ಹೆಚ್ಚು ಮಳೆ ಬಿದ್ದರೂ ತುಂಬಿಲ್ಲ ಪ್ರಮುಖ ಕೆರೆಗಳು; ಬರದ ಆತಂಕದಲ್ಲಿ ದೊಡ್ಡಬಳ್ಳಾಪುರದ ಜನರು

ದೊಡ್ಡಬಳ್ಳಾಪುರದಲ್ಲಿ ಈ ಬಾರಿ ಉತ್ತಮವಾಗಿ ಮಳೆಯಾದರೂ ಮದುರೆ, ಸಾಸಲು, ಅರಳುಮಲ್ಲಿಗೆ, ಕಾಕೋಳು, ಹಾದ್ರೀಪುರ, ದೊಡ್ಡಬೆಳವಂಗಲ ಮೊದಲಾದ ಪ್ರಮುಖ ಕೆರೆಗಳು ಭರ್ತಿಯಾಗದೇ ಇರುವುದು ಜನರಿಗೆ ಆತಂಕ ಮೂಡಿಸಿದೆ.

news18-kannada
Updated:October 23, 2020, 7:20 AM IST
ಹೆಚ್ಚು ಮಳೆ ಬಿದ್ದರೂ ತುಂಬಿಲ್ಲ ಪ್ರಮುಖ ಕೆರೆಗಳು; ಬರದ ಆತಂಕದಲ್ಲಿ ದೊಡ್ಡಬಳ್ಳಾಪುರದ ಜನರು
ದೊಡ್ಡಬಳ್ಳಾಪುರದ ಕೃಷಿ ಭೂಮಿ
  • Share this:
ದೊಡ್ಡಬಳ್ಳಾಪುರ: ಮಳೆಗಾಲದಲ್ಲಿ ಈ ಬಾರಿ ಬೀರುತ್ತಿರುವ ಮಳೆ ನೋಡಿ ಎಲ್ಲಿ ನೋಡಿದರೂ ನೀರು ತುಂಬಿ ರೈತರ ಮುಖದಲ್ಲಿ ಸಂತೋಷ ಕಾಣಬೇಕಿತ್ತು.  ಈ ಭಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಸಹ ಪ್ರಮುಖ ಕೆರೆಗಳಲ್ಲಿ ನೀರಿಲ್ಲದೆ ಒಣಗುತ್ತಿವೆ. ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಕೆರೆಗಳಾದ ಮದುರೆ, ಸಾಸಲು, ಅರಳುಮಲ್ಲಿಗೆ, ಕಾಕೋಳು, ಹಾದ್ರಿಪುರ, ದೊಡ್ಡಬೆಳವಂಗಲ ಸೇರಿದಂತೆ ತಾಲ್ಲೂಕಿನ ಪ್ರಮುಖ  ಕೆರೆಗಳಲ್ಲಿ ನೀರಲ್ಲದೆ  ಕೆರೆಗಳು ಒಣಗುತ್ತಿವೆ.

ತಾಲೂಕಿನಲ್ಲಿ ಪ್ರತಿವರ್ಷ ವಾಡಿಕೆ ಸರಾಸರಿ 681ಮಿಮೀ ಮಳೆಯಾಗಬೇಕಿತ್ತು ಆದರೆ ಈ ವರ್ಷ 801 ಮಿಮೀ ಮಳೆಯಾಗಿದೆ. ಅದರಲ್ಲೂ ತಾಲೂಕಿನಲ್ಲಿ ಅತೀ ಹೆಚ್ಚು ಕಸಬಾ ಹೋಬಳಿಯಲ್ಲಿ 870 ಮಿಮೀ ಮಳೆಯಾಗಿದ್ದು ಉಳಿದಂತೆ, ದೊಡ್ಡಬೆಳವಂಗಲ 773ಮಿಮೀ, ತೂಬಗೆರೆ 809ಮಿಮೀ, ಮದುರೆ 813ಮಿಮೀ, ಸಾಸಲು 709 ಮಿಮೀ ಮಳೆಯಾಗಿದೆ.

ಕೃಷಿಗೆ ಅನುಕೂಲವಾದ ಮಳೆ: 

ತಾಲೂಕಿನಲ್ಲಿ ಪ್ರಮುಖವಾಗಿ ರಾಗಿ ಹಾಗೂ ಜೋಳ ಬೆಳೆಯನ್ನು ಬೆಳೆದಿದ್ದು ಬೆಳೆಗೆ ತಕ್ಕಂತೆ ಮಳೆಯಾಗಿದೆ. ಹೆಚ್ಚಾಗಿ ಮಳೆ ಬಿದ್ದು ನೀರು ಹರಿಯುವಂತೆ ಮಳೆಯಾಗಿಲ್ಲ. ಸಣ್ಣ ಪ್ರಮಾಣದ ಮಳೆಯಿಂದ ಸಣ್ಣಪುಟ್ಟ ಕೆರೆಗಳು ಮಾತ್ರ ತುಂಬಿದ್ದು ಬಿಟ್ಟರೆ ಪ್ರಮುಖ ಕೆರೆಗಳಿಗೆ ನೀರು ಬರುವಷ್ಟು ಮಳೆಯಾಗಿಲ್ಲ ಎಂಬುದು ರೈತರ ಅಭಿಪ್ರಾಯ.ಬರದ ಆತಂಕ,ಬೇಸಿಗೆಯಲ್ಲಿ ನೀರಿಲ್ಲದೆ ಬರ ಬರಬಹುದು ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈಗಲೇ ಕೆರೆಗಳಲ್ಲಿ ನೀರಿಲ್ಲ, ಮುಂದಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವುದು ಹೇಗೆ ಎಂಬ ಭಯದಲ್ಲಿ ರೈತರಿದ್ದಾರೆ.

ಇದನ್ನೂ ಓದಿ: ಭೀಮೆಯ ದಡದಲ್ಲಿ ದಿಢೀರ್ ಬಂದ್ ಆದ ಕಾಳಜಿ ಕೇಂದ್ರಗಳು ; ಮನೆಗಳತ್ತ ಮುಖ ಮಾಡಿದ ಸಂತ್ರಸ್ತರು

ಮೀನುಗಾರಿಕೆಗೆ ಹೊಡೆತ: 

ಪ್ರತಿವರ್ಷ ಮಳೆಯ ನೀರಿನಲ್ಲಿ ಕೆರೆಗಳು ನಂಬಿ ಮೀನುಗಾರಿಕೆ ಮಾಡುತ್ತಿದ್ದವರಿಗೆ ಈ ಭಾರಿ ನಷ್ಟವಾಗಿದೆ. ವ್ಯಾಪಾರಿಗಳು ಕೆಲ ಕೆರೆಗಳನ್ನು 2-3 ವರ್ಷ ಲೀಸ್​ಗೆ ತೆಗೆದುಕೊಂಡಿದ್ದು, ಇಂತಹವರಿಗೆ ತೀವ್ರ ನಷ್ಟವಾಗಿದೆ.ಅಂತರ್ಜಲ ಮಟ್ಟ ಕುಸಿತ, ಬೋರ್​ವೆಲ್ ನಂಬಿ ವ್ಯವಸಾಯ ಮಾಡುತ್ತಿದ್ದವರಿಗೆ ಈಗಾಗಲೇ ಬೋರ್​ವೆಲ್​ನಲ್ಲಿ ಬರುವ ನೀರಿನ ಪ್ರಮಾಣ ಕಡಿಮೆ‌ ಆಗಿದೆ. ಬೇಸಿಗೆಯಲ್ಲಿ ನೀರಿಲ್ಲದೆ ಬೋರ್​ವೆಲ್​ಗಳು ನಿಂತು ಹೋಗುವ ಸಂಭವ ಇದೆ. ಕೆರೆ ಕುಂಟೆಗಳಲ್ಲಿ ನೀರಿಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಕೆರೆಗಳಲ್ಲಿ ನೀರಿಲ್ಲದೆ ಒಣಗುತ್ತಿವೆ. ಮಳೆಗಾಲದಲ್ಲೇ ಈ ರೀತಿ ಆದರೆ ಬೇಸಿಗೆಯಲ್ಲಿ ಹಸು ಕರುಗಳನ್ನು ಹೇಗೆ ಸುಧಾರಿಸುವುದು ಎಂದು ತಿಳಿಯುತ್ತಿಲ್ಲ.

ಬೋರ್​ವೆಲ್​ಗಳಲ್ಲಿ ಬರುವ ನೀರಿನ ಪ್ರಮಾಣ ಕಡಿಮೆ ಆಗಿದೆ.‌ ಉತ್ತಮ ಬೆಳೆಗೆ ತಕ್ಕಂತೆ ಮಳೆಯಾಗಿದೆ‌ ಎಂದು ಸಾಸಲು ಗ್ರಾಮದ ರೈತ ಕೃಷ್ಣಪ್ಪ ಹೇಳುತ್ತಾರೆ. ಬರೀ ಕೃಷಿಗೆ ತಕ್ಕಂತೆ ಮಳೆಯಾಗಿದ್ದು, ಕೆರೆ ಕುಂಟೆಗಳಲ್ಲಿ ನೀರು ಶೇಖರಣೆ ಆಗುವಂತ ಮಳೆಯಾಗಿಲ್ಲ. ಪ್ರಮುಖ ಕೆರೆಗಳಲ್ಲಿ ನೀರು ಇಂಗಿಸುವ ಮೂಲಕ ಮುಂದಿನ ದಿನಗಳಲ್ಲಿ ನೀರು ಶೇಖರಣೆ ಆಗುವಂತೆ ಮಾಡಬೇಕಿದೆ. ನೀರು ಹರಿಯುವಂತೆ ಮಳೆಯಾಗದೆ ಇರುವುದು ನೀರು ಶೇಖರಣೆ ಆಗದೇ ಇರಲು ಪ್ರಮುಖ ಕಾರಣ ಎಂದು ಕೃಷಿ ಅಧಿಕಾರಿ ರೂಪ ಹೇಳಿದ್ದಾರೆ.

ವರದಿ: ನವೀನ್ ಕುಮಾರ್
Published by: Vijayasarthy SN
First published: October 23, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading