ಮರಿಗಳನ್ನ ಉಳಿಸಲು ತಾಯಿಯ ಸಂಕಟ; ಪ್ರವಾಹದಲ್ಲೊಂದು ಮನಮಿಡಿಯುವ ಘಟನೆ

ತಾನು ಮರಿಗಳನ್ನ ಹಾಕಿದ್ದ ಜಾಗಕ್ಕೆ ಪ್ರವಾಹದ ನೀರು ಹರಿದುಬಂದಾಗ ಶ್ವಾನವೊಂದು ತನ್ನ ಮರಿಗಳ ರಕ್ಷಣೆಗೆ ಮಾಡಿದ ಪ್ರಯತ್ನ ಬಹಳ ಮನಮಿಡಿಯುವಂತಿತ್ತು. ಮರಿಗಳು ಪ್ರವಾಹದಲ್ಲಿ ಕೊಚ್ಚಿಹೋದಾಗ ಆ ಮಾತೃ ಶ್ವಾನ ಪಟ್ಟ ವೇದನೆ ಬಹಳ ಸಂಕಟ ತರುವಂತಿತ್ತು.

ಪ್ರವಾಹದ ವೇಳೆ ತನ್ನ ಮರಿಯನ್ನು ಉಳಿಸಿಕೊಳ್ಳಲು ನಾಯಿಯ ಹರಸಾಹಸ

ಪ್ರವಾಹದ ವೇಳೆ ತನ್ನ ಮರಿಯನ್ನು ಉಳಿಸಿಕೊಳ್ಳಲು ನಾಯಿಯ ಹರಸಾಹಸ

  • Share this:
ವಿಜಯಪುರ: ಭೀಮಾ ಪ್ರವಾಹ ಬಸವ ನಾಡಿನ ಸಹಸ್ರಾರು ಜನರನ್ನು ಕಂಗಾಲಾಗಿಸಿದೆ. ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಪ್ರವಾದಿಂದಾಗಿ ಜನರಷ್ಟೇ ಅಲ್ಲ ಜಾನುವಾರುಗಳನ್ನೂ ಕಂಗೆಡಿಸಿದೆ.  ಒಂದೆಡೆ ಜನರ ರಕ್ಷಣಾ ಕಾರ್ಯ ಸಾಗಿದ್ದರೆ, ಮತ್ತೋಂದೆಡೆ ಜಾನುವಾರುಗಳ ಪಾಡು ಹೇಳತೀರದಾಗಿದೆ. ತಾರಾಪುರ ಗ್ರಾಮದಲ್ಲಿ ಪ್ರವಾಹ ಹೆಚ್ಚಾಗಿದೆ.  ಇಲ್ಲಿ ಸಾಕು ಪ್ರಾಣಿಗಳಾದ ನಾಯಿ, ಆಡು, ಆಕಳು, ಎಮ್ಮೆ, ಕೋಳಿ ಸೇರಿದಂತೆ ರೈತರ ಕುಟುಂಬದಂತಿರುವ ಜಾನುವಾರುಗಳೂ ಈ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿವೆ. ಹೀಗೆ ಭೀಮಾ ಪ್ರವಾಹ ಪೀಡಿತ ತಾರಾಪುರದಲ್ಲೊಂದು‌ ಮನ ಮಿಡಿಯುವ ಘಟನೆ ನಡೆದಿದೆ.

ರೈತನ ಮಿತ್ರ ಮತ್ತು ನಿಯತ್ತಿಗೆ ಸಾಕ್ಷಿಯಾದ ಶ್ವಾನದ ಕರುಣಾಜನ ಪ್ರಸಂಗ ಮರೆಯದಂತಿದೆ. ಅದು ತಾಯಿ ನಾಯಿಯ ಕರುಣಾಜನ ಕಥೆ.  ಅಷ್ಟೇ ಅಲ್ಲ, ಮಾತ್ರ ವಾತ್ಸಲ್ಯ ಮತ್ತು ಕಾಳಜಿಗೆ ಸಾಕ್ಷಿಯಾಗಿದೆ.  ಅಷ್ಟಕ್ಕೂ ಆಗಿದ್ದೇನೆಂದರೆ, ಈ ಸಂದರ್ಭದಲ್ಲಿ ಮರಿಗಳನ್ನು ಹಾಕಿದ್ದ ಹೆಣ್ಣು ನಾಯಿ ತನ್ನ ಮರಿಗಳ ರಕ್ಷಣೆಗೆ ಪರದಾಡಿದೆ.

ಇದನ್ನೂ ಓದಿ: ಭೀಮಾ ನದಿಯಲ್ಲಿ ಪ್ರವಾಹ; ಜೀವ ಉಳಿಸಿಕೊಳ್ಳಲು ಜನರ ಹರಸಾಹಸ

ಈ ಶ್ವಾನ ಮರಿಗಳನ್ನು ಹಾಕಿದ್ದ ಜಾಗಕ್ಕೂ ಭೀಮಾ ನದಿಯ ಪ್ರವಾಹದ ನೀರು ಆವರಿಸಿದೆ. ಆಗ ಎಷ್ಟೇ ಆಗಲಿ ತಾಯಿ ಅಲ್ವ.  ತಾಯಿ ನಾಯಿ ತನ್ನ ಮರಿಯೊಂದನ್ನು ಬಾಯಿಯಲ್ಲಿ ಹಿಡಿದು ಸುರಕ್ಷಿತ ಸ್ಥಳ ಹುಡುಕತ್ತಿರುವ ದೃಶ್ಯ ಪ್ರವಾಹದ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೊನೆಗೂ ಎರಡು ಮರಿಗಳನ್ನು ಬಾಯಿಯಲ್ಲಿ ಹಿಡಿದು ಪತ್ರಾಸ್ ಶೆಡ್ ವೊಂದರ ಒಳಗೆ ತಂದು ಬಿಟ್ಟಿದೆ. ಆದರೆ, ಅಷ್ಟರಲ್ಲಿ ಆ ನಾಯಿಯ ಎರಡು‌ ಮರಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಮಾತೃ ಪ್ರೇಮದ ಪ್ರತೀಕವಾದ ಘಟನೆ ಎಂಥವರ ಕಣ್ಣಾಲಿಗಳಲ್ಲೂ ನೀರು ತರಿಸುವಂತಿದೆ.

ಅಷ್ಟೇ ಅಲ್ಲ, ಭೀಮೆಯ ಪ್ರವಾಹಕ್ಕೆ ಜನತೆಯ ಜೊತೆ ಪ್ರಾಣಿಗಳೂ ಜೀವರಕ್ಷಣೆಗೆ ಪರದಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ವರದಿ: ಮಹೇಶ ವಿ. ಶಟಗಾರ
Published by:Vijayasarthy SN
First published: