HOME » NEWS » District » DK SHIVAKUMAR BIG PLANS TO REJUVENATE PARTY ON GROUND LEVEL AFTER JULY 2ND SNVS

ಜುಲೈ 2 ರ ನಂತರ ಡಿಕೆ ಶಿವಕುಮಾರ್​ ಸೂಪರ್​ಪ್ಲಾನ್; ಮಾಡಲಿದ್ದಾರೆ ಹೊಸ ಪ್ರಯೋಗ; ನಂಬಿದ ಕಾರ್ಯಕರ್ತರಿಗೂ ಭರ್ಜರಿ ಗಿಫ್ಟ್?

ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ಕೆಲಸವೂ ಸಿಗಬೇಕು, ಜೊತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಯೂ ಆಗಬೇಕೆಂದು ಡಿಕೆಶಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆಂದು ತಿಳಿದುಬಂದಿದೆ.

news18-kannada
Updated:June 29, 2020, 8:06 AM IST
ಜುಲೈ 2 ರ ನಂತರ ಡಿಕೆ ಶಿವಕುಮಾರ್​ ಸೂಪರ್​ಪ್ಲಾನ್; ಮಾಡಲಿದ್ದಾರೆ ಹೊಸ ಪ್ರಯೋಗ; ನಂಬಿದ ಕಾರ್ಯಕರ್ತರಿಗೂ ಭರ್ಜರಿ ಗಿಫ್ಟ್?
ಡಿಕೆ ಶಿವಕುಮಾರ್
  • Share this:
ರಾಮನಗರ: ಜುಲೈ 2 ರ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪೊಲಿಟಿಕಲ್ ಚೆರಿಶ್ಮಾ ಸಂಪೂರ್ಣ ಬದಲಾಗಲಿದೆ ಎಂಬ ಮಾತುಗಳು ಕೇಳಿ ಬರ್ತಿದೆ. ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಕಡೆಗೆ ವಾಲುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ.

ಜುಲೈ 2ರಂದು ಡಿ.ಕೆ.ಶಿವಕುಮಾರ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ. ಈ ಸಂದರ್ಭವನ್ನ ಬಹಳ ಅಚ್ಚುಕಟ್ಟಾಗಿ ಬಳಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್ ರಾಜ್ಯದ ಮೂಲೆಮೂಲೆಗಳಲ್ಲಿ ತಾನು ಅಧಿಕಾರ ಸ್ವೀಕಾರ ಮಾಡುವುದನ್ನ ಜನರು ನೋಡಬೇಕೆಂದು ಡಿಜಿಟೆಲ್ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಡಿಕೆಶಿ ಪದಗ್ರಹಣದ ಕಾರ್ಯಕ್ರಮವನ್ನ ರಾಜ್ಯದಲ್ಲಿ ಫೇಸ್ ಬುಕ್ ಹಾಗೂ ಇತರೆ ಲಿಂಕ್ ಮೂಲಕ 10 ಲಕ್ಷ ಜನರು ಒಂದೇ ಬಾರಿ ವೀಕ್ಷಣೆ ಮಾಡುವುದಕ್ಕೆ ಡಿಕೆಶಿ ಈಗಾಗಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ 10 ಲಕ್ಷದ ಜೊತೆಗೆ ಲಿಂಕ್ಸ್ ಶೇರ್ ಆದರೆ ಮತ್ತುಷ್ಟು ಹೆಚ್ಚು ಜನರು ಕಾರ್ಯಕ್ರಮ ವೀಕ್ಷಣೆ ಮಾಡಲಿದ್ದಾರೆ.

ಇದನ್ನೂ ಓದಿ: ಎಲ್​ಕೆಜಿಯಿಂದಲೂ ಆನ್​ಲೈನ್ ಶಿಕ್ಷಣಕ್ಕೆ ತಾತ್ಕಾಲಿಕ ಅನುಮತಿ; ಪ್ರತ್ಯೇಕ ನಿಯಮಾವಳಿ ರಚನೆ

ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ.ಎಸ್ ಟ್ರಸ್ಟ್‌ನಿಂದ ಕೆಲಸ?

ಡಿ.ಕೆ.ಶಿವಕುಮಾರ್ ಕೆ.ಪಿ.ಸಿ.ಸಿ. ಅಧ್ಯಕ್ಷರಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಅದೇ ರೀತಿ ಕಾಂಗ್ರೆಸ್‌ನಲ್ಲಿ ಇಷ್ಟು ದಿನಗಳ ಕಾಲ ಸೋಷಿಯಲ್ ಮೀಡಿಯಾ ಬಹಳ ದುರ್ಬಲ ಆಗಿತ್ತು. ಆದರೆ ಡಿಕೆಶಿ ಈಗ ಕಾಂಗ್ರೆಸ್ ಸೋಷಿಯಲ್ ಮೀಡಿಯಾವನ್ನ ಗಟ್ಟಿಗೊಳಿಸುವ ಮಾಡುವ ಮೂಲಕ ಹೊಸ ಐಡಿಯಾ ಲಾಂಚ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆಯ ಜೊತೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನೂರಾರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನ ಗುರುತಿಸಿ ಅವರಿಗೆ ಸೂಕ್ತ ತರಬೇತಿ ಕೊಟ್ಟು ಕಾಂಗ್ರೆಸ್ ಪಕ್ಷದ ಸಾಧನೆಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ತಲುಪಿಸುವ ಜವಾಬ್ದಾರಿಯನ್ನ ನೀಡಲಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುವ ಯುವಕರಿಗೆ ವೈಯಕ್ತಿಕವಾಗಿ ಡಿ.ಕೆ.ಶಿ ಗೌರವಧನದ ರೂಪದಲ್ಲಿ ಸಂಬಳವನ್ನು ಕೊಡಲು ಚಿಂತಿಸಿದ್ದಾರೆ ಎನ್ನಲಾಗಿದೆ. ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರಿಗೆ ಕೆಲಸವೂ ಸಿಗಬೇಕು, ಜೊತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಯೂ ಆಗಬೇಕೆಂದು ಡಿಕೆಶಿ ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆಂದು ತಿಳಿದುಬಂದಿದೆ. ಮೊದಲಿಗೆ ರಾಮನಗರದಲ್ಲಿ ಇದನ್ನ ಪ್ರಾರಂಭಿಸಿ ನಂತರ ರಾಜ್ಯದ ಇತರೆಡೆಯೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್​ನ ಬಲ್ಲಮೂಲಗಳಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಮನಸ್ಸಿಗೆ ಬಂದಲ್ಲಿ ಕೊರೋನಾ ಚಿಕಿತ್ಸೆ ನೀಡಲು ಜನ ಜಾನುವಾರುಗಳಲ್ಲ: ಹೆಚ್.ಕೆ.ಪಾಟೀಲ್ ಗುಡುಗುರೇಷ್ಮೆನಗರಿಯಲ್ಲಿ ಸೃಷ್ಟಿಯಾಗಲಿದೆ ಡಿ.ಕೆ. ಬ್ರದರ್ಸ್ ಯೂತ್ಸ್ ಟೀಮ್!

ಡಿ.ಕೆ. ಶಿವಕುಮಾರ್ ಅಂದರೆ ಅವರ ಜೊತೆಯಲ್ಲಿ ಒಂದು ದೊಡ್ಡ ಯುವಕರ ದಂಡೇ ಇರುತ್ತದೆ ಎಂಬುದು ಈಗಾಗಲೇ ಗೊತ್ತಿರುವ ವಿಚಾರ. ಆ ಯುವಕರ ದಂಡು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಇದನ್ನ ಬಹಳ ಸೂಕ್ಷ್ಮವಾಗಿ ಗಮನಿಸಿರುವ ಡಿ.ಕೆ. ಶಿವಕುಮಾರ್ ಈಗ ಅವರಿಗೆಲ್ಲಾ ಶಾಶ್ವತವಾಗಿ ಪಕ್ಷದ ಜವಾಬ್ದಾರಿಯನ್ನ ಕೊಡಬೇಕೆಂದು ನಿರ್ಧಾರ ಮಾಡಿದ್ದಾರೆಂದು ಮಾಹಿತಿ ಸಿಕ್ಕಿದೆ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನ ನೀಡುವ ಜೊತೆಗೆ ಪಕ್ಷವನ್ನು ಸಂಘಟನೆ ಮಾಡಬಹುದಾಗುವಂತೆ ಬಹುದೊಡ್ಡ ಯುವಪಡೆಯನ್ನೇ ಸೃಷ್ಟಿ ಮಾಡಬಹುದೆಂದು ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆಂದು ತಿಳಿದುಬಂದಿದೆ.

ಒಟ್ಟಾರೆ ಡಿ.ಕೆ.ಶಿವಕುಮಾರ್ ಅಧಿಕಾರಕ್ಕೇರುತ್ತಿದ್ದಂತೆ ರಾಮನಗರ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ನೂರಾರು ಜನ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಲಸದ ಜೊತೆಗೆ ಕಾಂಗ್ರೆಸ್ ಪಕ್ಷವನ್ನ ಸದೃಢವಾಗಿ ಕಟ್ಟುವ ಜವಾಬ್ದಾರಿಯೂ ಸಿಗುತ್ತಿದೆ. ಹಾಗಾಗಿ ಜಿಲ್ಲೆಯಲ್ಲಿ ಈಗ ಕಾಂಗ್ರೆಸ್‌ನ ಸಾವಿರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸುಕರಾಗಿ ಪಕ್ಷ ಕಟ್ಟಲು ಸಜ್ಜಾಗಿದ್ದಾರೆ. ಡಿಕೆಶಿಯ ಈ ಹೊಸ ಪ್ರಯೋಗ ದೇಶದ ರಾಜಕೀಯ ಇತಿಹಾಸದಲ್ಲೇ ದಾಖಲೆಯಾಗಲಿದೆ.

ವರದಿ: ಎ.ಟಿ. ವೆಂಕಟೇಶ್
First published: June 29, 2020, 7:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories