HOME » NEWS » District » DK SHIVAKUMAR GETTING HIMSELF A RAMESH JARKIHOLI CD CASE SAYS HD KUMARASWAMY PMTV MAK

ಡಿ.ಕೆ. ಶಿವಕುಮಾರ್ ಯಾಕಾಗಿ ತಾವಾಗಿಯೇ ಸಿಡಿ ಕೇಸ್‌ನಲ್ಲಿ ಸಿಲುಕುತ್ತಿದ್ದಾರೋ ಗೊತ್ತಿಲ್ಲ?; ಕುಮಾರಸ್ವಾಮಿ

ಈ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ ಯಾರಿಗೂ ಗಂಭೀರತೆ ಇಲ್ಲ, ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಕೆ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

news18-kannada
Updated:March 14, 2021, 10:26 PM IST
ಡಿ.ಕೆ. ಶಿವಕುಮಾರ್ ಯಾಕಾಗಿ ತಾವಾಗಿಯೇ ಸಿಡಿ ಕೇಸ್‌ನಲ್ಲಿ ಸಿಲುಕುತ್ತಿದ್ದಾರೋ ಗೊತ್ತಿಲ್ಲ?; ಕುಮಾರಸ್ವಾಮಿ
ಹೆಚ್​.ಡಿ ಕುಮಾರಸ್ವಾಮಿ.
  • Share this:
ಮೈಸೂರು (ಮಾರ್ಚ್​ 14); ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸಿಡಿ ಕೇಸ್‌ನಲ್ಲಿ ಸಂತ್ರಸ್ತ ಮಹಿಳೆಗೆ ಯಾರಿಂದ ರಕ್ಷಣೆ ಸಿಗಬೇಕಿತ್ತೋ ಅದು ಸಿಕ್ಕಿದೆ. ಆ ಹೆಣ್ಣು ಮಗಳಿಗೆ ಎಲ್ಲಾ ರೀತಿಯ ರಕ್ಷಣೆ ಸಿಕ್ಕಿದ್ದು, ಸರ್ಕಾರದಿಂದ ಅವಳನ್ನು ಹುಡುಕಲು ಆಗದಿದ್ದರೂ ಕೇಸ್ ಹಿಂದೆ ಇರುವವರು ಎಲ್ಲಾ ಬಗೆಯ ರಕ್ಷಣೆ ಕೊಟ್ಟಿದ್ದಾರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, "ಸರ್ಕಾರಕ್ಕೆ ನಿನ್ನೆ ಆಕೆ ವೀಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾಳೆ. ಆ ವಿಡಿಯೋವನ್ನ ಆಕೇಯೆ ಮಾಡಿದ್ದಾಳಾ? ಬೇರೆ ಯಾರಾದ್ರು ರೆಕಾರ್ಡ್ ಮಾಡಿ ಕಳುಹಿಸಿದ್ದಾರೋ? ಎಂಬ ವಿಚಾರ ತನಿಖೆಯಿಂದ ಹೊರ ಬರಬೇಕು. ರಕ್ಷಣೆಯನ್ನು ಸರ್ಕಾರ ಕೊಟ್ಟಿದೆಯೋ, ಅಥವ ವಿರುದ್ಧ ಇರೋರು ಕೊಟ್ಟಿದ್ದಾರೊ ಗೊತ್ತಿಲ್ಲ. ಅಥವಾ ಸರ್ಕಾರ ರಚನೆಗೆ ಈತನ ಸಹಾಯ ಪಡೆದವರು ಈತನ ಸ್ಪೀಡ್ ಕಟ್ ಮಾಡೋಕೆ ಮಾಡಿದ್ದಾರೋ ನನಗೆ ಗೊತ್ತಿಲ್ಲ" ಎಂದು ಪರೋಕ್ಷವಾಗಿ ಬಿಜೆಪಿಗೆ ತಟ್ಟುವಂತೆ ಹೇಳಿಕೆ ಕೊಟ್ಟಿದ್ದಾರೆ.

ರಮೇಶ್ ಜಾರಕಿಹೋಳಿ ಸಿಡಿ ಕೇಸ್‌ನಲ್ಲಿ ಡಿಕೆಶಿ ಹೆಸರು ಕೇಳಿಬಂದ ವಿಚಾರಕ್ಕೂ  ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಯಾರು ಅವರ ಹೆಸರು ಹೇಳಿದ್ದಾರೆ? ಅವರ ಹೆಸರನ್ನು ಅವರೆ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೇ ಮಾಡಿದ್ದಾರೆ ಅಂತ ಯಾರಾದ್ರು ಹೇಳಿದ್ರಾ ಅಂತ ಪ್ರಶ್ನೆ ಹಾಕಿದರು. ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರು ಇಲ್ಲ, ಬಿಜೆಪಿಯಲ್ಲೇ ಒಬ್ಬರು ಮಹಾನ್ ನಾಯಕರು ಬೆಳೆಯುತ್ತಿದ್ದಾರೆ.

ಜಾರಕಿಹೊಳಿ ಯಾವ ಮಹಾನ್ ನಾಯಕರು ಅಂತ ಹೇಳಿದ್ದಾರೆ ಗೊತ್ತಿಲ್ಲ. ಇವರು ತಾವೆ ಮಹಾನ್ ನಾಯಕ ಅಂತ ಯಾಕೆ ಅಂದುಕೊಂಡ್ರು ಗೊತ್ತಿಲ್ಲ. ಡಿಕೆ.ಶಿವಕುಮಾರ್ ಬಹಳ ಮೆಚುರ್ಡ್ ಪೊಲಿಟಿಶಿಯನ್ ಅವರಿಗೆ ಇರುವ ಅನುಭವ ನಮಗೂ ಇಲ್ಲ. ಆದರೂ ನಿನ್ನೆ ದುಡುಕಿ ಅವರ ಹೆಸರನ್ನ ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೆ ನನಗರ ಗೊತ್ತಿಲ್ಲ.

ಈ ಪ್ರಕರಣವನ್ನು ಎಲ್ಲರೂ ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ ಯಾರಿಗೂ ಗಂಭೀರತೆ ಇಲ್ಲ, ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಕೆ ಮಾಡಬೇಕು" ಎಂದು ಆಗ್ರಹಿಸಿದರು

ಇದನ್ನೂ ಓದಿ: Crime News: ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 12 ದಿನದ‌ ನಂತರ, ವಿಡಿಯೋದಲ್ಲಿ ಯುವತಿ ಪ್ರತ್ಯಕ್ಷವಾಗಿ ನಿನ್ನೆ  ರಾತ್ರಿ ರಮೇಶ್ ಜಾರಕಿಹೊಳಿ ವಿರುದ್ದವೇ ಆರೋಪ ಮಾಡಿದ್ದಾಳೆ. ಅತ್ತ ರಮೇಶ್ ಜಾರಕಿಹೊಳಿಯೂ ದೂರು ನೀಡಿದ್ದು, ಪ್ರಕರಣ ಎಲ್ಲಿಗೆ ಹೋಗಿ ಎಲ್ಲಿ ಹೋಗಿ ನಿಲ್ಲುತ್ತೆ ಅಂತ ಕಾದುನೋಡಬೇಕಿದೆ.
ಈ ಮಧ್ಯೆ ಕುಮಾರಸ್ವಾಮಿ ಮಾತ್ರ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡುತ್ತಿದ್ದು, ತನಿಖೆ ವಿಚಾರವಾಗಿಯೂ ವ್ಯಂಗ್ಯವಾಡಿದ್ದ ಹೆಚ್‌ಡಿಕೆ ಇದೀಗ ಡಿಕೆಶಿ ಪಾತ್ರದ ಬಗ್ಗೆಯೂ ಲೇವಡಿ ಮಾಡಿದ್ದಾರೆ. ಡಿಕೆಶಿ ಅವರಾಗಿಯೇ ಈ ಪ್ರಕರಣದಲ್ಲಿ ಸಿಲುಕಲು ಮುಂದಾಗಿರುವುದಕ್ಕೆ ಟಾಂಗ್ ನೀಡುವ ರೀತಿ ಹೇಳಿಕೆ ನೀಡಿದ್ದು, ಸಿಡಿ ಪ್ರಕರಣದ ಮಹಾನಾಯಕ ಬಿಜೆಪಿಯಲ್ಲೆ ಇರಬಹುದು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
Published by: MAshok Kumar
First published: March 14, 2021, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories