ಲಿಂಗಸುಗೂರಿನ ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧ, ದಿನಸಿ ವಿತರಣೆ

ರಾಯಚೂರಿನಲ್ಲಿ ಭಾರಿ ಪ್ರವಾಹದ ಮಧ್ಯೆ ನಡುಗಡ್ಡೆಯಲ್ಲಿದ್ದವರಿಗೆ ಔಷಧ ಹಾಗೂ ದಿನಸಿ ಮತ್ತಿತರ ಅಗತ್ಯ ಸಾಮಗ್ರಿ ತಲುಪಿಸುವುದು ಕಷ್ಟವಾಗಿತ್ತು. ಈ ಕಾರ್ಯಕ್ಕಾಗಿ ಲಿಂಗಸಗೂರು ತಾಲೂಕಾಡಳಿತ ಡ್ರೋನ್ ಬಳಕೆ ಮಾಡಿದ್ದು ವಿಶೇಷ.

news18-kannada
Updated:August 21, 2020, 7:08 PM IST
ಲಿಂಗಸುಗೂರಿನ ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧ, ದಿನಸಿ ವಿತರಣೆ
ರಾಯಚೂರಿನಲ್ಲಿ ಸಂತ್ರಸ್ತರ ನೆರವಿಗೆ ಡ್ರೋನ್
  • Share this:
ರಾಯಚೂರು: ಸೋಮವಾರದಿಂದ ಕೃಷ್ಣಾ ನದಿಯಲ್ಲಿ 2.80 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಇಷ್ಟು ಪ್ರಮಾಣದ ನೀರು ಹರಿಯುತ್ತಿರುವುದರಿಂದ ಹಲವು ಭಾಗಗಳು ನಡುಗಡ್ಡೆಯಾಗಿವೆ. ಜಮೀನುಗಾಗಿ ಹಾಗು ಜಾನುವಾರಗಳ ರಕ್ಷಣೆಗಾಗಿ ಉಳಿದುಕೊಂಡವರು ಈಗ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದಾರೆ. ಇವರ ಸಹಾಯಕ್ಕಾಗಿ ಔಷಧ, ದಿನಸಿ ಇತ್ಯಾದಿಗಳನ್ನ ಸಾಗಿಸಲು ಡ್ರೋನ್​ನ ನೆರವು ಪಡೆಯಲಾಗಿದೆ. ಅದರಲ್ಲಿ ಯಶಸ್ಸೂ ಸಿಕ್ಕಿದೆ.

ಕರಕಲಗಡ್ಡೆ, ಮಾದರಗಡ್ಢೆ, ಹಾರಲಗಡ್ಡೆ ಹಾಗು ಓಂಕಾರಮ್ಮನಗಡ್ಡೆಯಲ್ಲಿ ಒಟ್ಟು 104 ಜನ ವಾಸವಾಗಿದ್ದಾರೆ. ಪ್ರವಾಹ ಬರುವ ಮುನ್ನ ಅವರಲ್ಲಿ ಕೆಲವರು ನದಿಯ ಇನ್ನೊಂದ ದಡವಾಗಿರುವ ಯರಗೋಡ ಹಾಗು ಯಾಳಗುಂದದಲ್ಲಿ ಬಂದು ವಾಸವಾಗಿದ್ದಾರೆ. ಆದರೆ ಮಾದರಗಡ್ಡೆಯ 14 ಜನರು ತಮಗೆ ಶಾಶ್ವತ ಸ್ಥಳಾಂತರಕ್ಕೆ ಪಟ್ಟು ಹಿಡಿದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಇವರ ಮನವೊಲಿಸಿ ಕರೆತರಲು ದೋಣಿಯಲ್ಲಿ ಹೋದಾಗ ನಾಲ್ವರು ಮಾತ್ರ ಒಪ್ಪಿ ಬಂದಿದ್ದಾರೆ. ಉಳಿದವರು ಬರಲು ನಿರಾಕರಿಸಿ ಅಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯಗಳನ್ನ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ.

ಇದನ್ನೂ ಓದಿ: ಬೌದ್ದಿಕ ದಾರಿದ್ಯ್ರದಿಂದಾಗಿ ಬಿಜೆಪಿ ನಾಯಕರು ನಳಿನ್ ಎಂಬ ನಕಲಿ ಶ್ಯಾಮನನ್ನು ಅಧ್ಯಕ್ಷ ಸ್ಥಾನಕ್ಕೇರಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

ಇನ್ನು, ಕರಕಲಗಡ್ಡೆಯಲ್ಲಿ ನಾಲ್ಕು ಜನರು ಜಾನುವಾರುಗಳ ರಕ್ಷಣೆಗಾಗಿ ಅಲ್ಲಿಯೇ ಉಳಿದಿದ್ದಾರೆ. ಅವರಲ್ಲಿ ತಿಪ್ಪಣ್ಣ ಎಂಬುವವರು ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಅವರಿಗೆ ಮಾತ್ರೆ ಅವಶ್ಯವಾಗಿದೆ. ಅವರಿಗೆ ಊಟಕ್ಕೆ ದಿನಸಿ ಕೊರತೆ ಇದೆ. ನಮ್ಮನ್ನು ಸುರಕ್ಷಿತವಾಗಿ ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಈ ಜನರು ಮನವಿ ಮಾಡಿಕೊಂಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಲಿಂಗಸಗೂರು ತಾಲೂಕಾಡಳಿತ ನಿನ್ನೆ ಅಗ್ನಿಶಾಮಕ ದಳದೊಂದಿಗೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ ನೇತೃತ್ವದಲ್ಲಿ ರಕ್ಷಣೆಗೆ ಪ್ರಯತ್ನ ಮಾಡಿತು. ಆದರೆ ಭಾರಿ ಪ್ರವಾಹ ಹಾಗು ನದಿಯಲ್ಲಿ ಬಂಡೆಗಳು ಇರುವದರಿಂದ ಅವರನ್ನು ಯಾಂತ್ರಿಕೃತ ದೋಣಿಯಿಂದ ಕರೆದುಕೊಂಡು ಬರಲು ಅಸಾಧ್ಯವಾಗಿದೆ. ಇದಕ್ಕಾಗಿ ಪರ್ಯಾಯವಾಗಿ ಡ್ರೋನ್ ಬಳಕೆ‌ ಮಾಡಲು ತೀರ್ಮಾನಿಸಲಾಯಿತು. ಔಷಧ ಸಿಂಪಡೆಗೆಂದು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ 5 ಲೀಟರ್ ಸಾಮರ್ಥ್ಯದ ಡ್ರೋನ್ ಯಂತ್ರದೊಂದಿಗೆ ತಂತ್ರಜ್ಞರು ಯಾಳಗುಂದಕ್ಕೆ ಹೋಗಿದ್ದಾರೆ. 15 ದಿನಗಳಿಗೆ ಆಗುವ ಮಾತ್ರೆಗಳು, ಸಂವಹನಕ್ಕಾಗಿ ಮೊಬೈಲ್ ಅನ್ನು ಈ ಡ್ರೋನ್​ನಲ್ಲಿಟ್ಟು ರಿಮೋಟ್ ಕಂಟ್ರೋಲ್ ಮೂಲಕ ನಡುಗಡ್ಡೆಯಲ್ಲಿರುವ ನಾಲ್ವರು ಮಂದಿಗೆ ತಲುಪಿಸಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ನಾಲ್ವರು ವನ್ಯಜೀವಿ ಬೇಟೆಗಾರರ ಬಂಧನ ; ಹುಲಿ ಚರ್ಮ, ಮೂಳೆ ವಶ

ಕರಕಲಗಡ್ಡೆಯಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದ ತಿಪ್ಪಣ್ಣ ಅವರಿಗೆ ಅಗತ್ಯ ಔಷಧ ತಲುಪಿದ್ದು ನಿರಾಳವಾದಂತಾಗಿದೆ. ಇನ್ನು, ನಾಲ್ವರು ಮಂದಿಗೆ ದಿನಸಿ ವಸ್ತುಗಳನ್ನ ಕಳುಹಿಸಲೂ ಡ್ರೋನ್ ಉಪಯೋಗಿಸಲಾಗುತ್ತಿದೆ. ಇಲ್ಲಿ ಹಗ್ಗವನ್ನು ಡ್ರೋನ್ ಮುಖಾಂತರ ಕಳುಹಿಸಿ, ನಂತರ ಹಗ್ಗದ ಮುಖಾಂತರ ಆಹಾರ ದಿನಸಿ ಕಳುಹಿಸಲು ಸಿದ್ಧತೆ ನಡೆದಿದೆ.

ಪ್ರವಾಹದ ರಭಸ ಕಡಿಮೆಯಾಗುವವರೆಗೂ ಇಂಥ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ.
Published by: Vijayasarthy SN
First published: August 21, 2020, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading