Ramesh Jarkiholi CD Case: ಬೆಳಗಾವಿಯಲ್ಲಿ ಡಿ.ಕೆ. ಶಿವಕುಮಾರ್ ಕಾರಿನ ಮೇಲೆ ರಮೇಶ್ ಬೆಂಬಲಿಗರಿಂದ ದಾಳಿ; ಸಿದ್ದರಾಮಯ್ಯ ಖಂಡನೆ

ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ ವಿರೋಧ ಪಕ್ಷದ ರಾಜ್ಯಾಧ್ಯಕ್ಷ ರಿಗೆ ರಕ್ಷಣೆ ಇಲ್ಲ ಎಂದರೆ, ಇನ್ನೂ ಸಾಮಾನ್ಯ ಜನರ ಪಾಡೇನು..? ರಾಜ್ಯ ಪೊಲೀಸರ ಮೇಲೆ ನಂಭಿಕೆ ಇಲ್ಲ. ಸಿಡಿ ಹಗರಣದ ಯುವತಿಯ ಹೇಳಿಕೆಯನ್ನು ಸಮರ್ಥಿಸುವಂತಿದೆ ಬೆಳಗಾವಿ ಪೊಲೀಸರ ಮೂಕನಾಟಕ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ

ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ.

ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ.

  • Share this:
    ಬೆಳಗಾವಿ (ಮಾರ್ಚ್​ 28); ಸೆಕ್ಸ್ ಸಿಡಿ ಪ್ರಕರಣದಿಂದಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿರುವ ಮಾಜಿ ಸಚಿವರಾದ ರಮೇಶ್​ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್​ ನಡುವಿನ ಜಿದ್ದಾಜಿದ್ದಿ ಸದ್ಯಕ್ಕಂತು ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೆಕ್ಸ್​ ಸಿಡಿಯನ್ನು ಬಿಡುಗಡೆ ಹಿಂದೆ ಡಿ.ಕೆ. ಶಿವಕುಮಾರ್ ಅವರ ಷಡ್ಯಂತ್ರ ಇದೆ ಎಂಬುದು ರಮೇಶ್​ ಜಾರಕಿಹೊಳಿ ಮತ್ತು ಬೆಂಬಲಿಗರ ಆರೋಪ. ಇದೇ ಕಾರಣಕ್ಕೆ ಶನಿವಾರ ಈ ಬಗ್ಗೆ ಮಾತನಾಡಿದ್ದ ರಮೇಶ್​ ಜಾರಕಿಹೊಳಿ ಡಿಕೆಶಿ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿದ್ದರು. ಈ ನಡುವೆ ಇಂದು ಬೆಳಗಾವಿಗೆ ಉಪ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಡಿಕೆಶಿ ಕಾರಿನ ಮೇಲೆ ರಮೇಶ್ ಬೆಂಬಲಿಗರು ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್​ ರಾಜ್ಯ ಘಟಕ ಬಲವಾಗಿ ಖಂಡಿಸಿದೆ.



    ಈ ಬಗ್ಗೆ ಟ್ವಿಟರ್​ನಲ್ಲಿ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, "ರಮೇಶ್ ಅಭಿಮಾನಿಗಳು ಎಂದು ಹೇಳಿಕೊಂಡು ಡಿ.ಕೆ. ಶಿವಕುಮಾರ್ ಕಾರಿನ ಮೇಲೆ ಕಲ್ಲೆಸೆದು ಪುಂಡಾಟಿಕೆ ನಡೆಸಿರುವುದು ಖಂಡನೀಯ. ಇದು ಬಿಜೆಪಿ ಸರ್ಕಾರದ ಪ್ರಾಯೋಜಿತ ಗೂಂಡಾಗಿರಿ. ರಾಜ್ಯದ ಜನರು ಇದನ್ನು ಗಮನಿಸುತ್ತಿದ್ದಾರೆ.. ಎಚ್ಚರ ಇರಲಿ" ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: Rahul Gandhi: ಬಹಳ ದಿನಗಳ ನಂತರ ತೈಲ ಬೆಲೆ 18 ಪೈಸೆ ಇಳಿಕೆ: ಇಷ್ಟೊಂದು ಹಣ ಉಳಿಸಿ ಏನು ಮಾಡುತ್ತೀರಿ ಎಂದು ರಾಹುಲ್ ವ್ಯಂಗ್ಯ

    ಇನ್ನೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ,"ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ ವಿರೋಧ ಪಕ್ಷದ ರಾಜ್ಯಾಧ್ಯಕ್ಷ ರಿಗೆ ರಕ್ಷಣೆ ಇಲ್ಲ ಎಂದರೆ, ಇನ್ನೂ ಸಾಮಾನ್ಯ ಜನರ ಪಾಡೇನು..? ರಾಜ್ಯ ಪೊಲೀಸರ ಮೇಲೆ ನಂಭಿಕೆ ಇಲ್ಲ. ಸಿಡಿ ಹಗರಣದ ಯುವತಿಯ ಹೇಳಿಕೆಯನ್ನು ಸಮರ್ಥಿಸುವಂತಿದೆ ಬೆಳಗಾವಿ ಪೊಲೀಸರ ಮೂಕನಾಟಕ" ಎಂದು ಆಕ್ರೋಶ ಹೊರಹಾಕಿದ್ದಾರೆ

    ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕಾರಿನ ಮೇಲಿನ ದಾಳಿಯನ್ನ ಖಂಡಿಸಿರುವ ರಾಜ್ಯ ಕಾಂಗ್ರೆಸ್, "ವಿವಿರೋಧ ಪಕ್ಷದ ಅಧ್ಯಕ್ಷರಾದವರನ್ನೇ ಈ ಮಟ್ಟಿಗೆ ಬೆದರಿಸಲು ಯತ್ನಿಸುವ ರಮೇಶ್ ಜಾರಕಿಹೊಳಿ, ಸಂತ್ರಸ್ತ ಯುವತಿಗೆ ಆಕೆಯ ಕುಟುಂಬಕ್ಕೆ ಇನ್ನೆಷ್ಟು ಬೆದರಿಕೆಯೊಡ್ಡಿರಬಹುದು. ದೂರುದಾರೆ ಯುವತಿಗೆ ಜೀವ ಬೆದರಿಕೆ ಇರುವುದು ಈ ಘಟನೆಗಳಿಂದ ಸ್ಪಷ್ಟವಾಗಿದೆ. ಇಷ್ಟಿದ್ದರೂ ಆರೋಪಿಯನ್ನು ಬಂಧಿಸದಿರುವುದು ಪೊಲೀಸ್ ವ್ಯವಸ್ಥೆಯ ನಿರ್ಲಜ್ಜತನಕ್ಕೆ ಸಾಕ್ಷಿ. ವಿರೋಧ ಪಕ್ಷದ ಅಧ್ಯಕ್ಷರಾದವರಿಗೇ ಸೂಕ್ತ ರಕ್ಷಣೆ ನೀಡಲಾಗದ ಈ ಸರ್ಕಾರ ಸಂತ್ರಸ್ತ ಹೆಣ್ಣುಮಗಳಿಗೆ ರಕ್ಷಣೆ ನೀಡುತ್ತದೆಯೇ ..?" ಎಂದು ಪ್ರಶ್ನೆ ಮಾಡಿದೆ.
    Published by:MAshok Kumar
    First published: