ಯೋಗದಲ್ಲಿ ದೊಡ್ಡಬಳ್ಳಾಪುರ ಯುವತಿಯ ಸಾಧನೆ: ಯೋಗ ರತ್ನ ಪ್ರಶಸ್ತಿ ಮುಡಿಗೇರಿಸಿಕೊಂಡ ವಿನುತ 

ಮಗಳ ಸಾಧನೆಗೆ ಹಗಲು ರಾತ್ರಿ ಶ್ರಮಿಸುತ್ತಿರುವ ದಂಪತಿಗಳ ಆಸೆಗೆ ಮಗಳೂ ಪೂರಕವಾಗಿ ಇಡೀ ದೇಶದ ಭರವಸೆಯ ಯೋಗ ಪಟುವಾಗಿ ಹೊರ ಹೊಮ್ಮುವ ಮೂಲಕ ಸಾಕಷ್ಟು ಶ್ರಮ ವಹಿಸಿ ಸಾಧನೆ ಮಾಡಿದ್ದಾರೆ. ಯೋಗ ಅಭ್ಯಾಸ ಮಾಡಲು ತಾಯಿ ಆಶಾ ಮಗಳಿಗೆ ಬೇಕಾದ ಸೂಕ್ತ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.

ಗೆಳತಿಯೊಂದಿಗೆ ಯೋಗಾಭ್ಯಾಸ.

ಗೆಳತಿಯೊಂದಿಗೆ ಯೋಗಾಭ್ಯಾಸ.

  • Share this:
ದೊಡ್ಡಬಳ್ಳಾಪುರ: ವಿದ್ಯಾಭ್ಯಾಸದಲ್ಲಿ ಟಾಪರ್ ಹಾಗೆಯೇ  ಯೋಗಾಸದಲ್ಲೂ ಯೋಗ ಭಾರತ ರತ್ನ. ಯೋಗ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿರುವ  ಯುವತಿ  ಹಲವು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿದ್ದಾಳೆ. ಯೋಗ ರತ್ನ ಪ್ರಶಸ್ತಿ ಪಡೆದು ಯೋಗ ತವರೂರಾದ ದೊಡ್ಡಬಳ್ಳಾಪುರದ ಕೀರ್ತಿ ಪತಾಕೆ ಮತ್ತೊಮ್ಮೆ ದೇಶ- ವಿದೇಶಗಳಲ್ಲಿ ಹಾರಿಸಿದ್ದಾಳೆ. ದೊಡ್ಡಬಳ್ಳಾಪುರ  ತಾಲೂಕಿನ  ಅರಹಳ್ಳಿ ಗುಡ್ಡದಹಳ್ಳಿಯ ಸಾಮಾನ್ಯ  ರೈತ ಕುಟುಂಬದ ಹಿನ್ನಲೆಯ ವಿನುತಾಗೌಡ ಯೋಗ ಕ್ಷೇತ್ರದಲ್ಲಿ ಸಾಧಿಸಬೇಕೆನ್ನುವ  ಛಲದಲ್ಲಿರುವ ಯುವತಿ, ಆಶಾ  ಮತ್ತು  ನಂಜೇಗೌಡ ದಂಪತಿಯ ಹಿರಿಯ ಮಗಳು. ಸದ್ಯ ಯಲಹಂಕದ ನಾಗಾರಾರ್ಜುನ  ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ, ವಿದ್ಯಾಭ್ಯಾಸದಲ್ಲಿ ಶಾಲೆಗೆ ಟಾಪರ್  ಆಗಿರುವ ವಿನುತ ಎಸ್ ಎಸ್ ಎಲ್ ಸಿಯಲ್ಲಿ  ಶೇಕಡಾ 99 ರಷ್ಟು  ಅಂಕ ಗಳಿಸಿದ್ದಾರೆ. ಇನ್ನೂ ಪ್ರಥಮ ಪಿಯುಸಿಯಲ್ಲಿ  ಶೇಕಡಾ 96 ರಷ್ಟು  ಅಂಕ ಗಳಿಸಿದ್ದಾರೆ. ದ್ವಿತೀಯ  ಪಿಯುಸಿಯಲ್ಲಿ ಕಾಲೇಜಿಗೆ ಟಾಪರ್ ಆಗುವ ಹಾದಿಯಲ್ಲಿದ್ದು ಕಠಿಣ  ಪರಿಶ್ರಮ  ಪಡುತ್ತಿದ್ದಾರೆ.

ವಿದ್ಯೆಗೂ  ಸೈ ಯೋಗಕ್ಕೂ ಸೈ ಅನ್ನುವ ವಿನುತ, ಯೋಗ ಕ್ಷೇತ್ರದಲ್ಲೂ  ಸಾಧನೆಯ  ಹಾದಿಯಲ್ಲಿದ್ದಾರೆ. ಕಲಿಕೆಯಲ್ಲಿ ಏಕಾಗ್ರತೆ ಕಾರಣಕ್ಕೆ  ಯೋಗ ತರಗತಿ ಸೇರಿದ ವಿನುತ ಯೋಗ ಕ್ಷೇತ್ರದಲ್ಲೂ ಸಾಧನೆಯ ಮಾಡಿದ್ದಾರೆ. ದೇಹವನ್ನೂ ಲೀಲಾಜಾಲವಾಗಿ  ಭಾಗಿಸುವ  ಮೂಲಕ  ವಿವಿಧ ಯೋಗಭಂಗಿಗಳನ್ನು ಮಾಡುತ್ತಾರೆ. ಹಲವು ಸ್ವರ್ಧೆಯಲ್ಲಿ  ಯೋಗ ಪ್ರದರ್ಶನ  ನೀಡಿರುವ ವಿನುತ ಯೋಗ ರತ್ನ, ಯೋಗ ಕಲಾ ಚಂದ್ರ, ಯೋಗ ಚಂದ್ರ, ಯೋಗಾರ್ಜುನ, ಯೋಗ ಸಾಮ್ರಾಟ್ ಪ್ರಶಸ್ತಿ  ಪಡೆದಿದ್ದಾರೆ. ಎರಡು ಬಾರಿ ಗ್ಲೋಬಲ್ ಟೈಟಲ್ ಯೋಗ ಚಾಂಪಿಯನ್  ಶಿಪ್ ನಲ್ಲಿ ಸಿಲ್ವರ್  ಪದಕ ಗಳಿಸಿದ್ದಾರೆ.

ವಿನುತ


ಇದನ್ನು ಓದಿ: ಪದೇ ಪದೇ ಹೇಳಿಕೆ ನೀಡಿದ್ರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲ್ಲ; ಠಾಕ್ರೆ ಹೇಳಿಕೆಗೆ ಡಿಕೆಶಿ, ಜಾರಕಿಹೊಳಿ ಕಿಡಿ

ಯೋಗ ಕ್ಷೇತ್ರದಲ್ಲಿನ  ಮಗಳ ಸಾಧನೆಯಿಂದ  ಸಂತಸದಲ್ಲಿದ್ದಾರೆ ವಿನುತ ತಾಯಿ ಆಶಾ. ಮಗಳ ಯೋಗ ಕಲಿಕೆಯಿಂದ ನಾನು ಸಹ ಮನೆಯಲ್ಲಿ ಯೋಗಾಸನ  ಮಾಡುತ್ತೇನೆ. ಇದರಿಂದ ನನ್ನ  ಆರೋಗ್ಯದಲ್ಲೂ ಬದಲಾವಣೆ ಕಂಡು ಕೊಂಡಿದ್ದೆನೆಂದು  ಹೇಳುತ್ತಾರೆ.  ಯೋಗಾಸನದಲ್ಲಿಯೇ ಸಾಧನೆ ಮಾಡಬೇಕೆಂಬ ಗುರಿ ಹೊಂದಿರುವ  ವಿನುತ ಮುಂದೆ ಯೋಗ  ಶಿಕ್ಷಕಿಯಾಗುವ  ಮೂಲಕ ಯೋಗದ ಮಹತ್ವವನ್ನು ಜನರಿಗೆ  ತಿಳಿಸುವ  ಆಸೆ ಹೊಂದಿದ್ದಾರೆ. ಈಗ ಅಕ್ಕ ಪಕ್ಕದ ಮನೆಯ ಮಕ್ಕಳು, ಸ್ನೇಹಿತರಿಗೂ ಉಚಿತವಾಗಿ ಯೋಗಾಭ್ಯಾಸ ಹೇಳಿಕೊಡುತ್ತಿದ್ದಾರೆ.

ಬಹುತೇಕ ಮಗಳಿಗೆ ತಾಯಿಯೇ ಮೊದಲ ಗುರು. ಮನೆಯೆ ಮೊದಲ ಪಾಠ ಶಾಲೆ ಎಂಬಂತೆ ವಿನುತ ತಾಯಿ ಆಶಾ ಮಗಳ ಯೋಗಾಭ್ಯಾಸ ಕ್ಕೆ ಆಸರೆಯಾಗಿ ನಿಂತಿದ್ದಾರೆ. ರೈತನ ಮಗಳ ಸಾಧನೆಗೆ ಒತ್ತಾಸೆ ಆಗಿದ್ದು ಮಗಳ ಸಾಧನೆಗೆ ಹಗಲು ರಾತ್ರಿ ಶ್ರಮಿಸುತ್ತಿರುವ ದಂಪತಿಗಳ ಆಸೆಗೆ ಮಗಳೂ ಪೂರಕವಾಗಿ ಇಡೀ ದೇಶದ ಭರವಸೆಯ ಯೋಗ ಪಟುವಾಗಿ ಹೊರ ಹೊಮ್ಮುವ ಮೂಲಕ ಸಾಕಷ್ಟು ಶ್ರಮ ವಹಿಸಿ ಸಾಧನೆ ಮಾಡಿದ್ದಾರೆ. ಯೋಗ ಅಭ್ಯಾಸ ಮಾಡಲು ತಾಯಿ ಆಶಾ ಮಗಳಿಗೆ ಬೇಕಾದ ಸೂಕ್ತ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಬರಿ ಅಡುಗೆ ಮನೆಗೆ ಸೀಮಿತ ಎಂಬ ಗಾದೆಗೆ ತದ್ವಿರುದ್ಧವಾಗಿ ಮಗಳಿಗಾಗಿ ದುಡಿಯುತ್ತಿರುವ ಪೋಷಕರು ಇತರರಿಗೆ ಮಾದರಿಯಾಗಿದ್ದಾರೆ.
Published by:HR Ramesh
First published: