HOME » NEWS » District » DRUG NETWORK SPREAD TO HUBLI INQUIRY OF CONGRESS LEADER FROM CCB POLICE HK

ಹುಬ್ಬಳ್ಳಿಗೂ ವ್ಯಾಪಿಸಿದ ಡ್ರಗ್ಸ್ ಜಾಲದ ನಂಟು : ಸಿಸಿಬಿಯಿಂದ ಕಾಂಗ್ರೆಸ್ ಮುಖಂಡನ ವಿಚಾರಣೆ

ನಟಿ ರಾಗಿಣಿ ಮೊಬೈಲ್‌ನಲ್ಲಿ ದೊರೆತ ಗಿರೀಶ್ ಗದಿಗೆಪ್ಪಗೌಡರ ಭಾವಚಿತ್ರವನ್ನು ಆದರಿಸಿ ಸಿಸಿಬಿ ವಿಚಾರಣೆ ನಡೆಯುತ್ತಿದೆ‌‌. ನಟಿ ರಾಗಿಣಿ ಜೊತೆ ಗೋವಾದ ಕ್ಯಾಸಿನೋಗೆ ತೆರಳಿದ್ದ ಗಿರೀಶ್ ಗದಿಗೆಪ್ಪಗೌಡರ್ ಹಲವು ಪಾರ್ಟಿಗಳಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ

news18-kannada
Updated:September 13, 2020, 6:19 PM IST
ಹುಬ್ಬಳ್ಳಿಗೂ ವ್ಯಾಪಿಸಿದ ಡ್ರಗ್ಸ್ ಜಾಲದ ನಂಟು : ಸಿಸಿಬಿಯಿಂದ ಕಾಂಗ್ರೆಸ್ ಮುಖಂಡನ ವಿಚಾರಣೆ
ಸಾಂದರ್ಭಿಕ ಚಿತ್ರ
  • Share this:
ಹುಬ್ಬಳ್ಳಿ(ಸೆಪ್ಟೆಂಬರ್​. 13): ಸ್ಯಾಂಡಲ್‌ವುಡ್ ನಟಿಯರ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡನನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಗೆ ನಟಿ ರಾಗಿಣಿ ನಂಟಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪ ಗೌಡರ್‌ನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ‌ನಟಿ ರಾಗಿಣಿ ಜೊತೆಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿಯ ಗಿರೀಶ್ ಗದಿಗೆಪ್ಪ ಗೌಡರ್, ಮಾಜಿ ಸಚಿವರೊಬ್ಬರ ಆಪ್ತನೆಂದೇ ಗುರುತಿಸಿ ಕೊಂಡಿದ್ದಾನೆ. ನಟಿ ರಾಗಿಣಿ ಮೊಬೈಲ್‌ನಲ್ಲಿ ದೊರೆತ ಗಿರೀಶ್ ಗದಿಗೆಪ್ಪ ಗೌಡರ ಭಾವಚಿತ್ರವನ್ನು ಆದರಿಸಿ ಸಿಸಿಬಿ ವಿಚಾರಣೆ ನಡೆಯುತ್ತಿದೆ‌‌. ನಟಿ ರಾಗಿಣಿ ಜೊತೆ ಗೋವಾದ ಕ್ಯಾಸಿನೋಗೆ ತೆರಳಿದ್ದ ಗಿರೀಶ್ ಗದಿಗೆಪ್ಪ ಗೌಡರ್ ಹಲವು ಪಾರ್ಟಿಗಳಲ್ಲಿ ಭಾಗವಹಿಸಿದ್ದ ಎನ್ನಲಾಗಿದೆ. ಒಂದೆಡೆ ಬೆಂಗಳೂರಲ್ಲಿ ಡ್ರಗ್ಸ್ ಜಾಲ‌ ಸದ್ದು ಮಾಡುತ್ತಿದ್ದರೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಾಂಜಾ ಘಾಟು ಜೋರಾಗಿದೆ. ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಹುಬ್ಬಳ್ಳಿ ಪೊಲೀಸರು ಗಾಂಜಾ ಮಾರಾಟ ಜಾಲವನ್ನು ಬೇಧಿಸುತ್ತಿದ್ದಾರೆ.

ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಸಿಂದಗಿ ಕಾಂಪ್ಲೆಕ್ಸ್‌ನ ಸುಮೇರ್​ ಸಿಂಗ್ ರಜಪೂತ್ ಮತ್ತು ಕೇಶ್ವಾಪುರದ ಆಜಾದ್ ಕಾಲೋನಿ ನಿವಾಸಿ ಸಮುಂದರ್ ಸಿಂಗ್ ರಜಪೂತ್ ಎಂಬಿಬ್ಬರನ್ನ ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಸುಮೇರ್ ಸಿಂಗ್ ಭೋಜನಾಲಯದಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಸಮುಂದರ್ ಸಿಂಗ್ ಇಲೆಕ್ಟ್ರಿಕಲ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಯಾರಿಗೂ ಸಂಶಯ ಬಾರದಂತೆ ಹೊರ ರಾಜ್ಯದಿಂದ ಗಾಂಜಾ ತಂದು ಅವಳಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಗಾಂಜಾ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ : ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಡ್ರಗ್ಸ್​​ ವಿಚಾರ ಹೊರಗಡೆ ತಂದಿದ್ದಾರೆ : ಬಿ ಕೆ ಹರಿಪ್ರಸಾದ್​ ವಾಗ್ದಾಳಿ

ಗ್ರಾಹಕರ ಸೋಗಿನಲ್ಲಿ ಚಿನ್ನದ ಅಂಗಡಿಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರನ್ನು ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ವಿರಕ್ತ ಕಟಗಿ ಹಾಗೂ ಗದಗ್‌ನ ಶರತ ಕಾರಂತ ಬಂಧಿತರು. ಬಂಧಿತರಿಂದ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
Youtube Video

ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ಕಲ್ಯಾಣ ಜುವೇಲರ್ಸಗೆ ಎರಡು ದಿನಗಳ ಹಿಂದೆ ಭೇಟಿ ನೀಡಿದ್ದ ಇವರು ಕಳ್ಳತನ ಮಾಡಿದ್ದರು. ಮುಖಕ್ಕೆ‌ ಮಾಸ್ಕ್ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂಗಾರ ಕದ್ದು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಹುಬ್ಬಳ್ಳಿಯ ಶಹರ ಠಾಣೆ ಪೊಲೀಸರು ತಕ್ಷಣವೇ ಕಾರ್ಯ ಪೃವತ್ತರಾಗಿ ಚಾಲಾಕಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published by: G Hareeshkumar
First published: September 13, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories