HOME » NEWS » District » DK SHIVAKUMAR GOT BLESSINGS OF DATTATREYA SWAMY DURING HIS VISIT TO KALABURAGI HK

ಕಲಬುರ್ಗಿಗೆ ಬರುತ್ತಿದ್ದಂತೆಯೇ ದತ್ತನ ದರ್ಶನ ಪಡೆದ ಡಿಕೆಶಿ ; ಕೊರೋನಾ ಸಂದರ್ಭದಲ್ಲಿಯೂ ಟೆಂಪಲ್ ರನ್

ಕೊರೋನಾದಿಂದಾಗಿ ದೇಶಕ್ಕೆ ಕಷ್ಟ ಬಂದಿದೆ. ಎಲ್ಲ ನಿವಾವರಣೆಯಾಗೇಬಕು. ಹಿಂದೆಯೂ ನಾನು ಗಾಣಗಾಪುರಕ್ಕೆ ಬಂದಿದ್ದೇನೆ. ಗಾಣಗಾಪುರ ಪವಿತ್ರ ಕ್ಷೇತ್ರ. ಇವತ್ತು ದತ್ತನ ದರ್ಶನ ಪಡೆದಿದ್ದೇನೆ.

news18-kannada
Updated:August 4, 2020, 12:37 PM IST
ಕಲಬುರ್ಗಿಗೆ ಬರುತ್ತಿದ್ದಂತೆಯೇ ದತ್ತನ ದರ್ಶನ ಪಡೆದ ಡಿಕೆಶಿ ; ಕೊರೋನಾ ಸಂದರ್ಭದಲ್ಲಿಯೂ ಟೆಂಪಲ್ ರನ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
  • Share this:
ಕಲಬುರ್ಗಿ(ಆಗಸ್ಟ್ .04): ಇಡಿ ದಾಳಿ, ಬಂಧನ, ಬಿಡುಗಡೆ ಯಂತಹ ಸಂದರ್ಭಗಳಲ್ಲಿ ಡಿ.ಕೆ.ಶಿವಕುಮಾರ್ ನಂಬಿದಂತಹ ದೇವರುಗಳ ಪೈಕಿ ಗಾಣಗಾಪುರದ ದತ್ತಾತ್ರೇಯ ಒಬ್ಬರು. ಇ.ಡಿ. ಬಂಧನದಿಂದ ಬಿಡುಗಡೆಗೊಂಡ ನಂತರ ದತ್ತಾತ್ರೇಯ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಅವರ ಕುಟುಂಬದ ಸದಸ್ಯರೂ ದೇವಸ್ಥಾನಕ್ಕೆ ಭೇಟಿ ನೀಡಿ ಪಾದುಕೆ ದರ್ಶನ ಪಡೆದು, ವಿಶೇಷ ಪೂಜೆ ನೆರವೇರಿಸಿದ್ದರು. ಇದೀಗ ಕೆಪಿಸಿಸಿ ಸಾರಥ್ಯ ವಹಿಸಿದ ನಂತರ ಡಿ.ಕೆ.ಶಿವಕುಮಾರ್ ಕಲಬುರ್ಗಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಲಬುರ್ಗಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಆಗಮಿಸಿದ ಡಿಕೆಶಿಗೆ ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಮಾರ್ಗಮಧ್ಯದಲ್ಲಿಯೂ ಸಾಮಾಜಿ ಅಂತರ ಮರೆತು ಕಾಂಗ್ರೆಸ್ ನಾಯಕರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಗಾಣಗಾಪುರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್, ದತ್ತಾತ್ರೇಯನ ದರ್ಶನ ಪಡೆದರು. ದತ್ತ ಪಾದುಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕಲಬುರ್ಗಿಗೆ ಆಗಮಿಸಿರುವ ಡಿಕೆ ಶಿವಕುಮಾರ್ ಜಿಲ್ಲೆಗೆ ಬಂದ ಕೂಡಲೇ ಗಾಣಗಾಪುರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗುವ ಮುನ್ನ ಗಾಣಗಾಪುರಕ್ಕೆ ಭೇಟಿ ನೀಡಿದ್ದ ಡಿಕೆಶಿವಕುಮಾರ್. ಡಿಕೆಶಿ ಕುಟುಂಬದ ಸದಸ್ಯರೂ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇಂದು ಗಾಣಗಾಪುರಕ್ಕೆ ಭೇಟಿ ನೀಡಿ ಸುವರ್ಣ ಪಾದುಕೆ ಪೂಜೆ ನೆರವೇರಿಸಿ ಒಳ್ಳೆಯದಾಗಲೆಂದು ಪ್ರಾರ್ಥಿಸಿದರು.ದತ್ತನ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಕೊರೋನಾದಿಂದಾಗಿ ದೇಶಕ್ಕೆ ಕಷ್ಟ ಬಂದಿದೆ. ಎಲ್ಲ ನಿವಾವರಣೆಯಾಗೇಬಕು. ಹಿಂದೆಯೂ ನಾನು ಗಾಣಗಾಪುರಕ್ಕೆ ಬಂದಿದ್ದೇನೆ. ಗಾಣಗಾಪುರ ಪವಿತ್ರ ಕ್ಷೇತ್ರ. ಇವತ್ತು ದತ್ತನ ದರ್ಶನ ಪಡೆದಿದ್ದೇನೆ. ಎಲ್ಲರಿಗೂ ಆರೋಗ್ಯ ಸಿಗಲಿ, ಎಲ್ಲರಿಗೂ ಶಾಂತಿ, ನೆಮ್ಮದಿ ಸಿಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕಾರ್ಯಕರ್ತರು, ಮುಖಂಡರ ಸಭೆಯ ನಂತರ ಸಂಜೆ ಕಲಬುರ್ಗಿಯಲ್ಲಿ ಟೆಂಪಲ್ ರನ್ ನಡೆಸಲಿದ್ದಾರೆ. ಸಂಜೆ ಕಲಬುರ್ಗಿಯ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿರೋ ಡಿ.ಕೆ.ಶಿವಕುಮಾರ್, ನಂತರ ನೇರವಾಗಿ ಭಾವೈಕ್ಯತೆಯ ತಾಣ ಖ್ವಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಿ ಬಂದೇನವಾಜರ ಸಮಾಧಿಯ ದರ್ಶನ ಪಡೆಯಲಿದ್ದಾರೆ. ನಂತರ ಹೈದರಾಬಾದ್ ಗೆ ತೆರಳಿ ವಿಮಾನದ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ಇದನ್ನೂ ಓದಿ : Siddaramaiah: ಸಿದ್ದರಾಮಯ್ಯ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ವಿವಿಧ ನಾಯಕರುಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿಯೂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಜೋರಾಗಿದೆ. ಜಿಲ್ಲೆಯ ಭೇಟಿಯ ವೇಳೆ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಡಿ.ಕೆ.ಶಿವಕುಮಾರ್​ ಅವರಿಗೆ ಸ್ವಾಗತ ಕೋರಿದ್ದಾರೆ. ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಗೆ ಪಾಸಿಟಿವ್ ಬಂದಿದೆ.

ಈ ಹಿಂದೆ ಕೊರೋನಾ ಭ್ರಷ್ಟಾಚಾರ ನಡೆಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ಜೊತೆಗೂಡಿ ಡಿಕೆ ಶಿವಕುಮಾರ್​ ಹೋರಾಟ ಮಾಡಿದ್ದರು. ಹೀಗಿದ್ದರೂ ಮುಖಂಡರು, ಕಾರ್ಯಕರ್ತರು ಮಾತ್ರ ಸಾಮಾಜಿಕ ಅಂತರವನ್ನೂ ಕಾಪಾಡದೆ ಮುಗಿಬಿದ್ದು ಸ್ವಾಗತ ಕೋರಿರುವುದು ಆತಂಕಕ್ಕೆ ಕಾರಣವಾಗಿದೆ.
Published by: G Hareeshkumar
First published: August 4, 2020, 12:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories