HOME » NEWS » District » DRUGS ARE NOT LIMITED TO BANGALORE THEY ARE EVERYWHERE RV DESHPANDE MAK

ಡ್ರಗ್ಸ್‌ ದಂಧೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ, ಎಲ್ಲೆಡೆ ಅವ್ಯಾಹತವಾಗಿದೆ; ಆರ್‌.ವಿ. ದೇಶಪಾಂಡೆ

ಡ್ರಗ್ಸ್ ದಂಧೆಯಲ್ಲಿ ಈಗ ಮುನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಹೆಸರು ಕೇಳಿ ಬರುತ್ತಿದ್ದು ಇದಕ್ಕೆ ಸಾಕ್ಷಿಯಾಗಿ ನಟಿಯರಾದ ರಾಗಿಣಿ ಮತ್ತು ಸಂಜನಾ ಬಂದನಕ್ಕೊಳಗಾಗಿದ್ದಾರೆ. ಆದರೆ, ಈ‌ ದಂಧೆ ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಲ್ಲ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:September 15, 2020, 9:31 PM IST
ಡ್ರಗ್ಸ್‌ ದಂಧೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಲ್ಲ, ಎಲ್ಲೆಡೆ ಅವ್ಯಾಹತವಾಗಿದೆ; ಆರ್‌.ವಿ. ದೇಶಪಾಂಡೆ
ಆರ್‌.ವಿ. ದೇಶಪಾಂಡೆ.
  • Share this:
ಕಾರವಾರ (ಸೆಪ್ಟೆಂಬರ್‌ 15); ಉತ್ತರ ಕನ್ನಡ ಜಿಲ್ಲೆಯಲ್ಲೂ ಗಾಂಜಾ ದಂಧೆ ಬೇರೂರಿದೆ, ಈ ಹಿಂದಿನಿಂದಲೂ ಈ‌ದಂಧೆ ನಡೆದುಕೊಂಡು ಬಂದಿದ್ದು ಇದು ಕೇವಲ ಮುಂಬೈ, ಬೆಂಗಳೂರಿಗೆ ಸೀಮಿತವಾಗಿಲ್ಲ. ಗಾಂಜಾ ಮತ್ತು ಡ್ರಗ್ಸ್ ದಂದೆ ಈ‌ಹಿಂದಿನಿಂದ ದಾಂಡೇಲಿ, ಹಳಿಯಾಳ, ಗೋಕರ್ಣ ಬಾಗದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಈ ದಂಧೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾಕಷ್ಟು ಬಾರಿ ಆದೇಶ ಮಾಡಿದ್ದೆ. ಈ ಸಂಬಂಧ ಅನೇಕ ಪೊಲೀಸ್‌ ಕಾರ್ಯಾಚರಣೆಗಳನ್ನೂ ನಡೆಸಲಾಗಿತ್ತು. ಅನೇಕರನ್ನು ಬಂಧಿಸಿ ತನಿಖೆ ನಡೆಸಲಾಗಿತ್ತು. ಆದರೂ, ನಮ್ಮ ಆಡಳಿತ ಅವಧಿಯಲ್ಲಿ ಈ ಇಡೀ ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕುವುದು ನಮ್ಮಿಂದ ಸಾಧ್ಯವಾಗಿರಲಿಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಆರ್‌.ವಿ. ದೇಶಪಾಂಡೆ ವಿಷಾಧ ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್‌ ದಂಧೆ ವಿರುದ್ಧ ಕರ್ನಾಟಕ ರಾಜ್ಯ ಪೊಲೀಸರು ಕೈಗೊಂಡಿರುವ ಕಾರ್ಯಾಚರಣೆ ಸಂಬಂಧ ಇಂದು ಕಾರವಾರದಲ್ಲಿ ಮಾತನಾಡಿರುವ ಆರ್‌.ವಿ. ದೇಶಪಾಂಡೆ, "ಡ್ರಗ್ಸ್‌ ದಂಧೆ ಕೇವಲ ಬೇಂಗಳೂರಿಗಷ್ಟೇ ಸೀಮಿತವಲ್ಲ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕು ಮತ್ತು ಅರೆ ಬಯಲು ಸೀಮೆ ತಾಲೂಕುಗಳಲ್ಲಿ ಗಾಂಜಾ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಈಗ ರಾಜ್ಯದಲ್ಲಿ ಈ ದಂಧೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು,

ಇದರ ಬಾಗವಾಗಿ ಕರಾವಳಿ ಜಿಲ್ಲೆಯಲ್ಲಿಯೂ ಕೂಡಾ ಕೆಲವು ಗಾಂಜಾ ಸಾಗಾಟದಾರರನ್ನ ಬಂದಿಸಲಾಗಿದೆ. ಕೆಲವೊಂದು ಪ್ರಮುಖ ಗಾಂಜಾ ಪೆಡ್ಲರ್‌ಗಳ ಮೇಲೆ ನಿಗಾ‌ ಇಡಲಾಗಿದೆ. ಇಷ್ಟಕ್ಕೆ ಪೋಲಿಸ್ ಇಲಾಖೆ ಈ ದಾಳಿ ನಿಲ್ಲಿಸದೆ ಮುಂದೆ ಕೂಡಾ ದಾಳಿ ಮುಂದುವರೆಸಿ ಆಳ ಅಗಲ ಕೆದಕಬೇಕಾಗಿದೆ" ಎಂದು ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ‘ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

ಕೇವಲ ಸ್ಯಾಂಡಲ್ ವುಡ್ ಟಾರ್ಗೇಟ್ ಮಾಡ್ಬೇಡಿ:

ಡ್ರಗ್ಸ್‌ ದಂಧೆಗೆ ರಾಜ್ಯದಲ್ಲಿ ಸ್ಯಾಂಡಲ್‌ವುಡ್‌ ಲಿಂಕ್ ನೀಡಲಾಗುತ್ತಿದೆ. ಇದೇ ದೃಷ್ಟಿಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ಕುರಿತು ಮಾತನಾಡಿರುವ ಆರ್‌.ವಿ. ದೇಶಪಾಂಡೆ, "ಡ್ರಗ್ಸ್ ದಂಧೆಯಲ್ಲಿ ಈಗ ಮುನ್ನೆಲೆಯಲ್ಲಿ ಸ್ಯಾಂಡಲ್ ವುಡ್ ಹೆಸರು ಕೇಳಿ ಬರುತ್ತಿದ್ದು ಇದಕ್ಕೆ ಸಾಕ್ಷಿಯಾಗಿ ನಟಿಯರಾದ ರಾಗಿಣಿ ಮತ್ತು ಸಂಜನಾ ಬಂದನಕ್ಕೊಳಗಾಗಿದ್ದಾರೆ. ಆದರೆ, ಈ‌ ದಂಧೆ ಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತವಲ್ಲ.
ಇದರ ಆಳ ಅಗಲ ಅಗೆಯುತ್ತಾ ಹೋದರೆ ಇನ್ನು ಅನೇಕ ಪ್ರಮುಖ ಪ್ರಬಾವಿಗಳು ಬಲೆಗೆ ಬೀಳಲಿದ್ದಾರೆ. ತನಿಖಾ ತಂಡ ಕೇವಲ ಇದರ ಮೇಲೆ ಮಾತ್ರ ಗಮನ ಹರಿಸದೆ ಎಲ್ಲ ಆಯಾಮದಲ್ಲೂ ಬಲೆ ಹೆಣೆಯಬೇಕು. ಒಟ್ಟಾರೆ ಡ್ರಗ್ಸ್ ದಂಧೆ ಆಳ ಅಗಲ ಅಗೆದು ಬೇರು ಸಮೇತ ನಾಶಮಾಡಬೇಕು" ಎಂದು ಮಾಜಿ ಸಚಿವರು ಆಗ್ರಹಿಸಿದ್ದಾರೆ.
Published by: MAshok Kumar
First published: September 15, 2020, 9:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories