಾರಾಟ ಮಾಡುವ ಉದ್ದೇಶವಿಲ್ಲ. ಆದರೆ, ಕಾರ್ಮಿಕರ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸೋದಕ್ಕೆ ಕಾರ್ಮಿಕರು ಈ ನಿರ್ಧಾರಕ್ಕೆ ಬಂದಿದ್ದಾರೆ. ಇರೋದನ್ನ ಕಳೆದುಕೊಳ್ಳೋದು ತುಂಬಾ ಸುಲಭ. ಮತ್ತೆ ಪಡೆಯೋದು ಕಷ್ಟ. ಸರ್ಕಾರ ಇನ್ನಾದ್ರು ಇತ್ತ ಗಮನ ಹರಿಸಿ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದ್ದ ಕಾರ್ಮಿಕರ ಬೆವರಿನ ಸಂಸ್ಥೆಗೆ ಸರ್ಕಾರ ಸಾಥ್ ನೀಡಬೇಕಿದೆ.
Published by: MAshok Kumar
First published: September 20, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories