HOME » NEWS » District » DK SHIVAKUMAR AT KALBURGI SAYS REVENGE POLITICS IN FULL FLOW IN KARNATAKA STATE SAKLB SNVS

ಕರ್ನಾಟಕ ರಾಜ್ಯದಲ್ಲಿ ದ್ವೇಷದ ರಾಜಕಾಣ ಉಕ್ಕಿ ಹರೀತಿದೆ - ಸಿಬಿಐ ನೋಟೀಸ್ ವಿರುದ್ಧ ಡಿಕೆ ಶಿವಕುಮಾರ್​ ಆಕ್ರೋಶ

ಯಾರ ಮೇಲೂ ಮಾಡದೆ ನನ್ನೊಬ್ಬನನ್ನು ಯಾಕೆ ಟಾರ್ಗೆಟ್ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತೆ ಎಂದು ಸಿಬಿಐ ದಾಳಿ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:November 24, 2020, 12:49 PM IST
ಕರ್ನಾಟಕ ರಾಜ್ಯದಲ್ಲಿ ದ್ವೇಷದ ರಾಜಕಾಣ ಉಕ್ಕಿ ಹರೀತಿದೆ - ಸಿಬಿಐ ನೋಟೀಸ್ ವಿರುದ್ಧ ಡಿಕೆ ಶಿವಕುಮಾರ್​ ಆಕ್ರೋಶ
ಡಿಕೆ ಶಿವಕುಮಾರ್
  • Share this:
ಕಲಬುರ್ಗಿ: ರಾಜ್ಯದಲ್ಲಿ ದ್ವೇಷದ ರಾಜಕಾರಣ ಉಕ್ಕಿ ಹರೀತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸದರ್ಭದಲ್ಲಿ ಮಾತನಾಡಿದ ಅವರು, ನನಗೆ ತೊಂದರೆ ಕೊಟ್ಟವರು ಯಾವಾಗಲೂ ಖುಷಿಯಾಗಿಯೇ ಇರಲಿ ಎಂದು ವ್ಯಂಗ್ಯವಾಡಿದ್ದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನನಗೆ ಸಿಬಿಐ ನೋಟೀಸ್ ನೀಡಿದ್ದಾರೆ. ಇಡೀ ರಾಜ್ಯದಲ್ಲಿ ಯಾವ ಶಾಸಕರಿಗೂ ನೋಟೀಸ್ ನೀಡಿಲ್ಲ. ಆದ್ರೆ ನನಗೆ ಮಾತ್ರ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದ್ವೇಷದ ರಾಜಕಾರಣ ವ್ಯಾಪಕವಾಗಿದೆ. ಯಾರ ಮೇಲೂ ಮಾಡದೆ ನನ್ನೊಬ್ಬನಿಗೆ ಯಾಕೆ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ ಎಷ್ಟರಮಟ್ಟಿಗಿದೆ ಅನ್ನೋದು ಅರ್ಥವಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನಗೆ ತೊಂದರೆ ಕೊಟ್ಟರೆ ಕೊಟ್ಟರೆ ಅವರಿಗೆ ಖುಷಿಯಾಗುತ್ತದೆ ಎಂದಾದರೆ ಖುಷಿಯಾಗಲಿ. ಅವರಾದ್ರೂ ಖುಷಿಯಾಗಿರಲಿ. ನನ್ನ ವಿರುದ್ಧ ಎಫ್.ಐ.ಆರ್. ಹಾಕೋ ಜೊತೆಗೆ ನೋಟೀಸ್ ಸಹ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ರಾಜಕೀಯ ಕುಮ್ಮಕ್ಕು ಇಲ್ಲದಿದ್ದಲ್ಲಿ ಸಿಬಿಐ ಅಧಿಕಾರಿಗಳು ಈ ರೀತಿ ವರ್ತಿಸುತ್ತಿರಲಿಲ್ಲ.  ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಆದ್ರೆ ಸಿಬಿಐ ಅಧಿಕಾರಿಗಳು ನ್ಯಾಯ ಸಮ್ಮತ ತನಿಖೆ ನಡೆಸಲಿ. ನಾನು ಕಾನೂನಿಗೆ ಗೌರವ ಕೊಡ್ತೇನೆ. ನಾಳೆ ಸಿಬಿಐ ಕಛೇರಿಗೆ ವಿಚಾರಣೆಗೆ ಹಾಜರಾಗ್ತೇನೆ. ಯಾರೂ ಸಹ ಗಾಬರಿಪಟ್ಟುಕೊಳ್ಳಬೇಡಿ, ಸಿಬಿಐ ಕಛೇರಿ ಕಡೆ ಬರಬೇಡಿ. ನನ್ನ ಪರವಾದ ಹೇಳಿಕೆಗಳನ್ನೂ ನೀಡಬೇಡಿ ಎಂದು ಕಾಂಗ್ರೆಸ್ ಮುಖಂಡರಿಗೆ ಡಿಕೆಶಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Nusrat Jahan - ಪ್ರೀತಿಗೆ ಲವ್ ಜಿಹಾದ್ ಬಣ್ಣ ಬಳಿಯುವುದು ಸರಿಯಲ್ಲ: ನುಸ್ರತ್ ಜಹಾನ್

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿಜಯ ಸ್ಥಾಪಿಸಲು ವಿಜಯನಗರದಿಂದ ಕಲ್ಯಾಣ ಕರ್ನಾಟಕದ ಪ್ರವಾಸ ಆರಂಭಿಸಿದ್ದೇನೆ. ಯುವಕರು ವಿಶೇಷವಾಗಿ ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದಾರೆ. ಮಸ್ಕಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾವಿರಾರು ಜನ ಸೇರ್ಪಡೆಯಾಗಿದ್ದಾರೆ. ಉತ್ತರ ಕರ್ನಾಟಕದ ಬಹುದೊಡ್ಡ ಸೇರ್ಪಡೆ ಸಭೆ ಮಸ್ಕಿಯಲ್ಲಾಗಿದೆ. ಉಪ ಚುನಾವಣೆ ನಡೆಯೋ ಕ್ಷೇತ್ರಗಳಲ್ಲಿ ಅನೇಕ ಸಚಿವರು ಪ್ರವಾಸ ಮಾಡ್ತಿದಾರೆ. ಭರಪೂರ ಆಶ್ವಾಸನೆಗಳನ್ನು ನೀಡ್ತಿದಾರೆ. ಆದ್ರೆ ಜನ ಅದನ್ನು ನಂಬಲ್ಲ ಎಂದರು.

ಯಾರ ಸರ್ಕಾರ ಇರುತ್ತೋ ಆ ಪಕ್ಷದವರಿಗೆ ಅವಕಾಶ ಹೆಚ್ಚಿರುತ್ತೆ. ಆದ್ರೆ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಗೆಲ್ಲುವ ಕೆಲಸ ಮಾಡಿದೆ. ಈ ಬಾರಿ ಉಪ ಚುನಾವಣೆಯಲ್ಲಿ ಎಚ್ಚರಿಕೆ ಹೆಜ್ಜೆ ಇಡ್ತೇವೆ ಎಂದರು.

ಮರಾಠ ಅಭಿವೃದ್ಧಿ ನಿಗಮದ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿ., ಯಡಿಯೂರಪ್ಪ ಸಮಾಜವನ್ನು ಒಡೆಯೋ ಕೆಲಸ ಮಾಡ್ತಿದಾರೆ. ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಮರಾಠಾ ಹಾಗೂ ವೀರಶೈವ, ಲಿಂಗಾಯತ ಪ್ರಾಧಿಕಾರ ರಚಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ಝಳಪಿಸಿದ ತಲ್ವಾರ್; ಆಸ್ಪತ್ರೆ ಎದುರಲ್ಲೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಕಾಣದ ಸಾಮಾಜಿಕ ಅಂತರ....

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಮನದ ಹಿನ್ನೆಲೆಯಲ್ಲಿ ಕಲಬುರ್ಗಿಯ ಐವಾನ್ ಶಾಹಿ ಅತಿಥಿಗೃಹ ಜನಜಂಗುಳಿಯಿಂದ ಕೂಡಿತ್ತು. ಡಿಕೆಶಿ ಕಾಂಗ್ರೆಸ್ ಮುಖಂಡರ ಸಭೆ ಮುಗಿಸಿ ಹೊರಗೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮುತ್ತಿಕೊಂಡರು. ಹಾರ, ತುರಾಯಿ, ಶಾಲು ಹಾಕಿ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲು ಯತ್ನಿಸಿದರು. ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಪಾಡದೆ ಒಬ್ಬರ ಮೇಲೊಬ್ಬರು ಮುಗಿಬಿದ್ದು ಸನ್ಮಾನಿಸಿ ಶುಭ ಕೋರಿದರು. ಕೆಲವರು ಡಿಕೆಶಿ ಜೊತೆ ಸೆಲ್ಫೀ ತೆಗೆದುಕೊಳ್ಳಲೂ ಯತ್ನಿಸಿದರು. ದೇಶದಲ್ಲಿ ಕೊರೋನಾದ ಎರಡನೆಯ ಅಲೆ ಆರಂಭಗೊಂಡು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಡೋಂಟ್ ಕೇರ್ ಅನ್ನೋ ರೀತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ವರ್ತಿಸಿದರು. ಅವರಿಗೆ ಬುದ್ಧಿವಾದ ಹೇಳುವ ಪ್ರಯತ್ನವನ್ನು ಡಿಕೆಶಿಯಾಗಲಿ, ಇತರರಾಗಲಿ ಮಾಡಲಿಲ್ಲ.

ವರದಿ: ಶಿವರಾಮ ಅಸುಂಡಿ
Published by: Vijayasarthy SN
First published: November 24, 2020, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories