By Elections 2021: ಅದೇ ಇದ್ನಲ್ಲಾ... ಮಂಚದ ಜಾರಕಿಹೊಳಿ; ಹಾನಗಲ್ ಬಹಿರಂಗ ಸಭೆಯಲ್ಲಿ ಡಿಕೆಶಿ ಟೀಕೆ

ಮಸ್ಕಿ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಯವರು ಸಾಕಷ್ಟು ಹಣ ಹಂಚಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ನೇತೃತ್ವ ವಹಿಸಿಕೊಂಡಿದ್ದರು. ಜನ ಮಾತ್ರ ಬಿಜೆಪಿ ಹಣ ಪಡೆದು, ಕಾಂಗ್ರೆಸ್ ಗೆ ಮತ ಹಾಕಿದ್ದರು. ಇಲ್ಲಿಯೂ ಬಿಜೆಪಿಯಿಂದ ಹಣ ಪಡೆಯಿರಿ. ಚುನಾವಣೆಯಲ್ಲಿ ವೇಳೆ ಕಾಂಗ್ರೆಸ್ ಗೆ ಮತ ಹಾಕಿ. ಬಿಜೆಪಿ ನೋಟು, ಕಾಂಗ್ರೆಸ್ ಗೆ ವೋಟು ಎಂದು ಕರೆ ನೀಡಿದರು.

ಹಾನಗಲ್ ಉಪಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್,

ಹಾನಗಲ್ ಉಪಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್,

  • Share this:
ಹಾವೇರಿ: ರಮೇಶಾ.. ರಮೇಶ್ ಜಾರಕಿಹೋಳಿ (Ramesh Jarkiholi) ಅಂತ ಒಬ್ಬ ಇದ್ದಾ. ಅದೇ ಗೊತ್ತಲ್ಲ ಮಂಚದ ಜಾರಕಿಹೋಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (KPCC President DK Shivakumar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಹುಲ್ಲತ್ತಿ ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ರಮೇಶ್ ಜಾರಕಿಹೋಳಿ ಅಂತ ಒಬ್ಬ ಇದ್ದ. ಮಂಚದ ಜಾರಕಿಹೋಳಿ ಗೊತ್ತಲ್ಲ. ಸಿಪಿ ಯೋಗೇಶ್ವರ ಮನೆ ಮಾರಿ ಸರ್ಕಾರ ತಂದುಬಿಟ್ಟ ಅಂತ ಆತ ಹೇಳಿದ್ದ ಎಂದರು.

ಬೊಮ್ಮಾಯಿ ಅಣ್ಣ ಇಂದ್ರ - ಚಂದ್ರ ಅಂತ ರೋಷಾವೇಷದ ಭಾಷಣ ಮಾಡಿದ್ರು. ಈಗ ಸಚಿವರೆಲ್ಲ ಚೀಲದಲ್ಲಿ ದುಡ್ಡು ತಂದಿದ್ದಾರೆ. ಭ್ರಷ್ಟಾಚಾರ ಮಾಡಿದ ಹಣ ಹಂಚಲು ತಂದಿದ್ದಾರೆ. ಶಿವರಾಜ್ ಸಜ್ಜನ್ - ಖಾಲಿ ಚೀಲ  ಹೊಡ್ಕೊಂಡು ಹೋಗಿದ್ನಲ್ಲಾ.? ಅದೇ ಚೀಲದಲ್ಲಿ ದುಡ್ಡು ತುಂಬಿಕೊಂಡ ತಂದಿದ್ದಾರೆ. ಎರಡೆರಡು.. ಮೂರು ಮೂರು ಸಾವಿರ ನೀಡೋಕೆ ರೆಡಿ ಮಾಡಿಕೊಂಡಿದ್ದಾರೆ. ಯಾರೂ ಬಿಡಬೇಡಿ, ಹಣಾನ ತೆಗೆದುಕೊಳ್ಳಿ. ಬಿಜೆಪಿ ಕೊಡುವ ದುಡ್ಡು ಬೇಡ ಅನ್ನಬೇಡಿ. ಬಿಜೆಪಿ ನೋಟು ಕಾಂಗ್ರೆಸ್ ಗೆ ಓಟು. ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಘೋಷಿಸಿದ ಪರಿಹಾರ ರೈತರಿಗೆ ತಲುಪಿಲ್ಲ. ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮ ಏನಾದರೂ ಸಹಾಯ ಮಾಡಿದ್ರಾ..? ಏನೂ ಮಾಡದ ಬಿಜೆಪಿಗೆ ಮತ ಕೇಳಲು ಕಿಮ್ಮತ್ತು ಬೇಕಲ್ವಾ..? ಎಂದು ಹಾನಗಲ್ ನ ಹುಲ್ಲತ್ತಿಯಲ್ಲಿ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.

ಹೈವೇ ಯಲ್ಲಿ ದುಡ್ಡು ಹಂಚುತ್ತಿದ್ದಾರೆ

ಹಾನಗಲ್ ಕ್ಷೇತ್ರದಲ್ಲಿ ಬಹಳಷ್ಟು ಸಚಿವರು ಬಂದಿದ್ದಾರೆ. ಗೋಣಿ ಚೀಲದಲ್ಲಿ ಹಣ ತುಂಬಿಕೊಂಡು ಬಂದಿದ್ದಾರೆ. ಹೈವೆಯಲ್ಲಿ ನಿಂತು ದುಡ್ಡು ಹಂಚ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. ಹಾನಗಲ್ ಕ್ಷೇತ್ರದ ಹೊಂಕಣ ಗ್ರಾಮದಲ್ಲಿ ಮಾತನಾಡಿದ ಅವರು, ಒಂದು ಓಟಿಗೆ ಎರಡು ಸಾವಿರ ನೋಟು ಹಂಚ್ತಿದ್ದಾರೆ. ನಿನ್ನೆ ಇಲ್ಲೆಲ್ಲೋ ಹಂಚ್ತಿದ್ದರಂತೆ. ಯಾರೂ ಹಣವನ್ನು ತಿರಸ್ಕರಿಸಬೇಡಿ. ಹಣ ತಿರಸ್ಕರಿಸಿದರೆ ಅನುಮಾನ ಬರುತ್ತೆ. ಮಸ್ಕಿ ಉಪ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಯವರು ಸಾಕಷ್ಟು ಹಣ ಹಂಚಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ನೇತೃತ್ವ ವಹಿಸಿಕೊಂಡಿದ್ದರು. ಜನ ಮಾತ್ರ ಬಿಜೆಪಿ ಹಣ ಪಡೆದು, ಕಾಂಗ್ರೆಸ್ ಗೆ ಮತ ಹಾಕಿದ್ದರು. ಇಲ್ಲಿಯೂ ಬಿಜೆಪಿಯಿಂದ ಹಣ ಪಡೆಯಿರಿ. ಚುನಾವಣೆಯಲ್ಲಿ ವೇಳೆ ಕಾಂಗ್ರೆಸ್ ಗೆ ಮತ ಹಾಕಿ. ಬಿಜೆಪಿ ನೋಟು, ಕಾಂಗ್ರೆಸ್ ಗೆ ವೋಟು ಎಂದು ಕರೆ ನೀಡಿದರು.

ಬೆಡ್ ರೆಡಿ ಮಾಡ್ಲಿ.. ಅಡ್ಮಿಟ್ ಆಗ್ತೀನಿ ಎಂದ ಡಿಕೆಶಿ

ಬಿಜೆಪಿಯವರು ಹುಚ್ಚಾಸ್ಪತ್ರೆಯಲ್ಲಿ ಬೆಡ್ ರೆಡಿ ಮಾಡಲಿ, ನಾನು ಅಡ್ಮಿಟ್ ಆಗೋಕೆ ರೆಡಿ ಇದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ಕ್ಷೇತ್ರದ ಹೊಂಕಣದಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು. ಡಿ.ಕೆ.ಶಿ ಅವರನ್ನ ಹುಚ್ಚು ಆಸ್ಪತ್ರೆಗೆ ಸೇರಲಿ. ಉಚಿತ ಚಿಕಿತ್ಸೆ ಕೊಡಿಸುತ್ತೇವೆ ಎಂಬ ರಾಜಗೌಡ ಹೇಳಿಕೆಗೆ ಕಿಡಿಕಾರಿದರು. ರಾಜುಗೌಡ ಬೆಡ್ ರಡಿ ಮಾಡಿಸಲಿ - ನಾನು ಅಡ್ಮಿಟ್ ಆಗುವೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನು ಓದಿ: ನನ್ನ ವಿಷಯಕ್ಕೆ ಬಂದರೆ ನಿಮ್ಮ ಬಂಡವಾಳ ಬಯಲು: ಬಿಜೆಪಿ ನಾಯಕರಿಗೆ HDK ಖಡಕ್ ಎಚ್ಚರಿಕೆ

ಬಿಜೆಪಿ ಪ್ರಚಾರವನ್ನು ಅಡ್ಡದಾರಿಗೆ ತೆಗೆದು ಹೋಗಿದೆ. ಸಿಎಂ ಅವರು ಜಾತಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ನಾವು ನೀತಿ ಮೇಲೆ ರಾಜಕೀಯ ಮಾಡುತ್ತಿದ್ದೇವೆ. ವೈಯಕ್ತಿಕ ನಿಂದನೆ ಮೇಲೆ ನನಗೆ ವಿಶ್ವಾಸವಿಲ್ಲ. ನನಗೆ ಸಿಎಂ ಬಗ್ಗೆ ಗೌರವ ಇದೆ. ಕುಮಾರಸ್ವಾಮಿ ಸಿಎಂ ಆಗಿದ್ದವರು. ಅವರ ಬಗ್ಗೆಯೂ ಗೌರವ ಇದೆ. ಎಲ್ಲ ನಾಯಕರ ಬಗ್ಗೆಯೂ ಗೌರವ ಇದೆ‌. ಚುನಾವಣೆ ಸಂದರ್ಭದಲ್ಲಿ ವೈಯಕ್ತಿಕ ವಿಚಾರ ಏಕೆ ಮಾತನಾಡೋದು‌‌? ನನಗೆ ಗೊತ್ತಿಲ್ಲದೆ ಕೆಲವರು ಟ್ವೀಟ್ ಮಾಡಿದ್ದರು. ಪ್ರಧಾನಮಂತ್ರಿ ಬಗ್ಗೆ ತಪ್ಪಾಗಿ ಟ್ವೀಟ್ ಮಾಡಿದ್ದನ್ನ 10 ನಿಮಿಷದಲ್ಲಿ ತೆಗೆದು ಹಾಕಿ, ಕ್ಷೆಮೆ ಕೇಳಿದ್ದೇವೆ. ಸದನದಲ್ಲಿ ಯುದ್ದ ಮಾಡೋ ಸಂದರ್ಭ ಬರುತ್ತೆ. ಸಾರ್ವತ್ರಿಕ ಚುನಾವಣೆಯಲ್ಲಿ ಟೀಕೆ ಮಾಡೋಣ. ಉಪ ಚುನಾವಣೆ ಸಿದ್ದಾಂತದ ಮೇಲೆ ಮಾಡೋಣ. ನನ ಬಗ್ಗೆನೇ, ಹೊಸ ಹೊಸ ಗ್ರೂಪ್  ಕ್ರಿಯೆಟ್ ಮಾಡಿ ಟ್ವೀಟ್ ಮಾಡುತ್ತಿದ್ದರು. ನನ್ ಪೋಟೋ ಬಳಸಿ ಕಾಂಗ್ರೆಸ್ ವಿರುದ್ಧನೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ವರದಿ - ಶಿವರಾಮ ಅಸುಂಡಿ
Published by:HR Ramesh
First published: