ನಕಲಿ ದಾಖಲೆ ಸೃಷ್ಟಿಸಿ 100 ಕೋಟಿ ಮೌಲ್ಯದ 138 ಎಕರೆ ಜಮೀನು ಮಾರಾಟ ಮಾಡಿದ್ದ ಜಾಲ ಪೊಲೀಸರ ಬಲೆಗೆ

ನಕಲಿ ಜಮೀನು ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿ  ಅಕ್ರಮ ಲಾಭ ಪಡೆಯುತ್ತಿದ್ದ ಜಾಲವನ್ನು ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು ಭೇದಿಸಿದ್ದಾರೆ.

ದೊಡ್ಡಬಳ್ಳಾಪುರ ಪೊಲೀಸರು.

ದೊಡ್ಡಬಳ್ಳಾಪುರ ಪೊಲೀಸರು.

  • Share this:
ದೊಡ್ಡಬಳ್ಳಾಪುರ;  ಸಬ್ ರಿಜಿಸ್ಟರ್  ಕಚೇರಿಯಲ್ಲಿ  ಜಮೀನುಗಳಿಗೆ ಸಂಬಂಧಿಸಿದಂತೆ  ನಕಲಿ ದಾಖಲೆ ಸೃಷ್ಟಿಸಿ 100 ಕೋಟಿ ಮೌಲ್ಯದ  138 ಎಕರೆ ಜಮೀನನ್ನು ಮಾರಾಟ ಮಾಡಿದ ಜಾಲವನ್ನು  ಭೇಧಿಸುವಲ್ಲಿ  ದೊಡ್ಡಬಳ್ಳಾಪುರ  ಉಪ ವಿಭಾಗದ  ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ  ಸಂಬಂಧಿಸಿದಂತೆ  3 ಆರೋಪಿಗಳನ್ನು ಬಂಧಿಸಿದ್ದಾರೆ.  ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿರುವ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ  ತಾಲೂಕಿನ ಜಮೀನುಗಳಿಗೆ ಬಂಗಾರದ ಬೆಲೆ ಇದೆ. ತಮ್ಮ ಜಮೀನುಗಳ ಬಗ್ಗೆ ನಿರ್ಲಕ್ಷತೆ ವಹಿಸಿರುವ ಮಾಲೀಕರನ್ನು ಖಾಲಿ ಸರ್ಕಾರಿ ಜಮೀನುಗಳನ್ನೆ ಟಾರ್ಗೆಟ್  ಮಾಡುವ ಭೂಗಳ್ಳರು ಅವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ  ಜಮೀನು ಮಾರಾಟ ಮಾಡಿ ಕೋಟಿ  ಕೋಟಿ ಹಣವನ್ನು ಎತ್ತುವಳಿ ಮಾಡಿದ್ದಾರೆ.

ನಕಲಿ ಜಮೀನು ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿ  ಅಕ್ರಮ ಲಾಭ ಪಡೆಯುತ್ತಿದ್ದ ಜಾಲವನ್ನು ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸನ್ನ ಕುಮಾರ್, ಬಸವರಾಜ್ ಮತ್ತು ಉಮೇಶ್ ಎಂಬವರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ಬೆಂಗಳೂರು  ಉತ್ತರ ತಾಲೂಕು  ಚಿಕ್ಕಜಾಲದ ಕಾಡಿಗಾನಹಳ್ಳಿ  ಗ್ರಾಮದ ಸರ್ವೇ  ನಂಬರ್ 11/1 ರ ಜಮೀನಿನ ತಗಾದೆ  ಕೋರ್ಟ್  ನಡೆಯುತ್ತಿರುತ್ತದೆ. ಜಮೀನಿನ ಮೂಲ ಮಾಲೀಕರಿಗೆ ಗೊತ್ತಿಲ್ಲದಂತೆ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಜಮೀನು ಹೊಡೆಯುವ ಸಂಚು ನಡೆಸಿದ್ದರು.

ಇದಕ್ಕೆ  ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಈ ಕೇಸ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಪ್ರಸನ್ನ ಕುಮಾರ್, ದೊಡ್ಡಬಳ್ಳಾಪುರ ಮತ್ತು  ದೇವನಹಳ್ಳಿ ತಾಲೂಕಿನ ನಕಲಿ ದಾಖಲೆ ಸೃಷ್ಟಿಸಿ 138  ಎಕರೆ ಜಮೀನು ಮಾರಾಟ  ಮಾಡಿ ಅಕ್ರಮವಾಗಿ 100 ಕೋಟಿಗೂ  ಹೆಚ್ಚು ಲಾಭ ಮಾಡಿರುವುದು ಬೆಳಕಿಗೆ ಬಂದಿರುತ್ತದೆ. ನಕಲಿ ದಾಖಲೆ  ಸೃಷ್ಟಿಸಿ ಜಮೀನು ಮಾರಾಟಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ  ಸಬ್ ರಿಜಿಸ್ಟರ್ ದೇವರಾಜ್ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ  10/06/2020 ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ : ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ 28 ರಾಜ್ಯಗಳಲ್ಲೂ ಜಾರಿಯಾಗಲಿದೆ; ನಿರ್ಮಲಾ ಸೀತಾರಾಮನ್

ಪ್ರಕರಣದ  ಬೆನ್ನತ್ತಿದ  ದೊಡ್ಡಬಳ್ಳಾಪುರ  ಪೊಲೀಸರಿಗೆ ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟದ ಬೃಹತ್ ಜಾಲವನ್ನು ಭೇದಿಸಿದ್ದಾರೆ. ಆರೋಪಿ ಪ್ರಸನ್ನ ಕುಮಾರ್  , ಬಸವರಾಜು ಮತ್ತು ಉಮೇಶ್ ಅರಳುಮಲ್ಲಿಗೆ, ದೊಡ್ಡ ಬಿದರಕಲ್ಲು, ಕಾಡಿಗಾನಹಳ್ಳಿ ಸೇರಿದಂತೆ  ಹಲವು ಗ್ರಾಮಗಳ ಜಮೀನುಗಳಿಗೆ ಸಂಬಂಧಿಸಿದಂತೆ  ನಕಲಿ  ಕ್ರಯಪತ್ರ,  ನಕಲಿ ದಾನ ಪತ್ರ, ನಕಲಿ ವಿಭಾಗ ಪತ್ರ, ನಕಲಿ ಹಕ್ಕು ನಿವೃತ್ತಿ ಪತ್ರ ಸೃಷ್ಟಿಸಿ  ಸಬ್ ರಿಜಿಸ್ಟರ್  ಕಚೇರಿಯಲ್ಲಿ  ಅಸಲಿ ದಾಖಲೆ ಪತ್ರಗಳನ್ನ ತೆಗೆದು ಅದೇ ಜಾಗದಲ್ಲಿ ನಕಲಿ ದಾಖಲೆ  ಪತ್ರಗಳನ್ನ ಇಡಲಾಗುತ್ತಿತ್ತು.

ಈ ದಾಖಲೆಗಳನ್ನ ಆರ್. ಟಿ.ಐ ಮೂಲಕ ಸಬ್ ರಿಜಿಸ್ಟರ್  ಕಚೇರಿಯಲ್ಲಿ ಪಡೆದು ಕೊಳ್ಳುತ್ತಿದ್ದರು. ಅನಂತರ ಮೂಲ ದಾಖಲಾಗಳು ಕಳೆದು ಹೋಗಿವೆ  ಎಂದು ದೂರು ನೀಡಿ ಎ.ಸಿ ಕಚೇರಿಯಿಂದ ಪಡೆದ ಕ್ರಯ ಪತ್ರಗಳಿಗೆ ಖಾತೆ ಮಾಡಿಸಿಕೊಂಡು ಜಮೀನು ಮಾರಾಟ  ಮಾಡಿ  ಕೋಟಿ ಕೋಟಿ  ಹಣ ಸಂಪಾದಿಸಿದ್ದರು.
Published by:MAshok Kumar
First published: