ಕರ್ನಾಟಕ ರಾಜ್ಯದ ಹಿತಕ್ಕಾಗಿ ಡಿಕೆ ಶಿವಕುಮಾರ್​ ಮತ್ತು ಸಿದ್ಧರಾಮಯ್ಯ ಜೈಲಿಗೆ ಹೋಗಲೂ ಸಿದ್ಧ ; ಸಂಸದ ಡಿ.ಕೆ.ಸುರೇಶ್

ರಾಜಕೀಯ ಬೇರೆ, ವಿಶ್ವಾಸ ಬೇರೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಾನು, ಡಿಕೆ.ಶಿವಕುಮಾರ್, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಸಂಸದ ಡಿ.ಕೆ.ಸುರೇಶ್​

ಸಂಸದ ಡಿ.ಕೆ.ಸುರೇಶ್​

  • Share this:
ಹಾಸನ(ಆಗಸ್ಟ್​.03): ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮಲಗಿದ್ದ ಮಂತ್ರಿಗಳು ಈಗ ಎದ್ದು ಬಂದಿದ್ದಾರೆ. ಮಂತ್ರಿಗಳಲ್ಲಿ ಹೊಂದಾಣಿಕೆಯೇ ಇಲ್ಲ. ಹಾಸನಕ್ಕೆ ಯಾವ ಮಂತ್ರಿಯೂ ಬರಲು ಮನಸ್ಸು ಮಾಡಲ್ಲ, ಕೊರೋನಾದ ಭ್ರಷ್ಟಾಚಾರದ ಹಂಚಿಕೊಳ್ಳಲು ಇವರೇನು ಅಣ್ಣತಮ್ಮಂದಿರಾ ಎಂದು ಸಂಸದ ಡಿ ಕೆ ಸುರೇಶ್ ವಾಗ್ದಾಳಿ ನಡೆಸಿದರು.

ಜನರು ಸರ್ಕಾರ ನಂಬಿಕೊಂಡ್ರೆ ಬದುಕಲು ಸಾಧ್ಯವಿಲ್ಲ, ಸರ್ಕಾರ 5 ಸಾವಿರ ಹಣ ಕೊಡುವುದಾಗಿ ಹೇಳಿತ್ತ. ಆದರೆ, ಯಾರನ್ನೂ ಕೇಳಿದರೂ ಹಣ ಬಂದಿಲ್ಲ ಅಂತಾರೆ. ಸಾರ್ವಜನಿಕರಿಗೆ ಬದುಕಲು, ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಿ. ಈ ಸಮಯದಲ್ಲಿ ರಾಜಕೀಯ ಮಾಡ್ತೀರಿ ಅಂತ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಆದರೆ ಈ ಸಮಯದಲ್ಲೇ ಮೂವತ್ತು ಜನರಿಗೆ ಬೋರ್ಡ್ ಚೇರ್ಮನ್ ಹಂಚಿಕೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ಈ ರಾಜ್ಯದ ಜನರ ಹಿತಕ್ಕೆ ಅವರು ಜೈಲಿಗೆ ಹೋಗಲು ಸಿದ್ದರಿದ್ದಾರೆ ಎಂದರು.

ಈ ಸರ್ಕಾರಕ್ಕೆ ಆಯಸ್ಸು ಕಡಿಮೆ. ನಿಮಗೇನಾದರೂ ಮಾನ ಮರ್ಯಾದೆ ಇದ್ದರೆ  ನ್ಯಾಯಾಂಗ ತನಿಖೆ ಮಾಡಿಸಿ. ಜನರಿಗೆ ಮೋಸ ಮಾಡುವುದು ನೋಡಿದ್ರೆ ಇಂತಹ ಕ್ರೂರಿ ಸರ್ಕಾರ ಮತ್ತೊಂದಿಲ್ಲ ಅನಿಸುತ್ತೆ. ಕಾಂಗ್ರೆಸ್ ಪಕ್ಷ ಪ್ರತಿ ಹಳ್ಳಿಗೂ ಹೋಗಿ ಜನರಿಗೆ ಇದರ ಬಗ್ಗೆ ತಿಳಿಸಿದೆ. ಸರ್ಕಾರ ಕೆಡವಲು ಏನು ಮಾಡಬೇಕು ಎನ್ನುವುದನ್ನು ಅವರ ಪಕ್ಷದವರೇ ಮಾಡಿದ್ದಾರೆ ಅನಿಸುತ್ತೆ ಎಂದು ತಿಳಿಸಿದರು.

ಸರ್ಕಾರ ಅಥವಾ ಮುಖ್ಯ ಕಾರ್ಯದರ್ಶಿ ನೋಟೀಸ್ ಕೊಡಬೇಕಿತ್ತು. ಆದರೆ, ಯಾರೋ ಬೇರೆಯವರು ನೋಟೀಸ್ ಕೊಟ್ಟಿದ್ದಾರೆ. ಸರ್ಕಾರ ಕೆಡವಲು ಅವರ ಪಕ್ಷದವರೇ ಮುಂದಾಗಿದ್ದಾರೆ ಎಂದು ಡಿ ಕೆ ಸುರೇಶ್ ಆರೋಪ ಮಾಡಿದರು.

ಡಿ.ಕೆ.ಶಿವಕುಮಾರ್ ಜೆಡಿಎಸ್ ಪಕ್ಷ ಮುಗಿಸುತ್ತಾರೆ ಎಂದು ಎಂಎಲ್ ಸಿ ಯೋಗೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿ ಪಿ ಯೋಗೇಶ್ವರ್ ಗೆ ಬೇರೆ ಕೆಲಸ ಇಲ್ಲಾ. ಅದಕ್ಕೆ ಹೀಗೆ ಮಾತನಾಡುತ್ತಾರೆ, ನಂಬಿಕೆ ದ್ರೋಹಿ ಎಂದರೆ ಯೋಗೇಶ್ವರ್. ಮೂರು ದಿನಗಳ ಹಿಂದೆ ಯಡಿಯೂರಪ್ಪನನ್ನ ತೆಗೆಯುವುದಕ್ಕೆ ಹೊರಟಿದ್ದ ಎಂದು ಯೋಗೇಶ್ವರ್ ವಿರುದ್ದ ಡಿ ಕೆ ಸುರೇಶ್ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಸಿಎಂ ಯಡಿಯೂರಪ್ಪ ಜೊತೆ ಪ್ರಾಥಮಿಕ ಸಂಪರ್ಕ ; ಪೊಲೀಸ್ ಕಮೀಷನರ್ ಹೋಂ ಕ್ವಾರಂಟೈನ್

ರಾಜಕೀಯ ಬೇರೆ, ವಿಶ್ವಾಸ ಬೇರೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಾನು, ಡಿಕೆ.ಶಿವಕುಮಾರ್, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್ ನ 15 ಜನ ಶಾಸಕರು ನಮ್ಮ ಜೊತೆಯಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಕಮಲಕ್ಕೆ ಬಿಜೆಪಿಯವರು ಫೇಮಸ್. ಸರ್ಕಾರಕ್ಕೆ ಭದ್ರತೆ ಇಲ್ಲಾ ಅನ್ಸುತ್ತೆ ರಾಜ್ಯಾಧ್ಯಕ್ಷರಿಗೆ, ಅವರ ಸರ್ಕಾರ ಬೀಳಬಹುದು ಅಂತಾ ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತಾ ಹೇಳುತ್ತಿದ್ದಾರೆ ಎಂದರು.
Published by:G Hareeshkumar
First published: