DK Shivakumar: ಡಿಕೆ ಶಿವಕುಮಾರ್ ಮೇಲಿದೆಯಾ ಗಡೇ ದುರ್ಗಾದೇವಿ ಕೃಪೆ? ಮುಂದೆ ಸಿಎಂ ಆಗೋ ಯೋಗ ಇದೆಯಾ?

Gade Durgadevi: ಗಡೇ ದುರ್ಗಾದೇವಿಯ ಕೃಪೆಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆ ಶಿವಕುಮಾರ್ಗೆ ಒಲಿದಿದ್ದು ಈಗ ಪದಗ್ರಹಣ ಸ್ವೀಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ದೊಡ್ಡ ಸ್ಥಾನ ಸಿಗಲಿದೆ ಎಂದು ಅರ್ಚಕ ಮಹಾದೇವಪ್ಪ ಭವಿಷ್ಯ ನುಡಿದಿದ್ದಾರೆ.

news18-kannada
Updated:July 3, 2020, 8:03 AM IST
DK Shivakumar: ಡಿಕೆ ಶಿವಕುಮಾರ್ ಮೇಲಿದೆಯಾ ಗಡೇ ದುರ್ಗಾದೇವಿ ಕೃಪೆ? ಮುಂದೆ ಸಿಎಂ ಆಗೋ ಯೋಗ ಇದೆಯಾ?
ಯಾದಗಿರಿಯ ಗಡೇ ದುರ್ಗಾದೇವಿ ದೇವಸ್ಥಾನದಲ್ಲಿ ಡಿಕೆ ಶಿವಕುಮಾರ್ ಪೂಜೆ ಮಾಡಿಸಿದ ಸಂದರ್ಭ.
  • Share this:
ಯಾದಗಿರಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ರಾಜಕೀಯ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಟೆಂಪಲ್ ರನ್ ಮಾಡಿ ದೇವರ ಮೊರೆ ಹೋಗಿದ್ದರು. ಇಲ್ಲಿಯ ಪ್ರಖ್ಯಾತ ಶಕ್ತಿದೇವತೆ ಗಡೇ ದುರ್ಗಾದೇವಿಯನ್ನ ಬಹಳ ನಂಬಿದ್ದರು. ಆದರಂತೆ, ಡಿಕೆಶಿ ಅವರನ್ನ ಅನೇಕ ಸಂದರ್ಭಗಳಲ್ಲಿ ಗಡೇ ದುರ್ಗಾದೇವಿಯೇ ಸಂಕಷ್ಟದಿಂದ ಪಾರು ಮಾಡಿದ್ದಾಳೆ. ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಒಲಿಯುವಂತೆ ಮಾಡಿದ್ಧಾಳೆ ಎಂಬ ಮಾತುಗಳು ಯಾದಗಿರಿಯಲ್ಲಿ ಬಹಳ ಕೇಳಿಬರುತ್ತಿವೆ.

ಗಡೇ ದುರ್ಗಾದೇವಿಯ ಪರಮ ಭಕ್ತ ಡಿಕೆಶಿ...!

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿ ಭಕ್ತರ ಹರಕೆ ಈಡೇರಿಸುವ ಶಕ್ತಿ ದೇವತೆಯಾಗಿದ್ದಾಳೆ. ದೇವಿಯ ಮೊರೆ ಹೋದರೆ ಅನೇಕರಿಗೆ ಒಳಿತಾಗಿದೆ ಎಂಬುದು ದೇವಸ್ಥಾನದ ಅರ್ಚಕ ಮಹಾದೇವಪ್ಪ ಅವರ ಅಭಿಪ್ರಾಯ. ಅದರಂತೆ ಡಿಕೆ ಶಿವಕುಮಾರ್ ಅವರು ಸಂಕಷ್ಟದಿಂದ ಪಾರು ಮಾಡುವಂತೆ ಹಾಗೂ ರಾಜಕೀಯದಲ್ಲಿ ಒಳಿತಾಗಲಿ ಎಂದು ಈ ಶಕ್ತಿದೇವತೆಯ ಮೊರೆ ಹೋಗಿದ್ದರು. ಬೆಂಗಳೂರುನ ತಮ್ಮ ನಿವಾಸಕ್ಕೆ ದೇವಾಲಯದ ಅರ್ಚಕ ಮಹಾದೇವಪ್ಪ ಪೂಜಾರಿಯನ್ನು ಕರೆಸಿಕೊಂಡು ಪೂಜೆ ಕೂಡ ನಡೆಸಿದರು. ಡಿಕೆಶಿವಕುಮಾರ ಅವರು ಐಟಿ ಹಾಗೂ ಇಡಿ ಪ್ರಕರಣಗಳಲ್ಲಿ ಜೈಲು ಸೇರಿದ್ದಾಗ ಕೂಡ ಮಂದಿರದಲ್ಲಿ ಪೂಜೆ ಮಾಡಲಾಗಿತ್ತು. ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು.

ಇದನ್ನೂ ಓದಿ: ಕನಕಪುರದಲ್ಲಿ ಡಿ.ಕೆ.ಶಿವಕುಮಾರ್​ಗೆ ಬಹುಪರಾಕ್; ಕಬ್ಬಾಳಮ್ಮನಿಗೆ ವಿಶೇಷ ಹರಕೆ ಪೂಜೆ

ಕೆಪಿಸಿಸಿ ಪಟ್ಟಕ್ಕಾಗಿ ದೇವಿಯ ಮೊರೆ ಹೋಗಿದ್ದ ಡಿಕೆಶಿ..!
ಕಳೆದ ಜನವರಿ 29 ರಂದು ಗಡೇ ದುರ್ಗಾದೇವಿ ಜಾತ್ರೆ ಹಿನ್ನೆಲೆ ಡಿಕೆ ಶಿವಕುಮಾರ್ ಖುದ್ದು ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಭಾಗ್ಯ ಪಡೆದಿದ್ದರು. 2019ನೇ ಸಾಲಿನಲ್ಲಿ ನಡೆದ ಜಾತ್ರೆಗೆ ಡಿಕೆಶಿ ಆಗಮಿಸಿ ದೇವಿಗೆ ಹರಕೆ ತಿರಿಸಬೇಕಿತ್ತು. ಆದರೆ, ರಾಜಕೀಯ ಅನಿವಾರ್ಯ ಕಾರಣದಿಂದ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಕಳೆದ ಜನವರಿ 30 ರಂದು ಜಾತ್ರೆಗೆ ಆಗಮಿಸಿ ದೇವಿಗೆ ಹರಕೆ ತಿರಿಸಿದರು. ಅದೆ ರೀತಿ ದೇವಿಗೆ ಕೆಪಿಸಿಸಿ ಪಟ್ಟ ಸ್ಥಾನ ಹಾಗೂ ರಾಜಕೀಯದಲ್ಲಿ ಒಳಿತಾಗಲಿ ಎಂದು ಪತ್ರ ಬರೆದು ವಿಶೇಷ ಪೂಜೆ ಮಾಡಿದರು.

Gade Durgadevi
ಗಡೇ ದುರ್ಗಾದೇವಿ ಅಮ್ಮನ ಮೂರ್ತಿ
ಡಿಕೆಶಿ ಅವರು ಜಾತ್ರೆಗೆ ಆಗಮಿಸಿದ ದಿನ, ಅವರಿಗೆ ಕೆಪಿಸಿಸಿ ಪಟ್ಟ ಸಿಗಲಿದೆ ಎಂದು ಅರ್ಚಕ ಮಹಾದೇವಪ್ಪ ಪೂಜಾರಿ ಭವಿಷ್ಯ ‌ನುಡಿದಿದ್ದರು. ಅದರಂತೆ ಕೆಪಿಸಿಸಿ ಪಟ್ಟಕ್ಕಾಗಿ ಭಾರಿ ಪೈಪೋಟಿ ನಡೆದಿತ್ತು. ನಂತರ ಕೆಪಿಸಿಸಿ ಪಟ್ಟ ಕನಕಪುರದ ಬಂಡೆಗೆ ಒಲಿದಿತ್ತು. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಅರ್ಚಕ ಮಹಾದೇವಪ್ಪ ಪೂಜಾರಿ ಮಾತನಾಡಿ, ದೇವಿಯ ಕೃಪೆಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿಕೆ ಶಿವಕುಮಾರ್​ಗೆ ಒಲಿದಿದ್ದು ಈಗ ಪದಗ್ರಹಣ ಸ್ವೀಕಾರ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ದೊಡ್ಡ ಸ್ಥಾನ ಸಿಗಲಿದೆ ಎಂದು ಭವಿಷ್ಯ ಹೇಳಿದರು. ಈ ಮೂಲಕ ಡಿಕೆ ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಬಹುದು ಎಂಬುದು ಅರ್ಚಕರು ಮಾತಿನ ಅರ್ಥವಾ?

ಇದನ್ನೂ ಓದಿ: ವಿಧಾನಸೌಧದ ಮೂರನೇ ಮಹಡಿ ಹತ್ತುವವರಿಗೆ ಚಪ್ಪಡಿ ಆಗುತ್ತೇನೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ..!
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಬೆಂಗಳೂರುನಲ್ಲಿ ಇಂದು ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾಜಿ ವಿಧಾನ ಪರಿಷತ್ ಸದಸ್ಯ ಚನ್ನಾರೆಡ್ಡಿ ಗೌಡ ಪಾಟೀಲ ತುನ್ನೂರ ಮಾತನಾಡಿ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಗಡೇ ದುರ್ಗಾದೇವಿ ಭಕ್ತರಾಗಿದ್ದು, ಅವರಿಗೆ ದೇವಿಯ ಕೃಪೆಯಿಂದ ಒಳಿತಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲಬಂದಂತಾಗಿದೆ ಎಂದರು.ಇದೇನೇ ಇರಲಿ, ಕಾಂಗ್ರೆಸ್ ಪಕ್ಷಕ್ಕಾಗಿ ಡಿಕೆ ಶಿವಕುಮಾರ್ ಅವಿರತವಾಗಿ ದುಡಿದಿದ್ದಾರೆ. ಉತ್ತಮ ಸಂಘಟನಾ ಚತುರನಾದವರನ್ನು ಪಕ್ಷ ಗುರುತಿಸಿ ಉನ್ನತ ಹುದ್ದೆ ನೀಡಿದೆ ಎಂಬುದು ಹೌದು.
First published: July 3, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading