ನನ್ನ ಕೊಡುಗೆ ಏನು ಎನ್ನುವವರಿಗೆ ಮಂತ್ರಿಯಾಗಿ ನನ್ನ ಸಾಧನೆಗಳೇ ಉತ್ತರ: ಡಾ. ಸುಧಾಕರ್

ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಸುಧಾಕರ್, ಚುನಾವಣಾ ದಿನಗಳಲ್ಲಿ ನನ್ನನ್ನ ಸೋಲಿಸಲು ಎರಡೂ ಪಕ್ಷಗಳು ಮಾಡಿಕೊಂಡಿದ್ದ ಒಳ ಒಪ್ಪಂದಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

news18
Updated:July 29, 2020, 12:55 PM IST
ನನ್ನ ಕೊಡುಗೆ ಏನು ಎನ್ನುವವರಿಗೆ ಮಂತ್ರಿಯಾಗಿ ನನ್ನ ಸಾಧನೆಗಳೇ ಉತ್ತರ: ಡಾ. ಸುಧಾಕರ್
ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್
  • News18
  • Last Updated: July 29, 2020, 12:55 PM IST
  • Share this:
ಚಿಕ್ಕಬಳ್ಳಾಪುರ: ಸಂಕಷ್ಟದ ದಿನದಲ್ಲಿ ಮಂತ್ರಿಯಾದೆ. 15 ದಿನಕ್ಕೆ ದೇಶದಲ್ಲಿ ಕೊರೋನ ಅಟ್ಟಹಾಸ ಶುರುವಾಯ್ತು. ನಾನು ರಾಜೀನಾಮೆ ಕೊಟ್ಟಿದ್ದು ಯಾಕೆ, ಸಾಧನೆ ಏನು ಎನ್ನುವವರಿಗೆ ಮಂತ್ರಿಯಾಗಿ ನಾನು ಮಾಡಿದ ಸಾಧನೆಗಳೇ ಉತ್ತರ ಎಂದು ಸಚಿವ ಡಾ. ಕೆ ಸುಧಾಕರ್ ಹೇಳಿದ್ಧಾರೆ. ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಹೆಚ್.ಎನ್.ವ್ಯಾಲಿ ಯೋಜನೆ ಇತ್ಯಾದಿ ತಮ್ಮ ಸಾಧನೆಗಳ ವಿವರವನ್ನು ಸಚಿವರು  ನೀಡಿದ್ದಾರೆ.

ದಶಕಗಳಿಂದ ಬರಕ್ಕೆ ತುತ್ತಾಗಿರುವ ಜಿಲ್ಲೆಗೆ ಜೀವಜಲ ತರುವ ನಿಟ್ಟಿನಲ್ಲಿ ಹೆಚ್.ಎನ್. ವ್ಯಾಲಿ ಯೋಜನೆ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಯೋಜನೆಯ ನೀರು ಜಿಲ್ಲೆಯ ಅನೇಕ ಕೆರೆಗಳಿಗೆ ಹರಿಸಲಾಗಿದ್ದು ಅಂತರ್ಜಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು ಹಲವು ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡಿವೆ. ನೂತನ ನ್ಯಾಯಲಯ ಸಂಕೀರ್ಣ, ಚಿಕ್ಕಬಳ್ಳಾಪುರದ ಜಿಲ್ಲಾ ನ್ಯಾಯಾಲಯಗಳನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಿಸಲಾಗಿದ್ದು ಈಗಾಗಲೇ ಉದ್ಘಾಟನೆಯಾಗಿದೆ. ತಿಪ್ಪೇನಹಳ್ಳಿ ಗ್ರಾಮದಲ್ಲಿ ನೂತನ ಗ್ರಾಮಪಂಚಾಯಿತಿ ಕಟ್ಟಡ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ. ರಾಜ್ಯದಲ್ಲಿ ಅಂತರ್ಜಲ ಹೆಚ್ಚಿಸುವ ಮಹತ್ವಾಕಾಂಕ್ಷಿ ಅಂತರ್ಜಲ ಚೇತನ ಯೋಜನೆಗೆ ನಮ್ಮ ಜಿಲ್ಲೆಯಿಂದಲೇ ಚಾಲನೆ ನೀಡಲಾಗಿದೆ. 142 ಕಲ್ಯಾಣಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸುತ್ತಿರುವ ಪಿಎಫ್ಐ ಕಾರ್ಯಕರ್ತರು

“ದೇಶದಲ್ಲೇ ಪ್ರಥಮ ಎನ್ನಬಹುದಾದ ಸುರಕ್ಷತೆ ಹೊಂದಿರುವ ಸುಸಜ್ಜಿತ ಕೋವಿಡ್ ಪರೀಕ್ಷಾ ಪ್ರಯೋಗಾಲಯ ನಮ್ಮ ಚಿಕ್ಕಬಳ್ಳಾಪುರದಲ್ಲಿ ಸ್ಥಾಪಿಸಲಾಗಿದೆ. 10 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಆಯುಷ್ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಿದ್ದೇನೆ. ಕುಡಿಯುವ ನೀರಿಗೆ ಸಮಗ್ರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಕಂದವಾರ ಕೆರೆಗೆ ಕಾಯಕಲ್ಪ ರೂಪಿಸಿ ಸುಂದರ ಕೆರೆಯನ್ನಾಗಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತ್ಯೇಕ ಡೈರಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದ್ದು ಶೀಘ್ರದಲ್ಲೇ ಅನುಷ್ಠಾನ ಆಗಲಿದೆ. ಜಿಲ್ಲೆಯಲ್ಲಿ ಅಂತರ್ಜಲ ಚೇತನ ಯೊಜನೆಯಡಿ 133.66 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯಡಿ ನದಿ ಪುನಶ್ಚೇತನ, ಜಲಾನಯನ ಅಭಿವೃದ್ಧಿ ಹಾಗೂ ಜಲಸಂರಕ್ಷಣೆಯ ಯೋಜನೆಗಳು ಸೇರಿವೆ. ಉತ್ತರ ಪಿನಾಕಿನಿ ನದಿಯ 1377 ಚ.ಕಿ ಪ್ರದೇಶದ 52 ಕಿರು ಜಲಾನಯನ ಪ್ರದೇಶದ ಅಭಿವೃದ್ಧಿಗೆ ಅನುಷ್ಠಾನಗೊಳಿಸಲಾಗುತ್ತಿದೆ.

“ಮನ್ರೇಗಾ ಅಡಿಯಲ್ಲಿ ಜಿಲ್ಲೆಯಲ್ಲಿ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಲ್ಲಿ ಪಶುಗಳಿಗಾಗಿ ಶೆಡ್ ನಿರ್ಮಾಣ, ಕೊಳವೆಬಾವಿ ರೀಚಾರ್ಜ್ ಪಿಟ್ ನಿರ್ಮಾಣ, ರೇಷ್ಮೆ ಕಾಮಗಾರಿ, ಕೆರೆ ಹೂಳೆತ್ತುವುದು, ಕೃಷಿ ಜಮೀನು ಅಭಿವೃದ್ಧಿ, ಆಟದ ಮೈದಾನಗಳು, ಅಂಗನವಾಡಿ ಕಟ್ಟಡಗಳು, ಗೋದಾಮುಗಳು ಸೇರಿದಂತೆ ಅನೇಕ ಯೋಜನೆಗಳು ಸೇರಿವೆ. ಸ್ವಚ್ಛಭಾರತ, ಸ್ವಸ್ಥ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ 64 ಸಮುದಾಯ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ.  20 ಶಾಲಾ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 32 ಗ್ರಾಮ ಪಂಚಾಯಿತಿಗಳಲ್ಲಿ ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. 130 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗಾಗಿ 157 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಭಾರತದ ರಫೇಲ್, ಪಾಕಿಸ್ತಾನದ ಜೆಎಫ್-17 ಮತ್ತು ಚೀನಾದ ಜೆ-20 ಯುದ್ಧವಿಮಾನಗಳಲ್ಲಿ ಯಾವುದು ಬೆಸ್ಟ್?

“ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯಲ್ಲಿ 27 ಗ್ರಾಮಗಳಿಗೆ ತಲಾ 1 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿ ಮಾದರಿ ಗ್ರಾಮವನ್ನಾಗಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕಳೆದ 1 ವರ್ಷದಲ್ಲಿ ಜಿಲ್ಲೆಯಲ್ಲಿ ವಸತಿ ಯೋಜನೆಯಡಿ 2998 ಮನೆಗಳನ್ನು ನಿರ್ಮಿಸಲಾಗಿದೆ.185 ಚೆಕ್ ಡ್ಯಾಂ, 2546 ಕೃಷಿ ಹೊಂಡಗಳು, 55 ಕಟ್ಟೆಗಳು, 861 ಮಳೆ ನೀರು ಸಂರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲಾ 157 ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಮಳೆ ನೀರು ಸಂರಕ್ಷಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ದೇಶದಲ್ಲೇ ಪ್ರಥಮ ಎರಡನೇ ಹಂತದ ಸುರಕ್ಷತಾ ವ್ಯವಸ್ಥೆ ಇರುವ ಸುಸಜ್ಜಿತ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಕೋವಿಡ್ ನಿರ್ವಹಣೆಗಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸಹಾಯವಾಣಿ, ಸಿಬ್ಬಂದಿವರ್ಗದ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ” ಎಂದು ಡಾ. ಕೆ ಸುಧಾಕರ್ ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ ಸುಧಾಕರ್, ಚುನಾವಣಾ ದಿನಗಳಲ್ಲಿ ನನ್ನನ್ನ ಸೋಲಿಸಲು ಎರಡೂ ಪಕ್ಷಗಳು ಮಾಡಿಕೊಂಡಿದ್ದ ಒಳ ಒಪ್ಪಂದಕ್ಕೆ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Published by: Vijayasarthy SN
First published: July 29, 2020, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading