HOME » NEWS » District » DKS CHARITABLE TRUST DISTRIBUTE VITAMIN C TABLET IN CHANNAPATTANA RH ATVR

ಚನ್ನಪಟ್ಟಣ ಜನತೆಗೆ ವಿಟಮಿನ್ ಸಿ ಮಾತ್ರೆ ವಿತರಣೆ, ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ

ಕ್ಷೇತ್ರದ ಪ್ರತಿ ಮನೆಗೂ ಮಾತ್ರೆಗಳನ್ನ ತಪ್ಪದೇ ಕೊಡಬೇಕೆಂದು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಸೂಚಿಸಿದ್ದಾರೆ. ಡಿಕೆ ಬ್ರದರ್ಸ್ ಕೈಗೊಂಡಿರುವ ಈ ಮಹತ್ವಾಕಾಂಕ್ಷೆ ಕಾರ್ಯಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ರೀತಿ ಇತರೆ ಜನಪ್ರತಿನಿಧಿಗಳು ಇಂತಹ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಲಿ.

news18-kannada
Updated:November 22, 2020, 4:48 PM IST
ಚನ್ನಪಟ್ಟಣ ಜನತೆಗೆ ವಿಟಮಿನ್ ಸಿ ಮಾತ್ರೆ ವಿತರಣೆ, ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್ ಕಾರ್ಯಕ್ಕೆ ಮೆಚ್ಚುಗೆ
ಚನ್ನಪಟ್ಟಣದಲ್ಲಿ ವಿಟಮಿನ್ ಸಿ ಮಾತ್ರೆಗಳನ್ನು ಹಂಚುತ್ತಿರುವ ಡಿಕೆಎಸ್ ಚಾರಿಟೇಬಲ್ ಟ್ರಸ್ಟ್.
  • Share this:
ಚನ್ನಪಟ್ಟಣ: ಸರ್ಕಾರ ಮಾಡುವ ಕೆಲವನ್ನು ಇಲ್ಲಿ ಡಿ.ಕೆ. ಬ್ರದರ್ಸ್ ನೇತೃತ್ವದ ಸಂಸ್ಥೆ ಮಾಡುತ್ತಿದೆ. ಕೊರೋನಾ ಭೀತಿಯಿಂದ ನರಳುತ್ತಿರುವ ಜನರಿಗೆ ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್  ಕಡೆಯಿಂದ ಉಚಿತವಾಗಿ ವಿಟಮಿನ್ 'ಸಿ' ಮಾತ್ರೆ ವಿತರಣೆ ಮಾಡಲಾಗುತ್ತಿದ್ದು ಜನರಿಗೆ ಇದು ವರದಾನವಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಪಕ್ಷದ ಕಾರ್ಯಕರ್ತರ ಮೂಲಕ ಉಚಿತವಾಗಿ ಮಾತ್ರೆಗಳನ್ನು ವಿತರಣೆ ಮಾಡಲಾಗುತ್ತಿದೆ.

ಹೌದು, ಇದು ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಕೈಗೊಂಡಿರುವ ಸಾಮಾಜಿಕ ಕಾರ್ಯ. ಕೊರೋನಾ ತಡೆಯಲು ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ವಿಟಮಿನ್ "ಸಿ" ಮಾತ್ರೆಗಳನ್ನ ವಿತರಣೆ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಕೊರೋನಾ ಲಾಕ್ ಡೌನ್ ವೇಳೆ ಬಡವರು, ಕೂಲಿ ಕಾರ್ಮಿಕರು, ಹಾಗೂ ಮನೆಯಿಂದ ಹೊರಬರಲು ಸಾಧ್ಯವಾಗದವರಿಗೆ ಅನುಕೂಲವಾಗಲೆಂದು ಆಹಾರ ಕಿಟ್ ವಿತರಣೆ ಮಾಡಿದ್ದರು.  ಇದಲ್ಲದೆ ಕೋಟ್ಯಾಂತರ ರೂ ಖರ್ಚು ಮಾಡಿ ತಮ್ಮ ಕ್ಷೇತ್ರದ ಜನತೆ ಹಸಿವಿನಿಂದ ಇರಬಾರದೆಂದು ಆಹಾರದ ಪ್ಯಾಕೇಟ್ ಗಳನ್ನ ವಿತರಣೆ ಮಾಡಿಕೊಂಡು ಮಾಡಿದ್ದರು.‌  ಇದೀಗ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರ ಸಹಾಯದೊಂದಿಗೆ ಕ್ಷೇತ್ರದ ಪ್ರತಿ  ಮನೆ ಮನೆಗೂ ಉಚಿತವಾಗಿ ವಿಟಮಿನ್ ಸಿ ಮಾತ್ರೆಗಳನ್ನ ವಿತರಣೆ ಮಾಡುತ್ತಿದ್ದಾರೆ.

ಇದನ್ನು ಓದಿ: ಅಣ್ಣಾ ನನ್ನ ಸಾಲ ಮನ್ನಾ ಆಯ್ತು ಅಂತಾರೆ, ಆದರೆ ಓಟ್ ಮಾತ್ರ ನನಗೆ ಕೊಡಲ್ಲ; ಎಚ್.ಡಿ.ಕುಮಾರಸ್ವಾಮಿ ಬೇಸರ

ಇನ್ನು ಈಗಾಗಲೇ ಚನ್ನಪಟ್ಟಣ ‌ಕ್ಷೇತ್ರದ 5 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಲಕ್ಷಾಂತರ ಕುಟುಂಬಗಳಿಗೆ ಉಚಿತವಾಗಿ ಈ ವಿಟಮಿನ್ "ಸಿ" ಮಾತ್ರೆಗಳನ್ನ ನೀಡಲಾಗಿದೆ. ಪ್ರತಿ ಡಬ್ಬಿ ಮಾತ್ರೆಗೆ 350 ರಿಂದ 400 ರೂ. ಖರ್ಚು ಬೀಳುತ್ತೆ. ಆದರೆ ಕ್ಷೇತ್ರದ ಜನರಿಗಾಗಿ ಡಿಕೆ ಬ್ರದರ್ಸ್ ಉಚಿತವಾಗಿ ಮಾತ್ರೆಗಳನ್ನ ನೀಡಿ ಜನರಿಗೆ ನೈತಿಕ ಸ್ಥೈರ್ಯ ತುಂಬುತ್ತಿದ್ದಾರೆ. ಇದರಿಂದಾಗಿ ಕ್ಷೇತ್ರದ ಜನ ಡಿಕೆ ಬ್ರದರ್ಸ್ ಗೆ ಧನ್ಯವಾದ ತಿಳಿಸಿದ್ದಾರೆ.

ಕ್ಷೇತ್ರದ ಪ್ರತಿ ಮನೆಗೂ ಮಾತ್ರೆಗಳನ್ನ ತಪ್ಪದೇ ಕೊಡಬೇಕೆಂದು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಸೂಚಿಸಿದ್ದಾರೆ. ಡಿಕೆ ಬ್ರದರ್ಸ್ ಕೈಗೊಂಡಿರುವ ಈ ಮಹತ್ವಾಕಾಂಕ್ಷೆ ಕಾರ್ಯಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ರೀತಿ ಇತರೆ ಜನಪ್ರತಿನಿಧಿಗಳು ಇಂತಹ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಲಿ.

ವರದಿ : ಎ.ಟಿ.ವೆಂಕಟೇಶ್
Published by: HR Ramesh
First published: November 22, 2020, 4:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories