• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ನೆಲ‌ಕಚ್ಚಿದ ಒಣ‌ಮೀನು ಮಾರುಕಟ್ಟೆ, ಕಂಗಾಲಾದ ಮೀನುಗಾರರು; ಲಾಭವಿಲ್ಲದೆ ಹಿಂದೆ ಸರಿದ ಮಹಿಳೆಯರು!

ನೆಲ‌ಕಚ್ಚಿದ ಒಣ‌ಮೀನು ಮಾರುಕಟ್ಟೆ, ಕಂಗಾಲಾದ ಮೀನುಗಾರರು; ಲಾಭವಿಲ್ಲದೆ ಹಿಂದೆ ಸರಿದ ಮಹಿಳೆಯರು!

ಒಣಮೀನು ತಯಾರಿಸುತ್ತಿರುವುದು.

ಒಣಮೀನು ತಯಾರಿಸುತ್ತಿರುವುದು.

ಜೂನ್ ಒಂದರಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಇರುತ್ತದೆ. ಆ ಅವಧಿಯಲ್ಲಿ ಮೀನಿನ ಖಾದ್ಯ ತಯಾರಿಸಲು ಒಣಮೀನನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತದೆ. ಒಣ ಮೀನು ತಯಾರಿಸಲು ಹೆಚ್ಚಿನ ಶ್ರಮ ಬೇಕು ಹಾಗೂ ಅದಕ್ಕೆ ಸರಿಯಾಗಿ ಲಾಭವಿಲ್ಲ ಎಂಬ ಕಾರಣಕ್ಕೆ ಹಲವರು ಇದರಿಂದ ಹಿಂದೆ ಸರಿದಿದ್ದಾರೆ.

ಮುಂದೆ ಓದಿ ...
  • Share this:

ಕಾರವಾರ: ಮತ್ಸ್ಯಕ್ಷಾಮ ಮತ್ತು ಕೊರೋನಾ ಮಹಾಮಾರಿ ರೋಗ ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರ ಒಣ ಮೀನು ಮಾರುಕಟ್ಟೆಯನ್ನ ಸಂಪೂರ್ಣ ನೆಲಕಚ್ಚುವಂತೆ ಮಾಡಿದೆ. ಹಸಿ ಮೀನಿನ ಕೊರತೆಯಿಂದಾಗಿ ದರವೂ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೂ ಕತ್ತರಿ ಬೀಳುತ್ತಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಕರಾವಳಿ ಭಾಗದಲ್ಲಿ ಒಣಮೀನು ತಯಾರಿಸುವ ಪ್ರಕ್ರಿಯೆ ನಡೆಯುತ್ತದೆ. ಮಾಜಾಳಿ, ಕಾರವಾರ, ಬೈತಖೋಲ್, ಬೇಲೆಕೇರಿ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಒಣಮೀನು ತಯಾರಿಸಲಾಗುತ್ತದೆ. ಮೀನುಗಾರರ ಕುಟುಂಬಗಳ ಮಹಿಳೆಯರಿಗೆ ಇದೊಂದು ಆದಾಯದ ಮೂಲವಾಗುತ್ತದೆ. ಆದರೆ, ಈ ಬಾರಿ ಬೆರಳೆಣಿಕೆಯಷ್ಟು ಮಂದಿ ಮಾತ್ರ, ಕೆಲವೇ ಬುಟ್ಟಿಗಳಷ್ಟು ಮೀನನ್ನು ಒಣಗಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಮತ್ಸ್ಯ ಕ್ಷಾಮ ಮತ್ತು ಕೊರೋನಾ ಮಹಾಮಾರಿ.


ಲಾಕ್ ಡೌನ್ ಭಯಕ್ಕೆ ಬೆದರಿದ ಅನ್ಯ ರಾಜ್ಯದ ಮೀನುಗಾರ ಕಾರ್ಮಿಕರು ಜಿಲ್ಲೆಗೆ ಬಾರದೆ ಆಳ ಸಮುದ್ರ ಮೀನುಗಾರಿಕೆ ನಿರೀಕ್ಷೆ ತಕ್ಕಂತೆ ನಡೆಯಲಿಲ್ಲ. ತಾಜಾ ಮೀನಿನ ಬೇಟೆ ಕೂಡ ನಿರೀಕ್ಷೆಗೆ ತಕ್ಕಂತೆ ಮೀನುಗಾರರ ಬಲೆಗೆ ಬೀಳಲಿಲ್ಲ. ಈ ಹಿನ್ನಲೆಯಲ್ಲಿ ಮೀನಿನ‌ ಕೊರೆತೆಯಿಂದ ಒಣ‌ಮೀನು ತಯಾರಿಕೆ ಕೂಡ ನೇಪತ್ಯಕ್ಕೆ ಸರಿದಿದೆ. ‘ಟ್ರಾಲರ್ ದೋಣಿಗಳಿಗೆ ಮೀನು ಸಿಕ್ಕಿದರೆ ಹೆಚ್ಚಿನ ಪ್ರಮಾಣದಲ್ಲಿ ಒಣಮೀನು ಮಾಡಲಾಗುತ್ತದೆ. ಆದರೆ, ಈ ಬಾರಿ ಸುಮಾರು ಮೂರು ತಿಂಗಳಿನಿಂದ ಮೀನುಗಾರಿಕೆ ಸಂ‍ಪೂರ್ಣ ಸ್ತಬ್ಧವಾಗಿದೆ.


ಮೀನುಗಳಿಲ್ಲದ ಕಾರಣ ದೊಡ್ಡ ದೋಣಿಗಳು ಸಮುದ್ರದಕ್ಕೆ ಹೋಗುತ್ತಲೇ ಇಲ್ಲ. ಕೇವಲ ನಾಡದೋಣಿಗಳ ಬಲೆಗೆ ಬಿದ್ದ ಮೀನುಗಳನ್ನೇ ನೆಚ್ಚಿಕೊಂಡಿದ್ದೇವೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ತಾಜಾ ಮೀನುಗಳನ್ನೇ ಪೂರೈಕೆ ಮಾಡಲಾಗುತ್ತಿಲ್ಲ. ಹಾಗಿರುವಾಗ ಒಣಮೀನು ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಪ್ರತಿ ಮೀನುಗಾರರದ್ದಾಗಿದೆ.


ಇದನ್ನು ಓದಿ: CM BSY | ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಿಎಂ ಬಿಎಸ್​ವೈ ನಡೆಸಿದ ಸಭೆಯ ಪ್ರಮುಖಾಂಶಗಳೇನು?


ಕಾರವಾರ ರವಿವಾರದ ಸಂತೆಯಲ್ಲಿ ಭಾರೀ ಬೇಡಿಕೆ


‘ಕಾರವಾರದಲ್ಲಿ ರವಿವಾರ ಸಂತೆಗೆ ಗೋವಾ ರಾಜ್ಯದಿಂದ  ಜಿಲ್ಲೆಯ ಮಲೆನಾಡ ತಾಲೂಕುಗಳಿಂದ ಜನ ಬಂದು ಒಣಮೀನು ಖರೀದಿಸುತ್ತಿದ್ದರು. ಗೋವಾದಲ್ಲೂ ಹೆಚ್ಚಿನ ಬೇಡಿಕೆಯಿದೆ. ಆದರೆ, ಒಂದೆಡೆ ಮೀನಿನ ಕೊರತೆ ಮತ್ತೊಂದೆಡೆ, ಕೊರೋನಾ ಹಾವಳಿ ನಿಯಂತ್ರಣಕ್ಕೆ ವಿವಿಧ ನಿಯಮಗಳು ಜಾರಿಯಾಗಿರುವುದು ಅಡಚಣೆಯಾಗಿದೆ. ಹಾಗಾಗಿ ಈ ಬಾರಿ ಹೆಚ್ಚಿನ ಲಾಭ ಸಿಗದೆ ಮೀನುಗಾರರು ಕಂಗಾಲಾಗಿದ್ದಾರೆ.


ಒಣ ಮೀನು ತಯಾರಿಸುವ ಉದ್ಯೋಗವೇ ಬಿಟ್ಟ ಮೀನುಗಾರರು


ಜೂನ್ ಒಂದರಿಂದ ಸಮುದ್ರದಲ್ಲಿ ಮೀನುಗಾರಿಕೆಗೆ ನಿಷೇಧ ಇರುತ್ತದೆ. ಆ ಅವಧಿಯಲ್ಲಿ ಮೀನಿನ ಖಾದ್ಯ ತಯಾರಿಸಲು ಒಣಮೀನನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತದೆ. ಒಣ ಮೀನು ತಯಾರಿಸಲು ಹೆಚ್ಚಿನ ಶ್ರಮ ಬೇಕು ಹಾಗೂ ಅದಕ್ಕೆ ಸರಿಯಾಗಿ ಲಾಭವಿಲ್ಲ ಎಂಬ ಕಾರಣಕ್ಕೆ ಹಲವರು ಇದರಿಂದ ಹಿಂದೆ ಸರಿದಿದ್ದಾರೆ. ಹೀಗೆ ಮೀನುಗಾರರು ಒಣ‌ಮೀನಿನ ಉದ್ಯೋಗ ಬಿಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೋನಾ ಮಾಹಾಮಾರಿ ಒಣ‌ಮೀನು ವ್ಯಾಪಾರಸ್ಥರರಿಗೆ ಮತ್ತು ಒಣ‌ಮೀನು ತಯಾರಿಸುವವರ ಬುದುಕು ಕಸಿದುಕೊಂಡಿದೆ.

Published by:HR Ramesh
First published: