ಬೆಲೆ ಏರಿಕೆ ಮರೆಮಾಚಲು ಸಿಎಂ ಬದಲಾವಣೆ ಸಿನಿಮಾ ತೋರಿಸ್ತಿದ್ದಾರೆ: ಡಿಕೆ ಶಿವಕುಮಾರ್ ವಾಗ್ದಾಳಿ

ಸಿಎಂ ಬಿಎಸ್ ಯಡಿಯೂರಪ್ಪ, ಪ್ರಧಾನಿ ಮೋದಿಗೆ ನನ್ನ ಪ್ರಶ್ನೆ. ತೈಲ ಬೆಲೆ ಏರಿಸಿದಂತೆ ರೈತರಿಗೆ ಬೆಂಬಲ ಬೆಲೆ  ಏರಿಸಿದ್ದೀರಾ ಎಂದು ಡಿಕೆ ಶಿವಕುಮಾರ್​ ಪ್ರಶ್ನಿಸಿದರು.

ಡಿಕೆ ಶಿವಕುಮಾರ್​

ಡಿಕೆ ಶಿವಕುಮಾರ್​

  • Share this:
ಚಿತ್ರದುರ್ಗ: ಪೆಟ್ರೋಲ್​, ಡಿಸೇಲ್​​ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್​ ಕೇಂದ್ರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಹಿರಿಯೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಹೆಣ ಸುಡೋಕೂ ಸರದಿ, ಆಸ್ಪತ್ರೆ ಸೇರೋಕು ಸರದಿ ನಿಲ್ಲುವಂತಾಯ್ತು. ಔಷಧಿಗೂ ಸರದಿ, ಲಸಿಕೆ ಪಡೆಯಲೂ ಸರದಿ ಸಾಲು. ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡಿದೆ. ಹೆಣದಲ್ಲೂ ಹಣ, ಔಷಧಿಯಲ್ಲೂ ಹಣ ಲೂಟಿ ಮಾಡಿದೆ ಎಂದು ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇಶಕ್ಕೆ ಕೊರೊನಾ ಖಾಯಿಲೆ ತಂದದ್ದು ಯಾರು? ನಾವು ತಂದಿದ್ದೇವಾ? ಜನ ಬಿಜೆಪಿ ಸರ್ಕಾರಕ್ಕೆ ಉಗಿಯುತ್ತಿದ್ದಾರೆ. ಸಿಎಂ ಬದಲಾವಣೆ ವಿಚಾರದಲ್ಲಿ ಅವರು ರಾಜ್ಯದ ಜನಕ್ಕೆ ಸಿನಿಮಾ ತೋರಿಸುತ್ತಿದ್ದಾರೆ ಎಂದು ಟೀಕಿಸಿದರು. ಜೂನ್ 15 ರಿಂದ ಐದು ದಿನ ಐದು ಸಾವಿರ ಕಡೆ ಹೋರಾಟ ಮಾಡಲಿದ್ದೇವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಜನಪರ ಹೋರಾಟ ಇದಾಗಲಿದೆ ಎಂದರು.

ಸಿಎಂ ಬಿಎಸ್ ಯಡಿಯೂರಪ್ಪ, ಪ್ರಧಾನಿ ಮೋದಿಗೆ ನನ್ನ ಪ್ರಶ್ನೆ. ತೈಲ ಬೆಲೆ ಏರಿಸಿದಂತೆ ರೈತರಿಗೆ ಬೆಂಬಲ ಬೆಲೆ  ಏರಿಸಿದ್ದೀರಾ? ರೈತರು ಬೆಳೆದ ಬೆಳೆಯ ಬೆಲೆ ಏರಿಸಿದ್ದೀರಾ? ಸರ್ಕಾರಿ, ಖಾಸಗಿ, ದಿನಗೂಲಿ ನೌಕರರ ಸಂಬಳ ಏರಿಸಿದ್ದೀರಾ? ನರೇಗಾ ಕೂಲಿ ಗಣವೂ ಏರಿಸಿಲ್ಲ, ನಿಮ್ಮ ಜೇಬು ಮಾತ್ರ ತುಂಬಬೇಕು ಎಂದು ಟಾಂಗ್​ ಕೊಟ್ಟರು  ಜನಸಾಮಾನ್ಯರು ಸೇರಿ ಈ ಸರ್ಕಾರ ಕಿತ್ತೆಸೆಯಬೇಕು. ನಾಳೆ ಗ್ರಾಮ ಮಟ್ಟದಲ್ಲಿ ನಡೆಯುವ ಹೋರಾಟದಲ್ಲಿ ಮುಖಂಡರು ಭಾಗಿಯಾಗುತ್ತಾರೆ. ಕಡ್ಡಾಯವಾಗಿ ಕಾಂಗ್ರೆಸ್ ಮುಖಂಡರು ಜನರಿಗೆ ಸ್ಪಂದಿಸಬೇಕು ಡಿಕೆಶಿ ಮನವಿ ಮಾಡಿದರು.

ಇದನ್ನೂ ಓದಿ: ಯಡಿಯೂರಪ್ಪ ವಿರೋಧಿ ಬಣ ಮತ್ತೆ ಆ್ಯಕ್ಟೀವ್​​? ಶಾಸದ ಅರವಿಂದ್ ಬೆಲ್ಲದ್ ದೆಹಲಿ ಭೇಟಿ ಮರ್ಮವೇನು?

ಇನ್ನು ರಾಜ್ಯದ ಹಲವು ಕಡೆ ಕಾಂಗ್ರೆಸ್ಸಿಗರು ಪೆಟ್ರೋಲ್​​, ಡಿಸೇಲ್​​, ವಿದ್ಯುತ್​ ದರ ಏರಿಕೆ ಖಂಡಿಸಿ ಪ್ರತಿಭಟನೆ  ನಡೆಸುತ್ತಿದ್ದಾರೆ. ಕೋಲಾರದ ಕೆಜಿಎಫ್​​ ನಗರದಲ್ಲಿ  ಕಾಂಗ್ರೆಸ್ ಶಾಸಕಿ ರೂಪಾಶಶಿಧರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಗಾಂಧಿ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಬೈಕ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಮತ್ತು ಪ್ರಧಾನಿ ಮೋದಿ ವಿರುದ್ದ ಘೋಷಣೆ ಕೂಗಿದರು. ನಗರಸಭೆ ಅಧ್ಯಕ್ಷ ವಲ್ಲಾಳ ಮುನಿಸ್ವಾಮಿ ಕಾಂಗ್ರೇಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: