Drone Prathap - ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆ; ಬೆಂಗಳೂರಿಗೆ ಕರೆತರಲು ಹೊರಟ ಪೊಲೀಸರು

ಬೆಂಗಳೂರಿನಲ್ಲಿ ಹೋಮ್ ಕ್ವಾರಂಟೈನ್​ನಲ್ಲಿದ್ದ ಡ್ರೋನ್ ಪ್ರತಾಪ್ ಎರಡೇ ದಿನಕ್ಕೆ ಖಾಸಗಿ ವಾಹಿನಿಯಲ್ಲಿ ಕಾಣಿಸಿಕೊಂಡಿದ್ದ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

news18-kannada
Updated:July 20, 2020, 12:43 PM IST
Drone Prathap - ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆ; ಬೆಂಗಳೂರಿಗೆ ಕರೆತರಲು ಹೊರಟ ಪೊಲೀಸರು
ಡ್ರೋನ್​ ಪ್ರತಾಪ್​
  • Share this:
ಬೆಂಗಳೂರು(ಜುಲೈ 20: ನಕಲಿ ಡ್ರೋನ್ ವಿಜ್ಞಾನಿ ಎಂದು ಈಚೆಗೆ ಬಹಳಷ್ಟು ಟ್ರೋಲ್ ಆಗುತ್ತಿರುವ ಡ್ರೋನ್ ಪ್ರತಾಪ್ ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ಧಾರೆ. ಬೆಂಗಳೂರಿನಲ್ಲಿ ಕ್ವಾರಂಟೈನ್​ನಲ್ಲಿರಬೇಕಿದ್ದ ಡ್ರೋನ್ ಪ್ರತಾಪ್ ಇದೀಗ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ. ಕ್ವಾರಂಟೈನ್ ನಿಯಮಗಳನ್ನ ಉಲ್ಲಂಘಿಸಿದ ಕಾರಣಕ್ಕೆ ಪ್ರತಾಪ್ ಬಂಧನಕ್ಕೆ ಮೂರು ತಂಡಗಳನ್ನ ರಚಿಸಲಾಗಿತ್ತು. ಅದರ ಬೆನ್ನಲ್ಲೇ ಆತ ಮೈಸೂರಿನಲ್ಲಿರುವುದು ದೃಢಪಟ್ಟಿದೆ.

ಈತನನ್ನು ಕರೆ ತರಲು ಬಿಬಿಎಂಪಿ ಸಿಬ್ಬಂದಿ ಮತ್ತು ಪೊಲೀಸರು ಮೈಸೂರಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಈತನನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇಡಲು ಬಿಬಿಎಂಪಿ ನಿರ್ಧರಿಸಿದೆ. ಆದರೆ, ಡ್ರೋನ್ ಪ್ರತಾಪ್ ತಾನು ಮೈಸೂರಿನಲ್ಲೇ ಕ್ವಾರಂಟೈನ್​ನಲ್ಲಿ ಇರುತ್ತೇನೆಂದು ಹೇಳುತ್ತಿದ್ದಾನೆನ್ನಲಾಗಿದೆ.

ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್​ನಿಂದ ಬೆಂಗಳೂರಿಗೆ ಬಂದಿದ್ದ. ತಲಘಟ್ಟಪುರದ ಅಪಾರ್ಟ್ಮೆಂಟ್​ವೊಂದರಲ್ಲಿ ಈತ ಕ್ವಾರಂಟೈನ್ ಆಗಿದ್ದ. ಆತನ ಕೈಗೆ ಬಿಬಿಎಂಪಿಯಿಂದ ಕ್ವಾರಂಟೈನ್ ಸ್ಟಿಕರ್ ಕೂಡ ಅಂಟಿಸಲಾಗಿತ್ತು. ಆದರೆ, ಅದಾಗಿ ಎರಡೇ ದಿನಕ್ಕೆ ಈತ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದು. ಇದು ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈತನ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದರು. ಅದಾದ ಬಳಿಕ ಡ್ರೋನ್ ಪ್ರತಾಪ್ ನಾಪತ್ತೆಯಾಗಿದ್ದ.

ಇದನ್ನೂ ಓದಿ: Bheemana Amavasya 2020: ಭೀಮನ ಅಮಾವಾಸ್ಯೆ ಹಿನ್ನೆಲೆ ದೇವಸ್ಥಾನಗಳ ಬಳಿ ಭಕ್ತ ದಂಡು ; ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ

ಪೊಲೀಸರು ಈತ ಮೊಬೈಲ್ ಜಾಡು ಹಿಡಿಯುತ್ತಾರೆ. ಆದರೆ, ಜ್ಞಾನಭಾರತಿ ಬಳಿ ಈತನ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬರುತ್ತದೆ. ಇದೀಗ ಮೈಸೂರಿನಲ್ಲಿ ಈತ ಇರುವುದು ಖಚಿತಪಟ್ಟಿದೆ.

ಡ್ರೋನ್ ಪ್ರತಾಪ್ ಕಳೆದ ಎರಡು ವರ್ಷಗಳಿಂದಲೂ ಕನ್ನಡಿಗರ ಪಾಲಿಗೆ ಹೀರೋ ಎನಿಸಿಕೊಂಡಿದ್ದವನು. ಮಂಡ್ಯದ ಒಂದು ಸಣ್ಣ ಗ್ರಾಮದ ಈತ ತನ್ನನ್ನು ತಾನು ಡ್ರೋನ್ ಸ್ಪೆಷಲಿಸ್ಟ್ ಎಂದು ಬಿಂಬಿಸಿಕೊಂಡಿದ್ದ. ತಾನು ತ್ಯಾಜ್ಯ ಎಲೆಕ್ಟ್ರಾನಿಕ್ ವಸ್ತುಗಳಿಂದಲೇ 600ಕ್ಕೂ ಹೆಚ್ಚು ಡ್ರೋನ್​ಗಳ ತಯಾರಿಸಿದ್ದೇನೆ. ಅನೇಕ ದೇಶಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಹಲವು ದೇಶಗಳು ತಮ್ಮಲ್ಲಿ ಕೆಲಸ ಮಾಡಲು ಆಹ್ವಾನಿಸಿವೆ ಎಂದೆಲ್ಲಾ ಈತ ಹೇಳಿಕೊಂಡಿದ್ಧಾನೆ. ಆದರೆ, ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ಈತನ ಅಸಲಿಯತ್ತು ಬೆಳಕಿಗೆ ಬಂದಿತ್ತು. ಈತ ಹೇಳಿಕೊಂಡಿದ್ದೆಲ್ಲಾ ಸುಳ್ಳು. ಈತ ಡ್ರೋನ್ ವಿಜ್ಞಾನಿಯೇ ಅಲ್ಲ ಎಂಬುದನ್ನು ಬಹಿರಂಗಪಡಿಸಲಾಗಿತ್ತು. ಆದರೂ ಕೂಡ ಈತ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡಿ ತಾನು ಹೊರದೇಶಕ್ಕೆ ಹೋಗಿದ್ದಾಗಿ ಪುನರುಚ್ಚರಿಸಿದ್ದಾನೆ. ಆದರೆ, ಡ್ರೋನ್ ತಂತ್ರಜ್ಞಾನ ಕುರಿತ ಮೂಲ ತಾಂತ್ರಿಕ ಪ್ರಶ್ನೆಗಳಿಗೆ ಉತ್ತರ ಕೊಡಲು ಈತ ನಿರಾಕರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈತ ಟ್ರೋಲ್ ಆಗುವುದು ಇನ್ನೂ ಹೆಚ್ಚಾಗಿದೆ.
Published by: Vijayasarthy SN
First published: July 20, 2020, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading