ಕೊರೋನಾ ಎಫೆಕ್ಟ್​ : ಬೀದಿಗೆ ಬಂತು ಅತಿಥಿ ಉಪನ್ಯಾಸಕರ ಬದುಕು

ಕೆಲವರು ಅತಿಥಿ ಉಪನ್ಯಾಸ  ಸೇವೆಯಲ್ಲೇ ನಿವೃತ್ತಿಗೆ ಬಂದು ತಲುಪಿದ್ದಾರೆ. ಅಂಥವರಿಗೆ ಬೇರೆ ಕೆಲಸ ಗೊತ್ತಿಲ್ಲ. ಹಾಗಾಗಿ ಸರ್ಕಾರದ ಪಶ್ಚಿಮ ಬಂಗಾಳ ಸರ್ಕಾರ ಮಾಡಿದಂತೆ ಸೇವಾಭದ್ರತೆ ಒದಗಿಸಬೇಕು

news18-kannada
Updated:July 13, 2020, 8:30 AM IST
ಕೊರೋನಾ ಎಫೆಕ್ಟ್​ : ಬೀದಿಗೆ ಬಂತು ಅತಿಥಿ ಉಪನ್ಯಾಸಕರ ಬದುಕು
ಅತಿಥಿ ಉಪನ್ಯಾಸಕರು
  • Share this:
ತುಮಕೂರು(ಜುಲೈ.13): ಮಹಾಮಾರಿ ಕೊರೋನಾದಿಂದಾಗಿ ಸಮಾಜದ ಹಲವು ಸ್ಥರದ ಜನರ ಬದುಕು ಬೀದಿಗೆ ಬಂದಿದೆ.‌ ಅದೆಷ್ಟೋ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರ ಕೆಲವರ‌ ನೆರವಿಗೆ ಬಂದಿದೆ.‌ ಆದರೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅತಿಥಿ ಉಪನ್ಯಾಸಕರ ಬದುಕು ಈಗ ಮೂರಾಬಟ್ಟೆಯಾಗಿದೆ. ತುಮಕೂರು ಜಿಲ್ಲೆಯ ಅತಿಥಿ ಉಪನ್ಯಾಸಕರು ಕೊರೋನಾ ವೇಳೆಯ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ನಾವು ವಿದ್ಯಾವಂತ ಜೀತದಾಳುಗಳಾಗಿದ್ದೇವೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದರೂ ನಮ್ಮ ಬದುಕು ಮಾತ್ರ ಇನ್ನೂ ಅತಂತ್ರವಾಗಿದೆ. ದಿನದ ಜೀವನ ನಡೆಸುವುದು ಕಷ್ಟವಾಗಿದೆ. ಹೀಗೆ ಅತ್ಯಂತ ದಯನೀಯವಾಗಿ ತಮ್ಮ ಅಳಲನ್ನು ಸಾಮಾಜಿಕ ಮಾಧ್ಯಮದ ಮೂಲಕ ತೋಡಿಕೊಳ್ಳುತ್ತಿರುವವರು ತುಮಕೂರು ಜಿಲ್ಲೆಯ ಅತಿಥಿ ಉಪನ್ಯಾಸಕರು. ಮಹಾಮಾರಿ ಕೊರೋನಾ ವಕ್ಕರಿಸಿದ್ದರಿಂದ ಇವರ ಬದುಕು ಇನ್ನಷ್ಟು ಅತಂತ್ರವಾಗಿದೆ.

ಸರ್ಕಾರವೇ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡರೂ ಕಳೆದ ಫೆಬ್ರವರಿ ತಿಂಗಳಿಂದ ಇವರುಗಳಿಗೆ ಸಂಬಳ ಇಲ್ಲ. ಲಾಕ್ ಡೌನ್ ಮಾಡಿದಾಗಿಂದ ಕೈಯಲ್ಲಿ ಕಾಸಿಲ್ಲದೇ ದಿನದ ಜೀವನ ನಡೆಸಲೂ ಪರದಾಡುತಿದ್ದಾರೆ. ಉಪನ್ಯಾಸ ವೃತ್ತಿಯನ್ನೇ ನಂಬಿಕೊಂಡಿದ್ದ ಇವರುಗಳಿಗೆ ನಾಲ್ಕೈದು ತಿಂಗಳಿನಿಂದ ಸಂಬಳ ಇಲ್ಲದೇ ಬದುಕು ಮೂರಾಬಟ್ಟೆಯಾಗಿದೆ.

ತುಮಕೂರು ಜಿಲ್ಲೆಯಲ್ಲಿ ಒಟ್ಟು‌1,500 ಅತಿಥಿ ಉಪನ್ಯಾಸಕರು ಇದ್ದಾರೆ. ಇವರೆಲ್ಲರೂ ಪ್ರಸ್ತುತ ವರ್ಷದ ಮಾರ್ಚ್ 12 ರ ವರೆಗೂ ಪಾಠ ಮಾಡಿದ್ದಾರೆ. ಆದರೂ ಈ ಎರಡೂವರೆ ತಿಂಗಳ ಸಂಬಳ ಸರ್ಕಾರ ಕೊಟ್ಟಿಲ್ಲ. ಜತೆಗೆ ಮಾರ್ಚ್ ಮಧ್ಯಂತರದಿಂದ ಲಾಕ್ ಡೌನ್ ಆಗಿದೆ. ಹಾಗಾಗಿ ಅವರಿಗೆ ಕೆಲಸವೂ ಇಲ್ಲ ಸಂಬಳವೂ ಇಲ್ಲ.

ಒಟ್ಟಾರೆ ಕಳೆದ 7 ತಿಂಗಳಿಂದ  ಸಂಬಳ ಇಲ್ಲದೇ ಅತಿಥಿ ಉಪನ್ಯಾಸಕರ ಬದುಕು ಅಯೋಮಯವಾಗಿದೆ. ಇತರ ವರ್ಗದ ಜನರಿಗೆ ಸರ್ಕಾರ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುವಂತೆ ತಮಗೂ ಪ್ಯಾಕೇಜ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ :  ಪ್ರೌಢಶಾಲಾ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ಕಾರ್ಯಕ್ರಮ ಆರಂಭ ; ಸಚಿವ ಸುರೇಶ್ ಕುಮಾರ್

ಕೆಲವರು ಅತಿಥಿ ಉಪನ್ಯಾಸ  ಸೇವೆಯಲ್ಲೇ ನಿವೃತ್ತಿಗೆ ಬಂದು ತಲುಪಿದ್ದಾರೆ. ಅಂಥವರಿಗೆ ಬೇರೆ ಕೆಲಸ ಗೊತ್ತಿಲ್ಲ. ಹಾಗಾಗಿ ಸರ್ಕಾರದ ಪಶ್ಚಿಮ ಬಂಗಾಳ ಸರ್ಕಾರ ಮಾಡಿದಂತೆ ಸೇವಾಭದ್ರತೆ ಒದಗಿಸಬೇಕು ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಕೊರೋನಾದಿಂದಾಗಿ ಕೆಲಸ,‌ ಸಂಬಳ ಇಲ್ಲದೇ ಕಂಗಾಲಾಗಿದ್ದ ತಮಗೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಈಗಲಾದರೂ ಸರ್ಕಾರದ ಕಣ್ಣು ತೆರೆಯುತ್ತಾ ಕಾದು ನೋಡಬೇಕು.
Published by: G Hareeshkumar
First published: July 13, 2020, 8:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading