HOME » NEWS » District » DISTRIBUTION OF FREE FOOD KIT FROM JDS TO PRIVATE BUS DRIVERS AND OPERATORS IN KODAGU MAK

ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಕೊಡಗು ಜೆಡಿಎಸ್ ಘಟಕದಿಂ ಉಚಿತ ಆಹಾರ ಕಿಟ್ ವಿತರಣೆ

ಮಡಿಕೇರಿ ಒಂದರಲ್ಲೇ 150 ಕ್ಕೂ ಹೆಚ್ಚು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಅವರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿವುದಾಗಿ ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ ಎಂ ಗಣೇಶ್ ಹೇಳಿದ್ದಾರೆ.

news18-kannada
Updated:June 17, 2020, 8:00 PM IST
ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಕೊಡಗು ಜೆಡಿಎಸ್ ಘಟಕದಿಂ ಉಚಿತ ಆಹಾರ ಕಿಟ್ ವಿತರಣೆ
ಕೊಡಗು ಜೆಡಿಎಸ್‌ ಘಟಕದಿಂದ ವಿತರಿಸಲಾಗಿರುವ ಆಹಾರದ ಕಿಟ್‌ಗಳು.
  • Share this:
ಕೊಡಗು: ಕೊವೀಡ್-19 ಹಿನ್ನಲೆ ಲಾಕ್‌ಡೌನ್ ಘೋಷಿಸಿದರ ಪರಿಣಾಮ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದ ಖಾಸಗಿ ಬಸ್‌ಗಳ 150 ಕ್ಕೂ ಹೆಚ್ಚು ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‌ಗಳಿಗೆ ಕೊಡಗು ಜಿಲ್ಲಾ ಜೆಡಿಎಸ್ ಘಟಕದಿಂದ ಇಂದು ಉಚಿತ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳನ್ನು ‌ಸುಮಾರು 150 ಖಾಸಗಿ ಬಸ್ ಸಿಬ್ಬಂದಿಗೆ ವಿತರಿಸಲಾಯಿತು. ಲಾಕ್‍ಡೌನ್ ಸಡಿಲಿಕೆ ಮಾಡಿದ್ದರೂ ಒಟ್ಟು ಸೀಟುಗಳ ಅರ್ಧದಷ್ಟು ಜನರು ಮಾತ್ರವೇ ಬಸ್ಸಿನಲ್ಲಿ ಪ್ರಯಾಣಿಸಲು ಅವಕಾಶ ನೀಡಿರುವುದರಿಂದ ಕೊಡಗಿನಲ್ಲಿ ಖಾಸಗಿ ಬಸ್ಸುಗಳನ್ನು ಇಂದಿಗೂ ಚಾಲನೆ ಮಾಡುತ್ತಿಲ್ಲ.

ಹೀಗಾಗಿ ಮಡಿಕೇರಿ ಒಂದರಲ್ಲೇ 150 ಕ್ಕೂ ಹೆಚ್ಚು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಆದ್ದರಿಂದ ಅವರಿಗೆ ಆಹಾರ ಕಿಟ್ ವಿತರಣೆ ಮಾಡುತ್ತಿವುದಾಗಿ ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ ಎಂ ಗಣೇಶ್ ಹೇಳಿದ್ದಾರೆ.

ಇದನ್ನೂ ಓದಿ : Corona Virus: ತಮಿಳುನಾಡಿನಲ್ಲಿ 50,000 ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ; ಮಹಾರಾಷ್ಟ್ರ, ದೆಹಲಿ ಸಾಲಿನಲ್ಲಿ ನಿಂತ ನೆರೆ ರಾಜ್ಯ

ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಎಲ್ಲರೂ ಪಕ್ಷಾತೀತವಾಗಿ ಸಹಾಯ ಮಾಡಬೇಕಿದೆ. ಸದ್ಯ ಸುಮಾರು 150 ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಇನ್ನಷ್ಟು ಕುಟುಂಬಗಳಿಗೆ ಅಳಿಲು ಸೇವೆ ಮಾಡುವುದಾಗಿ ಗಣೇಶ್ ತಿಳಿಸಿದ್ದಾರೆ.
First published: June 17, 2020, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading