HOME » NEWS » District » DOUBLE MURDERED IN KALBURGI MAK

ಅಕ್ರಮ ಸಂಬಂಧ ಹಿನ್ನೆಲೆ; ಸಂಕ್ರಾಂತಿಯ ಕರಿಯಂದು ಸಹೋದರರ ಜೋಡಿ ಕೊಲೆಗೆ ಸಾಕ್ಷಿಯಾದ ಕಲಬುರ್ಗಿ

ಇಬ್ಬರ ಕೊಲೆಗೆ ಹಳೆ ವೈಷಮ್ಯವೇ ಕಾರಣ ಅಂತ ಹೇಳಲಾಗುತ್ತಿದೆ. ಆರೋಪಿ ಚಂದ್ರಪ್ಪನ ಸಹೋದರಿಯ ಜೊತೆ  ನಿಲೇಶ್ ಅಕ್ರಮ ಸಂಬಂಧ ಹೊಂದಿದ್ದನಂತೆ. ಆದ್ರೆ ಆಕೆಯನ್ನು ಬಿಟ್ಟು ಮಹಾರಾಷ್ಟ್ರದ ನಾಗ್ಪೂರು ಮೂಲದ ಉಶಾಳನ್ನು ಮದುವೆಯಾಗಿದ್ದ ಕೊಲೆಗೆ ಇದೇ ಕಾರಣ ಎನ್ನಲಾಗುತ್ತಿದೆ.

news18-kannada
Updated:January 16, 2021, 11:22 AM IST
ಅಕ್ರಮ ಸಂಬಂಧ ಹಿನ್ನೆಲೆ; ಸಂಕ್ರಾಂತಿಯ ಕರಿಯಂದು ಸಹೋದರರ ಜೋಡಿ ಕೊಲೆಗೆ ಸಾಕ್ಷಿಯಾದ ಕಲಬುರ್ಗಿ
ಸಾಂದರ್ಭಿಕ ಚಿತ್ರ.
  • Share this:
ಕಲಬುರ್ಗಿ; ಸಂಕ್ರಾಂತಿ ಸಂಭ್ರಮದಲ್ಲಿದ್ದ ಕಲಬುರ್ಗಿ ಜನತೆಯನ್ನು ಜೋಡಿ ಕೊಲೆ ಬೆಚ್ಚಿ ಬೀಳಿಸಿದೆ. ಸಂಕ್ರಾಂತಿ ಕರಿಯ ಹಿನ್ನೆಲೆಯಲ್ಲಿ ಆ ಕುಟುಂಬ ಮನೆಯಲ್ಲಿ ಮೀನಿನ ಅಡುಗೆ ಮಾಡಿತ್ತು. ಸಹೋದರರು ಮುಂಜಾನೆನೆ ಮೀನು ತಂದು  ತಾಯಿಗೆ ನೀಡಿದ್ದರು. ತಾಯಿ ಊಟ ಸಿದ್ದ ಮಾಡಿದ್ದಳು. ಆದ್ರೆ ಊಟಕ್ಕೆ ಹೋಗುವಾಗ ದಾರಿಯಲ್ಲಿ ಅಡ್ಡ ಬಂದ ಹಂತಕ ಗ್ರಾಮದಲ್ಲಿಯೇ ಸಹೋದರರಿಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ನೂರಾರು ಜನರ ಮುಂದೆ ಸಹೋದರರು ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿರೋ ಸಹೋದರರು. ಮತ್ತೊಂದಡೆ ಮಗನನ್ನು ಕಳೆದುಕೊಂಡು ಕಣ್ಣೀರು ಹಾಕ್ತೀರು ತಾಯಿ. ತಂದೆಯನ್ನು ಕಳೆದುಕೊಂಡು ಅನಾಥವಾಗಿರುವ ಮೂವರು ಮಕ್ಕಳಲ್ಲಿ ಮುಂದೇನು ಅನ್ನೋ ಪ್ರಶ್ನೆ. ಇಂತಹದೊಂದು ದೃಶ್ಯಗಳು ಕಂಡುಬಂದಿದ್ದು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ತಡಕಲ್ ಗ್ರಾಮದಲ್ಲಿ.

ಶವದ ಮುಂದೆ ತಾಯಿ, ಪತ್ನಿ ಮತ್ತು ಮಕ್ಕಳು ರೋದಿಸುತ್ತಿದ್ದ ದೃಶ್ಯ ಕಲ್ಲುಹೃದಯದವರನ್ನೂ ಕರಗಿಸುವಂತಿತ್ತು.ಹೆತ್ತ ತಾಯಿಗೆ ಇದ್ದಿಬ್ಬರು ಮಕ್ಕಳು ಕೊಲೆಯಾಗಿ ಹೋಗಿದ್ದಾರೆ. ಇಡೀ ಕುಡುಂಬ ದುಃಖದ ಕೋಡಿಯಲ್ಲಿ ಮುಳುಗಿ ಹೋಗಿದೆ. ತಡಕಲ್ ಗ್ರಾಮದಲ್ಲಿ ಇಂದು ಮುಂಜಾನೆ ಹತ್ತು ಗಂಟೆ ಸಮಯದಲ್ಲಿ ಸಹೋದರರಿಬ್ಬರ ಬರ್ಬರ ಕೊಲೆಯಾಗಿದೆ. 39 ವರ್ಷದ ನಿಲೇಶ್ ಮೋರೆ ಮತ್ತು 31 ವರ್ಷದ ರಾಜು ಮೋರೆ ಕೊಲೆಯಾದವರು.

ಇಬ್ಬರು ಕೂಡ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡ ಜೀವನ ನಡೆಸುತ್ತಿದ್ದರು. ಇನ್ನು ನಿಲೇಶ್ ನಿಗೆ ಮದುವೆಯಾಗಿದ್ದು ಮೂರು ಮಕ್ಕಳಿವೆ. ರಾಜು ತನ್ನ ತಾಯಿ ಜೊತೆ ಗ್ರಾಮದ ಹೊರವಲಯದಲ್ಲಿರುವ ಮನೆಯಲ್ಲಿ ವಾಸವಾಗಿದ್ದ. ನಿಲೇಶ್ ಪತ್ನಿ ಮತ್ತು ಮಕ್ಕಳ ಜೊತೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಇಂದು ಸಂಕ್ರಾಂತಿ ಕರಿ ಹಿನ್ನೆಲೆಯಲ್ಲಿ ನಿಲೇಶ್ ಮುಂಜಾನೆ ನಾಗೂರು ಗ್ರಾಮಕ್ಕೆ ಹೋಗಿ ಮೀನು ತಂದಿದ್ದ. ಒಂದಿಷ್ಟು ಮೀನುಗಳನ್ನು ತಾಯಿಗೆ ನೀಡಿ ಮತ್ತೊಂದಿಷ್ಟು ಮೀನನ್ನು ತಂದು ಪತ್ನಿಗೆ ನೀಡಿದ್ದ. ಮಗ ಮೀನು ತಂದೊಡನೆ ತಾಯಿ ಮೀನಿನ ಊಟ ಸಿದ್ದ ಮಾಡಿದ್ದಳು.

ಇತ್ತ ಪತ್ನಿಯ ಮನೆಗೆ ಬಂದಿದ್ದ ನಿಲೇಶ್ ನನ್ನು ಊಟಕ್ಕೆ ಕರೆಯಲು ಆತನ ಸಹೋದರನ ಮನೆಗೆ ಬಂದಿದ್ದ. ಸಹೋದರನನ್ನು ಕರೆದುಕೊಂಡು ಹೋಗ್ತಾಯಿದ್ದ ಸಂದರ್ಭದಲ್ಲಿ ಹಾಡಹಗಲೇ ಗ್ರಾಮದಲ್ಲಿ ಯುವಕನೋರ್ವ ಇಬ್ಬರ ಜೊತೆ ಜಗಳ ತಗೆದಿದ್ದಾನೆ. ಜಗಳ ತಗೆದಿದ ಚಂದ್ರಪ್ಪ ಅನ್ನೋ ವ್ಯಕ್ತಿ ಇಬ್ಬರನ್ನು ತಲವಾರ್ ನಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಮೃತರ ತಾಯಿ ಗುಂಡಮ್ಮ ಆರೋಪಿಸಿದ್ದಾರೆ.

ರಾಜು ಮತ್ತು ನಿಲೇಶ್ ನನ್ನು ಇದೇ ತಡಕಲ್ ಗ್ರಾಮದ ನಿವಾಸಿಯಾಗಿರೋ ಚಂದ್ರಪ್ಪ ಅನ್ನೋನು ಕೊಲೆ ಮಾಡಿದ್ದಾನಂತೆ. ನಿಲೇಶ್ ನ ಪತ್ನಿ ತಲವಾರ್ ನಿಂದು ನಿಲೇಶ್ ಮತ್ತು ರಾಜುನನ್ನು ಹೊಡೆದು ಕೊಲೆ ಮಾಡುತ್ತಿರುವದನ್ನು ಕಣ್ಣಾರೆ ಕಂಡಿದ್ದಾಳೆ. ಇನ್ನು ಗ್ರಾಮದ ಅನೇಕ ಜನರು ಕೂಡಾ ಕೊಲೆ ಮಾಡುತ್ತಿರುವದನ್ನು ಕಣ್ಣಾರೆ ಕಂಡಿದ್ದಾರೆ. ಆದ್ರೆ ಆರೋಪಿ ಚಂದ್ರಪ್ಪನ ಕೈಯಲ್ಲಿ ತಲವಾರ್ ಕಂಡು ಯಾರು ಕೂಡಾ ಬಿಡಿಸಲು ಹೋಗಿಲ್ಲಾ. ದೂರದಿಂದಲೇ ಎಲ್ಲರು ನೋಡಿದ್ದಾರೆ. ಇತ್ತ ನಿಲೇಶ್ ಪತ್ನಿ ಉಶಾ, ತನ್ನ ಅತ್ತೆಯನ್ನು ಕರೆದುಕೊಂಡು ಬರುವಷ್ಟರಲ್ಲಿ ಇಬ್ಬರು ಬಾರದ ಲೋಕಕ್ಕೆ ಹೋಗಿದ್ದಾರೆ.

ಇಬ್ಬರ ಕೊಲೆಗೆ ಹಳೆ ವೈಷಮ್ಯವೇ ಕಾರಣ ಅಂತ ಹೇಳಲಾಗುತ್ತಿದೆ. ಆರೋಪಿ ಚಂದ್ರಪ್ಪನ ಸಹೋದರಿಯ ಜೊತೆ  ನಿಲೇಶ್ ಅಕ್ರಮ ಸಂಬಂಧ ಹೊಂದಿದ್ದನಂತೆ. ಆದ್ರೆ ಆಕೆಯನ್ನು ಬಿಟ್ಟು ಮಹಾರಾಷ್ಟ್ರದ ನಾಗ್ಪೂರು ಮೂಲದ ಉಶಾಳನ್ನು ಮದುವೆಯಾಗಿದ್ದ. ಮದುವೆ ನಂತರ ನಿಲೇಶ್ ನಿಗೆ ಮೂರು ಮಕ್ಕಳಾಗಿವೆ. ಇತ್ತ ಚಂದ್ರಪ್ಪನ ಸಹೋದರಿಗೆ ಕೂಡಾ ಮದುವೆಯಾಗಿದೆ. ಆದ್ರೆ ತನ್ನ ಸಹೋದರಿ ಬಾಳನ್ನು ನಿಲೇಶ್ ಹಾಳು ಮಾಡಿದ್ದ ಅನ್ನೋ ದ್ವೇಷ ವನ್ನು ಚಂದ್ರಪ್ಪ ಹೊಂದಿದ್ದನಂತೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಅನೇಕ ಬಾರಿ ಚಂದ್ರಪ್ಪ ನಿಲೇಶ್ ಮನೆಗೆ ಬಂದು ಗಲಾಟೆ ಕೂಡಾ ಮಾಡಿದ್ದನಂತೆ.

ಇದನ್ನೂ ಓದಿ: ಹೆಚ್​. ವಿಶ್ವನಾಥ್ ನಮಗೆ ಹಿರಿಯರು, ಅವರು ಏನು ಹೇಳಿದ್ರೂ ಆಶಿರ್ವಾದ ಅಂತಾ ಭಾವಿಸ್ತೀವಿ; ರಮೇಶ್​ ಜಾರಕಿಹೊಳಿಇಂದು ಮುಂಜಾನೆ ಇದೇ‌ ವಿಷಯಕ್ಕೆ ನಿಲೇಶ್ ಮತ್ತು ಚಂದ್ರಪ್ಪ ನ ನಡುವೆ ಜಗಳವಾಗಿದೆ. ಆದ್ರೆ ಇಂದು ಮುಂಜಾನೆ ಚಂದ್ರಪ್ಪ, ನಿಲೇಶ್ ಮತ್ತು ರಾಜು ಮೂರು ಜನ ಸೇರಿಕೊಂಡು ಕುಡದಿದ್ದಾರಂತೆ. ನಿಲೇಶ್ ಮತ್ತು ರಾಜುವಿಗೆ ಚೆನ್ನಾಗಿ ಕುಡಿಸಿದ ಚಂದ್ರಪ್ಪ ಕೆಲ ಹೊತ್ತಾದ ನಂತರ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಕುರಿತು ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಹಾಡ ಹಗಲೇ ಈ ರೀತಿ ಹೆಣವಾಗಿದ್ದಾರೆ ಎಂದು ಮೃತ ನಿಲೇಶ್ ಪತ್ನಿ ಉಶಾ ತಿಳಿಸಿದ್ದಾಳೆ.

ಸದ್ಯ ಮಹಗಾಂವ್ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆ ನಂತರ ತಲೆ ಮರೆಸಿಕೊಂಡಿರೋ ಚಂದ್ರಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದ್ರೆ ತಂದೆಯನ್ನು ಕಳೆದುಕೊಂಡ ಮೂರು ಮಕ್ಕಳು ಅನಾಥವಾಗಿವೆ. ಸಂಕ್ರಾಂತಿ ಹಬ್ಬ ಕುಟುಂಬಕ್ಕೆ ಕರಾಳವಾಗಿ ಪರಿಣಮಿಸಿದೆ.
Published by: MAshok Kumar
First published: January 16, 2021, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories