ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳೋರಿಲ್ಲ; ಕಳೆದ 4 ತಿಂಗಳಿಂದ ಶಿಕ್ಷಕರ ಬದುಕು ದುಸ್ತರ..!

ಕೊರೋನಾ ಮಹಾಮಾರಿ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನ ಬುಡಮೇಲು ಮಾಡಿದೆ. ಮತ್ತೊಂದೆಡೆ ಎಷ್ಟೋ ಮಂದಿ ಕೆಲಸ ಕಾರ್ಯಗಳನ್ನ ಕಳೆದು ಕೊಂಡು ಬೀದಿಗೆ ಬಿದ್ದಿದ್ದಾರೆ.

news18-kannada
Updated:July 3, 2020, 9:39 PM IST
ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳೋರಿಲ್ಲ; ಕಳೆದ 4 ತಿಂಗಳಿಂದ ಶಿಕ್ಷಕರ ಬದುಕು ದುಸ್ತರ..!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜುಲೈ.03): ಕೊರೋನಾ ಮಹಾಮಾರಿ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನ ಬುಡಮೇಲು ಮಾಡಿದೆ. ಮತ್ತೊಂದೆಡೆ ಎಷ್ಟೋ ಮಂದಿ ಕೆಲಸ ಕಾರ್ಯಗಳನ್ನ ಕಳೆದು ಕೊಂಡು ಬೀದಿಗೆ ಬಿದ್ದಿದ್ದಾರೆ. ಆದರೆ, ನಮ್ಮ ಗೋಳನ್ನ ಯಾರು ಕೇಳೋರಿಲ್ಲ ಅಂತ ಖಾಸಗಿ ಶಾಲಾ ಶಿಕ್ಷಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ವಿದ್ಯೆ ಕಲಿಸುವ ಗುರುಗಳಿಗೆ ಬದುಕು ಬೀದಿಗೆ ಬಂದು ಬಿದ್ದಿದೆ.

ಎಲ್ಲಾ ವರ್ಗಕ್ಕೂ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ಆದರೆ, ಶಿಕ್ಷಕರಿಗೆ ಮಾತ್ರ ಯಾವುದೇ ಅನುಕೂಲ ಆಗಿಲ್ಲ. ಶಿಕ್ಷಕರಿಗೂ ಕುಟುಂಬ ಸಾಗಿಸುವ ಹೊಣೆಯಿದೆ. ಹೀಗಾಗಿ ಬೀದಿಗೆ ಬಿದ್ದ ಖಾಸಗಿ‌ ಶಾಲಾ ಶಿಕ್ಷಕರನ್ನ ಸರ್ಕಾರವೇ ರಕ್ಷಿಸಬೇಕಿದೆ. ಶಿಕ್ಷಣ ಸಚಿವರು ಶಿಕ್ಷಕರ ಬಗ್ಗೆ ಗಮನ ಹರಿಸಬೇಕು ಅಂತ ಸರ್ಕಾರಕ್ಕೆ ಖಾಸಗಿ ಶಾಲಾ ಶಿಕ್ಷಕಿ ಕಲ್ಪನ ಮನವಿ ಮಾಡಿಕೊಂಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾಕಾಲೇಜುಗಳಿವೆ. ಇದರಲ್ಲಿ 50 ಸಾವಿರಕ್ಕೂ ಹೆಚ್ಚು ಶಿಕ್ಷಕ - ಉಪನ್ಯಾಸಕರಿದ್ದಾರೆ. ಇವರಿಗೆ ಕಳೆದ ನಾಲ್ಕು ತಿಂಗಳಿನಿಂದ ಸಂಬಳವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಬೀದಿಗೆ ಬಂದಿರುವ ಖಾಸಗಿ ಶಿಕ್ಷಕರನ್ನ ಸರ್ಕಾರ ರಕ್ಷಿಸಬೇಕು. ಶಿಕ್ಷಣ ಸಚಿವರು ಹಾಗೂ ಸರ್ಕಾರಕ್ಕೆ ಖಾಸಗಿ ಶಾಲಾ ಶಿಕ್ಷಕರು - ಉಪನ್ಯಾಸಕರ ಮನವಿ ಮಾಡುತ್ತಿದ್ದಾರೆ.

ಸರ್ಕಾರದಿಂದ ಯಾವುದೇ ಅನುಕೂಲ ಆಗಿಲ್ಲ ಎಂದು ಖಾಸಗಿ ಶಿಕ್ಷಕ ಸಮೂಹ ಅಳಲು ತೋಡಿಕೊಳ್ಳುತ್ತಿದೆ. ಎಲ್ಲಾ ವರ್ಗಕ್ಕೂ ಸರ್ಕಾರ ಪ್ಯಾಕೇಜ್ ಘೋಷಿಸಿದೆ. ‌ಆದರೆ, ಖಾಸಗಿ ಶಾಲಾ ಶಿಕ್ಷಕರಿಗ್ಯಾಕೆ ಈ ಅನ್ಯಾಯ. ಆಟೋದವರಿಗೆ, ನೇಕಾರಿಗೆ ಸಹಾಯಧನ ಆದರೆ ಶಾಲಾಕಾಲೇಜು ಶಿಕ್ಷಕರು ಉಪನ್ಯಾಸಕರಿಗಿಲ್ಲ ಸಹಾಯಹಸ್ತ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೂ ತಪ್ಪುತ್ತಿಲ್ಲ ಸಂಕಷ್ಟ

ರಾಜ್ಯದಲ್ಲಿ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. 14,564 ಜನ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳಿಂದ ಗೌರವ ಧನ ಬಾರದೆ ಅತಿಥಿ ಉಪನ್ಯಾಸಕರು ಅತಂತ್ರರಾಗಿದ್ದಾರೆ. ಎಂಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು  ಅತಿಥಿ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ಮಾನ್ಪಡೆ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ : ಕೋವಿಡ್ ಉಪಕರಣ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ; ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ಇನ್ನು ಈ ವಿಚಾರವಾಗಿ ಮಾತನಾಡಿದ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್, ಪೋಷಕರ ಫೀಸ್ ಕಟ್ಟದ ಕಾರಣ, ಶಿಕ್ಷಕರಿಗೆ ಹಣ ಸಂಬಳ ಕೊಡಲು ಕಷ್ಟವಾಗುತ್ತಿದೆ. ವಿದ್ಯುತ್, ನೀರು, ಶಾಲೆಯ ಅನೇಕ ಬಿಲ್ ಗಳೇ ಕಟ್ಟಲು ಅಸಾಧ್ಯ. ಇಂತಹ ಸಂದರ್ಭದಲ್ಲಿ ಸರ್ಕಾರ ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಣ ಸಂಸ್ಥೆಗಳ ಸಹಾಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿರು.

ಒಟ್ಟಿನಲ್ಲಿ ಶಾಲೆಗಳ ಓಪನ್ ಅವಕಾಶವಿಲ್ಲದ ಕಾರಣ, ನೂರಾರು ಶಿಕ್ಷಕರು ಬದುಕು ದುಸ್ಥರವಾಗಿದೆ. ಸರ್ಕಾರ ಇಂತಹ ಶಿಕ್ಷಕರ ನೆರವಿಗೆ ಧಾವಿಸಿ, ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ
Published by: G Hareeshkumar
First published: July 3, 2020, 9:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading