ಬಿಜೆಪಿಯವರೇ ಹೇಳ್ತಿದ್ದಾರೆ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತ : ಕಾರಜೋಳಗೆ ಡಿಕೆಶಿ ತಿರುಗೇಟು

ಸಿಎಂ ಬಿ.ಎಸ್​.ಯಡಿಯೂರಪ್ಪ ಬದಲಾವಣೆ ವಿಚಾರ ಚರ್ಚೆ ನಡೆಯುತ್ತಲೇ ಇದೆ. ಯಡಿಯೂರಪ್ಪನವರನ್ನ ಏಳಿಸೋದು, ಬೀಳಿಸೋದು ಅವರ ಪಾಟಿ೯ ಅವರಿಗೆ ಬಿಟ್ಟಿದ್ದು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬಾಗಲಕೋಟೆ: ಜಿಲ್ಲಾ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​​ ಅವರು ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ವಿಚಾರ ಸಂಬಂಧ ಹೇಳಿಕೆ ನೀಡಿದ್ದ ಡಿಸಿಎಂ ಗೋವಿಂಡ ಕಾರಜೋಳಗೆ ತಿರುಗೇಟು ನೀಡಿದರು. ಕಾಂಗ್ರೆಸ್ ಸಿಎಂ ಸ್ಥಾನ ಆಕಾಂಕ್ಷಿ ವಿಚಾರ ಮದುವೆಗೆ ಮುಂಚೆಯೇ ಮಕ್ಕಳಂತೆ ಎಂದುದ್ದರು ಡಿಸಿಎಂ ಕಾರಜೋಳ. ಈ ಬಗ್ಗೆ ಬನಹಟ್ಟಿಯಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ಅವರಿಗೂ ಗೊತ್ತಿದೆಯಾ ಮಗು ಆಗುತ್ತೆ ಅಂತ. ಅಂದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಬರುತ್ತೆ ಅಂದಂಗಾಯ್ತು. ಹಾಗಾದ್ರೆ ಈ ಮೂಲಕ ನಾವು ಗೆಲ್ಲೋದು ನಿಶ್ಚಿತ ಅಂತ ಅವರೇ ಹೇಳಿದ್ದಾರೆ. ಬಹಳ ಸಂತೋಷ, ಡಿಸಿಎಂ ಕಾರಜೋಳ ಅವರಿಗೆ ಧನ್ಯವಾದ ಅಪಿ೯ಸುತ್ತೇನೆ ಎನ್ನುವ ಮೂಲಕ ತಿರುಗೇಟು ನೀಡಿದರು.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರ ಬಗ್ಗೆ ಒಂದು ವಾರ ಕಾಯಿರಿ ನೊಡೋಣ ಎಂದು ಹೇಳಿಕೆ ನೀಡುವ ಮೂಲಕ ಡಿಕೆಶಿ ಅಚ್ಚರಿ ಮೂಡಿಸಿದರು. ಒಂದು ವಾರದಲ್ಲಿ ಬಿಜೆಪಿಯವರು ಸಭೆ ಕರೆದಿದ್ದಾರೆ, ಏನಾಗುತ್ತೋ ಕಾದು ನೋಡಿ. ನಾನೇನು ಪ್ರಚಾರಕ್ಕೆ ಬಂದಿಲ್ಲ ಕಷ್ಟ ನೋವು ಕೇಳಲು ಬಂದಿದ್ದೇನೆ ಎಂದರು.

ಸಿಎಂ ಬಿ.ಎಸ್​.ಯಡಿಯೂರಪ್ಪ ಬದಲಾವಣೆ ವಿಚಾರ ಚರ್ಚೆ ನಡೆಯುತ್ತಲೇ ಇದೆ. ಯಡಿಯೂರಪ್ಪನವರನ್ನ ಏಳಿಸೋದು, ಬೀಳಿಸೋದು ಅವರ ಪಾಟಿ೯ ಅವರಿಗೆ ಬಿಟ್ಟಿದ್ದು. ಶಾಸಕರು ಹೇಳ್ತಿದ್ದಾರೆ, ಶಾಸಕರು ಹೇಳಿದ್ದು ಸರಿಯಿಲ್ಲ ಅಂತ ಅವರ ಪಾಟಿ೯ ಅವರು ಹೇಳ್ತಿಲ್ಲ. ಇತ್ತ ಅವರ ಹೈಕಮಾಂಡ್ ನವರು ಹೇಳ್ತಿಲ್ಲ. ಇದರಥ೯ ನಾವು ಏನಂತ ತಿಳಿದುಕೊಳ್ಳಬೇಕು. ಹೀಗಾಗಿ ಯಡಿಯೂರಪ್ಪ ಚೇರ್ ಉಳಿಯುತ್ತೋ ಬೀಳುತ್ತೋ ಅವರಿಗೆ ಗೊತ್ತು. ನನಗೆ ಗೊತ್ತಿಲ್ಲ ಎಂದರು. ಕ್ಯಾಬಿನೆಟ್ ಕರೆದಿಲ್ಲ, ಅಸೆಂಬ್ಲಿ ಕರೆದು ಚಚೆ೯ಯಾಗಿಲ್ಲ. ಇವರ ಉದ್ದೇಶವಾದ್ರೂ ಏನು. ಅವರು ಪಾಲಿ೯ಮೆಂಟ್ ಫಿಕ್ಸ್ ಮಾಡಿದ್ದಾರೆ, ನಾವು ಅಸೆಂಬ್ಲಿ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: