ಉಡುಪಿ ಜಿಲ್ಲಾ‌ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟ; ಪ್ರಮೋದ್ ಮಧ್ವರಾಜ್ ವಿರುದ್ಧದ ಆಡಿಯೋ ತುಣುಕು ವೈರಲ್

ಪ್ರಮೋದ್ ಮಧ್ವರಾಜ್ ಅವನಿಂದ ಇಡೀ ಕಾಂಗ್ರೆಸ್ ಪಕ್ಷ ಸರ್ವನಾಶವಾಗಿ ಹೋಗಿದೆ. ಅಂಥವನು ಪಾರ್ಟಿಯಲ್ಲಿ ಇರಬಾರದು. ಅಂತಹವನಿಗೆ ಸಪೋರ್ಟ್ ಮಾಡುವವರನ್ನು ಪಾರ್ಟಿಯಲ್ಲಿ ಇರಿಸಬಾರದು. ಒದ್ದು ಹೊರಗೆ ಹಾಕಿ ಅವನನ್ನು. ಅಂಥವನಿಗೆ ಸಪೋರ್ಟ್ ಮಾಡುವವನನ್ನು ಪಕ್ಷದಿಂದ ಹೊರಗೆ ಹಾಕಿ ಎಂದು ಮಾಜಿ ಶಾಸಕ ಯು.ಟಿ.ಸಭಾಪತಿ ಹೇಳಿದ್ದಾರೆ.

ಪ್ರಮೋದ್ ಮಧ್ವರಾಜ್ ಮತ್ತು ಯುಆರ್ ಸಭಾಪತಿ

ಪ್ರಮೋದ್ ಮಧ್ವರಾಜ್ ಮತ್ತು ಯುಆರ್ ಸಭಾಪತಿ

  • Share this:
ಉಡುಪಿ; ಉಡುಪಿ ಕಾಂಗ್ರೆಸ್ ಒಳಗಿನ ಮನಸ್ತಾಪ ಆಗಾಗ ಹೊರಬರುತ್ತಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಳೆದ ವಿಧಾನಸಭೆ ಚುನಾವಣೆ ಸೋತು, ಬಳಿಕ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಅಲ್ಲಿಯೂ ಸೋತ ಮೇಲೆ ಕಾಂಗ್ರೆಸ್​ಗೆ ಮರಳಿದ ಬಳಿಕ ಪಕ್ಷದೊಳಗೆ ಭಿನ್ನಾಪ್ರಾಯ ಜೋರಾಗಿದೆ. ಪ್ರಮೋದ್ ಕಾಂಗ್ರೆಸ್ ನ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದು ಎರಡು ವರ್ಷವಾಗುತ್ತಾ ಬಂದಿದೆ. ಈ ನಡುವೆ ಆಡಿಯೋ ತುಣುಕು ಒಂದು ಓಡಾಡಲು ಶುರುಮಾಡಿದೆ. ಕಾಂಗ್ರೆಸ್ ನಾಯಕ, ಉಡುಪಿಯ ಮಾಜಿ ಶಾಸಕ ಯು.ಆರ್ ಸಭಾಪತಿ ಮತ್ತು ಪಕ್ಷದ ಕಾರ್ಯಕರ್ತನ ನಡುವಿನ ಆಡಿಯೋ ಸಂಭಾಷಣೆ ಇದಾಗಿದ್ದು, ಏಕವಚನ ಮತ್ತು ಅವಾಚ್ಯ ಶಬ್ದಗಳಿಂದಲೇ ಆಡಿಯೋ ತುಂಬಿಕೊಂಡಿದೆ.

ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ್ದಾನೆ. ನಗರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸೋಲಿಗೆ ಕಾರಣರಾಗಿದ್ದಾನೆ. ಅವರನ್ನು ಪಕ್ಷದಿಂದ ಒದ್ದು ಹೊರಗೆ ಹಾಕಿ ಎಂದು ಯು. ಆರ್ ಸಭಾಪತಿ ಕಾರ್ಯಕರ್ತನ ಬಳಿ ಹೇಳಿದ್ದಾರೆ. ನನ್ನನ್ನು ಈ ಹಿಂದೆ ಸೋಲಿಸಿದ್ದು ಬಿಜೆಪಿಯ ಶಾಸಕ ರಘುಪತಿ ಭಟ್ಟ ಅಲ್ಲ. ಪ್ರಮೋದ್ ಮಧ್ವರಾಜ್, ಅವರ ತಾಯಿ. ಸಚಿವನಾಗಿದ್ದ ಪ್ರಮೋದ್ 12 ಸಾವಿರ ಮತದಲ್ಲಿ ಸೋತಿದ್ದಾನೆ. ಆಸ್ಕರ್ ಫೆರ್ನಾಂಡೀಸ್ ಗೆಲಿವಿನ ಹಿಂದೆ ನಮ್ಮ ಶ್ರಮ ಇದೆ. ಇಂದಿರಾಗಾಂಧಿ ಬಳಿ ಹೋಗಿ ಸೀಟು ಪಡೆದು ಗೆದ್ದಿದ್ದೇವೆ ಎಂದೆಲ್ಲಾ ಮಾತಮಾಡುತ್ತಾ ಪ್ರಮೋದ್ ಮಧ್ವರಾಜ್ ಗೆ ಯು.ಆರ್ ಸಭಾಪತಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಈ ಆಡಿಯೋ ವಾಟ್ಸಾಪ್ ನಲ್ಲಿ ಓಡಾಡುತ್ತಿದೆ. ಆಡಿಯೋ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಇರಿಸು ಮುರುಸು ತಂದಿದೆ.

ತುಳು ಭಾಷೆಯಲ್ಲಿ ಸಂಭಾಷಣೆಯಾಗಿರುವ ಆಡಿಯೋ ತುಣುಕಿನ ಸಾರಾಂಶ ಹೀಗಿದೆ.

ಯು. ಆರ್ ಸಭಾಪತಿ; ನಿಮಗೆ ಆ ಗಿಲ್ಟಿ ಕಾನ್ಶಿಯಸ್ ಯಾಕೆ? ಅದರಲ್ಲಿ ಕಾಂಟ್ರವರ್ಸಿ ಏನಿದೆ?
ಕಾರ್ಯಕರ್ತ; ಹಾಗಲ್ಲ .. ಹಾಗಲ್ಲ ಹಾಗಲ್ಲ ಸರ್
ಸಭಾಪತಿ; ನೀವು ಯಾವಾಗಲೂ ನಿಮ್ಮ ಮೈಂಡನ್ನು ಫ್ರೀಯಾಗಿ ಇಟ್ಟುಕೊಳ್ಳಿ. ಸುಮ್ಮನೆ ಗಿಲ್ಟಿ ಕಾನ್ಶಿಯಸ್ ಕಾಂಟ್ರವರ್ಸಿ ಅಂತ ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ಅವರಿಗೆ ಬೇಸರ ಆಯಿತು, ಇವರಿಗೆ ಬೇಸರ ಆಯ್ತು ಅಂತ ನೀವು ಯಾಕೆ ಅಂದುಕೊಳ್ಳುತ್ತೀರಿ.
ಕಾರ್ಯಕರ್ತ; ಹಾಗಲ್ಲ ಸರ್ ನಮಗೆ, ನಿಮ್ಮ ಮೇಲೆ ನಮಗೆ ತುಂಬಾ ಗೌರವ ಇದೆ. ನನ್ನ ಸಂಸ್ಥೆಗೆ ನೀವು ಶಂಕರ್ ಜೊತೆ ಬಂದಿದ್ದೀರಿ. ಅದು ನನಗೆ ಇನ್ನೂ ನೆನಪಿದೆ.
ಸಭಾಪತಿ; ಅದಕ್ಕೂ ಇದಕ್ಕೂ ಏನು ಸಂಬಂಧ ಇದೆ ಹೇಳಿ.
ಕಾರ್ಯಕರ್ತ; ಸರ್ ನಾನು ಒಬ್ಬ ವ್ಯಕ್ತಿಯನ್ನು ಒಪ್ಪಿಕೊಂಡೆ ಎಂದರೆ ಯಾವ ಸಂದರ್ಭದಲ್ಲೂ ಅವರ ಜೊತೆಗೆ ಇರುವವನು. ನಾನು ಯಾವುದಕ್ಕೂ ತಯಾರಿರುತ್ತೇನೆ. ನನಗೆ ಸ್ವಲ್ಪ ಗರ್ವ ಜಾಸ್ತಿ.
ಸಭಾಪತಿ; ನೀವು ಈ ವಿಚಾರದಲ್ಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಕಾಂಗ್ರೆಸ್ ಪಾರ್ಟಿಯ ಸಿನ್ಸಿಯರ್ ವರ್ಕರ್. ಪಾರ್ಟಿಯನ್ನು ಬಿಲ್ಡಪ್ ಮಾಡಿದವರು ನಾವು. ಪಾರ್ಟಿಯನ್ನು ಸೋಲಿಸಿದವರು ಅವರು. ನನ್ನನ್ನು ಸೋಲಿಸಿದ್ದು ಬಿಜೆಪಿಯ ರಘುಪತಿ ಭಟ್ಟ ಅಲ್ಲ. ನನ್ನನ್ನು ಸೋಲಿಸಿದ್ದು ರ... ಮಗ ಪ್ರಮೋದ್ ಮತ್ತು ಅವನ ತಾಯಿ. ಆಸ್ಕರ್ ಫರ್ನಾಂಡಿಸ್ ಅವರ ಪಿಎ ಮಂಜುನಾಥ ಉದ್ಯಾವರ, ಇವರೆಲ್ಲ ಒಟ್ಟಾಗಿ ಸುಧಾಕರ ಶೆಟ್ಟಿಯನ್ನು ಸಪೋರ್ಟ್ ಮಾಡಿದ್ದಕ್ಕೆ ನನ್ನ ಬಳಿ ರುಜುವಾತು ಇದೆ.
ನಾನು ಕಾಂಗ್ರೆಸ್ಸನ್ನು ಸೋಲಿಸಿಲ್ಲ. ಅವರೇ ಕಾಂಗ್ರೆಸನ್ನು ಸೋಲಿಸಿದ್ದು ರಂ.. ಮಕ್ಕಳು.
ಮೂರು ವರ್ಷ ಸಚಿವನಾದವನು ಶಾ... ಕಿತ್ತಿಲ್ಲ. ಮೂರು ವರ್ಷ ಮಂತ್ರಿಯಾಗಿದ್ದವನು 12,000 ಮತಗಳಿಂದ ಸೋಲುವುದಾ? ನಾನು ಕೇವಲ ಸಾವಿರದ ಇನ್ನೂರು ಮತಗಳಿಂದ ಸೋತಿದ್ದು. ಪ್ರಮೋದ್ ಮಧ್ವರಾಜ್ 12 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾನೆ ಬೋ... ಮಗ. ನಾನಿದ್ದಾಗ ತಾಲೂಕು ಪಂಚಾಯತ್ ನಂದು. ಗ್ರಾಮ ಪಂಚಾಯತ್ ನಂದು. ಆಗ ನಗರಸಭೆ ನಮ್ಮದು. ಪ್ರಮೋದ್ ಮಧ್ವರಾಜ್ ಅವಧಿಯಲ್ಲಿ ನಗರಸಭೆಯ 36 ಸೀಟಿನ ಪೈಕಿ 32 ಅನ್ನು ಬಿಟ್ಟುಕೊಟ್ಟಿದ್ದಾನೆ ಬ್ಯಾ....ಇವನು ಮಂತ್ರಿಯಾಗಿದ್ದವ.
ತಾಲೂಕು ಪಂಚಾಯತ್ ಬಿಟ್ಟು ಕೊಟ್ಟಿದ್ದಾನೆ. ಜಿಲ್ಲಾ ಪಂಚಾಯತ್ ಬಿಟ್ಟು ಕೊಟ್ಟಿದ್ದಾನೆ.

ಇದನ್ನು ಓದಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರೇ ಸೂಕ್ತ; ಗಾಂಧಿ ಕುಟುಂಬದ ಪರ ಅಹ್ಮದ್ ಪಟೇಲ್ ವಕಾಲತು

ಕಾರ್ಯಕರ್ತ; ಹೌದು... ಹೌದು..
ಸಭಾಪತಿ; ‌ಇಷ್ಟೆಲ್ಲಾ ಇರುವುದರಿಂದ ಯಾಕೆ ಗಿಲ್ಟಿ ಕಾನ್ಶಿಯಸ್ ಮಾಡುತ್ತೀರಿ ಅರ್ಥವಾಗುತ್ತಿಲ್ಲ. ಅವನಿಂದಾಗಿ ನಮ್ಮ ಇಡೀ ಕಾಂಗ್ರೆಸ್ ಪಕ್ಷ ಸರ್ವನಾಶವಾಗಿ ಹೋಗಿದೆ. ಅಂಥವನು ಪಾರ್ಟಿಯಲ್ಲಿ ಇರಬಾರದು. ಅಂತಹವನಿಗೆ ಸಪೋರ್ಟ್ ಮಾಡುವವರನ್ನು ಪಾರ್ಟಿಯಲ್ಲಿ ಇರಿಸಬಾರದು. ಒದ್ದು ಹೊರಗೆ ಹಾಕಿ ಅವನನ್ನು. ಅಂಥವನಿಗೆ ಸಪೋರ್ಟ್ ಮಾಡುವವನನ್ನು ಪಕ್ಷದಿಂದ ಹೊರಗೆ ಹಾಕಿ.
ಕಾರ್ಯಕರ್ತ; ಸರ್... ಸರ್... ಅದು ಅದು ಅದು ನಿಮಗೆ ಇರುವ ಧೈರ್ಯ.

ಸಭಾಪತಿ; ನಾನು ಎಷ್ಟು ವರ್ಷದಿಂದ ಏನು ಹೋರಾಟ ಮಾಡಿದ್ದೇನೆ ಹೇಳಿ, ಆಸ್ಕರಣ್ಣ ಎಂಪಿ ಆಗುತ್ತಿರಲಿಲ್ಲ. ನಮ್ಮ ಹೋರಾಟದಿಂದ ಅವರು ಎಂಪಿ ಆಗಿದ್ದಾರೆ. ಇಂದಿರಾ ಗಾಂಧಿಯ ತನಕ ಹೋಗಿ ಹೋರಾಟ ಮಾಡಿ ಅವರಿಗೆ ಸೀಟು ತೆಗೆಸಿಕೊಟ್ಟಿದ್ದೇವೆ. ಅವರನ್ನು ಗೆಲ್ಲಿಸಿದ್ದೇವೆ. ಇದರ ಹಿಂದೆ ಮನೋರಮಾ ಮಧ್ವರಾಜ್ ಇದ್ರಾ?
ಕಾರ್ಯಕರ್ತ; ಸರ್.. ಸರ್ .. ನಾನು ಏನು ಹೇಳುತ್ತೇನೆ ಅಂದ್ರೆ
ಸಭಾಪತಿ; ಓಕೆ ಓಕೆ ಗುಡ್ ನೈಟ್.. ಗುಡ್ ನೈಟ್...
Published by:HR Ramesh
First published: