ಅಮ್ಮನ ನೆನಪುಗಳಿರುವ ಫೋನ್ ಹಿಂತಿರುಗಿಸಿ; ತಾಯಿಯನ್ನು ಕಳೆದುಕೊಂಡ ಮಗಳ ಕರುಣಾಜನಕ ಪತ್ರ

ಬಾಲಕಿಯ ತಾಯಿ ಕೊರೋನಾದಿಂದ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಅವರ ಬಳಿಯಿದ್ದ ಫೋನ್​​ ಕುಟುಂಬಕ್ಕೆ ಸಿಕ್ಕಿಲ್ಲ. ಫೋನ್​ನಲ್ಲಿ ತಾಯಿಯೊಂದಿಗಿನ ನೆನೆಪುಗಳಿದ್ದು ದಯವಿಟ್ಟು ಹಿಂತಿರುಗಿಸಿ ಎಂದು ಮಗಳು ಪತ್ರ ಬರೆದಿದ್ದಾಳೆ.

ಪತ್ರದ ಮೂಲಕ ಮಗಳ ಮನವಿ

ಪತ್ರದ ಮೂಲಕ ಮಗಳ ಮನವಿ

  • Share this:
ಕೊಡಗು : ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ನನ್ನ ತಾಯಿ ನೆನಪುಗಳು ಇರುವ ಮೊಬೈಲ್ ಫೋನ್ ಅನ್ನು ದಯವಿಟ್ಟು ಹಿಂದಿರುಗಿಸಿ. ಆ ಫೋನ್ ನಲ್ಲಿ ಇರುವ ನನ್ನ ತಾಯಿಯ ಪೋಟೋಗಳಾದರೂ ನನಗೆ ಸಿಗುತ್ತವೆ. ಅವುಗಳನ್ನಾದರೂ ಶಾಶ್ವತವಾಗಿ ಉಳಿಸಿಕೊಳ್ಳುತ್ತೇವೆ. ಇಂತಿ ತಾಯಿಯನ್ನು ಕಳೆದುಕೊಂಡ ನತದೃಷ್ಟೆ. ಇದು ಕೋವಿಡ್ ಸೋಂಕಿನಿಂದ ತನ್ನ ತಾಯಿಯನ್ನು ಕಳೆದುಕೊಂಡಿರುವ ಪುಟ್ಟ ಬಾಲಕಿಯೊಬ್ಬಳು ಎಲ್ಲರ ಮನಕಲಕುವಂತೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಬರೆದಿರುವ ಪತ್ರ.

ಈ ಪತ್ರ ಬರೆದಿರುವ ಬಾಲಕಿ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ನಿವಾಸಿ ನವೀನ್ ಎಂಬುವರ ಮಗಳು ಹೃತೀಕ್ಷಾ. ಹೀಗೆ ಎಲ್ಲರ ಕರುಳು ಹಿಂಡುವಂತೆ ಪತ್ರ ಬರೆದು ದಯವಿಟ್ಟು ನನ್ನ ತಾಯಿಯ ಫೋನ್ ಅನ್ನು ವಾಪಸ್ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಮೇ 6 ರಂದು ಹೃತೀಕ್ಷಾ, ಈಕೆಯ ತಾಯಿ ಪ್ರಭಾ ಮತ್ತು ತಂದೆ ನವೀನ್ ಮೂವರಿಗೂ ಕೊವಿಡ್ ಸೋಂಕು ತಗುಲಿತ್ತು. ಹೃತೀಕ್ಷಾ ಮತ್ತು ನವೀನ್ ಇಬ್ಬರ ಆರೋಗ್ಯ ತಕ್ಕಮಟ್ಟಿಗೆ ಇದ್ದಿದ್ದರಿಂದ ಅವರಿಬ್ಬರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹೃತೀಕ್ಷಾಳ ತಾಯಿ ಪ್ರಭಾ ಅವರನ್ನು ಮಡಿಕೇರಿ ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೇ 16ರಂದು ಪ್ರಭಾ ಮೃಪಟ್ಟಿದ್ದರು.

doughter write a letter requesting to return phone of her dead mother
ತಂದೆ-ಮಗಳು


ಆಸ್ಪತ್ರೆಯ ಸಿಬ್ಬಂದಿ ತನ್ನ ತಾಯಿಯ ಮೃತದೇಹವನ್ನು ಹಿಂದಿರುಗಿಸಿದರು. ಆದರೆ ಅವರೊಂದಿಗೆ ಇದ್ದ ಫೋನ್ ಅನ್ನು ಹಿಂದಿರುಗಿಸಿರುವುದಿಲ್ಲ. ಆ ಫೋನ್ ನಲ್ಲಿ ನನ್ನ ತಾಯಿಯ ನೆನೆಪುಗಳಿವೆ. ತನ್ನ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ನನಗೆ ಆ ಫೋನ್ ಅನ್ನು ಹಿಂದಿರುಗಿಸಿ ನನ್ನ ತಾಯಿಯ ನೆನಪುಗಳನ್ನು ಉಳಿಸಿಕೊಡಿ ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಶಾಸಕರು ಹಾಗೇ ಆಸ್ಪತ್ರೆಯ ಸಿಬ್ಬಂದಿಯನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾಳೆ. ಇದು ಎಂತಹ ಕಲ್ಲು ಹೃದಯದ ಓದುಗರ ಹೃದಯ ಕರಗುವಂತೆ, ಕರುಳು ಹಿಂಡುವಂತೆ ಮಾಡಿದೆ.

ಆದರೆ ಫೋನ್ ನಿಜವಾಗಿಯೂ ಆಸ್ಪತ್ರೆ ಸಿಬ್ಬಂದಿಯೇ ಉಳಿಸಿಕೊಂಡರೇ ಅಥವಾ ಮತ್ತೆಲ್ಲಾದರೂ ಬಿದ್ದು ಹೋಗಿತೇ ಎನ್ನುವ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಆಸ್ಪತ್ರೆ ಸಿಬ್ಬಂದಿಯೇ ಉಳಿಸಿಕೊಂಡಿರಲಿ ಅಥವಾ ಎಲ್ಲಿಯಾದರೂ ಬಿದ್ದು ಯಾರಿಗಾದರೂ ಸಿಕ್ಕಿದ್ದರೂ ಅದನ್ನು ಬಾಲಕಿಗೆ ವಾಪಸ್ ಕೊಟ್ಟು ಮಾನವೀಯತೆ ಮೆರೆಯಬೇಕಾಗಿದೆ.

doughter write a letter requesting to return phone of her dead mother
ಸುಂದರವಾಗಿದ್ದ ಕುಟುಂಬ


ಇನ್ನು ಮಡಿಕೇರಿ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟವರ ಫೋನ್, ಬೆಲೆಬಾಳುವ ವಸ್ತುಗಳು ಮತ್ತು ಹಣ ನಾಪತ್ತೆಯಾಗುತ್ತಿರುವುದು ಇದೇ ಮೊದಲೇನು ಅಲ್ಲ. ಇಂತಹ ಹಲವು ಆರೋಪಗಳು ಈ ಮೊದಲೇ ಕೇಳಿ ಬಂದಿದ್ದವು. ಆದರೆ ಯಾರೊಬ್ಬರು ಇಂತಹ ಘಟನೆಗಳ ವಿರುದ್ಧ ದೂರು ನೀಡುವುದು ಅಥವಾ ಬಹಿರಂಗವಾಗಿ ಮಾತನಾಡಿರಲಿಲ್ಲ. ತನ್ನ ತಾಯಿಯ ನೆನೆಪುಗಳ ಉಳುವಿಗಾಗಿ ಈ ಬಾಲಕಿ ಬರೆದ ಪತ್ರ ಈಗ ಎಲ್ಲವನ್ನು ಬಹಿರಂಗಗೊಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ತಂದೆ ನವೀನ್ ಅವರು ಅದರಲ್ಲಿ ಸಾಕಷ್ಟು ಫೋಟೋಗಳಿವೆ. ಮುಖ್ಯವಾದ ಕಾಂಟ್ಯಾಕ್ ನಂಬರುಗಳಿವೆ. ದಯಮಾಡಿ ಸಂಬಂಧಿಸಿದ ಅಧಿಕಾರಿಗಳು ಫೋನ್ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಬಾಲಕಿ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಈಗಾಗಲೇ ಆಸ್ಪತ್ರೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಎಸ್‍ಪಿ ಅವರಿಗೂ ತಿಳಿಸಿದ್ದು ಪ್ರಕರಣ ದಾಖಲಿಸುವಂತೆ ಹೇಳಿದ್ದೇನೆ. ಇಂತಹ ಘಟನೆಗಳು ಮುಂದೆ ಆಗದಂತೆ ಕ್ರಮವಹಿಸುವುದಾಗಿ ತಿಳಿಸಿದ್ದಾರೆ.
Published by:Kavya V
First published: