ಕೊರೋನಾದಿಂದಾಗಿ ಮದುವೆಯ ದುಂದು ವೆಚ್ಚಗೆ ಬ್ರೇಕ್ ; ನೆಮ್ಮದಿಯ ನಿಟ್ಟುಸಿರು ಬಿಟ್ಟ ಹೆಣ್ಣು ಹೆತ್ತವರು

ಹಾಲ್‌, ಕ್ಯಾಟರಿಂಗ್‌, ಅಲಂಕಾರ ಸಹಿತ ಹೆಚ್ಚಿನ ದುಂದು ವೆಚ್ಚವನ್ನು ಮಾಡಲಾಗುತಿತ್ತು. ಆದರೆ, ಮದುವೆ ಹೆಸರಿನಲ್ಲಿ ನಡೆಯುತ್ತಿದ್ದ ಬಡವರ ಶೋಷಣೆ ನಿಂತಿದೆ.

news18-kannada
Updated:August 12, 2020, 2:48 PM IST
ಕೊರೋನಾದಿಂದಾಗಿ ಮದುವೆಯ ದುಂದು ವೆಚ್ಚಗೆ ಬ್ರೇಕ್ ; ನೆಮ್ಮದಿಯ ನಿಟ್ಟುಸಿರು ಬಿಟ್ಟ ಹೆಣ್ಣು ಹೆತ್ತವರು
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು(ಆಗಸ್ಟ್​.12): ಕೊರೋನಾ ಸೋಂಕು ಮತ್ತು ಲಾಕ್‌ ಡೌನ್‌ನಿಂದ ಸಾವು-ನೋವು, ಕಷ್ಟ- ನಷ್ಟಗಳಾಗಿದ್ದರೆ, ಹಲವರಿಗೆ ಲಾಭವೂ ಆಗಿದೆ. ಮದುವೆಯ ಹೆಸರಿನಲ್ಲಿ ನಡೆಯುತ್ತಿದ್ದ ಹೆಣ್ಣು ಹೆತ್ತವರ ಶೋಷಣೆ, ದುಂದು ವೆಚ್ಚಕ್ಕೆ ಕೊರೋನಾ ಬ್ರೇಕ್‌ ಹಾಕಿದೆ. ಅನೇಕ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೊರೋನಾ ಮಾಹಮಾರಿಯಿಂದ ಅದ್ಧೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದೆ. ಆತ ಎಷ್ಟೇ ಶ್ರೀಮಂತ ಆಗಿದ್ದರೂ, ಎಷ್ಟೇ ಬಡವ ಆಗಿದ್ದರೂ ಇಂದು ಐವತ್ತು ಜನರ ಒಳಗೆ ಕಾರ್ಯಕ್ರಮವನ್ನು ಮುಗಿಸಬೇಕಾದ ಅನಿವಾರ್ಯತೆಯಿದೆ. ಈ ನಿಯಮದಿಂದ ಮಧ್ಯಮ ವರ್ಗದ ಜನರಿಗೆ ಲಾಭವಾಗಿದೆ. ಯಾಕಂದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಬೇಕಾಗಿದ್ದ ಮದುವೆಯನ್ನು ಸರಳವಾಗಿ ಮಾಡಬಹುದಾದ ಸೌಭಾಗ್ಯ ಒದಗಿ ಬಂದಿದೆ.

ಎರಡು ಕುಟುಂಬಗಳನ್ನು ಜೋಡಿಸುವ ಗಂಡು-ಹೆಣ್ಣಿನ ನಡುವೆ ನಡೆಯುವ ಪವಿತ್ರ ಒಪ್ಪಂದವನ್ನು ರಿವಾಜುಗಳ ಹೆಸರಿನಲ್ಲಿ ಅತ್ಯಂತ ಕ್ಲಿಷ್ಟಕರವಾಗಿ ಮಾಡಲಾಗಿತ್ತು. ಇದರಿಂದ ಬಡ ಕುಟುಂಬಗಳು, ಅನಾಥ ಹೆಣ್ಣು ಮಕ್ಕಳು ಪ್ರಾಯ ದಾಟಿದರೂ ಮದುವೆಯಾಗದ ಪರಿಸ್ಥಿತಿ ಇದೆ. ಮದುವೆಗೆ ಮಾಡಿದ ಸಾಲ ಸಂದಾಯ ಮಾಡಲಾಗದೆ, ಎಷ್ಟೋ ಕುಟುಂಬಗಳು ಬೀದಿಗೆ ಬಂದಿರುವ ಸಾಕಷ್ಟು ಉದಾಹರಣೆಯಿದೆ. ಹೀಗಾಗಿ ಮದುವೆಯ ಇಂತಹ ಅವ್ಯವಸ್ಥೆಯನ್ನು ಕೊರೋನಾ ಸರಿಪಡಿಸುತ್ತಿದೆ. ಹಾಲ್‌, ಕ್ಯಾಟರಿಂಗ್‌, ಅಲಂಕಾರ ಸಹಿತ ಹೆಚ್ಚಿನ ದುಂದು ವೆಚ್ಚವನ್ನು ಮಾಡಲಾಗುತಿತ್ತು. ಆದರೆ, ಇದೀಗ ಮದುವೆ ಹೆಸರಿನಲ್ಲಿ ನಡೆಯುತ್ತಿದ್ದ ಬಡವರ ಶೋಷಣೆ ನಿಂತಿದೆ.

ಇದನ್ನೂ ಓದಿ : ಕಾಫಿನಾಡಿನಲ್ಲಿ ಕ್ಷೀಣಿಸಿದ ಮಳೆಯ ಆರ್ಭಟ ; ಸಹಜ ಸ್ಥಿತಿಯತ್ತ ಮರಳಿದ ಮಲೆನಾಡು

ಮನೆಗಳಲ್ಲಿಯೇ ಸರಳವಾಗಿ ಸಂಪ್ರದಾಯ ಪ್ರಕಾರ ನಿಜವಾದ ಮದುವೆಗಳು ನಡೆಯುತ್ತಿದೆ. ಈ ಹಿಂದೆ ನಿರ್ದಿಷ್ಟ ಹಾಲ್‌ನಲ್ಲೇ ಮದುವೆ ನಡೆಯಬೇಕು. ಮದುವೆ ಮುನ್ನಾ ದಿನ ಪಾರ್ಟಿ ಕೊಡಬೇಕು ಎಂಬ ಬೇಡಿಕೆಗಳಿದ್ದವು. ಈಗ ಅದಕ್ಕೆಲ್ಲ ಬ್ರೇಕ್‌ ಬಿದ್ದಿದ್ದು, ಕೊರೊನಾ ಪ್ರತಿಷ್ಠೆ, ಆಡಂಬರ, ದುಂದುವೆಚ್ಚಗಳಿಗೆ ಕಡಿವಾಣ ಹಾಕಿದೆ. ಎಲ್ಲ ಕಡೆಯೂ ಇದೇ ಮಾದರಿಯಲ್ಲಿ ಸರಳ ವಿವಾಹ ನಡೆದರೆ, ಬಹಳಷ್ಟು ಬಡವರು ನೆಮ್ಮದಿಯ ಜೀವನ ನಡೆಸಬಹುದಾಗಿದೆ.ದಕ್ಷಿಣ ಕನ್ನಡದಲ್ಲಿ ನಿನ್ನೆ ಒಂದೇ ದಿನ 243 ಕೊರೋನಾ ಪಾಸಿಟಿವ್​ ಕೇಸ್​ ಪತ್ತೆಯಾಗಿದೆ. 9 ಸೋಂಕಿತರರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ನಿನ್ನೆ 6257 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ. ಕೊರೋನಾ ಸೋಂಕಿತರ ಸಂಖ್ಯೆ1,88,611ಕ್ಕೆ ಏರಿಕೆಯಾಗಿದೆ. ಈ ನಿರ್ಧಿಷ್ಟ ಅವಧಿಯಲ್ಲಿ ಮಾರಕ ಕೊರೋನಾ ವೈರಸ್​ಗೆ 86 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 17 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
Published by: G Hareeshkumar
First published: August 12, 2020, 2:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading