• Home
  • »
  • News
  • »
  • district
  • »
  • Drug Mafia : ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ

Drug Mafia : ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ: ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ವಶ

ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು

ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಪೊಲೀಸರು

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಭರ್ಜರಿ ಭೇಟೆ ನಡೆಸಿದ್ದಾರೆ. ಅಕ್ರಮವಾಗಿ ಯಾರ ಕಣ್ಣಿಗೂ ಬೀಳದ ರೀತಿ ಶುಂಠಿ ಗದ್ದೆ ಮತ್ತು  ಮೆಕ್ಕೆಜೋಳ ಬೆಳೆಯ ನಡುವೆ ಬೆಳೆದಿದ್ದ ಗಾಂಜಾ ಗಿಡಗಳು ವಶ ಪಡಿಸಿಕೊಂಡಿದ್ದಾರೆ

  • Share this:

ಶಿವಮೊಗ್ಗ(ಸೆಪ್ಟೆಂಬರ್​. 22): ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಮಾರಾಟಗಾರರ ವಿರುದ್ದ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಸಮರ ಸಾರಿದ್ದಾರೆ. ಗಾಂಜಾ ಮಾರಾಟಗಾರರು ಮತ್ತು‌ ಗಾಂಜಾ‌ ಗಿಡ ಬೆಳೆಯುವವರ ಎಡೆಮುರಿ ಕಟ್ಟುತ್ತಿದ್ದಾರೆ. ಅಪಾರ ಪ್ರಮಾಣದ ಗಾಂಜಾ ಗಿಡ ಮತ್ತು ಒಣ ಗಾಂಜಾ ಎಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಭರ್ಜರಿ ಭೇಟೆ ನಡೆಸಿದ್ದಾರೆ. ಅಕ್ರಮವಾಗಿ ಯಾರ ಕಣ್ಣಿಗೂ ಬೀಳದ ರೀತಿ ಶುಂಠಿ ಗದ್ದೆ ಮತ್ತು  ಮೆಕ್ಕೆಜೋಳ ಬೆಳೆಯ ನಡುವೆ ಬೆಳೆದಿದ್ದ ಗಾಂಜಾ ಗಿಡಗಳು ವಶ ಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆ ಶಿವಮೊಗ್ಗ ಡಿಸಿ ಕ್ಯಾಪ್ಟನ್ ಅಜಿತ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ಹೊಲ ಮತ್ತು ಗದ್ದೆಯಲ್ಲಿ ಬೆಳೆಯ ಮಧ್ಯ ಭಾಗದಲ್ಲಿ  8 ಅಡಿ‌ಗೂ ಎತ್ತರ ಗಾಂಜಾ ಗಿಡಗಳು‌ ಬೆಳೆಸಲಾಗಿತ್ತು. ಇದನ್ನು ಪತ್ತೆ ಹಚ್ಚಿ ಸುಮಾರು 200 ಗಾಂಜಾ ಗಿಡಗಳು  ಅಬಕಾರಿ ಇಲಾಖೆ ಸಿಬ್ಬಂದಿಗಳು ವಶ ಪಡಿಸಿಕೊಂಡಿದ್ದಾರೆ. 


ಪರಶುರಾಮ್, ಗಂಗಾಧರಪ್ಪ, ಹುಚ್ಚರಾಯಪ್ಪ ಎಂಬುವವರ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.


ಇನ್ನು ತೀರ್ಥಹಳ್ಳಿಯಲ್ಲಿ ಪೊಲೀಸರು ಒಣ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ 2 ಕೆ.ಜಿ. ಒಣ ಗಾಂಜಾ ಸಾಗಿಸಲಾಗುತ್ತಿತ್ತು. ತೀರ್ಥಹಳ್ಳಿ ಪಟ್ಟಣದ ಬಾಳೆ ಬೈಲ್ ನಲ್ಲಿ ಅನುಮಾನದ ಮೇರೆಗೆ ಪೊಲೀಸರು ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಕಾರಿನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.


ಉಡುಪಿ ಜಿಲ್ಲೆಯ ಕಾರ್ಕಾಳ ಕಡೆಯಿಂದ ಸ್ವಿಫ್ಟ್ ಕಾರು ಬಂದಿದೆ. ತೀರ್ಥಹಳ್ಳಿ ಡಿ.ವೈ.ಎಸ್.ಪಿ. ಸಂತೋಷ್ ನೇತೃತ್ವದಲ್ಲಿ ತಪಾಸಣೆ ಮಾಡಿದಾಗಿ ಸಿಕ್ಕಿ ಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ನಾಲ್ಕು ಜನ ಆರೋಪಿಗಳ ಬಂಧಿಸಿಲಾಗಿದೆ‌. ಕಾರು ಮತ್ತು ಎರಡು ಕೆ.ಜಿ. ಒಣ ಗಾಂಜಾ ಎಲೆ ವಶಕ್ಕೆ  ಪಡೆದಿದ್ದಾರೆ.


ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 10 ಸಾವಿರ ರೂಪಾಯಿ ಮೌಲ್ಯದ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ದೊಡ್ಡಪೇಟೆ ಪೊಲೀಸರು ದಾಳಿ‌ ನಡೆಸಿ 3 ದ್ವಿಚಕ್ರ ವಾಹನಗಳು ಸೇರಿದಂತೆ, 4 ಮೊಬೈಲ್  ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ : Mysuru Dasara 2020: ಕಾಡಿನ ಮಕ್ಕಳಿಗಿಲ್ಲ ದಸರಾ ಸಂಭ್ರಮ; ಈ ಬಾರಿ ಮಾವುತರ ಕುಟುಂಬಕ್ಕಿಲ್ಲ ಆಹ್ವಾನ


ಶಿವಮೊಗ್ಗ ನಗರದ ಮಿಳ್ಳಘಟ್ಟ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ‌ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಶಿವಮೊಗ್ಗದ ಅಶೋಕ ನಗರದ ರಹೀಂ (27), ಅಣ್ಣಾ ನಗರದ ಚೇತನ್ ಕುಮಾರ್ (21), ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯ ಜೋಡಿಹಳ್ಳಿ ವಾಸಿಗಳಾದ ಯೋಗಿಶ್ (25), ರುದ್ರೇಶ್ (30) ಬಂಧಿತ ಆರೋಪಿಗಳು. ಎನ್.ಡಿ.ಪಿ.ಎಸ್. ಕಾಯ್ದೆಯಡಿ ದೊಡ್ಡಪೇಟೆ ಪೊಲೀಸರಿಂದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


ಒಟ್ಟಾರೆ ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ಮಾರಾಟಗಾರರ ವಿರುದ್ದ ಪೊಲೀಸರು ಸಮರ ಸಾರಿದ್ದು, ಎಡೆಮುರಿ ಕಟ್ಟುತ್ತಿದ್ದಾರೆ.

Published by:G Hareeshkumar
First published: