HOME » NEWS » District » DK SHIVAKUMAR REALLY NEED TO WORK IN CHANNAPATNA TO MAKE CONGRESS STRONG RMD

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು?; ಡಿ.ಕೆ.ಬ್ರದರ್ಸ್ ಸೈಲೆಂಟ್, ಸಿಪಿವೈ ಫ್ಯಾನ್ಸ್ ವೈಲೆಂಟ್

DK Shivakumar: ಡಿ.ಕೆ.ಶಿವಕುಮಾರ್ ಈಗ ರಾಜ್ಯ KPCC ಅಧ್ಯಕ್ಷರಾಗಿದ್ದಾರೆ. ಜೊತೆಗೆ ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗ್ತಿದ್ದಾರೆ. ಹಾಗಾಗಿ ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಜಿಲ್ಲೆ ರಾಮನಗರದಿಂದ ಹೆಚ್ಚಿನ ಸೀಟ್ ಗೆಲ್ಲಬೇಕಾದ ಅವಶ್ಯಕತೆ, ಅನಿವಾರ್ಯತೆ ಇದೆ.

news18-kannada
Updated:July 30, 2020, 9:40 AM IST
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು?; ಡಿ.ಕೆ.ಬ್ರದರ್ಸ್ ಸೈಲೆಂಟ್, ಸಿಪಿವೈ ಫ್ಯಾನ್ಸ್ ವೈಲೆಂಟ್
ಡಿಕೆ ಸಹೋದರರು
  • Share this:
ರಾಮನಗರ(ಚನ್ನಪಟ್ಟಣ) (ಜು.30): ಚನ್ನಪಟ್ಟಣ ರಾಜಕೀಯದಲ್ಲಿ ಈಗ ಕುದುರೆ ಎಂಬ ಪದ ಬಹಳ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ. ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ MLC ಆಗುತ್ತಿದ್ದಂತೆ ಬೊಂಬೆನಾಡಿನಲ್ಲು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಿಟೈರ್ಡ್ ಕುದುರೆ ಎಂದಿದ್ದ ಯೋಗೇಶ್ವರ್ ಗೆ ಜೆಡಿಎಸ್ - ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿ ನಡೆಸಿ ನಮ್ಮ ನಾಯಕರು ಸದಾ ಗೆಲ್ಲೋ ಕುದುರೆ, ಯೋಗೇಶ್ವರ್ ಈಗ ಸತ್ತ ಕುದುರೆ ಎಂದಿದ್ದರು. ಮತ್ತೆ ಇದಕ್ಕೆ ಪ್ರತಿಯಾಗಿ ಯೋಗೇಶ್ವರ್ ಬೆಂಬಲಿಗರು ಸುದ್ದಿಗೋಷ್ಟಿ ನಡೆಸಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕುದುರೆಯೇ ಇಲ್ಲ, ಜೆಡಿಎಸ್ ಕುದುರೆ ಕಾಣುತ್ತಿಲ್ಲ ಎಂದು ಟಾಂಗ್ ಕೊಟ್ಟರು. ಈ ಹೇಳಿಕೆ ವಿಚಾರವಾಗಿ ಈಗ ಕ್ಷೇತ್ರದ ರಾಜಕೀಯ ವಾತವರಣ  ಬೂದಿಮುಚ್ಚಿದ ಕೆಂಡದಂತಿದೆ.

ಚನ್ನಪಟ್ಟಣಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರಿದ್ದಾರೆ, ಸಿಪಿವೈ ಬೆಂಬಲಿಗರ ಪ್ರಶ್ನೆ:


ಯೋಗೇಶ್ವರ್ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಪ್ರತಿ ಬಾರಿಯೂ ಸಹ ಬೇರೆ ಊರಿನ ಕುದುರೆಗಳು ಚುನಾವಣೆಗೆ ಬರ್ತಾವೆ, ಮೇವುಮೇಯ್ದು ಮತ್ತೆ ಅವರೂರಿಗೆ ಹೋಗ್ತಾವೆ. ಈ ಊರಿನ ಸ್ವಂತ ಕುದುರೆ ಯಾವುದು ಎನ್ನುವ ಅರ್ಥದಲ್ಲಿ ಕೈ ನಾಯಕರಿಗೆ ಕುಟುಕಿದ್ದರು. ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಬಿಟ್ಟ ನಂತರ ಒಬ್ಬ ಸಮರ್ಥ ಅಭ್ಯರ್ಥಿ ಕ್ಷೇತ್ರಕ್ಕೆ ಬಂದಿಲ್ಲ. ಆದರೆ ಸ್ಥಳೀಯ ಕೈ ಮುಖಂಡರು ಮಾತ್ರ ನಮ್ಮ ನಾಯಕರನ್ನ ಸತ್ತ ಕುದುರೆ ಎನ್ನುತ್ತಾರೆ. ಈಗ ಅವರೇ ಯೋಚಿಸಬೇಕು, ಸತ್ತ ಕುದುರೆ ಯಾರೆಂದು ಎನ್ನುವ ಮೂಲಕ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಮರ್ಥ ಅಭ್ಯರ್ಥಿಯನ್ನ ಕಣಕ್ಕಿಳಿಸಲಿ ಎಂದು ಡಿ.ಕೆ.ಶಿವಕುಮಾರ್ ಗೆ ಸಿಪಿವೈ ಬೆಂಬಲಿಗರು ಸವಾಲೆಸೆಸಿದ್ದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸಂಘಟನೆಯಾಗದಿದ್ದರೆ ಭವಿಷ್ಯ ಕಷ್ಟ-ನಷ್ಟ:

ಡಿ.ಕೆ.ಶಿವಕುಮಾರ್ ಈಗ ರಾಜ್ಯ KPCC ಅಧ್ಯಕ್ಷರಾಗಿದ್ದಾರೆ. ಜೊತೆಗೆ ಭವಿಷ್ಯದ ಮುಖ್ಯಮಂತ್ರಿ ಎಂದೇ ಬಿಂಬಿತವಾಗ್ತಿದ್ದಾರೆ. ಹಾಗಾಗಿ ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಂತ ಜಿಲ್ಲೆ ರಾಮನಗರದಿಂದ ಹೆಚ್ಚಿನ ಸೀಟ್ ಗೆಲ್ಲಬೇಕಾದ ಅವಶ್ಯಕತೆ, ಅನಿವಾರ್ಯತೆ ಇದೆ. ಹಾಗಾಗಿ ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬಬೇಕು. ಜೊತೆಗೆ ಸಮರ್ಥ ಅಭ್ಯರ್ಥಿಯನ್ನ ಗುರುತಿಸಿ ಈ ಕ್ಷಣದಿಂದಲೇ ಪಕ್ಷದ ಜವಾಬ್ದಾರಿ ಕೊಡಬೇಕಿದೆ.

ಇಲ್ಲದಿದ್ದರೆ KPCC ಅಧ್ಯಕ್ಷರ ತವರಲ್ಲಿಯೇ ಕಾಂಗ್ರೆಸ್ ಗೆ ಬಲವಿಲ್ಲ ಎಂಬ ಸಂದೇಶ ರವಾನೆಯಾದರೆ ಭವಿಷ್ಯದಲ್ಲಿ ಡಿ.ಕೆ.ಶಿವಕುಮಾರ್ ಕನಸಿಗೆ ಭಂಗವಾಗಬಹುದು ಎಂಬುದು ಸ್ವತಃ ಕಾಂಗ್ರೆಸ್ ನ ಹಿರಿಯ ಮುಖಂಡರೇ ಅಲ್ಲಲ್ಲಿ ಮಾತನಾಡಿಕೊಳ್ತಿದ್ದಾರೆ.ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಮತದಾರರಿದ್ದಾರೆ, ಆದರೆ ಸಮರ್ಥ ನಾಯಕನಿಲ್ಲ:

ಹೌದು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತದಾರರಿದ್ದಾರೆನ್ನುವ ಮಾತಿಗೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿರುವ ಮತಗಳೇ ಜೀವಂತ ಸಾಕ್ಷಿ. ಯೋಗೇಶ್ವರ್ - ಕುಮಾರಸ್ವಾಮಿ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಹೆಚ್.ಎಂ.ರೇವಣ್ಣ 30 ಸಾವಿರಕ್ಕೂ ಹೆಚ್ಚು ಮತಪಡೆದಿದ್ದರು. ಇದರ ಜೊತೆಗೆ ಜಿಲ್ಲೆಯ ರಾಮನಗರದಲ್ಲಿ ಇಕ್ಬಾಲ್ ಹುಸೇನ್, ಮಾಗಡಿಯಲ್ಲಿ ಹೆಚ್.ಸಿ.ಬಾಲಕೃಷ್ಣ, ಕನಕಪುರದಲ್ಲಿ ಡಿ.ಕೆ.ಸಹೋದರರು ಇದ್ದಾರೆ.

ಆದರೆ ಚನ್ನಪಟ್ಟಣದಲ್ಲಿ ಯಾರು ಎಂಬುದನ್ನ KPCC ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಆದಷ್ಟು ಬೇಗ ನಿರ್ಧಾರ ಮಾಡಿ ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಬಾರಿಯೂ ವಲಸೆ ಬರುವವರನ್ನ ನಂಬಿಕೊಂಡು ಚುನಾವಣೆಯ ಕೊನೆ ಸಂದರ್ಭದಲ್ಲಿ ಯಾರೋ ಒಬ್ಬರನ್ನ ಕಣಕ್ಕಿಳಿಸಿದರೆ ಮುಂದಿನ ದಿನಗಳಲ್ಲಿ 30 ಸಾವಿರ ಗಡಿದಾಟಿರುವ ಮತಗಳು 3 ಸಾವಿರಕ್ಕೆ ಇಳಿದರು ಯಾವುದೇ ಆಶ್ಚರ್ಯವಿಲ್ಲ ಎಂಬುದು ವಾಸ್ತವ.
Published by: Rajesh Duggumane
First published: July 30, 2020, 8:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading