HOME » NEWS » District » DK SHIVAKUMAR IS NOT MY FRIEND HE IS A PRESIDENT OF CONGRESS THATS IT SAYS MINISTER RAMESH JARAKIHOLI HK

ಡಿಕೆ ಶಿವಕುಮಾರ್ ನನ್ನ ಮಿತ್ರನಲ್ಲ, ಅವರೊಬ್ಬ ಒಂದು ಪಕ್ಷದ ಅಧ್ಯಕ್ಷರಷ್ಟೆ ; ಸಚಿವ ರಮೇಶ್ ಜಾರಕಿಹೊಳಿ

ಮಾಜಿ ಸಚಿವ ಹೆಚ್.ವಿಶ್ವನಾಥ್ ಗೆ ಎಂ.ಎಲ್.ಸಿ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತದೆ. ನಾನು ಡಿಸಿಎಂ ಆಕಾಂಕ್ಷಿಯಲ್ಲ. ಆದರೆ, ಮಾಧ್ಯಮಗಳು ಆ ರೀತಿ ಸೃಷ್ಟಿ ಮಾಡಿವೆ ಎಂದರು.

news18-kannada
Updated:July 2, 2020, 3:03 PM IST
ಡಿಕೆ ಶಿವಕುಮಾರ್ ನನ್ನ ಮಿತ್ರನಲ್ಲ, ಅವರೊಬ್ಬ ಒಂದು ಪಕ್ಷದ ಅಧ್ಯಕ್ಷರಷ್ಟೆ ; ಸಚಿವ ರಮೇಶ್ ಜಾರಕಿಹೊಳಿ
ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​
  • Share this:
ಕಲಬುರ್ಗಿ(ಜುಲೈ. 02): ಡಿ ಕೆ ಶಿವಕುಮಾರ್ ನನ್ನ ಮಿತ್ರನಲ್ಲ. ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ. 

ಕಲಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಗೆ ಭೇಟಿ ನೀಡುವ ವೇಳೆ ಮಾತನಾಡಿದ ಸಚಿವರು, ಡಿಕೆ ಶಿವಕುಮಾರ್ ಜನರ ಮುಂದೆ ಅಧಿಕಾರ ಸ್ವೀಕರಿಸದೇ. ಬರೀ ಟಿವಿ ಮುಂದೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಡಿಕೆ ಶಿವಕುಮಾರ್ ಶಕ್ತಿ ಏನಿದೆ ಎನ್ನುವುದು ನನಗೆ ಗೊತ್ತಿದೆ. ಅವರು ಕಾಂಗ್ರೆಸ್ ಪಕ್ಷದ  ಅಧ್ಯಕ್ಷರಷ್ಟೆ. ನನಗೂ  ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದರು.

ಚಿಕ್ಕಮಗಳೂರಿನಲ್ಲಿ ಕೆಲ ಬಿಜೆಪಿ ನಾಯಕರ ಸಭೆ ನಡೆಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಆರ್.ಅಶೋಕ್ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಲ್ಲಿ ಕೆಲ ನಾಯಕರು ಸೇರಿದ್ದಾರೆ. ಅಷ್ಟಕ್ಕೆ ಭಿನ್ನಮತ ಅಂದರೆ ಹೇಗೆ. ನಮ್ಮ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಡಿಯೂರಪ್ಪ ಅವರು ಮೂರು ವರ್ಷ ಪೂರೈಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಹೆಚ್.ವಿಶ್ವನಾಥ್ ಗೆ ಎಂ.ಎಲ್.ಸಿ ಮಾಡುವ ಕುರಿತು ಬಿಜೆಪಿ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತೆ. ದೇವರಾಣೆ ಹೇಳುತ್ತೇನೆ. ನಾನು ಡಿಸಿಎಂ ಆಕಾಂಕ್ಷಿಯಲ್ಲ. ಆದರೆ ಮಾಧ್ಯಮಗಳು ಆ ರೀತಿ ಸೃಷ್ಟಿ ಮಾಡಿವೆ ಎಂದರು.

ರಾಜ್ಯದ ನೀರಾವರಿ ಸಮಸ್ಯೆಗಳ ಬಗ್ಗೆ ಕಠಿಣ ನಿಲುವು ತಗೋತೀವಿ. ಈ ಹಿನ್ನೆಲೆಯಲ್ಲಿಯೇ ನಾನು ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ನೆರೆ ಹಾವಳಿಯ ಬಗ್ಗೆ ಮಹಾರಾಷ್ಟ್ರ ಜೊತೆ ಚರ್ಚಿಸಿ. ನೀರಾವರಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಮಹಾದಾಯಿ ಯೋಜನೆ ಕುರಿತ ಮಾಹಿತಿಯನ್ನು ಕೇಂದ್ರ ಸಮಿತಿ ಕಳಿಸಿದ್ದೇವೆ. ಕೊರೋನಾ ಹಿನ್ನೆಲೆಯಲ್ಲಿ ಒಂದಷ್ಟು ವಿಳಂಬವಾಗಿದೆ. ಕೇಂದ್ರ ಸರ್ಕಾರವನ್ನು ಭೇಟಿ ಮಾಡಿ ಆದಷ್ಟು ಬೇಗ ಯೋಜನೆ ಆರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಗಾಣಗಾಪುರದಲ್ಲಿ ಸಚಿವರಿಗೆ ದರ್ಶನ - ಜನರಿಗೆ ನಿರ್ಬಂಧ

ಗಾಣಗಾಪುರದಲ್ಲಿ ಸಚಿವರಿಗೊಂದು ನ್ಯಾಯ, ಸಾರ್ವಜನಿಕರಿಗೊಂದು ನ್ಯಾಯ  ಎಂಬಂತಾಗಿದೆ. ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಸಾರ್ವಜನಿಕರ ದರ್ಶನಕ್ಕೆ ನಿಷಿದ್ಧವಿದೆ. ನಿರ್ಬಂಧ ಇರುವ ದೇವಸ್ಥಾನಕ್ಕೆ ಹೋಗಿ ದರ್ಶನ ,ವಿಶೇಷ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ. ಸ್ಥಳೀಯ ಬಿಜೆಪಿ ಮುಖಂಡರ ಜೊತೆ ಗಾಣಗಾಪುರ ದತ್ತಾತ್ರೆಯ ದೇವಸ್ಥಾನಕ್ಕೆ ಹೋದ ಜಾರಕಿಹೊಳಿ. ಸಾರ್ವಜನಿಕರಿಗೆ ಇಲ್ಲದ ದರ್ಶನ ಭಾಗ್ಯ ಸಚಿವರಿಗೇಕೆ ? ದೇವರ ಸನ್ನಿಧಿಯಲ್ಲೂ ಸಚಿವರಿಗೊಂದು ನಿಯಮ , ಸಾರ್ವಜನಿಕರಿಗೊಂದು ನಿಯಮ. ದೇವಸ್ಥಾನದ ಆಡಳಿತ ಮಂಡಳಿ ಸಚಿವರಿಗೆ ನೀಡಿರುವ ಅವಕಾಶಕ್ಕೆಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ :  ಭಾರೀ ಮಳೆಗೆ ಜೇವರ್ಗಿಯಲ್ಲಿ ಕೊಚ್ಚಿಹೋದ ಸೇತುವೆ: ಪರೀಕ್ಷಾ ಕೇಂದ್ರ ತಲುಪಲು ವಿದ್ಯಾರ್ಥಿಗಳ ಹರಸಾಹಸ

ಜುಲೈ 7 ರ ವರೆಗೆ ದತ್ತಾತ್ರೇಯ ದೇವಸ್ಥಾನ ಸಾರ್ವಜನಿಕರಿಗೆ ನಿರ್ಬಂಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸಿ ಸಚಿವರಿಗೆ ದರ್ಶನಕ್ಕಷ್ಟೇ ಅವಕಾಶ. ಮುಜರಾಯಿ ಇಲಾಖಾ ವ್ಯಾಪ್ತಿಯಲ್ಲಿರುವ ದೇವಸ್ಥಾನ ಇದಾಗಿದೆ.
Youtube Video

ಈ ಕುರಿತು ಪ್ರತಿಕ್ರಿಯಿಸಿರುವ ಜಾರಕಿಹೊಳಿ, ದರ್ಶನಕ್ಕೆ ಪೂರ್ವಾನುಮತಿ ಪಡೆಯಲಾಗಿತ್ತು. ಸಾಮಾಜಿಕ ಅಂತರ ಕಾಪಾಡಿಕೊಂಡು ಪೂಜೆ ಸಲ್ಲಿಸಿದ್ದೇನೆ. ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಬರಲಿ. ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರೋದಾಗಿ ಹೇಳಿದರು.
First published: July 2, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories