ರಾಮನಗರ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಕೊಡುಗೆಯೂ ಇದೇ, ಜನರಿಗೂ ಗೊತ್ತಿದೆ: ಡಿ.ಕೆ. ಸುರೇಶ್

ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಡಿ.ಕೆ.ಶಿವಕುಮಾರ್ ರವರು ಕನಸು ಕಟ್ಟಿದ್ದರು. ಹಾಗಾಗಿಯೇ ಮೈತ್ರಿ ಸರ್ಕಾರದಲ್ಲಿ ಸತ್ತೆಗಾಲ ನೀರಾವರಿ ಯೋಜನೆಗೆ ಚಾಲನೆ ನೀಡಲಾಯಿತು ಎಂದು ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಸಂಸದ ಡಿ.ಕೆ. ಸುರೇಶ್.

ಸಂಸದ ಡಿ.ಕೆ. ಸುರೇಶ್.

  • Share this:
ರಾಮನಗರ: ರಾಮನಗರ ತಾಲೂಕಿನ ವಡ್ಡರಹಳ್ಳಿ ಗ್ರಾಮದ ಮಾರ್ಗವಾಗಿ ಹರಿಯುವ ಅರ್ಕಾವತಿ ನದಿಗೆ ಅಡ್ಡಲಾಗಿ ಸೇತುವೆ, ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಸಂಸದ ಡಿ.ಕೆ.ಸುರೇಶ್ ಗುದ್ದಲಿ ಪೂಜೆ ನೆರವೇರಿಸಿದರು. ಇನ್ನು ಇದೇ ಕಾಮಗಾರಿಗೆ ಕೆಲದಿನಗಳ ಹಿಂದೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಪೂಜೆ ಸಲ್ಲಿಸಿದ್ದರು. ಈಗ ಸಂಸದ ಡಿ.ಕೆ‌. ಸುರೇಶ್ ಎರಡನೇ ಬಾರಿ ಪೂಜೆ ಸಲ್ಲಿಸಿದ್ದು ಶಾಸಕಿ ಅನಿತಾಕುಮಾರಸ್ವಾಮಿಗೆ, ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್ ನಾನು ಸಂಸದನಾದ ಮೇಲೆ ಈ ಯೋಜನೆಯ ಬಗ್ಗೆ ಸಾಕಷ್ಟು ಕನಸು ಕಟ್ಟಿದ್ದೆ‌. ಕಳೆದ 5 ವರ್ಷದಿಂದ ಈ ಯೋಜನೆಯ ಬಗ್ಗೆ ಗಮನಹರಿಸಿದ್ದೆ. ಆದರೆ ಈ ಯೋಜನೆ ಅನುಷ್ಠಾನ ಮಾಡಬೇಕಾದರೆ ಸ್ಥಳೀಯ ಶಾಸಕಿ ಅನಿತಾಕುಮಾರಸ್ವಾಮಿ ನನ್ನ ಗಮನಕ್ಕೆ ತರಲಿಲ್ಲ.

ಆದರೆ ಅಧಿಕಾರಿಗಳು ತಿಳಿಸಬಹುದಿತ್ತು, ಅವರು ಸಹ ತಿಳಿಸಲಿಲ್ಲ. ಆದರೆ ಈ ಯೋಜನೆಗೆ ನಮ್ಮ ಪ್ರಾಮಾಣಿಕ ಪ್ರಯತ್ನವಿದೆ, ಹಾಗಾಗಿ ಇವತ್ತು ಪೂಜೆ ಸಲ್ಲಿಸಿದ್ದೇವೆಂದು ಡಿ.ಕೆ‌.ಸುರೇಶ್ ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಡಿ.ಕೆ.ಸುರೇಶ್ ಕೊರೋನಾ ಬಗ್ಗೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿಲ್ಲ.ಜಿಲ್ಲೆಯ ಕ್ವಾರಂಟೈನ್ ಸೆಂಟರ್ ನಲ್ಲಿ ವ್ಯವಸ್ಥೆ ಸರಿಯಿಲ್ಲ.

ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇನೆ. ಆದರೆ ಜಿಲ್ಲಾ ಮಂತ್ರಿಗಳು ಸುಳ್ಳು ಹೇಳುತ್ತಾರೆ ಅವರ ಬಗ್ಗೆ ನನಗೆ ವಿಶ್ವಾಸ ಇಲ್ಲಾ. ಹಾಗಾಗಿ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಈ ಸರ್ಕಾರದಲ್ಲಿ ಫುಡ್ ಇಲ್ಲಾ ಬೆಡ್ಡು ಇಲ್ಲಾ, ಫುಡ್ ಹಾಕಿದವರಿಗೆ ಬಿಲ್ ಕೊಟ್ಟಿಲ್ಲಾ.ಅವರಿಗೆ ಬಿಲ್ ಬೇಕಾದರೆ ಬಿಲ್ ಮಾಡಿಕೊಳ್ಳುತ್ತಾರೆ ಎಂದು ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ರಾಮನಗರದ ಅಭಿವೃದ್ಧಿ ಬಗ್ಗೆ ಕೆಲವರಿಗೆ ಕನಸು ಇರಲಿಲ್ಲ:

ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಡಿ.ಕೆ.ಶಿವಕುಮಾರ್ ರವರು ಕನಸು ಕಟ್ಟಿದ್ದರು. ಹಾಗಾಗಿಯೇ ಮೈತ್ರಿ ಸರ್ಕಾರದಲ್ಲಿ ಸತ್ತೆಗಾಲ ನೀರಾವರಿ ಯೋಜನೆಗೆ ಚಾಲನೆ ನೀಡಲಾಯಿತು. ಅವತ್ತು ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ರವರು ಸಹಕಾರ ಕೊಟ್ಟಿದ್ದಾರೆ. ಆದರೆ ಎಲ್ಲವನ್ನು ನಾನೇ ಮಾಡಿದ್ದು ಅಂದರೆ ತಪ್ಪಾಗುತ್ತದೆ ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ: MP Renukacharya; ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯಗೆ ಕೊರೋನಾ ಸೋಂಕು!

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಈ ರಾಜ್ಯದ ರೈತರಿಗೆ HVDS ಸ್ಕೀಮ್ ನಲ್ಲಿ ಟ್ರಾನ್ಸ್ಫರ್ಮರ್ ಗಳನ್ನ ನೀಡಲಾಯಿತು. ಆ ಯೋಜನೆಯಿಂದಾಗಿ ರಾಜ್ಯದ ರೈತರು ನೆಮ್ಮದಿಯಾಗಿದ್ದಾರೆ. ವಿದ್ಯುತ್ ಸಮಸ್ಯೆಯಿಲ್ಲದೆ ನೆಮ್ಮದಿಯಾಗಿ ವ್ಯವಸಾಯ ಮಾಡ್ತಿದ್ದಾರೆ. ಆದರೆ ಕೆಲವರು ರಾಮನಗರದಲ್ಲಿ ಎಲ್ಲಾ ಅಭಿವೃದ್ಧಿಗೂ ನಾವೇ ಕಾರಣ ಎಂದು ಬಿಂಬಿಸುತ್ತಿದ್ದಾರೆ.

ಆದರೆ, ಜಿಲ್ಲೆಯ ಜನರಿಗೆ ಯಾರ ಕೊಡುಗೆ ಏನೆಂದು ಗೊತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆ ಟಾಂಗ್ ಕೊಟ್ಟರು. ಜೆಡಿಎಸ್ ನ ಮಾಜಿ ಶಾಸಕ ಕೆ.ರಾಜು ಸಹ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಬೆನ್ನಲ್ಲೇ ಡಿ.ಕೆ.ಸುರೇಶ್ ಜೊತೆಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Published by:MAshok Kumar
First published: