HOME » NEWS » District » DOG AND CAT SHOW ORGANIZED IN SHIVAMOGGA RHHSN HRNS

ಡಾಗ್ ಮತ್ತು ಕ್ಯಾಟ್ ಶೋ ನಲ್ಲಿ ಮಿಂಚಿದ ವಿವಿಧ ತಳಿಯ ನಾಯಿ-ಬೆಕ್ಕುಗಳು!

ದೇಶಿ ತಳಿಯ ಶ್ವಾನಗಳು ಸಹ, ವಿದೇಶ ತಳಿಯ ಶ್ವಾನಗಳಿಗಿಂತ ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ಡಾಗ್ ಶೋನಲ್ಲಿ ಕಾಣಿಸಿಕೊಂಡಿದ್ದವು. ಭಾಗವಹಿಸಿದ ಎಲ್ಲ ಶ್ವಾನಗಳಿಗೂ ಪ್ರಮಾಣ ಪತ್ರವನ್ನು ಕೊಡಲಾಯಿತು. ಶಿವಮೊಗ್ಗ ನಗರದ ಜನರು ಮುದ್ದು ಮುದ್ದಾಗಿರುವ ಶ್ವಾನಗಳನ್ನು ನೋಡಿ ಖುಷಿ ಪಟ್ಟರು. ವಿವಿಧ ತಳಿಯ ಶ್ವಾನಗಳ ಬಗ್ಗೆ ಮಾಹಿತಿ ತಿಳಿದುಕೊಂಡರು. 

news18-kannada
Updated:January 10, 2021, 3:23 PM IST
ಡಾಗ್ ಮತ್ತು ಕ್ಯಾಟ್ ಶೋ ನಲ್ಲಿ ಮಿಂಚಿದ ವಿವಿಧ ತಳಿಯ ನಾಯಿ-ಬೆಕ್ಕುಗಳು!
ಪ್ರದರ್ಶನದಲ್ಲಿ ಭಾಗಿಯಾಗಿದ್ದ ಮುದೋಳ್ ತಳಿಯ ಶ್ವಾನ.
  • Share this:
ಶಿವಮೊಗ್ಗ; ಅಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 32 ತಳಿಯ ಶ್ವಾನಗಳು ಇದ್ದವು. ದೇಶ-ವಿದೇಶ ತಳಿಯ 300ಕ್ಕೂ ಹೆಚ್ಚು ನಾಯಿಗಳು ಸಾರ್ವಜನಿಕರ ಗಮನ ಸೆಳೆದವು. ಬಗೆ ಬಗೆಯ ಶ್ವಾನಗಳ ತಂಡವೇ ಇವತ್ತು ಮಲೆನಾಡಿಗೆ ಆಗಮಿಸಿದ್ದವು. ನಾವು ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಒಂದಕ್ಕಿಂತ ಒಂದು ನಾಯಿಗಳು ಫೋಸ್ ನೀಡುತ್ತಿದ್ದವು. ಶಿವಮೊಗ್ಗದಲ್ಲಿ ನಡೆದ ಡಾಗ್ ಮತ್ತು ಕ್ಯಾಟ್  ಶೋ  ಜನರ ಮನ ಗೆದ್ದಿತು.

ಶಿವಮೊಗ್ಗ ಸ್ಮಾರ್ಟ್ ಸಿಟಿ ಕೆನಲ್ ಕ್ಲಬ್ ನಿಂದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿವಮೊಗ್ಗದ ನಗರದ ಎನ್​ಇ ಎಸ್ ಮೈದಾನದಲ್ಲಿ ರಾಜ್ಯ ಮಟ್ಟದ ಡಾಗ್  ಮತ್ತು ಕ್ಯಾಟ್ ಶೋನಲ್ಲಿ 300ಕ್ಕೂ ಹೆಚ್ಚು ಶ್ವಾನಗಳು, 80ಕ್ಕೂ ಹೆಚ್ಚು ಬೆಕ್ಕುಗಳು ಪಾಲ್ಗೊಂಡಿದ್ದವು. ಡಾಬರ್ ಮನ್, ಜರ್ಮನ್ ಶೆಫರ್ಡ್, ರ್ಯಾಟ್ ವಿಲ್ಲರ್, ಪಗ್ಸ್, ಡಾಶ್, ಸೇಂಟ್ ಬರ್ನಾರ್ಡ್, ಕರ್ನಾಟಕ ರಾಜ್ಯದಲ್ಲಿ ಹೆಸರು ವಾಸಿಯಾಗಿರುವ ಮುಧೋಳ,  ಹೀಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 32 ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಕೆಲವೊಂದು ನಾಯಿಗಳ ಗಾತ್ರ ನೋಡಿದರೆ. ಇದೇನಪ್ಪ ನಾಯಿ ಹೀಗೆ ಇದೆ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕು. ಅಷ್ಟು ದೊಡ್ಡ ದೊಡ್ಡ ನಾಯಿಗಳು ಅಲ್ಲಿದ್ದವು. ಉಡುಪಿ, ಕಾಸರಗೋಡು, ಬೆಳಗಾವಿ, ಬಾಗಲಕೋಟೆ, ಹಾವೇರಿ, ಮೈಸೂರು, ದಾವಣಗೆರೆ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಭಾಗಗಳಿಂದ ತಮ್ಮ ಶ್ವಾನಗಳನ್ನು ಡಾಗ್ ಶೋ ಗೆ ಶ್ವಾನ ಪ್ರೀಯರು ಕರೆದುಕೊಂಡು ಬಂದಿದ್ದರು.

ಇದನ್ನು ಓದಿ: ಆನ್ ಲೈನ್ ತರಗತಿ ತಿಳಿಯುತ್ತಿಲ್ಲ; ಮತ್ತೊಮ್ಮೆ ಪಾಠ ಮಾಡಿ ಎಂದು ಅಂಗಲಾಚುತ್ತಿರುವ ವಿದ್ಯಾರ್ಥಿಗಳು

ಶ್ವಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ಸಾಕು ಪ್ರಾಣಿಗಳಲ್ಲೇ ಅತ್ಯಂತ ನಿಯತ್ತಿನ ಪ್ರಾಣಿ ಎಂಬ ಹೆಗ್ಗಳಿಗೆ ಈ ಶ್ವಾನಗಳಿಗೆ ಇದೆ. ಮನುಷ್ಯರು ಸಾಕುವಂತ ಪ್ರಾಣಿಗಳಲ್ಲಿ ಶ್ವಾನ ಮೊದಲ ಸ್ಥಾನ ಸಹ ಪಡೆದುಕೊಂಡಿವೆ. ಅತಿ ಮುದ್ದಿನಿಂದ ಸಾಕಿದ ನಾಯಿಗಳನ್ನು ಅದರ ಮಾಲೀಕರುಗಳು ಇಂದು ಡಾಗ್ ಶೋ ಗೆ ಕರೆದುಕೊಂಡು ಬಂದಿದ್ದರು. ಬೆಳಿಗ್ಗೆಯಿಂದ ನಡೆದ ಡಾಗ್​ ಶೋನಲ್ಲಿ ವಿವಿಧ ರೀತಿಯ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿತ್ತು. ಶ್ವಾನ ಪ್ರಿಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ಮನೆಗೂ ಇಂತಹದೊಂದು ಶ್ವಾನ ಇದ್ದರೆ ಚೆನ್ನಾಗಿರುತ್ತೆ ಅಲ್ವಾ ಅಂತ ಅಂದುಕೊಂಡರು. ತಮ್ಮ ತಮ್ಮ ಶ್ವಾನಗಳ ಬಗ್ಗೆ ಅದರ ಮಾಲೀಕರೇ ಗುಣಗಾನ ಮಾಡುತ್ತಿದ್ದರು. ತಮ್ಮ ಪ್ರೀತಿಯ ಶ್ವಾನಗಳಿಗೆ ಡಾಗ್ ಶೋನಲ್ಲಿ ಬಹುಮಾನ ಗಳಿಸಲು ಸಹಾಯ ಮಾಡುವ ಕೆಲಸದಲ್ಲಿ ಮಾಲೀಕರು ನಿರತರಾಗಿದ್ದ, ದೃಶ್ಯ ಕಂಡು ಬಂತು.
Youtube Video

ದೇಶಿ ತಳಿಯ ಶ್ವಾನಗಳು ಸಹ, ವಿದೇಶ ತಳಿಯ ಶ್ವಾನಗಳಿಗಿಂತ ಕಡಿಮೆ ಇಲ್ಲ ಅನ್ನೋ ರೀತಿಯಲ್ಲಿ ಡಾಗ್ ಶೋನಲ್ಲಿ ಕಾಣಿಸಿಕೊಂಡಿದ್ದವು. ಭಾಗವಹಿಸಿದ ಎಲ್ಲ ಶ್ವಾನಗಳಿಗೂ ಪ್ರಮಾಣ ಪತ್ರವನ್ನು ಕೊಡಲಾಯಿತು. ಶಿವಮೊಗ್ಗ ನಗರದ ಜನರು ಮುದ್ದು ಮುದ್ದಾಗಿರುವ ಶ್ವಾನಗಳನ್ನು ನೋಡಿ ಖುಷಿ ಪಟ್ಟರು. ವಿವಿಧ ತಳಿಯ ಶ್ವಾನಗಳ ಬಗ್ಗೆ ಮಾಹಿತಿ ತಿಳಿದುಕೊಂಡರು.
Published by: HR Ramesh
First published: January 10, 2021, 3:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories