ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ (Tarikere) ತಾಲೂಕು ಹೊರತುಪಡಿಸಿ ಬೇರೆಲ್ಲೂ ನಿರೀಕ್ಷೆಯಂತೆ ಯಾರೂ ಕಾಂಗ್ರೆಸ್ (Congress) ಸದಸ್ಯತ್ವ (Membership) ಮಂಡಿಸಿಲ್ಲ ಎಂದು ಜಿಲ್ಲಾ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K Shivakumar) ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ಇಂದು ರಂಭಾಪುರಿ ಪೀಠದಲ್ಲಿ ನಡೆಯುತ್ತಿದ್ದ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಡಿ.ಕೆ ಶಿವಕುಮಾರ್ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಜಿಲ್ಲೆಯ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯನ್ನ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆಸಿದರು. ಸಭೆಯಲ್ಲಿ ನಿರೀಕ್ಷೆಯಂತೆ ಸದಸ್ಯತ್ವ ಮಾಡಿಸದ ಜಿಲ್ಲಾ ಮುಖಂಡರಿಗೆ ಸಖತ್ ಆಗಿಯೇ ಕ್ಲಾಸ್ ತೆಗೆದುಕೊಂಡರು.
ತರೀಕೆರೆ ತಾಲೂಕಿನಲ್ಲಿ ಮಾತ್ರ 35 ಸಾವಿರ ಸದಸ್ಯತ್ವ ಮಾಡಿಸಿದ್ದಾರೆ. ಉಳಿದ ಕ್ಷೇತ್ರದಲ್ಲಿ ಎಲ್ಲೂ ನೀರಿಕ್ಷೆಯಂತೆ ಸದಸ್ಯತ್ವ ಆಗಿಲ್ಲ ಎಂದು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡು ಮಾಡಿಸಲೇಬೇಕು ಎಂದು ಕಡ್ಡಿ ಮುರಿದಂತೆ ಸೂಚಿಸಿದ್ದಾರೆ.
ಮಾಜಿ ಸಚಿವೆ ಕ್ಷಮೆ ಕೇಳಿದರು ಸ್ಪಂದಿಸದ ಕೆಪಿಸಿಸಿ ಅಧ್ಯಕ಼
ಇದೇ ವೇಳೆ, ಮಾಜಿ ಸಚಿವೆ, ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಡಿ.ಕೆ.ಶಿವಕುಮಾರ್ ಸಾರ್ವಜನಿಕರ ಮಧ್ಯೆ ಅವಮಾನವಾಗುವ ರೀತಿ ವರ್ತಿಸಿದ ಘಟನೆಯೂ ನಡೆಯಿತು. ಮೋಟಮ್ಮ ಮಗಳು ನಯನಾ ಮೋಟಮ್ಮ ಮಾತನಾಡುವಾಗ ನಮಗೆ ಜವಾಬ್ದಾರಿ ನೀಡಿಲ್ಲ ಎಂದು ಹೇಳಿದರು.
ಮೋಟಮ್ಮ ಮಗಳಿಗೂ ಫುಲ್ ಕ್ಲಾಸ್
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ನಿಮ್ಮ ತಾಯಿಯನ್ನ ಶಾಸಕಿ, ಮಿನಿಸ್ಟರ್, ಎಂ.ಎಲ್.ಸಿ. ಮಾಡಿದ್ದೇವೆ. ಇನ್ನೇನು ಮಾಡಬೇಕು. ಇಷ್ಟಾದರೂ ನಾನು ಹಂಗೂ ಇಲ್ಲ, ಹಿಂಗೂ ಇಲ್ಲ ಅಂದರೆ ಯಾರು ಕೇಳುತ್ತಾರೆ ಎಂದರು. ಬಳಿಕ ಕಾರ್ಯಕ್ರಮ ಮುಗಿದ ಮೇಲೆ ಮೋಟಮ್ಮ ಬಂದು ಡಿ.ಕೆ.ಶಿವಕುಮಾರ್ ಅವರನ್ನ ಮಾತನಾಡಿಸಲು ಯತ್ನಿಸಿದರು ಪ್ರತಿಕ್ರಿಯೇ ನೀಡದೆ ಹೋದರು. ಆಗ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಮುಜುಗರವೂ ಉಂಟಾಯಿತು. ಸ್ಯಾರಿ ಸ್ಯಾರಿ ಎಂದು ಮೋಟಮ್ಮ ಹೇಳಿದರು ಕ್ಯಾರೆ ಎನ್ನದೆ ಡಿಕೆಶಿ ಕಾರು ಹತ್ತಿದರು.
ಇದನ್ನೂ ಓದಿ: MES ಪುಂಡರ ವಿರುದ್ಧ ದಾಖಲಿಸಿದ್ದ ದೇಶದ್ರೋಹದ ಕೇಸ್: ಚಾರ್ಜ್ಶೀಟ್ ಸಲ್ಲಿಕೆ ವೇಳೆ ಸೆಕ್ಷನ್ ಕೈಬಿಟ್ಟ ಪೊಲೀಸರು
ಜಿಲ್ಲಾ ಮುಖಂಡರನ್ನ ತರಾಟೆಗೆ ತೆಗೆದುಕೊಂಡ ಡಿಕೆಶಿ
ಜಿಲ್ಲೆಯಲ್ಲಿನ ಡಿಜಿಟಲ್ ಸದಸ್ಯತ್ವದ ಬಗ್ಗೆ ಜಿಲ್ಲಾ ಮುಖಂಡರಿಗೆ ಡಿಕೆಶಿ ಸಖತ್ತಾಗೆ ಕ್ಲಾಸ್ ತೆಗೆದುಕೊಂಡರು. ತರೀಕೆರೆ ತಾಲೂಕು ಹೊರತುಪಡಿಸಿದರೆ ಉಳಿದ ಕಡೆ ನಿರೀಕ್ಷೆಯಷ್ಟು ಸದಸ್ಯತ್ವ ಮಾಡಿಸಿಲ್ಲ. ಒಬ್ಬೊಬ್ಬರು ಒಂದೊಂದು ಕಾರಣ ಹೇಳುತ್ತಿದ್ದಾರೆ. ನಾನು ಯಾವ ಕಾರಣವನ್ನೂ ಕೇಳುವುದಿಲ್ಲ. ಪ್ರತಿದಿನದ ಬೆಳವಣಿಗೆಯನ್ನ ರಾಹುಲ್ ಗಾಂಧಿ ನೋಡುತ್ತಿದ್ದಾರೆ, ಸದಸ್ಯತ್ವ ಮಾಡಿಸಲೇಬೇಕು ಎಂದು ಕಡ್ಡಿ ಮುರಿದಂತೆ ಹೇಳಿದರು.
ಹೆಚ್ಚು ಸದಸ್ಯತ್ವ ಮಾಡಿಸಿದವರಿಗೆ ನಾಯಕತ್ವದ ಅವಕಾಶ ಸಿಗಲಿದೆ. ಸದಸ್ಯರನ್ನೇ ಮಾಡಿಸದಿದ್ದರೆ ಮತ ಹೇಗೆ ತೆಗೆದುಕೊಳ್ತೀರಾ ಎಂದು ಪ್ರಶ್ನಿಸಿದರು. ನಮ್ಮ ಪಕ್ಷಕ್ಕೆ ಮೆಂಬರ್ಶಿಪ್ ಪೌಂಡೇಷನ್. ಎಲ್ಲರೂ ಮಾಡಿಸಲೇಬೇಕು ಎಂದು ಎಲ್ಲರಿಗೂ ಸಖತ್ತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Clean Coorg: ಕೊಡಗು ಜಿಲ್ಲೆಯನ್ನು ಜೀರೋ ವೇಸ್ಟ್ ನಗರವನ್ನಾಗಿಸಲು ಪಣ, ಭೂ ಕುಸಿತದ ಜಾಗದಲ್ಲಿ ಪಾರ್ಕ್ ನಿರ್ಮಾಣ
ಜಿಲ್ಲಾಧ್ಯಕ್ಷರಿಗೂ ಕ್ಲಾಸ್
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಇಂದು ಎಲ್ಲಾ ಲಾಸ್ ಆಯ್ತು ಎಂದರು. ಬಿಜೆಪಿ ಪರಿಷತ್ನಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ಗೆ ಸಿದ್ಧತೆ ನಡೆಸುತ್ತಿದ್ದಾರೆ. ನಾವು ಅದನ್ನ ವಿರೋಧಿಸುತ್ತಲೇ ಬಂದಿದ್ದೇವೆ. ಅವರು ಏನು ಬೇಕೋ ಅದನ್ನ ಮಾಡಿಕೊಳ್ಳಲಿ. ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ, ಮುಂದೆ ನಮ್ಮ ಸರ್ಕಾರ ಬರುತ್ತೆ ಆಗ ನಾವು ಎಲ್ಲಾ ರಿವರ್ಸ್ ಮಾಡುತ್ತೇವೆ ಎಂದರು.
ಪುನೀತ್ ಸಿನಿಮಾ ಕುಟುಂಬದ ಜೊತೆ ನೋಡುತ್ತೇನೆ. ಪುನೀತ್ ಅಭಿನಯದ ಜೇಮ್ಸ್ ಸಿನಿಮಾವನ್ನು ಕುಟುಂಬದ ಜೊತೆ ಇಂದು ನೋಡುತ್ತೇನೆ. ಬೆಳಿಗ್ಗೆ ಪತ್ನಿ ಬಳಿ ಹೇಳಿದ್ದೀನಿ ಇಂದು ಬೆಂಗಳೂರಿಗೆ ತೆರಳಿ ಸಿನಿಮಾ ನೋಡುತ್ತೇನೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ