ಬಿಜೆಪಿಯವರಿಗೆ ಹೆಣದ ಮೇಲೆ ರಾಜಕಾರಣ ಮಾಡುವುದು ಅಭ್ಯಾಸ; ಡಾ.ಜಿ. ಪರಮೇಶ್ವರ್ ಆರೋಪ

ಬಿಜೆಪಿಯವರಿಗೆ ಹೆಣದ ಮೇಲೆ ರಾಜಕಾರಣ ಮಾಡುವುದು ಅಭ್ಯಾಸವಾಗಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಮುಗ್ದ ಜನರ ಮನವೊಲಿಕೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪರಮೇಶ್ವರ್​ ಕಿಡಿಕಾರಿದ್ದಾರೆ.

news18-kannada
Updated:October 25, 2020, 8:59 AM IST
ಬಿಜೆಪಿಯವರಿಗೆ ಹೆಣದ ಮೇಲೆ ರಾಜಕಾರಣ ಮಾಡುವುದು ಅಭ್ಯಾಸ; ಡಾ.ಜಿ. ಪರಮೇಶ್ವರ್ ಆರೋಪ
ಡಾ.ಜಿ. ಪರಮೇಶ್ವರ್​.
  • Share this:
ಚಿತ್ರದುರ್ಗ : ಬಿಜೆಪಿಯವರಿಗೆ ಹೆಣದ ಮೇಲೆ ರಾಜಕಾರಣ ಮಾಡುವುದು ಅಭ್ಯಾಸವಾಗಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಮುಗ್ದ ಜನರ ಮನವೊಲಿಕೆ ಮಾಡಲು ಯತ್ನಿಸುತ್ತಿದ್ದಾರೆ. ವಿಶ್ವದಲ್ಲಿಯೇ ಕೋವಿಡ್ ಲಸಿಕೆ ಬರದೆ ಇದ್ದರೂ ಉಚಿತ ಲಸಿಕೆ ಕೊಡುತ್ತೇವೆ ಎಂದು ಹೇಳಿ, ಕೀಳು ಮಟ್ಟಕ್ಕೆ ರಾಜಕಾರಣ ತೆಗೆದುಕೊಂಡು ಹೋಗಿದ್ದು ಬಿಜೆಪಿಯವರು ಎಂದು ಚಿತ್ರದುರ್ಗದಲ್ಲಿ ಮಾಜಿ‌ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಚಿತ್ರದುರ್ಗದ ಯಾದವ ಮಠಕ್ಕೆ ಬೇಟಿ ನೀಡಿ‌ ಯಾದವಾನಂದ ಶ್ರೀಗಳ ಆಶೀರ್ವಾದ ಪಡೆದು ಬಳಿಕ  ಮಾದ್ಯಮಗಳ ಜೊತೆ ಮಾತನಾಡಿದ ಅವರು, "ಬಿಜೆಪಿಯವರಿಗೆ ಹೆಣದ ಮೇಲೆ ರಾಜಕಾರಣ ಮಾಡುವುದು ಅಭ್ಯಾಸವಾಗಿದೆ. ಬಿಹಾರ ಚುನಾವಣೆಯಲ್ಲಿ ಬಿಜೆಪಿಯವರು ಸುಳ್ಳು ಹೇಳಿ ಮುಗ್ದ ಜನರ ಮನವೊಲಿಕೆ ಮಾಡಲು ಯತ್ನಿಸುತ್ತಿದ್ದಾರೆ. ಬಿಜೆಪಿಯವರು  ಮೊದಲಿನಿಂದಲೂ ಯಾವುದಾದರೂ ವಿಷಯ ಸೆನ್ಸಿಟೈಸ್ ಮಾಡಲು, ಯಾವುದಾದರೂ ರೀತಿಯಲ್ಲಿ ಜನರ ಮನಸ್ಸು ಗೆಲ್ಲೋಕೆ ಪ್ರಯತ್ನಿಸುತ್ತಾರೆ" ಎಂದು ಟೀಕಿಸಿದ್ದಾರೆ.

ಇನ್ನೂ RR ನಗರದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಗೂಂಡಾಗಿರಿ ಮಾಡುತ್ತಿದ್ದಾರೆ ಎಂಬ ಶೋಭಾ ಕರದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿ, "ಗುಂಡಾಗಿರಿ ಯಾರೂ ಮಾಡಲು ಹೋಗಿಲ್ಲ, ಖಂಡಿತಾ ಎಲ್ಲರೂ ರಾಜಕಾರಣ ಮಾಡುತ್ತಾರೆ,ನಾವೆಲ್ಲ ರಾಜಕಾರಣಿಗಳು ರಾಜಕಾರಣವನ್ನೇ ಮಾಡುವುದು,ರಾಜಕಾರಣವನ್ನೆ  ಮಾಡಬಾರದು ಎಂದರೇ ಅವರು ಇನ್ನೇನು ಮಾಡುತಿದ್ದಾರೆ. ಅವರೂ ರಾಜಕಾರಣವನ್ನೇ ತಾನೆ ಮಾಡುತ್ತಿರುವುದು" ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಗೂಂಡಾಗಳಿರುವುದೆಲ್ಲ ಬಿಜೆಪಿಯಲ್ಲಿ, ಸುಳ್ಳು ಹೇಳದಿದ್ದರೆ ಅವರಿಗೆ ನಿದ್ರೆ ಬರಲ್ಲ ಊಟ ಸೇರಲ್ಲ; ರಾಮಲಿಂಗಾ ರೆಡ್ಡಿ

ಅಲ್ಲದೇ  ಕಾಂಗ್ರೇಸ್ ಬಿಜೆಪಿ ಜನತಾ ದಳ ದವರು ಅದನ್ನೇ ಮಾಡುತ್ತಾರೆ. ನಮ್ಮ ಸಂವಿಧಾನದಲ್ಲಿ ಮಲ್ಟಿ ಪಾರ್ಟಿ ರಾಜಕಾರಣಕ್ಕೆ ಅವಕಾಶ ಇದೆ. ಗೂಂಡಾಗಿರಿ ಡೆಫಿನೇಷನ್ ಅವರೇ ಹೇಳಬೇಕು ಎಂದಿದ್ದಾರೆ. ಇನ್ನು  ಶಿರಾದಲ್ಲಿ ಬಿಜೆಪಿ ಗೆದ್ದಿದ್ದರೆ ಇಷ್ಟೆಲ್ಲಾ ಸರ್ಕಸ್ ಯಾಕೆ ಮಾಡುತ್ತಿದ್ದಾರೆ. ಹೋಗಿ‌ ಮನೆಯಲ್ಲಿ ಕುಳಿತುಕೊಳ್ಳಿ, ಇಲ್ಲಿ ಯಾಕೆ ಬಂದು ಮಾಡಬಾರದ್ದೆಲ್ಲ‌ ಮಾಡುತ್ತಾರೆ ಎಂದಿದ್ದೂ , ನಾವು ಹತಾಶರಾಗುವ ಪ್ರಶ್ನೆಯೇ ಇಲ್ಲ,ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂಭ ಬರವಸೆ ವ್ಯಕ್ತ ಪಡಿಸಿದ್ದಾರೆ.

ರಾಜ್ಯದಲ್ಲಿ  ಕಾಡುಗೊಲ್ಲರ ಸಮುದಾಯಕ್ಕೆ ಪ್ರತ್ಯೇಕ ನಿಗಮ‌ ಮಾಡಿ ಸಿಎಂ,  ಬಜೆಟ್ ಕೊಟ್ಟಾಗ ಅಭಿವೃದ್ದಿ ನಿಗಮ ಮಾಡಿ ನೂರು ಕೋಟಿ ಹಣ ಇಟ್ಟಿದ್ದರೇ ಒಳ್ಳೆಯದಿತ್ತು, ಇವತ್ತು ಎಲ್ಲಾ ಕಾಡುಗೊಲ್ಲರು ಕೂಡಾ ಅವರ ಜೊತೆಯಲ್ಲಿಯೇ ಇರುತ್ತಿದ್ದರು. ಆದರೇ ಚುನಾವಣೆ ಬಂದಿದೆ ಅಂತ ಅಭಿವೃದ್ದಿ ನಿಗಮ ಮಾಡಿ‌ ಮೂರು ಕಾಸು ಇಟ್ಟಿಲ್ಲ, ಈಗ ಅವರೇನು ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
Published by: MAshok Kumar
First published: October 25, 2020, 8:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading