HOME » NEWS » District » DOCTOR NEGLIGENCE ANOTHER DOCTOR REMOVED DRESSING PAD FROM LADY PRIVATE PART IN VIJAYAPURA MVSV HK

ಹೆರಿಗೆ ವೇಳೆ ಡ್ರೆಸ್ಸಿಂಗ್ ಬಟ್ಟೆಯನ್ನು ಒಳಬಿಟ್ಟ ವೈದ್ಯ : 6 ತಿಂಗಳ ನಂತರ ಅದನ್ನು ಹೊರತೆಗೆದ ಮತ್ತೊಬ್ಬ ವೈದ್ಯ

ಹೆರಿಗೆ ಸಂದರ್ಭದಲ್ಲಿ ತಪ್ಪೆಸಗಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಣಂತಿ ಶಾಹೀನ್​​​ ಲಾಲ್ ಸಾಬ್ ಉತ್ನಾಳ ಮತ್ತು ಆಕೆಯ ಸಹೋದರ ಹುಸೇನ್ ಜಹಾಗಿರದಾರ್ ಆಗ್ರಹಿಸಿದ್ದಾರೆ.

news18-kannada
Updated:November 25, 2020, 4:41 PM IST
ಹೆರಿಗೆ ವೇಳೆ ಡ್ರೆಸ್ಸಿಂಗ್ ಬಟ್ಟೆಯನ್ನು ಒಳಬಿಟ್ಟ ವೈದ್ಯ : 6 ತಿಂಗಳ ನಂತರ ಅದನ್ನು ಹೊರತೆಗೆದ ಮತ್ತೊಬ್ಬ ವೈದ್ಯ
ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆ
  • Share this:
ವಿಜಯಪುರ(ನ.25): ಇದೊಂದು ವಿಚಿತ್ರ ಸುದ್ದಿ. ಹೀಗೂ ಆಗುತ್ತಾ ಎಂದು ಎಲ್ಲರೂ ಯೋಚಿಸುವಂಥ ಘಟನೆಗೆ ಸಾಕ್ಷಿಯಾಗಿದೆ ಐತಿಹಾಸಿಕ ಜಿಲ್ಲೆ. ಅದೂ ಕೂಡ ಈ ಮಹಿಳೆ ಆರು ತಿಂಗಳು ಮಹಿಳೆ ಅನುಭವಿಸಿದ ನೋವು ಎಂಥವರೂ ಹುಬ್ಬೇರಿಸುವಂತೆ ಮಾಡಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಬಾಣಂತಿ ಮಹಿಯೊಬ್ಬಳ ಗುಪ್ತಾಂಗದಲ್ಲಿ ರಕ್ತಸ್ರಾವ ತಡೆಯಲು ಇಟ್ಟಿದ್ದ ಡ್ರೆಸ್ಸಿಂಗ್ ಬಟ್ಟೆ ಆರು ತಿಂಗಳವರೆಗೆ ಅಲ್ಲಿಯೇ ಉಳಿದ ಆರೋಪ ಕೇಳಿ ಬಂದಿದೆ. ಕಳೆದ ಜೂನ್ ತಿಂಗಳಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯಲ್ಲಿ ಶಾಹಿಲ್ ಲಾಲ್ ಸಾಬ್ ಉತ್ನಾಳ ಎಂಬ ಮಹಿಳೆ ಹೆರಿಗೆಗಾಗಿ ದಾಖಲಾಗಿದ್ದರು. ಅದಾದ ಬಳಿಕ ಈ ಮಹಿಳೆ ನ. 23 ರಂದು ಇದೇ ಆಸ್ಪತ್ರೆಗೆ ಬಂದಿದ್ದಾಳೆ. ತನಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಈಕೆ ಬೇರೆ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಕೂಡ ಮಾಡಿಸಿದ್ದಾಳೆ. ಆದರೆ, ಆ ವೇಳೆ ಏನು ದೋಷ ಕಂಡು ಬಂದಿಲ್ಲ. ಆದರೆ, ನ. 23 ರಂದು ಆಸ್ಪತ್ರೆಗೆ ಬಂದಾಗ ಆಕೆಯ ಗುಪ್ತಾಂಗದಲ್ಲಿದ್ದ ಡ್ರೆಸಿಂಗ್ ಬಟ್ಟೆಯನ್ನು ವೈದ್ಯರು ಹೊರ ತೆಗೆದಿದ್ದಾರೆ. 

ಹೆರಿಗೆಯ ನಂತರ ತನಗೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಅಲ್ಲದೇ, ಆಗಾಗ ರಕ್ತಸ್ರಾವ ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ತೋರಿಸಿದಾಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. ಈಗ ಮತ್ತೆ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಈಗ ಮತ್ತೊಬ್ಬ ವೈದ್ಯ ಡಾ. ಮಕಾನದಾರ ಮಹಿಳೆಯ ಗುಪ್ತಾಂಗದಲ್ಲಿದ್ದ ಡ್ರೆಸ್ಸಿಂಗ್ ಬಟ್ಟೆಯನ್ನು ಹೊರ ತೊಗೆದಿದ್ದಾರೆ. ಹೆರಿಗೆ ಸಂದರ್ಭದಲ್ಲಿ ತಪ್ಪೆಸಗಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಣಂತಿ ಶಾಹೀನ್​​​ ಲಾಲ್ ಸಾಬ್ ಉತ್ನಾಳ ಮತ್ತು ಆಕೆಯ ಸಹೋದರ ಹುಸೇನ್ ಜಹಾಗಿರದಾರ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬಿಎಸ್​ವೈ ಸರ್ಕಾರದಲ್ಲಿ ಬೆಳಗಾವಿ ನಾಯಕರದ್ದೇ ಪಾರುಪತ್ಯ; ಜಿಲ್ಲೆಯ ಬಹುತೇಕ ನಾಯಕರಿಗೆ ಅಧಿಕಾರ ಗದ್ದುಗೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಯ ಮುಖ್ಯಸ್ಥ ಡಾ. ಅನಿಲ್ ಶೇಗುಣಸಿ, ಕಳೆದ ಜೂನ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ. ಆ ಸಂದರ್ಭದಲ್ಲಿ ಆಕೆಯ ಗುಪ್ತಾಂಗದಲ್ಲಿ ಡ್ರೆಸ್ಸಿಂಗ್ ಬಟ್ಟೆ ಇಡಲಾಗಿತ್ತು ಎಂದು ಶಾಹೀಲ್ ಲಾಲ್ ಸಾಬ್ ಉತ್ನಾಳ ಆರೋಪಿಸಿದ್ದಾರೆ.

ಆದರೆ, ಅವರ ಆರೋಪ ಸಂಶಯದಿಂದ ಕೂಡಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಮಹಿಳೆಗೆ ತಾಲೂಕಾ ಆಸ್ಪತ್ರೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಡಾ. ಅನಿಲ್ ಶೇಗುಣಸಿ ತಿಳಿಸಿದ್ದಾರೆ.
Published by: G Hareeshkumar
First published: November 25, 2020, 4:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories